2020-21ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ರಜಾ ಅವಧಿ ಮರು ನಿಗಧಿ | ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೈಕ್ಷಣಿಕ ಅವಧಿಯ ಮರು ನಿಗಧಿ |

karntakaeducations

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೈಕ್ಷಣಿಕ ಅವಧಿಯ ಮರು ನಿಗಧಿ ಆದೇಶ ಹೊರಡಿಸಲಾಗಿದೆ

ಈ ಹಿಂದೆ ದಿನಾಂಕ 20.04.2021 ರಂದು 2020-21 ನೇ ಸಾಲಿನ ಬೇಸಿಗೆ ರಜೆ ಮತ್ತು 2021-22 ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಕುರಿತು (ತಾತ್ಕಾಲಿಕ) ವೇಳಾ ಪಟ್ಟಿಯನ್ನು ರಾಜ್ಯದಲ್ಲಿನ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪ್ರಕಟಿಸಲಾಗಿತ್ತು .
Govt High School and primary school revised holiday
2021-22ನೇ ಸಾಲಿನ ಶೈಕ್ಷಣಿಕ ವರ್ಷದ ದಿನಾಂಕಗಳ ಪ್ರಕಟ ಮತ್ತು ರಜಾ ಅವಧಿಯ ಮರು ನಿಗಧಿ

ಈ ಹಿಂದೆ ಕೋವಿಡ್-19 ಸಾಂಕ್ರಾಮಿಕ ರೋಗ ಎರಡನೇ ಅಲೆ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ 24.04.2021 ರಿಂದ 12.05.2021 ರವರೆಗೆ ಎಲ್ಲಾ ಶಾಲೆ ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿತ್ತು.
ಈ ಎಲ್ಲಾ ಹಿನ್ನೆಲೆಗಳಲ್ಲಿ 2020-21ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಕುರಿತು (ತಾತ್ಕಾಲಿಕ) ಪರೀಷ್ಕೃತ ವೇಳಾ ಪಟ್ಟಿ ಪ್ರಕಟಿಸಲಾಗಿದೆ.

ಪ್ರಾಥಮಿಕ ಶಾಲೆಗಳ ವೇಳಾ ಪಟ್ಟಿ
1 ರಿಂದ 7/8 ನೇ ತರಗತಿಗಳು ಇರವು ಪ್ರಾಥಮಿಕ ಶಾಲೆಗಳಿಗೆ ದಿನಾಂಕ 27.04.2021 ರಿಂದ 14.06.2021 ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ ಮತ್ತು
ದಿನಾಂಕ 15.06.2021 ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರೌಢ ಶಾಲೆಗಳಿಗೆ 
ದಿನಾಂಕ 27.04.2021 ರಿಂದ 31.05.2021 ರ ವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಇದರಲ್ಲಿ
ರಜಾ ಅವಧಿಯಲ್ಲಿ 10ನೇ ತರಗತಿ ಬೋಧಿಸುವ ಶಿಕ್ಷಕರು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು. ವಿದ್ಯಾರ್ಥಿಗಳ ಕ್ಲಿಷ್ಠಾಂಶಗಳನ್ನು ದೂರವಾಣಿ / ಆನ್ ಲೈನ್ ಮೂಲಕ ಪರಿಹರಿಸಲು ಹಾಗೂ ಮಾರ್ಗದರ್ಶನ ನೀಡಲು ತಿಳಿಸಿದೆ.
ದಿನಾಂಕ 01.06.2021 ರಿಂದ 14.06.2021 ರವರೆಗೆ ಪೂರ್ವಾಹ್ನ 2020-21 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಪುನರ ಮನನ ತರಗತಿಗಳನ್ನು ನಡೆಸಲು ತಿಳಿಸಲಾಗಿದೆ.
ದಿನಾಮಕ 15.06.2021 ರಿಂದ 2021-22ನೇ ಸಾಲಿನ ಪ್ರೌಢ ಶಾಲೆಗಳ 8, 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ.


ಜೊತೆಗೆ ಈ ವೇಳಾಪಟ್ಟಿಯು ಕೋವಿಡ್ -19 ಹಿನ್ನೆಲೆಯಲ್ಲಿ ಪರಿಷ್ಕರಣೆಗೆ ಒಳಪಡುವ ಮತ್ತು ಜಿಲ್ಲಾಡಳಿತ ನೀಡುವ ಸೂದನೆಗಳನ್ನು ಸಹ ಪಾಲಿಸುವ ಬಗೆಗೆ ಆದೇಶದಲ್ಲಿ ತಿಳಿಸಿದೆ.

ಆದೇಶದ ಪ್ರತಿಗಾಗಿ: 

Subject : ಪ್ರೌಢ ಶಿಕ್ಷನ ಮಂಡಳಿಯ ಆದೇಶ


Department: Education

Place: Karnataka

Announcement Date: 04.05.2021

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No


Print Enable : Yes

Quality : High

File size reduced : No

Image file available  : Yes

Cost : Free of Cost

Go Green

......... Save Paper Save tree...........

Govt High School and primary school revised holiday



Govt High School and primary school revised holiday



Govt High School and primary school revised holiday


*****
Karnataka Education 2020-21ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ರಜಾ ಅವಧಿ ಮರು ನಿಗಧಿ | ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶೈಕ್ಷಣಿಕ ಅವಧಿಯ ಮರು ನಿಗಧಿ |



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon