ಶ್ರಮ ಹಾಗೂ ಉದ್ಯೋಗ | 9ನೇ ತರಗತಿ ಅರ್ಥಶಾಸ್ತ್ರ ಅಧ್ಯಾಯ-4 | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ - 4. ಶ್ರಮ ಹಾಗೂ ಉದ್ಯೋಗ

I ಕೆಳಗೆ ನೀಡಿರುವ ವಾಕ್ಯಗಳಲ್ಲಿ ಸೂಕ್ತವಾದ ಶಬ್ದವನ್ನು ತುಂಬಿರಿ

1. ಉತ್ಪಾದನೆಯಲ್ಲಿ ಶ್ರಮವು _____ ಉತ್ಪಾದನಾಂಗವಾಗಿದೆ.

ಉತ್ತರ: ಮಾನವ

2. ಕೆಲಸ ಮಾಡುವ ವಯೋಮಾನವು _____ ವರ್ಷವಾಗಿದೆ.

ಉತ್ತರ: 16-60

3. ಭಾರತದ ಒಟ್ಟು ಶ್ರಮಶಕ್ತಿಯಲ್ಲಿ ಮಹಿಳಾ ಶ್ರಮಶಕ್ತಿಯ ಪಾಲು _____ ಆಗಿರುತ್ತದೆ.

ಉತ್ತರ: ಶೇ.35

4. ಆರ್ಥಿಕ ಅಭಿವೃದ್ಧಿಯಾದಂತೆ _____ ವಲಯದಲ್ಲಿ ಕಾರ್ಮಿಕರ ಪಾಲು ಇಳಿಕೆಯಾಗುತ್ತದೆ.

ಉತ್ತರ: ಪ್ರಾಥಮಿಕ

5. ಎಮ್ ಜಿನರೇಗ ಕಾನೂನನ್ನು ಪಾಸು ಮಾಡಿದ ವರ್ಷವು _____ .

ಉತ್ತರ: 2005

II ಕೆಳಗಿನವುಗಳ ಕುರಿತು ಸಮೂಹ ಚರ್ಚೆ ಮಾಡಿ ಉತ್ತರಿಸಿ.

1. ಶ್ರಮದ ಅರ್ಥವೇನು?

ಉತ್ತರ: ಮಾನವರು ಸರಕು ಅಥವಾ ಸೇವೆಗಳ ಉತ್ಪಾದನೆಗಾಗಿ ಹಾಕುವ ಭೌತಿಕ ಅಥವಾ ಬೌದ್ಧಿಕ ಸಾಮರ್ಥ್ಯವನ್ನು ಶ್ರಮವೆಂದು ಕರೆಯುವರು.

2. ಅಸಂಘಟಿತ ವಲಯವೆಂದರೇನು?

ಉತ್ತರ: ಯಾವುದೇ ರೀತಿ ನೋಂದಣಿ ಮಾಡಲಾರದ ಉದ್ದಿಮೆಗಳನ್ನು ಅಸಂಘಟಿತ ವಲಯವೆಂದು ಕರೆಯುತ್ತಾರೆ.

3. ನಿರುದ್ಯೋಗವನ್ನು ವ್ಯಾಖಾನಿಸಿ.

ಉತ್ತರ: ಪ್ರಸ್ತುತ ಕೂಲಿದರದಲ್ಲಿ ಕೆಲಸ ಮಾಡಲು ಇಚ್ಚೀಸುವ ಒಬ್ಬ ವ್ಯಕ್ತಿಗೆ ಕೆಲಸ ದೊರಕದೇ ಇರುವ ಸ್ಥಿತಿಯನ್ನು ನಿರುದ್ಯೋಗ ಎಂದು ಕರೆಯುತ್ತಾರೆ.

4. ನಿರುದ್ಯೋಗದ ದರವನ್ನು ಹೇಗೆ ಅಳೆಯಲಾಗುತ್ತದೆ?

ಉತ್ತರ: ನಿರುದ್ಯೋಗ ದರವನ್ನು ಕೆಲಸ ದೊರಕದೇ ಇರುವ ಕಾರ್ಮಿಕರ ಪ್ರತಿಶತ ಪ್ರಮಾಣವೆಂದು ಲೆಕ್ಕಾ ಹಾಕಲಾಗುತ್ತದೆ.

5. ಭಾರತದಲ್ಲಿ ನಿರುದ್ಯೋಗದ ಸಮಸ್ಯೆಗಳನ್ನು ವಿವರಿಸಿ.

ಉತ್ತರ: ಭಾರತದಲ್ಲಿ ನಿರುದ್ಯೋಗದ ಸಮಸ್ಯೆಗಳು:

1. ಉದ್ಯೋಗ ರಹಿತ ಆರ್ಥಿಕ ಬೆಳವಣಿಗೆ.

2. ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ

3. ಅಸಮಂಜಸ ತಂತ್ರಜ್ಞಾನ

4. ಕೃಷಿಯ ಮೇಲಿನ ಅವಲಂಬನೆ

5. ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಅವನತಿ.

6. ಕಾರ್ಮಿಕರ ಕಡಿಮೆ ಚಲನಶೀಲತೆ.

6. ಭಾರತದ ಮಹಿಳಾ ಉದ್ಯೋಗದ ಲಕ್ಷಣಗಳನ್ನು ತಿಳಿಸಿ.

ಉತ್ತರ: 2001 ಮತ್ತು 2011 ಎರಡರ ಜನಗಣತಿಳಲ್ಲೂ ಮಹಿಳೆಯರಲ್ಲಿನ ಕಾರ್ಮಿಕರ ಪ್ರಮಾಣವು ಶೇ. 35ರಷ್ಟಿತ್ತು.

ಅಂದರೆ ಕೆಲಸದಲ್ಲಿ ಭಾಗವಹಿಸುತ್ತಿರುವ ಮಹಿಳೆಯರ ಪ್ರಮಾಣವು ಪುರುಷರಿಗಿಂತ ಕಡಿಮೆ ಇದೆ.

ಮಹಿಳೆಯರಿಗೆ ಸೂಕ್ತವಾದ ಉದ್ಯೋಗಾವಕಾಶಗಳು ಇರದಿರುವುದನ್ನೂ ಮತ್ತು ಅವರ ಕೆಲ ಕಾರ್ಯಗಳನ್ನು ಕೆಲಸ ಎಂದು ಗುರುತಿಸದೇ ಇರುವುದನ್ನೂ ಮಾಹಿತಿ ತೋರಿಸುತ್ತದೆ.

7. ಎಮ್ ಜಿ ನರೇಗ ಯೋಜನೆಯ ಉದ್ದೇಶಗಳನ್ನು ತಿಳಿಸಿ.

ಉತ್ತರ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಆಗಸ್ಟ್ 25, 2005ರಂದು ಕಾಯ್ದೆಯಾಗಿ ಪಾಸು ಮಾಡಿದ್ದರೂ ಅದು ಜಾರಿಯಾಗಿದ್ದು ಮಾತ್ರ 2-2-2006 ರಂದು.

ಕಾಯ್ದೆಯು ಗ್ರಾಮೀಣ ಪ್ರದೇಶದ ಯಾವುದೇ ಕುಟುಂಬದ ಒಬ್ಬ ವಯಸ್ಕ ಕಾರ್ಮಿಕನಿಗೆ ಪ್ರತಿವರ್ಷ ಒಂದು ನೂರು ದಿನಗಳ ಕೌಶಲ್ಯರಹಿತ ಉದ್ಯೋಗ ಖಾತ್ರಿಯನ್ನು ಕನಿಷ್ಠ ಕೂಲಿದರದಲ್ಲಿ ನೀಡುವ ಸಾಂವಿಧಾನಿಕ ಖಾತ್ರಿ ಒದಗಿಸುತ್ತದೆ.

ಒಂದು ವೇಳೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾದರೆ, ವ್ಯಕ್ತಿಗೆ ನಿರುದ್ಯೋಗ ಭತ್ಯೆ ನೀಡುವ ನಿಯಮವನ್ನು ಯೋಜನೆ ಒಳಗೊಂಡಿದೆ.

ನರೇಗ ಯೋಜನೆಯು ನೂರು ಪ್ರತಿಶತ ನಗರ ಜನಸಂಖ್ಯೆ ಇರುವ ಜಿಲ್ಲೆಗಳನ್ನು ಹೊರತು ಪಡಿಸಿ ಭಾರತದ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ.

ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಪರಿಷತ್ತಿನ (NCAER) ಒಂದು ವರದಿಯ ಪ್ರಕಾರ

ಎಮ್ ಜಿ ನರೇಗವು ವಿಶ್ವದ ಅತ್ಯಂತ ಬೃಹತ್ತಾದ ಬಡತನ ನಿರ್ಮೂಲನಾ ಕಾರ್ಯಕ್ರಮವಾಗಿದ್ದು,

ಬಡತನ ನಿರ್ಮೂಲನೆಯಲ್ಲಿ ಮತ್ತು ಮಹಿಳೆಯರ ಸಬಲೀಕರಣದಲ್ಲಿ ಯಶಸ್ಸನ್ನು ಸಾಧಿಸಿದೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon