9th Social Science FA 3 Question paper 2022-23

9th Social Science FA 3 Question paper 2022-23

ರೂಪಣಾತ್ಮಕ ಮೌಲ್ಯಮಾಪನ - 3

ತರಗತಿ : 9ನೇ ತರಗತಿ                            ಸಾಧನಾ ಪರೀಕ್ಷೆ - 3                       ವಿಷಯ : ಸಮಾಜ ವಿಜ್ಞಾನ
ಅಂಕಗಳು : 20                                         2022-23                                  ಸಮಯ : 45 ನಿಮಿಷ
------------------------------------------------------------------------------------------------------------------

I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ  2x1=2

1. ಇವುಗಳಲ್ಲಿ ಯಾವುದು ವಿದೇಶಿ ಮೂಲದ ಕಂಪನಿ ಅಲ್ಲ ?
a) ವಾಟ್ಸಪ್
b) ಕೋಕೊ-ಕೋಲ
c) ಅಮೇಜಾನ್
d) ಟಿ.ಸಿ.ಎಸ್

2. ಆರ್.ಟಿ.ಇ. ಕಾಯ್ದೆಯು ಯಾವಾಗ ಜಾರಿಗೆ ಬಂದಿತು ?

a) 2005
b) 2007
c) 2009
d) 2019

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :      2x1=2

3. ಫ್ರಾನ್ಸ್ ನಲ್ಲಿದ್ದ ಪ್ರಮುಖ ಮೂರು ವರ್ಗಗಳು ಯಾವುವು?
4. ಏಕೀಕೃತ ಇಟಲಿಯಲ್ಲಿ ಸೇರಿಕೊಂಡ ಮೊದಲ ಭೌಗೋಳಿಕ ಪ್ರಾಂತ್ಯ ಯಾವುದು?

III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:    2x2=4

5. ರಾಬಿ ಮತ್ತು ಖಾರೀಫ್ ಕಾಲದಲ್ಲಿ ಬೆಳೆಯ ಸಾಮ್ಯತೆ ಮತ್ತು ವ್ಯತ್ಯಾಸ ಬರೆಯಿರಿ.
6.ಅಮೇರಿಕಾ ಕ್ರಾಂತಿಯು ಹೇಗೆ ಫ್ರಾನ್ಸ್ ಕ್ರಾಂತಿಯ ಮೇಲೆ ಪ್ರಭಾವ ಬೀರಿತು?
ಅಥವಾ ಜರ್ಮನಿಯ ಅತಿ ದೊಡ್ಡ ಭಾಗ ಯಾವುದು? ನಂತರ ಸೇರಿದ ಭಾಗಗಳು ಯಾವುವು?

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತಿಸಿರಿ:    2x3=6

7. ಮಣ್ಣಿನ ಸಂರಕ್ಷಣೆಗೆ ನಿಮ್ಮ ಸಲಹೆಗಳೇನು?
ಅಥವಾ ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡುವವರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿರಿ.
8. ಲೋಕಸಭೆ ಹೇಗೆ ರಚನೆಯಾಗುತ್ತದೆ?

V. ಈ ಕೆಳಗಿನ ಒಂದು ಪ್ರಶ್ನೆಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:     1x4=4

9. ತಾಲೂಕು ಕೇಂದ್ರಗಳಲ್ಲಿ ಸರ್ಕಾರ ಮಣ್ಣು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿದೆ. `ಮಣ್ಣು ಪರೀಕ್ಷಾ ಕೇಂದ್ರದಿಂದ’ ರೈತರಿಗೆ ಆಗುವ ಅನುಕೂಲಗಳನ್ನು ಪಟ್ಟಿಮಾಡಿರಿ.
ಅಥವಾ ನಿಮ್ಮ ಊರಿನಲ್ಲಿ ರೈತರು ಒಂದು ವರ್ಷದ ಅವಧಿಯಲ್ಲಿ ಎಷ್ಟು ಬೆಳೆಗಳನ್ನು ಬೆಳೆಯುವರು ಅವುಗಳು ಯಾವುವು ಮತ್ತು ಬೇರೆ ಊರಿನಲ್ಲಿ ಬೆಳೆಯುವ ಬೆಳೆಗಳು ನಿಮ್ಮ ಊರಿನಲ್ಲಿ ಏಕೆ ಬೆಳೆಯುವದಿಲ್ಲ ಎನ್ನುವುದನ್ನು ಹೋಲಿಕೆ ಮಾಡಿ.

VI. 10. ಕರ್ನಾಟಕದ ನಕಾಶೆಯನ್ನು ಬರೆದು ಇವುಗಳನ್ನು ಗುರುತಿಸಿ:   1+1=2

a) ಕೆಂಪು ಮಣ್ಣು ಹೊಂದಿರುವ ಪ್ರದೇಶಗಳು  b) ಕಪ್ಪು ಮಣ್ಣು ಹೊಂದಿರುವ ಪ್ರದೇಶಗಳು

*****


Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon