10th Social Science 156 IMP MCQ Questions For SSLC-2021 Exam | Part-3- 51 to 75

10th Social Science 156 IMP MCQ Questions For SSLC-2021 Exam | Part-3- 51 to 75

51. ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿ _____ ಎಂಬಲ್ಲಿ ನಡೆಸಿದರು.
ದಂಡಿ
52. ಕ್ವಿಟ್ ಇಂಡಿಯಾ ಚಳವಳಿಯು _____ ರಲ್ಲಿ ನಡೆಯಿತು. 
-1942
53. ಕಂಪನಿಯ ಕೊನೆಯ ಗೌರ್ನರ್ ಜನರಲ್ _____ ಆಗಿದ್ದನು.
- ಮೌಂಟ್ ಬ್ಯಾಟನ್
54. ಭಾರತದ ಪ್ರಥಮ ಗೃಹಮಂತ್ರಿ ____ ಆಗಿದ್ದರು.
- ಸರದಾರ ವಲ್ಲಭ ಬಾಯಿ ಪಟೇಲ್
55. ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು ______
 ಡಾ. ಬಾಬು ರಾಜೇಂದ್ರ ಪ್ರಸಾದ
56. ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ ____ ರಲ್ಲಿ ಸೇರಿತು.
- 1963
57. ರಾಜ್ಯ ಪುನರ್ವಿಂಗಡಣಾ ಕಾನೂನು _____ ರಲ್ಲಿ ಜಾರಿಗೆ ಬಂದಿತು.
- 1956
58. ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಂಡಿರುವುದನ್ನು _____ ಎನ್ನುತ್ತೇವೆ.
 ಪ್ರಾದೇಶಿಕವಾದ
59. ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಭಜನೆಯು ____ ಇಸವಿಯಲ್ಲಿ ಆಯಿತು.
 1956
60. ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು _____ ಸಂಸ್ಥೆ ಅಸ್ತಿತ್ವದಲ್ಲಿದೆ.
 ಲೋಕಾಯುಕ್ತ
61. 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು ____ ಕೋಟಿ ದಾಟಿದೆ.
 121
62. ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ನಿರೂಪಿಸಿದವರು ______
ಪಂಡಿತ್ ಜವಾಹಾರಲಾಲ ನೆಹರು
63. ವಿಶ್ವದ ಯಾವುದೇ ಬಣಕ್ಕೂ ಸೇರದೆ ಇರುವ ನೀತಿಯನ್ನು _____ ಎನ್ನಬಹುದು.
 ಅಲಿಪ್ತ ನೀತಿ.
64. ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ______ ರ ವಸಹಾತು ಶಾಹಿಗೆ ಒಳಗಾಗಿತ್ತು.
 ಬ್ರಿಟಿಷರ
65. ಪಂಚಶೀಲ ತತ್ವಗಳ ಮೂಲಕ _____ ರಾಷ್ಟ್ರದೊಂದಿಗೆ ಸಂಬಂಧ ವೃದ್ಧಿಸಲಾಯಿತು.
 ಚೀನಾ
66. ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ಧತೆಯ ಕುರಿತು ನಮ್ಮ ಸಂವಿಧಾನದ _____ ವಿಧಿಯಲ್ಲಿ ತಿಳಿಸಲಾಗಿದೆ.
 51ನೇ
67. 1962ರಲ್ಲಿ _____ ದೇಶವು ಭಾರತದ ಮೇಲೆ ಆಕ್ರಮಣ ಮಾಡಿತು.
 ಚೀನಾ
68. ಮಾನವ ಹಕ್ಕುಗಳ ದಿನವನ್ನು ____ ರಂದು ಆಚರಿಸುತ್ತೇವೆ.
 ಡಿಸೆಂಬರ್ 10
69. ಭಾರತವು ನಿರಂತರವಾಗಿ _____ ಮಾನವ ಹಕ್ಕುಗಳನ್ನು ಪ್ರತಿ ಪಾದಿಸುತ್ತಾ ಬಂದಿದೆ.
 ಸಾರ್ವತ್ರಿಕ
70. ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು ______ 
 ನೆಲ್ಸನ್ ಮಂಡೇಲಾ
71. ಮಾನವ ಹಕ್ಕು ಎಂಬುದು _____ ಸಮಾನತೆಯನ್ನು ಒಳಗೊಂಡಿದೆ.
 ವರ್ಣಭೇದ ರಹಿತ
72. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ_____
 1945 ಅಕ್ಟೋಬರ್ 24.
73. ವಿಶ್ವಸಂಸ್ಥೆಯ ಮುಖ್ಯ ಕಚೇರಿ _____ ನಗರದಲ್ಲಿದೆ.
 ಅಮೇರಿಕಾದ ನ್ಯೂಯಾರ್ಕ್
74. ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ______
 ಭದ್ರತಾ ಸಮಿತಿ
75. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ _____ ವರ್ಷಗಳು.
 ಒಂಬತ್ತು (9)

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon