Government-provided facilities for disabled employees |ಅಂಗವಿಕಲ ನೌಕರರಿಗೆ ಸರ್ಕಾರದಿಂದ ಕಲ್ಪಿಸಿರುವ ಸೌಲಭ್ಯಗಳು
ಅಂಗವಿಕಲ ನೌಕರರಿಗೆ ಸರ್ಕಾರದಿಂದ ಕಲ್ಪಿಸಿರುವ ಸೌಲಭ್ಯಗಳು ಅಂಗವೀಕಲತೆ ಹೊಂದಿರುವ ಸರ್ಕಾರಿ ನೌಕರರಿಗೆ ವಿವಿಧ ರೀತಿಯಾದ ಸೌಲಭಯಗಳನ್ನು ಒದಗಿಸಿದ್ದು ಪ್ರಮುಖವಾಗಿ ದೊರೆಯುವ ಸೌಲಭ್ಯಗಳು: 1.ಅಂಗವಿಕಲ ನೌಕರರನ್ನು ವರ್ಗಾವಣೆ ಮಾಡದಿರಲು, ಹಾಗೇನಾದರೂ ವರ್ಗಾವಣೆ ಮಾಡಲೇ ಬೇಕಾದ ಪ್ರಸಂಗ ಬಂದಲ್ಲಿ ಸದರಿ ನೌಕರ ಇಚ್ಛಿಸುವ ಸ್ಥಳಕ್ಕೆ ವರ್ಗಾವಣೆ ಮಾಡಲು ಸರ್ಕಾರದ ಕಟ್ಟು ನಿಟ್ಟಿನ ಆದೇಶದ ಜ್ಞಾಪನಾ ಪತ್ರವನ್ನು ದಿನಾಂಕ: 17-11-1986ರಲ್ಲಿ ಹೊರಡಿಸಿದೆ. 2.ರಾಜ್ಯ ಸರ್ಕಾರಿ ನೌಕರರು ತ್ರಿಚಕ್ರ ವಾಹನ ಖರೀದಿಸಲು ರೂ.30,000/-ಗಳ ಮುಂಗಡ ಮಂಜೂರಾತಿಗೆ ಸರ್ಕಾರಿ ಆದೇಶ ಸಂಖ್ಯೆ: ಆ.ಇ.15 ಮೋವಾಮು 93 ದಿನಾಂಕ: 13-12-1994ರಲ್ಲಿ ಅವಕಾಶ ಕಲ್ಪಿಸಿದೆ. 3.ಭಾರತ ಸಂವಿಧಾನದ ಅನುಚ್ಛೆದ 16(4)ರನ್ವಯ ರಾಜ್ಯ ಸಿವಿಲ್ ಸೇವೆಯ 'ಸಿ' ಮತ್ತು 'ಡಿ' ವರ್ಗದ ಹುದ್ದೆಗಳ ನೇಮಕಾತಿಯಲ್ಲಿ ಶೇ.5 ರಷ್ಟು ಮೀಸಲಾಗಿ ಕಲ್ಪಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ: ಸಿ.ಆ.ಸು.ಇ.8 ಸ.ಹಿ.ಮ.95 ದಿನಾಂಕ: 20-6-1995. 4.ಆದಾಯ ತೆರಿಗೆ ಕಾಯ್ದೆಯ 80 'ಗ' ಅಡಿಯಲ್ಲಿ ರೂ.50,000/-ಗಳ ತೆರಿಗೆ ವಿನಾಯ್ತಿಯಿದೆ. 5.ಅಂಗವಿಕಲ ನೌಕರರಿಗೆ ವೃತ್ತಿ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. 6.ಅಂಗವಿಕಲ ನೌಕರರ ವರ್ಗಾವಣೆ ಮತ್ತು ಅವರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಅಧಿಕೃತ ಜ್ಞಾಪನಾ ಪತ್ರ ಸಂಖ್ಯೆ: ಡಿ.ಪಿ.ಎ.ಆರ್. 14 ಎಸ...