ಕರ್ನಾಟಕದ ಜನಸಂಖ್ಯೆ | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ 10. ಕರ್ನಾಟಕದ ಜನಸಂಖ್ಯೆ

I ಬಿಟ್ಟಿರುವ ಸ್ಥಾನಗಳನ್ನು ಸೂಕ್ತವಾದ ಪದಗಳಿಂದ ಭರ್ತಿಮಾಡಿರಿ.

1. 2011 ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ _____

ಉತ್ತರ: 6,11,30,404

2. ಕರ್ನಾಟಕದ _____ ಜಿಲ್ಲೆಯು ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ

ಉತ್ತರ: ಬೆಂಗಳೂರು ನಗರ

3. ಮಹಿಳೆಯರ ಪ್ರಮಾಣ ಹೆಚ್ಚಾಗಿರುವ ಜಿಲ್ಲೆ _____

ಉತ್ತರ: ಉಡುಪಿ ಜಿಲ್ಲೆ

4. ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ _____

ಉತ್ತರ: ಕೊಡಗು

5. ಕರ್ನಾಟಕದ ಸರಾಸರಿ ಜನಸಾಂದ್ರತೆ ಪ್ರತಿ .ಕಿ.ಮೀ.ಗೆ _____ ಜನರು.

ಉತ್ತರ: 319

II ಗುಂಪಿನಲ್ಲಿ ಚರ್ಚಿಸಿ, ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಕರ್ನಾಟಕದ ಜನಸಂಖ್ಯೆಯ ಬೆಳವಣಿಗೆಯನ್ನು ಕುರಿತು ಬರೆಯಿರಿ.

ಉತ್ತರ: ಕರ್ನಾಟಕ ಜನಸಂಖ್ಯೆಯ ಬೆಳವಣಿಗೆ:

2001 ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 5,28,50,562 ಗಳಷ್ಟಿತ್ತು.

2001 ರಿಂದ 2011 ದಶಕದಲ್ಲಿ 80,80,142 ಜನರು ಹೆಚ್ಚುವರಿಯಾಗಿರುತ್ತಾರೆ.

ಇದೇ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆ ದರವು ಶೇ.15.67ಗಳಾಗಿರುತ್ತದೆ.

ಇದು ಭಾರತದ ಜನಸಂಖ್ಯಾ ಬೆಳವಣಿಗೆಯ (17.64%) ದರಕ್ಕಿಂತ ಕಡಿಮೆ.

ಇದಕ್ಕೆ ಕಾರಣ ಕುಟುಂಬ ಯೋಜನಾ ಕಾರ್ಯಕ್ರಮದ ಜಾಗೃತಿ, ಸಾಕ್ಷರತಾ ಕಾರ್ಯಕ್ರಮ, ಜನನ ನಿಯಂತ್ರಣಗಳು ಇತ್ಯಾದಿ.

2. ಕಡಿಮೆ ಮತ್ತು ಅಧಿಕ ಜನಸಾಂದ್ರತೆಯುಳ್ಳ ಜಿಲ್ಲೆಗಳನ್ನು ಹೆಸರಿಸಿ.

ಉತ್ತರ: ಕಡಿಮೆ ಜನಸಾಂದ್ರತೆ- ಕೊಡಗು ಜಿಲ್ಲೆ

ಹೆಚ್ಚು ಜನಸಾಂದ್ರತೆಬೆಂಗಳೂರು ನಗರ

3. ಕರ್ನಾಟಕದಲ್ಲಿ ನಗರ ಮತ್ತು ಗ್ರಾಮೀಣ ಜನಸಂಖ್ಯೆ ಕುರಿತು ವಿವರಿಸಿ.

ಉತ್ತರ: ಕರ್ನಾಟಕವು ಗ್ರಾಮೀಣ ಪ್ರಧಾನವಾಗಿದ್ದು, 29,340 ಹಳ್ಳಿಗಳನ್ನೊಳಗೊಂಡಿದೆ. (2011)

ಅವು ಒಟ್ಟು 3.75 ಕೋಟಿ ಜನಸಂಖ್ಯೆಯನ್ನು ಹೊಂದಿವೆ.

ಅಂದರೆ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ 61.4% ಗ್ರಾಮೀಣರು

ಹಾಗೂ ಶೇ 38.6% ಭಾಗವು (2.35 ಕೋಟಿ) ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಭಾರತದ ಸರಾಸರಿಗೆ ಹೋಲಿಸಿದಾಗ ಕರ್ನಾಕದ ನಗರ ಜನಸಂಖ್ಯೆ ಹೆಚ್ಚಾಗಿದೆ.

ಎಲ್ಲ ಜಿಲ್ಲೆಗಳಲ್ಲೂ ಅದು ಒಂದೇ ರೀತಿಯಾಗಿಲ್ಲ.

ಬೆಂಗಳೂರು ನಗರ ಜಿಲ್ಲೆ ಅಧಿಕ ಪ್ರಮಾಣದ ನಗರ ಜನಸಂಖ್ಯೆಯನ್ನು ಹೊಂದಿದ್ದರೆ, ಕೊಡಗು ಜಿಲ್ಲೆ ಅತಿ ಕಡಿಮೆ ನಗರ ಜನಸಂಖ್ಯೆಯುಳ್ಳ ಜಿಲ್ಲೆ.

4. ಕರ್ನಾಟಕದಲ್ಲಿನ ಸಾಕ್ಷರತೆ ಕುರಿತು ಬರೆಯಿರಿ.

ಉತ್ತರ: ರಾಜ್ಯದ ಸರಾಸರಿ ಸಾಕ್ಷರಯ ಪ್ರಮಾಣ 2011 ರಲ್ಲಿ ಶೇ 75.6 ಭಾಗವಾಗಿತ್ತು.

ಇದು ಭಾರತದ (74%) ಸರಾಸರಿಗಿಂತ ಉತ್ತಮವಾಗಿದೆ.

ಜಿಲ್ಲಾವಾರು ಸಾಕ್ಷರತೆಯನ್ನು ಗಮನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 88.6 ಭಾಗದಷ್ಟಿದ್ದು, ಅದು ಪ್ರಥಮ ಸ್ಥಾನದಲ್ಲಿದೆ.

ಅನಂತರ ಬೆಂಗಳೂರು ನಗರ ಜಿಲ್ಲೆಯು (88.5%) ದ್ವಿತೀಯ ಸ್ಥಾನದಲ್ಲಿದೆ.

ಉಡುಪಿ ಮೂರನೆಯ ಸ್ಥಾನಗಳಲ್ಲಿದೆ.

ಇದಕ್ಕೆ ಪ್ರತಿಯಾಗಿ ಯಾದಗಿರಿ (52.4%) ಅತಿ ಕಡಿಮೆ ಸಾಕ್ಷರತೆಯುಳ್ಳ ಜಿಲ್ಲೆಯಾಗಿದೆ.

ಕರ್ನಾಕದ ಪುರುಷರ ಸಾಕ್ಷರತೆಯ ಪ್ರಮಾಣವು ಶೇ 82.9 ಮಹಿಳೆಯರ ಸಾಕ್ಷರತೆ ಶೇ 68.2 ರಷ್ಟಿರುತ್ತದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಾಕ್ಷರತೆಯನ್ನು ಗಮನಿಸಿದಾಗ ಸ್ವಾಭಾವಿಕವಾಗಿ ನಗರಪ್ರದೇಶಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚು ಸಾಕ್ಷರತೆ ಕಂಡು ಬರುತ್ತದೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon