ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ 9. ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳು

I ಬಿಟ್ಟಿರುವ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ.

1. ನಂದಿ ಗಿರಿಧಾಮ _____ ಜಿಲ್ಲೆಯಲ್ಲಿದೆ.

ಉತ್ತರ: ಚಿಕ್ಕಬಳ್ಳಾಪುರ

2. ಅಬ್ಬಿ ಜಲಪಾತ _____ ನಗರದ ಸಮೀಪ ಇದೆ

ಉತ್ತರ: ಮಡಿಕೇರಿ

3. ಕರ್ನಾಟಕದ ನಯಾಗರ ಎಂದು _____ ಜಲಪಾತವನ್ನು ಕರೆಯುತ್ತಾರೆ.

ಉತ್ತರ: ಗೋಕಾಕ್

4. ಗೋಕರ್ಣದ ಸಮೀಪ _____ ಬೀಚ್ ಇದೆ.

ಉತ್ತರ: ಓಂ ಬೀಚ್

5. ಅರಮನೆಗಳ ನಗರ ಎಂದು _____ ಅನ್ನು ಕರೆಯುತ್ತಾರೆ.

ಉತ್ತರ: ಮೈಸೂರು

II ಗುಂಪುಗಳಲ್ಲಿ ಚರ್ಚಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಪ್ರವಾಸ ಮಾಡುವುದರಿಂದಾಗುವ ಪ್ರಯೋಜನಗಳೇನು ?

ಉತ್ತರ: ತಮ್ಮ ವ್ಯಾಪಾರ ವಹಿವಾಟಿಗಾಗಿ, ಕುತೂಹಲಕ್ಕಾಗಿ, ಧಾರ್ಮಿಕ ಆಚರಣೆ, ಮನಃಶಾಂತಿ, ವಿಹಾರ, ಸುಂದರ ತಾಣಗಳನ್ನು ನೋಡುವ ಹಂಬಲ, ಸಂತೋಷಕ್ಕಾಗಿ, ಆರೋಗ್ಯ ವೃದ್ಧಿಗಾಗಿ ಪ್ರವಾಸ ಮಾಡಲಾಗುತ್ತದೆ.

ಪ್ರವಾಸದಿಂದ ನಾಡು, ನುಡಿ, ಸಂಸ್ಕೃತಿ, ನಾಗರಿಕತೆ, ಜನಜೀವನದ ಕ್ರಮ ಮುಂತಾದವುಗಳನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ.

2. ಪ್ರವಾಸ ಸ್ಥಳಗಳಲ್ಲಿರಬೇಕಾದ ಮೂಲ ಸೌಲಭ್ಯಗಳನ್ನು ತಿಳಿಸಿ.

ಉತ್ತರ: ಯಾತ್ರಿ ನಿವಾಸ,

ಪ್ರವಾಸಿ ಗೃಹ,

ಉಪಹಾರ ಗೃಹ

ಮುಂತಾದವುಗಳು.

3. ಕುದುರೆಮುಖ ಗಿರಿಧಾಮವನ್ನು ಕುರಿತು ಬರೆಯಿರಿ.

ಉತ್ತರ: ಚಿಕ್ಕಮಗಳೂರು ಜಿಲ್ಲೆಯಕುದುರೆಮುಖಗಿರಿಧಾಮ ಪ್ರಮುಖವಾಗಿದ್ದು,

ಇದರ ಸುತ್ತಲೂ ಹಸಿರಿನಿಂದ ಕೂಡಿದ ದಟ್ಟ ಅರಣಗ್ಯಗಳು, ಬೆಟ್ಟಗಳು, ಕಾಫಿ ತೋಟಗಳು, ಜಲಪಾತಗಳು ಇರುವುದರಿಂದ ಆಕರ್ಷಣೀಯ ಸ್ಥಳವಾಗಿದೆ.

4. ಕರ್ನಾಟಕದ ವನ್ಯಜೀವಿಧಾಮಗಳನ್ನು ಹೆಸರಿಸಿ.

ಉತ್ತರ: ಮುತ್ತೋಡಿ,

ಬಂಡಿಪುರ,

ನಾಗರಹೊಳೆ,

ದಾಂಡೇಲಿ,

ಭದ್ರಾ ವನ್ಯಜೀವಿಧಾಮ,

ರಂಗನತಿಟ್ಟು,

ಕೊಕ್ಕರೆ ಬೆಳ್ಳೂರು,

ಮಂದಗಡ್ಡೆ,

ಗುಡವಿ ಪಕ್ಷಿಧಾಮ ಇತ್ಯಾದಿ.

ಇವುಗಳು ಕರ್ನಾಟಕದ ವನ್ಯಜೀವಿಧಾಮಗಳು.

5. ಕರ್ನಾಟಕದ ಐತಿಹಾಸಿಕ ಮಹತ್ವದ ಸ್ಥಳಗಳನ್ನು ತಿಳಿಸಿ.

ಉತ್ತರ: ಹಂಪಿ,

ಬೇಲೂರು,

ಹಳೇಬೀಡು,

ಸೋಮನಾಥಪುರ,

ಬಾದಾಮಿ,

ಪಟ್ಟದಕಲ್ಲು,

ಐಹೊಳೆ,

ವಿಜಯಪುರ(ಬಿಜಾಪುರ) ಗೋಳಗುಮ್ಮಟ,

ಲಕ್ಕುಂಡಿ,

ಬನವಾಸಿ,

ಬಸರಾಳು,

ಬಳ್ಳಿಗಾವೆ,

ಮೈಸೂರು,

ಶ್ರೀರಂಗಪಟ್ಟಣ, ಮುಂತಾದವುಗಳು ಚಾರಿತ್ರಿಕ ಐತಿಹ್ಯದ ತಾಣಗಳಿವೆ.ಇವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ.

III. ಹೊಂದಿಸಿ ಬರೆಯಿರಿ.

                                            

1) ಬಿಳಿಗಿರಿರಂಗನ ಬೆಟ್ಟ  ) ಉತ್ತರಕನ್ನಡ ಜಿಲ್ಲೆ

2) ಜೋಗಿಮಟ್ಟಿ            ಬಿ) ಚಾಮರಾಜನಗರ ಜಿಲ್ಲೆ

3) ಯಾಣ                   ಸಿ) ಪಕ್ಷಿಧಾಮ

4) ಅನ್ಷಿ                       ಡಿ) ಚಿತ್ರದುರ್ಗ

5) ರಂಗನತಿಟ್ಟು           ) ರಾಷ್ಟ್ರೀಯ ಉದ್ಯಾನ

                                ) ನವಿಲುಧಾಮ

ಉತ್ತರ:

                                           

1) ಬಿಳಿಗಿರಿರಂಗನ ಬೆಟ್ಟ  ಬಿ) ಚಾಮರಾಜನಗರ ಜಿಲ್ಲೆ

2) ಜೋಗಿಮಟ್ಟಿ            ಡಿ) ಚಿತ್ರದುರ್ಗ

3) ಯಾಣ                    ) ಉತ್ತರಕನ್ನಡ ಜಿಲ್ಲೆ

4) ಅನ್ಷಿ                       ) ರಾಷ್ಟ್ರೀಯ ಉದ್ಯಾನ

5) ರಂಗನತಿಟ್ಟು           ಸಿ) ಪಕ್ಷಿಧಾಮ

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon