Government-provided facilities for disabled employees |ಅಂಗವಿಕಲ ನೌಕರರಿಗೆ ಸರ್ಕಾರದಿಂದ ಕಲ್ಪಿಸಿರುವ ಸೌಲಭ್ಯಗಳು

ಅಂಗವಿಕಲ ನೌಕರರಿಗೆ ಸರ್ಕಾರದಿಂದ ಕಲ್ಪಿಸಿರುವ ಸೌಲಭ್ಯಗಳು

ಅಂಗವೀಕಲತೆ ಹೊಂದಿರುವ ಸರ್ಕಾರಿ ನೌಕರರಿಗೆ ವಿವಿಧ ರೀತಿಯಾದ ಸೌಲಭಯಗಳನ್ನು ಒದಗಿಸಿದ್ದು ಪ್ರಮುಖವಾಗಿ ದೊರೆಯುವ ಸೌಲಭ್ಯಗಳು:

1.ಅಂಗವಿಕಲ ನೌಕರರನ್ನು ವರ್ಗಾವಣೆ ಮಾಡದಿರಲು, ಹಾಗೇನಾದರೂ ವರ್ಗಾವಣೆ ಮಾಡಲೇ ಬೇಕಾದ ಪ್ರಸಂಗ ಬಂದಲ್ಲಿ ಸದರಿ ನೌಕರ ಇಚ್ಛಿಸುವ ಸ್ಥಳಕ್ಕೆ ವರ್ಗಾವಣೆ ಮಾಡಲು ಸರ್ಕಾರದ ಕಟ್ಟು ನಿಟ್ಟಿನ ಆದೇಶದ 
ಜ್ಞಾಪನಾ ಪತ್ರವನ್ನು ದಿನಾಂಕ: 17-11-1986ರಲ್ಲಿ ಹೊರಡಿಸಿದೆ.
 
2.ರಾಜ್ಯ ಸರ್ಕಾರಿ ನೌಕರರು ತ್ರಿಚಕ್ರ ವಾಹನ ಖರೀದಿಸಲು ರೂ.30,000/-ಗಳ ಮುಂಗಡ ಮಂಜೂರಾತಿಗೆ ಸರ್ಕಾರಿ ಆದೇಶ ಸಂಖ್ಯೆ: ಆ.ಇ.15 ಮೋವಾಮು 93 ದಿನಾಂಕ: 13-12-1994ರಲ್ಲಿ ಅವಕಾಶ ಕಲ್ಪಿಸಿದೆ. 
 
3.ಭಾರತ ಸಂವಿಧಾನದ ಅನುಚ್ಛೆದ 16(4)ರನ್ವಯ ರಾಜ್ಯ ಸಿವಿಲ್ ಸೇವೆಯ 'ಸಿ' ಮತ್ತು 'ಡಿ' ವರ್ಗದ ಹುದ್ದೆಗಳ ನೇಮಕಾತಿಯಲ್ಲಿ ಶೇ.5 ರಷ್ಟು ಮೀಸಲಾಗಿ ಕಲ್ಪಿಸಲಾಗಿದೆ. 
ಸರ್ಕಾರಿ ಆದೇಶ ಸಂಖ್ಯೆ: ಸಿ.ಆ.ಸು.ಇ.8 ಸ.ಹಿ.ಮ.95 ದಿನಾಂಕ: 20-6-1995.

4.ಆದಾಯ ತೆರಿಗೆ ಕಾಯ್ದೆಯ 80 'ಗ' ಅಡಿಯಲ್ಲಿ ರೂ.50,000/-ಗಳ ತೆರಿಗೆ ವಿನಾಯ್ತಿಯಿದೆ.

5.ಅಂಗವಿಕಲ ನೌಕರರಿಗೆ ವೃತ್ತಿ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ.

6.ಅಂಗವಿಕಲ ನೌಕರರ ವರ್ಗಾವಣೆ ಮತ್ತು ಅವರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಅಧಿಕೃತ ಜ್ಞಾಪನಾ ಪತ್ರ  
ಸಂಖ್ಯೆ: ಡಿ.ಪಿ.ಎ.ಆರ್. 14 ಎಸ್.ಟಿ.ಆರ್. 86 ದಿನಾಂಕ: 7-11-1986.

7.ಸರ್ಕಾರದ ವರ್ಗಾವಣೆ ಮಾರ್ಗಸೂಚಿಗಳ ಆದೇಶದಲ್ಲಿ ಅಂಗವಿಕಲ ಸರ್ಕಾರಿ ನೌಕರರಿಗೆ ವರ್ಗಾವಣೆಯಿಂದ ಪೂರ್ಣ ವಿನಾಯಿತಿಯನ್ನು ನೀಡಲಾಗಿದೆ.

8.ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 107 ಸೆನೆಸಿ 2005 ದಿನಾಂಕ: 5-9-2005ರಲ್ಲಿ ಅಂಗವಿಕಲರಿಗೆ ಸಮೂಹ 'ಎ' ಮತ್ತು 'ಬಿ' ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ. 3 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.

9.6ನೇ ವೇತನ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರವು ಅಂಗವಿಕಲತೆಯುಳ್ಳ ನೌಕರರಿಗೆ ಮೂಲ ವೇತನದ ಶೇ. 6 ರಷ್ಟು ಸಾರಿಗೆ ಸೌಕರ್ಯದ ಭತ್ಯೆ ಮಂಜೂರು ಮಾಡಿದೆ.

10.ಅಂಗವಿಕಲತೆಯುಳ್ಳ ಅಧಿಕಾರಿ ನೌಕರರ ಉಪಯೋಗಕ್ಕಾಗಿ ಕೃತಕ ಅಂಗ ಸಾಧನ, ಸಲಕರಣೆ, ಗಾಲಿ ಖುರ್ಚಿ, ಇತ್ಯಾದಿ ಖರೀದಿಸಲು ಸೇವೆಯಲ್ಲಿ ಒಂದು ಸಾರಿ ರೂ.25,000/-ಗಳ ಸಹಾಯಧನ ನೀಡಲು ಆದೇಶಿಸಲಾಗಿದೆ.

11.ಅಂಗವಿಕಲ ಮಕ್ಕಳು ಹೊಂದಿರುವ ಸರ್ಕಾರಿ ನೌಕರರಿಗೆ ಮಾಸಿಕ ರೂ.500/-ಗಳ ವಿಶೇಷ ಭತ್ಯೆಯನ್ನು ಮಂಜೂರು ಮಾಡಲಾಗಿದೆ.

12.ಬುದ್ಧಿಮಾಂದ್ಯ / ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನ ರಜೆ ಮಂಜೂರು ಮಾಡಲಾಗಿದೆ. 
 
 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon