2nd PUC Sociology Notes | ಅಧ್ಯಾಯ-5 ಭಾರತೀಯ ಗ್ರಾಮಗಳ ಬದಲಾವಣೆ – ಅಭಿವೃದ್ಧಿ ಮತ್ತು ನಗರೀಕರಣ

ಅಧ್ಯಾಯ-5 ಭಾರತೀಯ ಗ್ರಾಮಗಳ ಬದಲಾವಣೆ – ಅಭಿವೃದ್ಧಿ ಮತ್ತು ನಗರೀಕರಣ ಒಂದು ಅಂಕದ ಪ್ರಶ್ನೆಗಳು:- 1.ಗ್ರಾಮ ಸಮುದಾಯದ ಒಂದು ಲಕ್ಷಣವನ್ನು ತಿಳಿಸಿ? ಉ: 1)ಚಿಕ್ಕಗಾತ್ರ 2)ಪ್ರಾಥಮಿಕ ಸಂಬಂಧ 2.”ರೂರಲ್ ಸೋಶಿಯಾಲಜಿ ಇನ್ ಇಂಡಿಯಾ” ಗ್ರಂಥದ ಸಂಪಾದಕರು ಯಾರು? ಉ: ಎ.ಆರ್.ದೇಸಾಯಿ. 3.ಭಾರತೀಯ ಗ್ರಾಮಗಳನ್ನು “ಪುಟ್ಟ ಗಣರಾಜ್ಯಗಳು” ಎಂದವರು ಯಾರು? ಉ: ಚಾರ್ಲ್ಸ್ ಮೆಟ್ ಕಾಫ್ 4.ಭಾರತದ ಹಸಿರುಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉ: ಎಂ.ಎಸ್.ಸ್ವಾಮಿನಂದನ್. 5.ಗ್ರಾಮೀಣಾಭಿವೃದ್ಧಿ ಎಂದರೇನು? ಉ: ಗ್ರಾಮಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದು. 6.ರಿಮೆಂಬರ್ಡ್ ವಿಲೇಜ್ ಗ್ರಂಥದ ಕರ್ತೃ ಯಾರು? ಉ: ಎಂ.ಎನ್.ಶ್ರೀನಿವಾಸ್. 7.C.D.P. ಯನ್ನು ವಿಸ್ತರಿಸಿ? ಉ: ಸಾಮುದಾಯಿಕ ಅಭಿವೃದ್ಧಿ ಕಾರ್ಯಕ್ರಮ. 8.I.R.D.P. ಯನ್ನು ವಿಸ್ತರಿಸಿ? ಉ: ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ. 9.ಗ್ರಾಮದ ಒಂದು ಸಮಸ್ಯೆಯನ್ನು ತಿಳಿಸಿ? ಉ: 1)ಅನಕ್ಷರತೆ 2)ಬಡತನ 10.MGNREGA ಯನ್ನು ವಿಸ್ತರಿಸಿ? ಉ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾಯ್ದೆ (2005) 11.ರೈತರ ಆತ್ಮಹತ್ಯೆಗೆ ಎರಡು ಕಾರಣಗಳನ್ನು ತಿಳಿಸಿ? ಉ: ...