ಕೈ ಕೆಸರಾದರೆ ಬಾಯಿ ಮೊಸರು | ತಾಳಿದವನು ಬಾಳಿಯಾನು | ಗಾದೆ ಮಾತುಗಳ ವಿಸ್ತರಣೆ |
ಗಾದೆ ಮಾತುಗಳ ವಿಸ್ತರಣೆ: ಗಾದೆಗಳು ಬಹಳ ಅರ್ಥಗಳನ್ನು ಒಳಗೊಂಡಿರುತ್ತವೆ. ಇವು ಚಿಕ್ಕ ಗಾತ್ರದಲ್ಲಿ ಇದ್ದರು ಸಹ ಇಡಿ ಜೀವನದ ಸಾರವನ್ನೆ ಹೇಳುವಂತಹ ಅಂಶಗಳನ್ನು ಒಳಗೊಂಡಿರುವಂತವುಗಳು ಈ ಗಾದೆ ಮಾತುಗಳಾಗಿರುತ್ತವೆ. ಈ ಗಾದೆ ಮಾತುಗಳಲ್ಲಿ ಪ್ರಮುಖವಾಗಿರುವ ಗಾದೆ ಮಾತುಗಳು ಎಂದರೆ "ಕೈ ಕೆಸರಾದರೆ ಬಾಯಿ ಮೊಸರು" ಮತ್ತು "ತಾಳಿದವನು ಬಾಳಿಯಾನು" ಈ ಗಾದೆಮಾತುಗಳ ಮಹತ್ವವನ್ನು ಇಲ್ಲಿ ನೋಡೋಣ. ಗಾದೆ ಮಾತುಗಳ ವಿಸ್ತರಣೆ : * ಗಾದೆ ಮಾತುಗಳ ಮಹತ್ವ ಮತ್ತು ಉಪಯುಕ್ತತೆಯನ್ನು ತಿಳಿಸುವದು. * ಗಾದೆ ಮಾತುಗಳಲ್ಲಿ ಅಡಗಿರುವ ಅರ್ಥವನ್ನು ವಿವರಿಸುವದು. * ಗಾದೆ ಮಾತನ್ನು ಸಮರ್ಥಿಸುವ ನಿದರ್ಶನ (ಉದಾಹರಣೆ) ಕೊಡುವುದು ಮತ್ತು ಭಾಷಾ ಶೈಲಿ. “ ಕೈ ಕೆಸರಾದರೆ ಬಾಯಿ ಮೊಸರು .” ಗಾದೆಗಳು ವೇದಗಳಿಗೆ ಸರಿಸಮಾನ ವಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವದಿಲ್ಲ ಎನ್ನುವ ಗಾದೆ ಮಾತಿನಂತೆ ಇದು ನಮ್ಮ ಪೂರ್ವಿಕರು ತಮ್ಮ ಅನುಭವದಿಂದ ಹೇಳಿರುವ ನೀತಿ ಮಾತಾಗಿದೆ. ಕನ್ನಡದ ಪ್ರಸಿದ್ಧ ಜನಪ್ರಿಯ ಗಾದೆ ಮಾತುಗಳಲ್ಲಿ ‘ಕೈಕೆಸರಾದರೆ ಬಾಯಿ ಮೊಸರು’ ಎಂಬ ಗಾದೆಯೂ ಸಹ ಒಂದಾಗಿದೆ. ಕೈ ಕೆಸರಾದರೆ ಬಾಯಿ ಮೊಸರು ಅಂದರೆ ಕಷ್ಟಪಟ್ಟು ದುಡಿದರೆ ಸುಖ ಉಂಟು ಎಂದರ್ಥವಾಗಿದೆ. ಮನುಷ್ಯನು ಸೋಮಾರಿಯಾಗಿ ಸುಮ್ಮನೆ ಕುಳಿತು ಕೊಳ್ಳಬಾರದು. ಯಾವುದಾದರೊಂದು ಕೆಲಸ ಮಾಡುವುದರಿಂದ ನಮ್ಮ ಹೊಟ್ಟೆ ತುಂಬುತ್ತದೆ. ನಮ್ಮ ಬಾಯಿ ಮೊಸರಿನ ರುಚಿ ನೋಡ...