ಬಡತನ ಮತ್ತು ಹಸಿವು | 9ನೇ ತರಗತಿ ಅರ್ಥಶಾಸ್ತ್ರ ಅಧ್ಯಾಯ-3 | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ - 3. ಬಡತನ ಮತ್ತು ಹಸಿವು

I ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗಗಳನ್ನು ಭರ್ತಿ ಮಾಡಿರಿ.

1. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಘಟನೆ (NSSO) ಪ್ರಕಾರ 2004-05 ರಲ್ಲಿ ಭಾರತದಲ್ಲಿ ಶೇ _____ ಭಾಗದಷ್ಟು ಬಡಜನರಿದ್ದರು.

ಉತ್ತರ: 27.7

2. ಭಾರತದಲ್ಲಿ ಬಡಜನರನ್ನು ಗುರುತಿಸುವುದಕ್ಕಾಗಿ ಮೊಟ್ಟಮೊದಲ ಬಾರಿಗೆ ಬಡತನ ರೇಖೆಯನ್ನು ಬಳಕೆಗೆ ತಂದವರು _____

ಉತ್ತರ: ದಾದಾಬಾಯಿ ನವರೋಜಿ

3. ಭಾರತ ಸರ್ಕಾರವು ಆಹಾರ ಧಾನ್ಯಗಳನ್ನು ಕೊಂಡು ಸಂಗ್ರಹಿಸಲು _____ ಸಂಸ್ಥೆಯನ್ನು ಸ್ಥಾಪಿಸಿದೆ.

ಉತ್ತರ: ಭಾರತೀಯ ಆಹಾರ ನಿಗಮ

4. ಬಡಜನರಿಗೆ ಒದಗಿಸಲಾಗಿರುವ ಆರೋಗ್ಯ ವಿಮೆಗೆ _____ ಎಂದು ಹೆಸರಿಸಲಾಗಿದೆ.

ಉತ್ತರ: ಯಶಸ್ವಿನಿ ಯೋಜನೆ

5. ವೃದ್ಧಾಪ್ಯ ವೇತನಕ್ಕಾಗಿ ಜಾರಿಗೊಂಡಿರುವ ಯೋಜನೆಯ ಹೆಸರು _____

ಉತ್ತರ: ಸಂಧ್ಯಾ ಸುರಕ್ಷಾ ಯೋಜನೆ

6. ಸರ್ಕಾರವು ಆಹಾರ ಧಾನ್ಯಗಳನ್ನು ಖರೀದಿಸುವ ಬೆಲೆಗೆ _____ ಬೆಲೆ ಎಂದು ಕರಯಲಾಗುತ್ತದೆ.

ಉತ್ತರ: ಬೆಂಬಲ

II ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

1. ಬಡತನದ ಅರ್ಥ ತಿಳಿಸಿ.

ಉತ್ತರ: ಮಾನವನ ಬದುಕಿಗೆ ಅಗತ್ಯವಾದ ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ ಮುಂತಾದ ಕನಿಷ್ಠ ಮೂಲಭೂತ ಅವಶ್ಯಕತೆಗಳಿಂದ ಬಹುಪಾಲು ಜನರು ವಂಚಿತರಾಗಿರುವ ಸ್ಥಿತಿಯನ್ನು ಬಡತನ ಎನ್ನುವರು.

2. ಮಾನವನ ಕನಿಷ್ಠ ಮೂಲಭೂತ ಅವಶ್ಯಕತೆಗಳಾವುವು?

ಉತ್ತರ: ಊಟ,

ಬಟ್ಟೆ,

ವಸತಿ,

ಶಿಕ್ಷಣ,

ಆರೋಗ್ಯ

3. ಬಡತನ ರೇಖೆ ಎಂದರೇನು?

ಉತ್ತರ: ಮೂಲ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಅವಶ್ಯವಿರುವ ಕನಿಷ್ಠ ಆದಾಯದ ಪ್ರಮಾಣವೇ ಬಡತನ ರೇಖೆಯಾಗಿದೆ.

ಅದು ಒಬ್ಬ ವ್ಯಕ್ತಿಯು ತನ್ನ ಮೂಲ ಅವಶ್ಯಕತೆಗಳನ್ನು ಪೂರೈಸಿಕೊಂಡು, ಆರೋಗ್ಯಯುತವಾಗಿ ಮತ್ತು ಘನತೆಯುತವಾಗಿ ಜೀವನ ನಡೆಸಲು ವೆಚ್ಚ ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತದೆ.

4. ಹಸಿವಿನ ಪ್ರಮಾಣವನ್ನು ಅಳೆಯಲು ರೂಪಿಸಲಾಗಿರುವ ಸೂಚಿ ಯಾವುದು?

ಉತ್ತರ: ವಿಶ್ವ ಹಸಿವಿನ ಸೂಚ್ಯಂಕ

5. ಆಹಾರ ಭದ್ರತೆಯ ಅರ್ಥ ತಿಳಿಸಿ.

ಉತ್ತರ: ದೇಶದ ಪ್ರತಿಯೊಬ್ಬರಿಗೂ ಕನಿಷ್ಠ ಪ್ರಮಾಣದ ಆಹಾರವನ್ನು ಅವರು ನೀಡಬಹುದಾದ ಬೆಲೆಗೆ ಮತ್ತು ಅವರು ವಾಸಿಸುವ ಸ್ಥಳದ ಸಮೀಪ ಒದಗಿಸುವುದು ಅತ್ಯಾವಶ್ಯಕ. ಇದನ್ನೇ ನಾವು ಆಹಾರ ಭದ್ರತೆ ಎನ್ನುವುದು.

6. ಕಾಪು ದಾಸ್ತಾನು ಎಂದರೇನು?

ಉತ್ತರ: ಸರ್ಕಾರವು ಪ್ರತಿವರ್ಷ ಮಾರುಕಟ್ಟೆಯಿಂದ ಕನಿಷ್ಠ ಬೆಂಬಲ ಬೆಲೆ ನೀಡಿ ಆಹಾರ ಧಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡುತ್ತದೆ. ಇದನ್ನು ಕಾಪು ದಾಸ್ತಾನು ಎನ್ನುತ್ತಾರೆ.

III ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ.

1. ಬಾರತದಲ್ಲಿ ಬಡತನವನ್ನು ಹೇಗೆ ಗುರುತಿಸಲಾಗುತ್ತಿದೆ?

ಉತ್ತರ: ಸ್ವಾತಂತ್ರ್ಯ ಪೂರ್ವದಲ್ಲಿ ದಾದಾಬಾಯಿ ನವರೋಜಿಯವರು ಬಡವರನ್ನು ಗುರುತಿಸಲು ಮೊಟ್ಟಮೊದಲ ಬಾರಿಗೆ ಬಡತನ ರೇಖೆಯನ್ನು ಬಳಕೆಗೆ ತಂದರು.

ಸ್ವಾತಂತ್ರ್ಯಾ ನಂತರವೂ ಬಡತನ ರೇಖೆಯನ್ನು ಬಡತನ ಅಳೆಯಲು ಪ್ರಮುಖ ಸೂಚಿಯಾಗಿ ಬಳಕೆಯಾಗುತ್ತಿದೆ.

2005ರಲ್ಲಿ ಪ್ರೊ. ಸುರೇಶ ತೆಂಡುಲ್ಕರ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಿ ಆಹಾರದ ಜೊತೆಗೆ ಶಿಕ್ಷಣ, ಆರೋಗ್ಯ, ವಿದ್ಯುತ್ ಶಕ್ತಿ ಮತ್ತು ಸಾರಿಗೆಗಳ ಮೇಲೆ ಮಾಡುವ ತಲಾ ಮಾಸಿಕ ಅನುಭೋಗಿ ವೆಚ್ಚವನ್ನು ಅಂದಾಜಿಸಿ ಬಡತನ ರೇಖಯೆನ್ನು ರೂಪಿಸಲಾಗಿದೆ.

ನಂತರ ಸಿ. ರಂಗರಾಜನ್ ಸಮಿತಿಯು ತೆಂಡುಲ್ಕರ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಿ ಗ್ರಾಮೀಣ ಭಾಗಗಳಲ್ಲಿ ರೂ. 32 ಮತ್ತು ನಗರ ಭಾಗಗಳಲ್ಲಿ ರೂ. 47 ರಷ್ಟು ತಲಾ ಮಾಸಿಕ ಅನುಭೋಗಿ ವೆಚ್ಚವನ್ನು ಬಡತನ ರೇಖೆಯೆಂದು ನಿಗದಿಗೊಳಿಸಿದೆ.

ವ್ಯಕ್ತಿಗಳು ಇದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಅವರನ್ನು ಬಡತನ ರೇಖೆಯ ಮೇಲೆ ಇರುವವರೆಂದೂ, ಇಲ್ಲವಾದರೆ ಬಡತನ ರೇಖೆಯ ಕೆಳಗೆ ಇರುವವರೆಂದೂ ವರ್ಗೀಕರಿಸಲಾಗುತ್ತದೆ.

2. ಬಡತನದ ಸೂಚಿಗಳಾವುವು?

ಉತ್ತರ: ಬಡತನವನ್ನು ಸೂಚಿಸಲು ಹಲವಾರು ಸೂಚಿಗಳನ್ನು ಬಳಸಲಾಗುತ್ತದೆ.

ಮೂಲ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಅವಶ್ಯವಿರುವ ಕನಿಷ್ಠ ಆದಾಯದ ಪ್ರಮಾಣವೇ ಬಡತನ ರೇಖೆಯಾಗಿದೆ.

ಅದು ಒಬ್ಬ ವ್ಯಕ್ತಿಯು ತನ್ನ ಮೂಲ ಅವಶ್ಯಕತೆಗಳನ್ನು ಪೂರೈಸಿಕೊಂಡು, ಆರೋಗ್ಯಯುತವಾಗಿ ಮತ್ತು ಘನತೆಯುತವಾಗಿ ಜೀವನ ನಡೆಸಲು ವೆಚ್ಚ ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತದೆ.

2005ರಲ್ಲಿ ಪ್ರೊ. ಸುರೇಶ ತೆಂಡುಲ್ಕರ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಿ ಆಹಾರದ ಜೊತೆಗೆ ಶಿಕ್ಷಣ, ಆರೋಗ್ಯ, ವಿದ್ಯುತ್ ಶಕ್ತಿ ಮತ್ತು ಸಾರಿಗೆಗಳ ಮೇಲೆ ಮಾಡುವ ತಲಾ ಮಾಸಿಕ ಅನುಭೋಗಿ ವೆಚ್ಚವನ್ನು ಅಂದಾಜಿಸಿ ಬಡತನ ರೇಖಯೆನ್ನು ರೂಪಿಸಲಾಗಿದೆ.

ನಂತರ ಸಿ. ರಂಗರಾಜನ್ ಸಮಿತಿಯು ತೆಂಡುಲ್ಕರ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಿ ಗ್ರಾಮೀಣ ಭಾಗಗಳಲ್ಲಿ ರೂ. 32 ಮತ್ತು ನಗರ ಭಾಗಗಳಲ್ಲಿ ರೂ. 47 ರಷ್ಟು ತಲಾ ಮಾಸಿಕ ಅನುಭೋಗಿ ವೆಚ್ಚವನ್ನು ಬಡತನ ರೇಖೆಯೆಂದು ನಿಗದಿಗೊಳಿಸಿದೆ.

ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ, ವಿಶ್ವ ಬ್ಯಾಂಕು ಯಾವ ವ್ಯಕ್ತಿಯು ಪ್ರತಿದಿನ 1.25 ಡಾಲರ್ ಹಣವನ್ನು ಗಳಿಸಲು ಅಸಮರ್ಥನೋ ಅಂಥವನನ್ನು ಬಡತನದ ರೇಖೆಯ ಕೆಳಗಿರುವನು ಎಂದು ಗುರುತಿಸುತ್ತದೆ.

ಇವುಗಳೆಲ್ಲವು ಬಡತನ ಸೂಚಿಗಳಾಗಿವೆ.

3. ಭಾರತದಲ್ಲಿ ಹಸಿವಿನ ತೀವ್ರತೆ ಮುಂದುವರೆದಿರುವುದರ ಕಾರಣಗಳೇನು?

ಉತ್ತರ: ಭಾರತದಲ್ಲಿ ಹಸಿವಿನ ತೀವ್ರತೆ ಮುಂದುವರಿದಿರುವುದಕ್ಕೆ ಕಾರಣಗಳು:

1. ಜನರಲ್ಲಿ ಆಹಾರ ಕೊಳ್ಳುವ ಶಕ್ತಿ ಇಲ್ಲದಿರುವುದು.

2. ಜನಸಂಖ್ಯಾ ಸ್ಪೋಟ

3. ನಿರುದ್ಯೋಗ

4. ಬಡತನ

5. ಆಹಾರ ಧಾನ್ಯ ವಿತರಣೆಯಲ್ಲಿನ ದೋಷ. ಮುಂತಾದವುಗಳು.

4. ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ತಿಳಿಸಿರಿ.

ಉತ್ತರ: ಭಾರತೀಯ ಆಹಾರ ನಿಗಮದ ಮೂಲಕ ಖರೀದಿಸಿದ ಧಾನ್ಯಗಳನ್ನು ಮಾರುಕಟ್ಟೆಯಲ್ಲಿನ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಸರ್ಕಾರವು ಬಡಜನರಿಗೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸುತ್ತದೆ.

ಇದೇ ಸಾರ್ವಜನಿಕ ವಿತರಣಾ ವ್ಯವಸ್ಥೆ.

ಆಹಾರ ಧಾನ್ಯಗಳಲ್ಲದೇ, ಖಾದ್ಯ ತೈಲ, ಸಕ್ಕರೆ, ಸೀಮೆ ಎಣ್ಣೆ ಹಾಗೂ ಇತರ ಅವಶ್ಯಕ ವಸ್ತುಗಳನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ.

ಭಾರತದಾದ್ಯಂತ 5 ಲಕ್ಷಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳು 16 ಕೋಟಿಗಿಂತಲೂ ಅಧಿಕ ಕುಟುಂಬಗಳಿಗೆ ಸೇವೆ ಸಲ್ಲಿಸುತ್ತಿವೆ.

ಸೌಲಭ್ಯಗಳನ್ನು ಪಡೆಯಲು ಪ್ರತಿಯೊಂದು ಕುಟುಂಬವು ಪಡಿತರ ಚೀಟಿ ಹೊಂದುವುದು ಅವಶ್ಯವಿದೆ.

ಆರ್ಥಿಕ ಸ್ಥಿತಿ ಆಧರಿಸಿ, ವಿವಿಧ ಬಗೆಯ ಪಡಿತರ ಚೀಟಿಗಳಿದ್ದು ಚೀಟಿಗಳು ಪ್ರತಿ ಕುಟುಂಬಕ್ಕೆ ನಿರ್ದಿಷ್ಟ ಪಡಿಸಿದಿ ಆಹಾರ ಧಾನ್ಯ ಹಾಗೂ ಇತರ ವಸ್ತುಗಳ ಪ್ರಮಾಣಕ್ಕೆ ಬಾಧ್ಯಸ್ಥರನ್ನಾಗಿಸುತ್ತದೆ.

ಹೀಗೆ ಬಡತನದ ರೇಖೆಯ ಕೆಳಗಿರುವ ಜನರ ಪಡಿತರ ಚೀಟಿಗೆ ಅಧಿಕ ಪ್ರಮಾಣದ ವಸ್ತುಗಳು ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಮಾಸಿಕವಾಗಿ ಪೂರೈಸಲಾಗುತ್ತದೆ.

ಅತ್ಯಂತ ಬಡ ಜನರಿಗಾಗಿ ಅಂತ್ಯೋದಯ ಅನ್ನ ಯೋಜನೆ ಜಾರಿಯಲ್ಲಿದ್ದು ಅದರಡಿ ಅತ್ಯಂತ ಕಡಿಮೆ ದರಕ್ಕೆ ಆಹಾರ ವಿತರಿಸಲಾಗುತ್ತದೆ.

ಇನ್ನುಳಿದ ಕುಟುಂಬಗಳಿಗೂ ನಿಗದಿಪಡಿಸಿದ ಆಹಾರ ಧಾನ್ಯ ಪ್ರಮಾಣವನ್ನು ನೀಡಲಾಗುತ್ತದೆ.

ಇದು ಭಾರತದಲ್ಲಿನ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯಾಗಿದೆ.

5. ಬಡತನ ನಿರ್ಮೂಲನೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿರಿ.

ಉತ್ತರ: ಸರ್ಕಾರವು ಬಡತನವನ್ನು ನಿರ್ಮೂಲನೆ ಮಾಡಲು ಹಲವಾರು ಕ್ರಮಗಳನ್ನು ಜಾರಿಗೊಳಿಸಿದೆ.

ಸರ್ಕಾರದ ಕ್ರಮಗಳನ್ನು ನಾಲ್ಕು ವಿಧಗಳನ್ನಾಗಿ ವರ್ಗೀಕರಿಸಬಹುದು:

1. ಆರ್ಥಿಕ ಅಭಿವೃದ್ಧಿ ಕ್ರಮಗಳು :

ಆರ್ಥೀಕ ಅಭಿವೃದ್ಧಿ ಮತ್ತು ಬಡತನದ ನಡುವೆ ನಿಕಟವಾದ ಸಂಬಂಧವಿದೆ.

ದೇಶವು ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸಿದಂತೆ ಬಡತನದ ಪ್ರಮಾಣವು ಕಡಿಮೆಯಾಗುತ್ತದೆ.

ಸರ್ಕಾರವು ಪಂಚವಾರ್ಷಿಕ ಯೋಜನೆಗಳ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ.

ಜೊತೆಗೆ ಅಭಿವೃದ್ಧಿ ಫಲಗಳು ಎಲ್ಲ ವರ್ಗದ ಜನರಿಗೆ ದೊರಕುವಂತೆ ನೋಡಿಕೊಳ್ಳುತ್ತಿದೆ.

2. ಬಡತನ ನಿರ್ಮೂಲನಾ ಕಾರ್ಯಕ್ರಮಗಳು :

ಸರ್ಕಾರವು 1960 ರಿಂದ ಈಚೆಗೆ ಗ್ರಾಮೀಣ ಭಾಗದಲ್ಲಿನ ಜನಸಮುದಾಯಕ್ಕೆ ಅಗತ್ಯವಾಗಿರುವ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲು ಹಲವಾರು ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ಅವುಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ:

) ಸ್ವ-ಉದ್ಯೋಗ ಕಾರ್ಯಕ್ರಮಗಳು

ಬಿ) ಕೂಲಿ ಉದ್ಯೋಗ ಕಾರ್ಯಕ್ರಮಗಳು

3. ಕನಿಷ್ಠ ಮೂಲ ಅವಶ್ಯಕತೆಗಳ ಪೂರೈಕೆ :

ಗ್ರಾಮೀಣ ಭಾಗದ ಬಡ ಜನರಿಗೆ ಅಗತ್ಯವಿರುವ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ ಮುಂತಾದ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಿ, ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

4. ಸಾಮಾಜಿಕ ಭದ್ರತಾ ಕ್ರಮಗಳು :

ಸಮಾಜದ ಅತಿ ಬಡಕುಟುಂಬಗಳ ಅಸಹಾಯಕರು, ವಯಸ್ಸಾದವರು, ಅಂಗವಿಕಲರು ಮುಂತಾದವರಿಗೆ ಸರ್ಕಾರ ಒದಗಿಸುವ ರಕ್ಷಣೆಗೆ ಸಾಮಾಜಿಕ ಭದ್ರತೆ ಎನ್ನುತ್ತೇವೆ.

ಅನಾಥರಾದ ಮುದುಕರಿಗೆಸಂಧ್ಯಾ ಸುರಕ್ಷಾ ಯೋಜನೆ ಮುಲಕ ಪ್ರತಿ ತಿಂಗಳು ವೃದ್ಧಾಪ್ಯ ವೇತನ ನೀಡಲಾಗುತ್ತಿದೆ.

6. ಬಡಜನರಿಗೆ ಒದಗಿಸಲಾಗುತ್ತಿರುವ ಸಾಮಾಜಿಕ ಭದ್ರತಾ ಕ್ರಮಗಳನ್ನು ತಿಳಿಸಿ.

ಉತ್ತರ: ಬಡಜನರಿಗೆ ಒದಗಿಸಲಾಗುತ್ತಿರುವ ಸಾಮಾಜಿಕ ಭದ್ರತಾ ಕ್ರಮಗಳು ರೀತಿಯಾಗಿವೆ.

ಸಮಾಜದ ಅತಿ ಬಡಕುಟುಂಬಗಳ ಅಸಹಾಯಕರು, ವಯಸ್ಸಾದವರು, ಅಂಗವಿಕಲರು ಮುಂತಾದವರಿಗೆ ಸರ್ಕಾರ ಒದಗಿಸುವ ರಕ್ಷಣೆಗೆ ಸಾಮಾಜಿಕ ಭದ್ರತೆ ಎನ್ನುತ್ತೇವೆ.

ಅನಾಥರಾದ ಮುದುಕರಿಗೆಸಂಧ್ಯಾ ಸುರಕ್ಷಾ ಯೋಜನೆ ಮುಲಕ ಪ್ರತಿ ತಿಂಗಳು ವೃದ್ಧಾಪ್ಯ ವೇತನ ನೀಡಲಾಗುತ್ತಿದೆ.

ದುಡಿಯಲು ಅಸಮರ್ಥರಾದ ಅಂಗವಿಕಲರಿಗೆ ಮತ್ತು ಬಡ ವಿಧವೆಯರಿಗೆ ವಿಧವಾ ಮಾಶಾಸನ ನೀಡಲಾಗುತ್ತಿದೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon