ಕೈ ಕೆಸರಾದರೆ ಬಾಯಿ ಮೊಸರು | ತಾಳಿದವನು ಬಾಳಿಯಾನು | ಗಾದೆ ಮಾತುಗಳ ವಿಸ್ತರಣೆ |

ಗಾದೆ ಮಾತುಗಳ ವಿಸ್ತರಣೆ:
ಗಾದೆಗಳು ಬಹಳ ಅರ್ಥಗಳನ್ನು ಒಳಗೊಂಡಿರುತ್ತವೆ. ಇವು ಚಿಕ್ಕ ಗಾತ್ರದಲ್ಲಿ ಇದ್ದರು ಸಹ ಇಡಿ ಜೀವನದ ಸಾರವನ್ನೆ ಹೇಳುವಂತಹ ಅಂಶಗಳನ್ನು ಒಳಗೊಂಡಿರುವಂತವುಗಳು ಈ ಗಾದೆ ಮಾತುಗಳಾಗಿರುತ್ತವೆ. ಈ ಗಾದೆ ಮಾತುಗಳಲ್ಲಿ ಪ್ರಮುಖವಾಗಿರುವ ಗಾದೆ ಮಾತುಗಳು ಎಂದರೆ "ಕೈ ಕೆಸರಾದರೆ ಬಾಯಿ ಮೊಸರು" ಮತ್ತು "ತಾಳಿದವನು ಬಾಳಿಯಾನು" ಈ ಗಾದೆಮಾತುಗಳ ಮಹತ್ವವನ್ನು ಇಲ್ಲಿ ನೋಡೋಣ.


ಗಾದೆ ಮಾತುಗಳ ವಿಸ್ತರಣೆ :

* ಗಾದೆ ಮಾತುಗಳ ಮಹತ್ವ ಮತ್ತು ಉಪಯುಕ್ತತೆಯನ್ನು ತಿಳಿಸುವದು.

* ಗಾದೆ ಮಾತುಗಳಲ್ಲಿ ಅಡಗಿರುವ ಅರ್ಥವನ್ನು ವಿವರಿಸುವದು.

* ಗಾದೆ ಮಾತನ್ನು ಸಮರ್ಥಿಸುವ ನಿದರ್ಶನ (ಉದಾಹರಣೆ) ಕೊಡುವುದು ಮತ್ತು ಭಾಷಾ ಶೈಲಿ.

ಕೈ ಕೆಸರಾದರೆ ಬಾಯಿ ಮೊಸರು.”

ಗಾದೆಗಳು ವೇದಗಳಿಗೆ ಸರಿಸಮಾನವಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವದಿಲ್ಲ ಎನ್ನುವ ಗಾದೆ ಮಾತಿನಂತೆ ಇದು ನಮ್ಮ ಪೂರ್ವಿಕರು ತಮ್ಮ ಅನುಭವದಿಂದ ಹೇಳಿರುವ ನೀತಿ ಮಾತಾಗಿದೆ.

ಕನ್ನಡದ ಪ್ರಸಿದ್ಧ ಜನಪ್ರಿಯ ಗಾದೆ ಮಾತುಗಳಲ್ಲಿ ‘ಕೈಕೆಸರಾದರೆ ಬಾಯಿ ಮೊಸರು’ ಎಂಬ ಗಾದೆಯೂ ಸಹ ಒಂದಾಗಿದೆ.

ಕೈ ಕೆಸರಾದರೆ ಬಾಯಿ ಮೊಸರು ಅಂದರೆ ಕಷ್ಟಪಟ್ಟು ದುಡಿದರೆ ಸುಖ ಉಂಟು ಎಂದರ್ಥವಾಗಿದೆ. ಮನುಷ್ಯನು ಸೋಮಾರಿಯಾಗಿ ಸುಮ್ಮನೆ ಕುಳಿತು ಕೊಳ್ಳಬಾರದು. ಯಾವುದಾದರೊಂದು ಕೆಲಸ ಮಾಡುವುದರಿಂದ ನಮ್ಮ ಹೊಟ್ಟೆ ತುಂಬುತ್ತದೆ. ನಮ್ಮ ಬಾಯಿ ಮೊಸರಿನ ರುಚಿ ನೋಡುವಂತಾಗುತ್ತದೆ. ನಮ್ಮ ಕೈಗೆ ಕೆಸರಾಗುವುದಲ್ಲಾ. ಈ ಕೆಲಸ ಮಾಡುವುದಾದರೂ ಹೇಗೆ? ಎಂದು ಯೋಚಿಸುತ್ತಾ ಕುಳಿತರೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ.

ಕೆಲಸ ಮಾಡದಿದ್ದರೆ ಹಣ ಸಂಪಾದನೆಯಾಗುವುದಿಲ್ಲ. ಹಣ ಸಂಪಾದನೆಯಾಗದಿದ್ದರೆ ಹೊಟ್ಟೆ ತುಂಬುವುದಿಲ್ಲ. ಜೀವನ ಸುಖವಾಗಿ ಸಾಗಬೇಕಾದರೆ ಕೈ ಕೆಸರಾಗಲೇಬೇಕು; ಕೈ ತುಂಬಾ ಸಂಪಾದನೆಯಾಗಲೇಬೇಕು. ಆಗ ನಮಗೆ ಒಳ್ಳೆಯ ಊಟ, ಆಹಾರ, ಬಟ್ಟೆ ಸಿಗುವಂತಾಗುತ್ತದೆ. ಬುದು ಈ ಗಾದೆಯ ತಾತ್ಪರ್ಯವಾಗಿದೆ.

ಉದಾಹರಣೆಗೆ ಬಸವಣ್ಣನವರು ಹೇಳಿದ “ಕಾಯಕವೇ ಕೈಲಾಸಎಂಬ ಮಾತು ಹಾಗೂ “ಕಷ್ಟ ಪಟ್ಟರೆ ಫಲವುಂಟುಎಂಬ ಗಾದೆ ಮಾತು ಈ ಗಾದೆ ಮಾತನ್ನು ಸಮರ್ಥಿಸುತ್ತವೆ. ರೈತನೊಬ್ಬನು ಹೊಲದಲ್ಲಿ ಕಷ್ಟಪಟ್ಟು ಕೆಲಸ ಮಾಡಿದಾಗ ಮಾತ್ರ ಅವನಿಗೆ ಒಳ್ಳೆಯ ಬೆಳೆ ಬಂದು ಪ್ರತಿಫಲ ದೊರೆಯುತ್ತದೆ. ಆಹಾರ ಸಿಗುತ್ತದೆ. ಹೊಲದಲ್ಲಿ ಮೈ ಕೈ ಗೆ ಕೆಸರಾಗುತ್ತದೆ ಎಂದರೆ ಏನು ಸಿಗುವುದಿಲ್ಲ.

*

ತಾಳಿದವನು ಬಾಳಿಯಾನು.

ಗಾದೆಗಳು ವೇದಗಳಿಗೆ ಸರಿಸಮಾನವಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವದಿಲ್ಲ ಎನ್ನುವ ಗಾದೆ ಮಾತಿನಂತೆ ಇದು ನಮ್ಮ ಪೂರ್ವಿಕರು ತಮ್ಮ ಅನುಭವದಿಂದ ಹೇಳಿರುವ ನೀತಿ ಮಾತಾಗಿದೆ.

ಕನ್ನಡದ ಪ್ರಸಿದ್ಧ ಜನಪ್ರಿಯ ಗಾದೆ ಮಾತುಗಳಲ್ಲಿ `ತಾಳಿದವನು ಬಾಳಿಯಾನುಎಂಬ ಗಾದೆಯೂ ಸಹ ಒಂದಾಗಿದೆ.

ತಾಳ್ಮೆಯು ಒಂದು ತಪಸ್ಸು ಇದ್ದಂತೆ. ಪ್ರತಿಯೊಂದು ಸಾಧನೆಯಲ್ಲೂ ತಾಳ್ಮೆ ಬೇಕು. ತಾಳ್ಮೆ ಎಂದರೆ ಆಮೆ ಗತಿಯಲ್ಲಿ ಸಾಗುವುದು ಎಂದರ್ಥವಲ್ಲ. ಯಾವ ಸಾಧನೆಗೆ ಎಷ್ಟು ಸಮಯ ಮತ್ತು ಪ್ರಯತ್ನಗಳು ಬೇಕೋ ಅವನ್ನು ಪೂರ್ಣತೆಯಿಂದ ಮಾಡಲು ಬೇಕಾಗುವ ಶಕ್ತಿಯೇ ತಾಳ್ಮೆ.

ತಾಳ್ಮೆಯಿಂದ ಕಟ್ಟಿದ್ದು ಮತ್ತು ಪಡೆದದ್ದು ದೀರ್ಘಕಾಲ ಬಾಳುತ್ತದೆ.

ಉದಾಹರಣೆಗೆ “ತಾಳುವಿಕೆಗಿಂತ ತಪವು ಇಲ್ಲಎಂದಿದ್ದಾರೆ ಕನಕದಾಸರು. ಗಿಡ ನೆಟ್ಟ ಕೂಡಲೇ ಫಸಲು ಬಿಡಬೇಕು ಎಂದರೆ ಸಾಧ್ಯವಿಲ್ಲ. ಸಂಗೀತಾಭ್ಯಾಸ ಮಾಡಿದರೆ ಒಂದೇ ದಿನದಲ್ಲಿ ಕಛೇರಿ ನೀಡುವಂತಾಗಬೇಕು ಎನ್ನುವುದು ಸಾಧ್ಯವಿಲ್ಲ. ಪ್ರತಿಯೊಂದು ಸಾಧನೆಯಲ್ಲೂ ತಾಳ್ಮೆ ಬೇಕು ಎಂದು ಈ ಗಾದೆ ಹೇಳುತ್ತದೆ.

*


Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon