2nd PUC Sociology Notes | ಅಧ್ಯಾಯ-4 ಭಾರತದ ಕುಟುಂಬ ವ್ಯವಸ್ಥೆ

ಅಧ್ಯಾಯ-4

ಭಾರತದ ಕುಟುಂಬ ವ್ಯವಸ್ಥೆ

ಒಂದು ಅಂಕದ ಪ್ರಶ್ನೆಗಳು:-

1.ಅವಿಭಕ್ತ ಕುಟುಂಬದ ಯಜಮಾನ ಯಾರು?

: ಕರ್ತಾ

2.ಭಾರತದ ಅವಿಭಕ್ತ ಕುಟುಂಬವನ್ನುಮಹಾಮನೆಎಂದು ಕರೆದವರು ಯಾರು?

: ಹೆನ್ರಿ ಮೇನ್‌.

3.ಕರ್ತಾ ಯಾರು?

: ಅವಿಭಕ್ತ ಕುಟುಂಬದ ಯಜಮಾನ

4.ಕರ್ಣವನ್ಯಾರು?

: ಕರ್ಣವನ್ಮಾತೃ ಪ್ರಧಾನ ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸುವವರು.

5.”ಕಿನ್ಶಿಫ್ಆರ್ಗನೈಜೇ಼ಶನ್ಇನ್ಇಂಡಿಯಾಗ್ರಂಥವನ್ನು ಬರೆದವರು ಯಾರು?

: ಐರಾವತಿ ಕಾರ್ವೆ.

6.”ಮ್ಯಾರೇಜ್ಅಂಡ್ಫ್ಯಾಮಿಲಿ ಇನ್ಇಂಡಿಯಾಎಂಬ ಗ್ರಂಥ ಬರೆದವರು ಯಾರು?

: ಕೆ.ಎಂ.ಕಪಾಡಿಯಾ

7.ನರಸಿಂಗನವರ್ರವರ ಕುಟುಂಬದ ಪ್ರಮುಖ ವೃತ್ತಿ ಯಾವುದು?

: ವ್ಯವಸಾಯ

8.ತರವಾಡು ಎಂದರೇನು?

: ಕೇರಳದ ನಾಯರ್ಜಾತಿಯ ಮಾತೃಪ್ರಧಾನ ಅವಿಭಕ್ತ ಕುಟುಂಬವನ್ನು ತರವಾಡು ಎಂದು ಕರೆಯುತ್ತಾರೆ.

9.ಇಲ್ಲಾಂ ಎಂದರೇನು?

: ಕೇರಳದ ನಂಬೂದರಿ ಅವಿಭಕ್ತ ಕುಟುಂಬವನ್ನು ಇಲ್ಲಾಂ ಎಂದು ಕರೆಯುತ್ತಾರೆ.

10.ಅವಿಭಕ್ತ ಕುಟುಂಬದ ಎರಡು ಪ್ರಕಾರಗಳನ್ನು ತಿಳಿಸಿ?

:       1)ಪಿತೃ ಪ್ರಧಾನ ಅವಿಭಕ್ತ ಕುಟುಂಬ

            2)ಮಾತೃ ಪ್ರಧಾನ ಅವಿಭಕ್ತ ಕುಟುಂಬ

11.ಸಮ್ಆಸೆಕ್ಟಸ್ಆಫ್ಫ್ಯಾಮಿಲಿ ಇನ್ಮಹುವಾ ಗ್ರಂಥದ ಲೇಖಕರು ಯಾರು?

: .ಪಿ.ದೇಸಾಯಿ.

ಎರಡು ಅಂಕದ ಪ್ರಶ್ನೆಗಳು:-

1.ಅವಿಭಕ್ತ ಕುಟುಂಬವನ್ನು ವ್ಯಾಖ್ಯಾನಿಸಿ?

: ಐರಾವತ ಕಾರ್ವೆ ರವರ ಪ್ರಕಾರರಕ್ತ ಸಂಬಂಧಿಗಳ ಸಮೂಹವೊಂದು ಒಂದೇ ಮನೆಯಲ್ಲಿ ವಾಸಿಸುತ್ತಾ ಒಂದೇ ಅಡುಗೆ ಮನೆಯಲ್ಲಿ ತಯಾರಾದ ಆಹಾರ ಸೇವಿಸುತ್ತಾ ಆಸ್ತಿಯ ಮೇಲೆ ಸಮಾನ ಒಡತನ ಮತ್ತು ಕುಟುಂಬದ ಪೂಜಾ ಕಾರ್ಯಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ಳುವ ಕುಟುಂಬವನ್ನು ಅವಿಭಕ್ತ ಕುಟುಂಬಎನ್ನುವರು.

2.ಅವಿಭಕ್ತ ಕುಟುಂಬದ ಎರಡು ಲಕ್ಷಣಗಳನ್ನು ತಿಳಿಸಿ?

:       )ಸಾಮಾನ್ಯ ಮನೆ

            )ಸಾಮಾನ್ಯ ಅಡುಗೆ ಮನೆ

            )ಸಾಮಾನ್ಯ ಪೂಜಾಪದ್ದತಿ

3.ಅವಿಭಕ್ತ ಕುಟುಂಬದ ಎರಡು ಅನುಕೂಲಗಳನ್ನು ತಿಳಿಸಿ?

:       )ಆರ್ಥಿಕ ಅನುಕೂಲ

            )ಸದಸ್ಯರ ರಕ್ಷಣೆ

            )ಮನರಂಜನೆ

4. ಅವಿಭಕ್ತ ಕುಟುಂಬದ ಎರಡು ಅನಾನುಕೂಲಗಳನ್ನು ತಿಳಿಸಿ?

:       )ಸೋಮಾರಿತನವನ್ನು ಪ್ರೋತ್ಸಾಹಿಸುತ್ತದೆ

            )ವ್ಯಕ್ತಿತ್ವದ ಬೆಳವಣಿಗೆಗೆ ಅಡಚಣೆ

            )ಸಂಘರ್ಷಗಳ ಕೇಂದ್ರ

5.ಅವಿಭಕ್ತ ಕುಟುಂಬದ ಮೇಲೆ ಪ್ರಭಾವ ಬೀರಿದ ಎರಡು ಸಾಮಾಜಿಕ ಶಾಸನಗಳನ್ನು ತಿಳಿಸಿ?

:       )ಹಿಂದೂ ಉತ್ತರಾಧಿಕಾರ ಕಾಯ್ದೆ 1956

            )ಹಿಂದೂ ವಿವಾಹ ಕಾಯ್ದೆ 1955

6.ಅವಿಭಕ್ತ ಕುಟುಂಬದ ಬಗ್ಗೆ .ಪಿ.ದೇಸಾಯಿ ದೃಷ್ಟಿಕೋನವನ್ನು ತಿಳಿಸಿ.

: ಜಂಟಿತನ ಕೌಟುಂಬಿಕ ಐಕ್ಯತೆ ಅಂಶಗಳು ಧರ್ಮ, ಆಸ್ತಿ, ಶಿಕ್ಷಣ, ನಗರೀಕರಣ, ರಕ್ತ ಸಂಬಂಧಗಳು ಮುಂತಾದುವುಗಳ ಹಿನ್ನೆಲೆಯಲ್ಲಿ ಅವಿಭಕ್ತ ಸಂಬಂಧಗಳನ್ನು ಗುರುತಿಸಿದ್ದಾರೆ.

ಐದು ಅಂಕದ ಪ್ರಶ್ನೆಗಳು:-

1.ಅವಿಭಕ್ತ ಕುಟುಂಬದ ಗುಣಲಕ್ಷಣಗಳನ್ನು ವಿವರಿಸಿ?

:       )ಪೀಳಿಗೆಗಳ ಸಮಾವೇಶ                        )ಸಾಮಾನ್ಯ ಮನೆ

            )ಸಾಮಾನ್ಯ ಅಡುಗೆ ಮನೆ                       )ಸಾಮಾನ್ಯ ಧಾರ್ಮಿಕವಿಧಿ

            )ಸಾಮಾನ್ಯ ಆಸ್ತಿ                                 )ಕರ್ತನ ಅಧಿಕಾರ

            )ಪೂರ್ವಯೋಜಿತ ವಿವಾಹಗಳು  )ಸ್ವಯಂ ಪರಿಪೂರ್ಣತೆ

2. ಅವಿಭಕ್ತ ಕುಟುಂಬದ ಅನುಕೂಲಗಳನ್ನು ವಿವರಿಸಿ?

:       )ಆರ್ಥಿಕ ಅನುಕೂಲ

            )ಸದಸ್ಯರ ಸಂರಕ್ಷಣೆ

            )ಮನರಂಜನೆ

            )ವ್ಯಕ್ತಿತ್ವವಿಕಾಸ

            )ಸಮಾಜವಾದದ ಪರಿಕಲ್ಪನೆ

3. ಅವಿಭಕ್ತ ಕುಟುಂಬದ ಅನಾನುಕೂಲಗಳನ್ನು ವಿವರಿಸಿ?

:       )ಸೋಮಾರಿತನವನ್ನು ಪ್ರೋತ್ಸಾಹಿಸುತ್ತದೆ.

            )ವ್ಯಕ್ತಿತ್ವದ ಬೆಳವಣಿಗೆಗೆ ಅಡಚಣೆ

            )ಸಂಘರ್ಷ ಮತ್ತು ದಾವೆಗಳಿಗೆ ಅವಕಾಶ ನೀಡುತ್ತದೆ.

            )ಉಳಿತಾಯ ಮತ್ತು ಆರ್ಥಿಕ ಹೂಡಿಕೆಗೆ ಕಷ್ಟವಾಗುತ್ತದೆ.

            )ಸಾಮಾಜಿಕ ವಲನೆಗೆ ಮಾರಕವಾಗಿದೆ.   

            )ಸ್ತ್ರೀಯರ ಸ್ಥಾನಮಾನಕ್ಕೆ ದಕ್ಕೆ.

4.ತರವಾಡಿನ ಬಗ್ಗೆ ಟಿಪ್ಪಣಿ ಬರೆಯಿರಿ?

: ಕೇರಳದ ನಾಯರ್ಜಾತಿಯ ಮಾತೃಪ್ರಧಾನ ಅವಿಭಕ್ತ ಕುಟುಂಬವನ್ನು ತರವಾಡು ಎಂದು ಕರೆಯುತ್ತಾರೆ. ಕುಟುಂಬವನ್ನು ಹಿರಿಯ ಸ್ತ್ರೀ ಅಥವಾ ತಾಯಿ ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾರೆ. ಪುರುಷರ ಸಹಾಯಕ ಪಾತ್ರವನ್ನು ನಿರ್ವಹಿಸುತ್ತಾರೆ. ತಂದೆಯ ಪಾತ್ರಕ್ಕೆ ಯಾವುದೇ ಮಹತ್ವವಿರುವುದಿಲ್ಲ. ಕುಟುಂಬದ ಆಸ್ತಿ ಮತ್ತು ಉತ್ತರಾಧಿಕಾರ ಹೊಣೆಗಾರಿಕೆಗಳು ತಾಯಿಯಾದ ಹೆಣ್ಣು ಮಕ್ಕಳಿಗೆ ವರ್ಗಾವಣೆಯಾಗುತ್ತದೆ. ತಾಯಿ ಅಥವಾ ಹಿರಿಯ ಮಹಿಳೆ ತರವಾಡಿನ ಆಂತರಿಕ ಕಾರ್ಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಆದರೂ ಪುರುಷರ ಸಹಾಯ ಅಗತ್ಯವಾದ ಕಾರಣದಿಂದ ತಾಯಿಯ ಸಹೋದರ ಸಹಾಯಕನಾಗಿ ಪಾತ್ರನಿರ್ವಹಿಸುತ್ತಾನೆ. ಆತನೆ ಕರ್ಣವನ್‌. ಕರ್ಣವನ್ಮರಣ ಹೊಂದಿದ ನಂತರ ಅಧಿಕಾರ ಮುಂದಿನ ತಾಯಿಯ ಸೋದರನಿಗೆ ವರ್ಗಾವಣೆಯಾಗುತ್ತದೆ. ಈತನು ತನ್ನ ಹೆಸರಿನಲ್ಲಿ ಹಣದ ಖಾತೆ ಹೊಂದಿರಬಹುದು, ಆಸ್ತಿಯನ್ನು ಪರಭಾರೆ ಮಾಡಬಹುದು. ತರವಾಡು ಕಾಲಕ್ರಮೇಣ ಜನಸಂಖ್ಯಾ ಗಾತ್ರದಲ್ಲಿ ದೊಡ್ಡದಾದಾಗ ತವಳಿಗಳಾಗಿ ವಿಭಜನೆಗೊಳ್ಳುತ್ತದೆ. ತವಳಿ ಎಂದರೆ ತರವಾಡಿನ ವಿಭಜನೆಗೊಂಡ ಭಾಗವಾಗಿದ್ದು ಇದರಲ್ಲಿ ಸ್ತ್ರೀ ಆಕೆಯ ಮಕ್ಕಳು ಹಾಗೂ ಇನ್ನಿತರ ಮಾತೃ ಪ್ರಧಾನ ಮೂಲದ ಸದಸ್ಯರನ್ನು ಒಳಗೊಂಡಿರುವ ರಕ್ತ ಸಂಬಂಧಗಳ ಸಮೂಹವಾಗಿದೆ.

5.ಇಲ್ಲಂ ಬಗ್ಗೆ ಟಿಪ್ಪಣಿ ಬರೆಯಿರಿ.

: ನಂಬೂದರಿ ಅವಿಭಕ್ತ ಕುಟುಂಬವನ್ನು ಇಲ್ಲಂ ಎಂದು ಕರೆಯುತ್ತಾರೆ. ನಂಬೂದರಿ ಪಿತೃವಂಶೀಯ ಕುಟುಂಬ ಇಲ್ಲಂನ ಎಲ್ಲಾ ಸದಸ್ಯರು ತಂದೆಯ ವಂಶಾವಳಿಯಿಂದ ಗುರುತಿಸಿಕೊಳ್ಳುತ್ತಾರೆ ತಂದೆ ಅಥವಾ ಹಿರಿಯ ಮಗ ಕುಟುಂಬದ ಎಲ್ಲಾ ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ. ಉದಾ:- ಕೇರಳದ ನಂಬೂದರಿ ಅಸ್ಲಾಂನ ಅಂಗಾಮಿ ನಗಗಳು ಇತ್ಯಾದಿ ಇಲ್ಲಿ ಪುರುಷ ಆತನ ಪತ್ನಿ ಹಾಗೂ ಮಕ್ಕಳು ಕಿರಿಯ ಸಹೋದರರು ಅವಿವಾಹಿತ ಸಹೋದರಿಯರು ವಾಸಿಸುತ್ತಿದ್ದರು ನಂಬೂದರಿಗಳು ಮೂಲಕ ಭೂಮಿಯ ಒಡೆತನ ತಮ್ಮಲ್ಲಿಯೇ ಸಂರಕ್ಷಿಸಿಕೊಳ್ಳುವ ಪದ್ದತಿಯನ್ನು ಅನುಸರಿಸುತ್ತಿದ್ದರು ನಂಬೂದರಿಯ ಹಿರಿಯ ಮಗ ಮತ್ತು ತಮ್ಮ ಜಾತಿಯಲ್ಲಿ ವಿವಾಹವಾಗುತ್ತಿದ್ದನು ಹಿರಿಯ ಸೋದರನಿಗೆ ಸಂತಾನ ಇಲ್ಲವಾದರೆ ಕಿರಿಯ ತಮ್ಮ ನಂಬೂದರಿ ಕನ್ಯೆಯನ್ನು ವಿವಾಹವಾಗಲು ಅವಕಾಶವಿತ್ತು. ಕುಟುಂಬದ ಹಿರಿಯ ಸದಸ್ಯ ಇಲ್ಲಿಂದ ಸಮಸ್ತ ಆಸ್ತಿಯ ಮೇಲೆ ನಿಯಂತ್ರಣ ಹೊಂದಿದ್ದನು. ಆದರೆ ಅಂತಹ ಆಸ್ತಿಯನ್ನು ಮಾರಾಟ, ದಾನ ಮತ್ತು ಇನ್ನಿತರ ಪರಬಾರೆ ಮಾಡುವ ಅಧಿಕಾರವಿರಲಿಲ್ಲಾ. ರೀತಿ ವಹವಾಟು ಮಾಡುವಾಗ ಕುಟುಂಬದ ಎಲ್ಲಾ ಸದಸ್ಯರ ಅನುಮತಿ ಪಡೆಯ ಬೇಕಾಗಿತ್ತು.

ಅಂಕದ ಪ್ರಶ್ನೆಗಳು:-

1.ಅವಿಭಕ್ತ ಕುಟುಂಬದ ಪರಿವರ್ತನೆಗೆ ಕಾರಣವಾದ ಅಂಶಗಳನ್ನು ವಿವರಿಸಿ?

:       )ಕೈಗಾರೀಕರಣ

            )ನಗರೀಕರಣ

            )ಜನಸಂಖ್ಯಾ ಬೆಳವಣಿಗೆ

            )ಶಿಕ್ಷಣ

            )ಬದಲಾಗುತ್ತಿರುವ ಸ್ತ್ರೀಯರ ಅಂತಸ್ತುಗಳು

            )ಸಾಮಾಜಿಕ ಶಾಸನಗಳ ಪ್ರಭಾವ

2. ಅವಿಭಕ್ತ ಕುಟುಂಬದ ಪರಿವರ್ತನೆಗಳನ್ನು ವಿವರಿಸಿ?

: ಅವಿಭಕ್ತ ಕುಟುಂಬದ ರಚನಾತ್ಮಕ ಪರಿವರ್ತನೆಗಳು

            ) ಅವಿಭಕ್ತ ಕುಟುಂಬದ ಗಾತ್ರದಲ್ಲಿ ಪರಿವರ್ತನೆಗಳು

            )ಆಸ್ತಿಯ ಒಡೆತನದಲ್ಲಿ ಪರಿವರ್ತನೆಗಳು

            )ಅಧಿಕಾರದಲ್ಲಿ ಪರಿವರ್ತನೆಗಳು

            )ಸ್ತ್ರೀಯರ ಅಂತಸ್ತು ಮತ್ತು ಸ್ಥಾನಮಾನಗಳಲ್ಲಿ ಪರಿವರ್ತನೆಗಳು

            )ಜೀವನಸಂಗಾತಿಗಳ ಆಯ್ಕೆಯಲ್ಲಿ ಪರಿವರ್ತನೆಗಳು

            )ಅತ್ತೆ ಸೊಸೆಯರ ಸಂಬಂಧಗಳಲ್ಲಿ ಪರಿವರ್ತನೆಗಳು

            )ದುರ್ಬಲವಾಗುತ್ತಿರುವ ಕೌಟುಂಬಿಕ ನಿಯಮಗಳು

3.ಅವಿಭಕ್ತ ಕುಟುಂಬದ ಕಾರ್ಯಗಳಲ್ಲಿನ ಪರಿವರ್ತನೆಗಳು

:       )ಸಾಮಾನ್ಯ ವಾಸಸ್ಥಳದ ಪರಿವರ್ತನೆಗಳು

            )ಧಾರ್ಮಿಕ ಕಾರ್ಯಗಳಲ್ಲಿ ಪರಿವರ್ತನೆಗಳು

            )ಶಿಶುವಿನ ಸಂರಕ್ಷಣೆ ಮತ್ತು ಸಾಮಾಜಿಕರಣದ ಪಾತ್ರಗಳಲ್ಲಿ ಪರಿವರ್ತನೆಗಳು

            )ಆರ್ಥಿಕ ಕಾರ್ಯಗಳಲ್ಲಿ ಪರಿವರ್ತನೆಗಳು

            )ಮನರಂಜನೆಯ ಕಾರ್ಯದಲ್ಲಿ ಪರಿವರ್ತನೆಗಳು.

*****

 ದ್ವಿತೀಯ ಪಿ.ಯು.ಸಿ. ಸಮಾಜಶಾಸ್ತ್ರದ ಎಲ್ಲಾ ಅಧ್ಯಾಯಗಳ ನೋಟ್ಸ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon