ಕರ್ನಾಟಕದ ಜನಸಂಖ್ಯೆ | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |
ಅಧ್ಯಾಯ 10. ಕರ್ನಾಟಕದ ಜನಸಂಖ್ಯೆ I ಬಿಟ್ಟಿರುವ ಸ್ಥಾನಗಳನ್ನು ಸೂಕ್ತವಾದ ಪದಗಳಿಂದ ಭರ್ತಿಮಾಡಿರಿ . 1. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ _____ ಉತ್ತರ : 6,11,30,404 2. ಕರ್ನಾಟಕದ _____ ಜಿಲ್ಲೆಯು ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ ಉತ್ತರ : ಬೆಂಗಳೂರು ನಗರ 3. ಮಹಿಳೆಯರ ಪ್ರಮಾಣ ಹೆಚ್ಚಾಗಿರುವ ಜಿಲ್ಲೆ _____ ಉತ್ತರ : ಉಡುಪಿ ಜಿಲ್ಲೆ 4. ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ _____ ಉತ್ತರ : ಕೊಡಗು 5. ಕರ್ನಾಟಕದ ಸರಾಸರಿ ಜನಸಾಂದ್ರತೆ ಪ್ರತಿ ಚ . ಕಿ . ಮೀ . ಗೆ _____ ಜನರು . ಉತ್ತರ : 319 II ಗುಂಪಿನಲ್ಲಿ ಚರ್ಚಿಸಿ , ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ . 1. ಕರ್ನಾಟಕದ ಜನಸಂಖ್ಯೆಯ ಬೆಳವಣಿಗೆಯನ್ನು ಕುರಿತು ಬರೆಯಿರಿ . ಉತ್ತರ : ಕರ್ನಾಟಕ ಜನಸಂಖ್ಯೆಯ ಬೆಳವಣಿಗೆ : 2001 ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 5,28,50,562 ಗಳಷ್ಟಿತ್ತು . 2001 ರಿಂದ 2011 ರ ದಶಕದಲ್ಲಿ 80,80,142 ಜನರು ಹೆಚ್ಚುವರಿಯಾಗಿರುತ್ತಾರೆ . ಇದೇ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆ ದರವು ಶೇ .15.67 ಗಳಾಗಿರುತ್ತದೆ . ಇದು ಭಾರತದ ಜನಸಂಖ್ಯಾ ಬೆಳವಣಿಗೆಯ (17.64%) ದರಕ್ಕಿಂತ ಕಡಿಮೆ . ಇದಕ್ಕೆ ಕಾರಣ ಕುಟುಂಬ ಯೋಜನಾ ಕಾರ್ಯಕ್ರಮದ ಜಾಗೃತಿ , ಸಾಕ್...