ಶ್ರಮ ಹಾಗೂ ಉದ್ಯೋಗ | 9ನೇ ತರಗತಿ ಅರ್ಥಶಾಸ್ತ್ರ ಅಧ್ಯಾಯ-4 | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |
ಅಧ್ಯಾಯ - 4. ಶ್ರಮ ಹಾಗೂ ಉದ್ಯೋಗ I ಕೆಳಗೆ ನೀಡಿರುವ ವಾಕ್ಯಗಳಲ್ಲಿ ಸೂಕ್ತವಾದ ಶಬ್ದವನ್ನು ತುಂಬಿರಿ 1. ಉತ್ಪಾದನೆಯಲ್ಲಿ ಶ್ರಮವು _____ ಉತ್ಪಾದನಾಂಗವಾಗಿದೆ . ಉತ್ತರ : ಮಾನವ 2. ಕೆಲಸ ಮಾಡುವ ವಯೋಮಾನವು _____ ವರ್ಷವಾಗಿದೆ . ಉತ್ತರ : 16-60 3. ಭಾರತದ ಒಟ್ಟು ಶ್ರಮಶಕ್ತಿಯಲ್ಲಿ ಮಹಿಳಾ ಶ್ರಮಶಕ್ತಿಯ ಪಾಲು _____ ಆಗಿರುತ್ತದೆ . ಉತ್ತರ : ಶೇ .35 4. ಆರ್ಥಿಕ ಅಭಿವೃದ್ಧಿಯಾದಂತೆ _____ ವಲಯದಲ್ಲಿ ಕಾರ್ಮಿಕರ ಪಾಲು ಇಳಿಕೆಯಾಗುತ್ತದೆ . ಉತ್ತರ : ಪ್ರಾಥಮಿಕ 5. ಎಮ್ ಜಿನರೇಗ ಕಾನೂನನ್ನು ಪಾಸು ಮಾಡಿದ ವರ್ಷವು _____ . ಉತ್ತರ : 2005 II ಈ ಕೆಳಗಿನವುಗಳ ಕುರಿತು ಸಮೂಹ ಚರ್ಚೆ ಮಾಡಿ ಉತ್ತರಿಸಿ . 1. ಶ್ರಮದ ಅರ್ಥವೇನು ? ಉತ್ತರ : ಮಾನವರು ಸರಕು ಅಥವಾ ಸೇವೆಗಳ ಉತ್ಪಾದನೆಗಾಗಿ ಹಾಕುವ ಭೌತಿಕ ಅಥವಾ ಬೌದ್ಧಿಕ ಸಾಮರ್ಥ್ಯವನ್ನು ಶ್ರಮವೆಂದು ಕರೆಯುವರು . 2. ಅಸಂಘಟಿತ ವಲಯವೆಂದರೇನು ? ಉತ್ತರ : ಯಾವುದೇ ರೀತಿ ನೋಂದಣಿ ಮಾಡಲಾರದ ಉದ್ದಿಮೆಗಳನ್ನು ಅಸಂಘಟಿತ ವಲಯವೆಂದು ಕರೆಯುತ್ತಾರೆ . 3. ನಿರುದ್ಯೋಗವನ್ನು ವ್ಯಾಖಾನಿಸಿ . ಉತ್ತರ : ಪ್ರಸ್ತುತ ಕೂಲಿದರದಲ್ಲಿ ಕೆಲಸ ಮಾಡಲು ಇಚ್ಚೀಸುವ ಒಬ್ಬ ವ್ಯಕ್ತಿಗೆ ಕೆಲಸ ದೊರಕದೇ ಇರುವ ಸ್ಥಿತಿಯನ್ನು ನಿರುದ್ಯೋಗ ಎಂದು ಕರೆಯುತ್ತಾರೆ . 4. ನಿರುದ್ಯೋಗದ ದರ...