How to use Meghshala Online App Best App for Teacher Student And Coaching Center

How to use Meghshala Online 

A complete information

ಪ್ರಾಥಮಿಕ ಶಾಲಾ ಶಿಕ್ಷಕರು,

ಪ್ರೌಢ ಶಾಲಾ ಶಿಕ್ಷಕರು,

ಮುಖ್ಯಗುರುಗಳು,

ತಂದೆ, ತಾಯಿ, ಪಾಲಕರು,

ತರಭೇತಿ ಕೇಂದ್ರದವರು,

ಖಾಸಗಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಹಳ ಉಪಯೋಗಕಾರಿಯಾದ ಒಂದು App ಎಂದರೆ Maghshala online App,




ಈ App ನ ವಿಶೇಷತೆ ಏನು? ಇದನ್ನು ಹೇಗೆ ಬಳಸುವುದು? ತರಗತಿಗೆ ಎಷ್ಟು ಉಪಯೋಗಕಾರಿಯಾಗಿದೆ? ಯಾವ ರೀತಿಯಾದ ಬಳಕೆ ಎನ್ನುವ ಅಂಶಗಳನ್ನು ಪರಿಶಿಲಿಸಲಾಗಿ ಇದನ್ನು ಉಪಯೋಗಿಸಿಕೊಂಡುನೋಡಿ ಉಪಯೋಗಕಾರಿಯಾದ App ಆಗಿರುವುದನ್ನು ಸ್ವತ: ಪರಿಶಿಲಿಸಿ ಅದರು ಬಳಕೆ ಮಾಡುವುದು ಹೇಗೆ ಎನ್ನುವ ಅಂಶಗಳನ್ನು ಇಲ್ಲಿ ಚರ್ಚಿಸೋಣ.

ನಾನು ಬಸವಂತರೆಡ್ಡಿ. ಸರ್ಕಾರಿ ಪ್ರೌಢ ಶಾಲೆ ಚಂದನಕೇರಾ. ಕಲಬುರಗರಿ, ಇದನ್ನು ತರಗತಿಯ ಸನ್ನಿವೇಶದಲ್ಲಿ ಬಳಕೆ ಮಾಡುವುದುಕ್ಕಾಗಿ ಬಹಳಷ್ಟು ಸಾರಿ ಇದನ್ನು ಪರಿಶಿಲಿಸಿ ವಿಕ್ಷಿಸಿ. ಅದರಲ್ಲಿರುವ ಉತ್ತಮವಾದ ಅಂಶಗಳನ್ನು ಕಂಡುಕೊಂಡು, ಇತರರು ಸಹ ಇದನ್ನು ಬಹಳ ಸುಲಭವಾಗಿ ಬಳಸಬಹುದು ಎನ್ನುವ ಅಂಶಗಳನ್ನು ಸಹ ಕಂಡುಕೊಂಡಿದ್ದೇನೆ.


ಯಾವ ರೀತಿಯಾಗಿ ಪ್ರಾರಂಭಿಸುವುದು ಎನ್ನುವ ಹಂತಗಳು:

ಮೊದಲು ಪ್ಲೇಸ್ಟೋರ್ ಗೆ ಹೋಗಿ ಅದರಲ್ಲಿ Meghshala online ಎಂದು ಸರ್ಚ್ ಮಾಡಿ

ಅಥವಾ ಅಪ್ಲಿಕೇಷನ್ ನ ಲಿಂಕ್ ಈ ರೀತಿಯಾಗಿದೆ. 

Click here to download App



Install ಎಂದು ಕ್ಲೀಕ್ ಮಾಡಿ.

ಈ ರೀತಿಯಾಗಿ ಇನಸ್ಟಾಲ್ ಆಗುತ್ತಾ ಇರುತ್ತದೆ.

Install ಆಗಿದ ನಂತರ ಈ ರೀತಿಯಾಗಿ ಬಂದಿರುತ್ತದೆ. ಅದರ ಮೇಲೆ Open ಎಂದು Click ಮಾಡಿ.

ಈ ರೀತಿಯಾಗಿ Allow Meghshala Online to access photos media and files on your device?  ಎಂದು ಕೇಳುತ್ತದೆ Allow ಎಂದು ಕ್ಲಿಕ್ ಮಾಡಿ.

ಆ ನಂತರ ಈ ರೀತಿಯಾಗಿ ಬಂದಿರುತ್ತದೆ.

ಇದರಲ್ಲಿ 2 ಆಯ್ಕೆಗಳಿದ್ದು Sign Up & Login

Sign Up click ಮಾಡಿ.

Sign Up Click ಮಾಡಿದ ನಂತರ Mobile ಸಂಖ್ಯೆ ಕೆಳುತ್ತದೆ ಅದರಲ್ಲಿ ನಮ್ಮ ಮೋಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆ ನಂತರ Next ಎಂದು ಕ್ಲಿಕ್ ಮಾಡಿ. ನಮೂದಿಸಿರುವ ಮೋಬೈಲ್ ಸಂಖ್ಯೆಗೆ OTP ಬಂದಿರುತ್ತದೆ.

OTP ಯನ್ನು ಹಾಕಿ Submit ಎಂದು ಕ್ಲಿಕ್ ಮಾಡಬೇಕು.

ಆ ನಂತರ ಈ ರೀತಿಯಾಗಿರುವ User Information open ಆಗುತ್ತದೆ. ಇದರಲ್ಲಿ ನಮ್ಮ First Name, Last Name, Date of Birth, Gender, Language ಅನ್ನು ನಮೂದಿಸಬೇಕು.  Next Click ಮಾಡಿ.

ನಂತರ ಈ ರೀತಿಯಾಗಿ Open ಆಗುತ್ತದೆ ಇದರಲ್ಲಿ ವೃತ್ತಿಪರ ಮಾಹಿತಿಯನ್ನು ತುಂಬಬೇಕು.

ಬಳಕೆದಾರರ ಪ್ರಕಾರದಲ್ಲಿ- ಶಿಕ್ಷಕರು/ ಮುಖ್ಯಶಿಕ್ಷಕರು/ ಕೊಂಚಿಂಗ್ ಸೆಂಟರ್/ ಪೂಷಕರು/ ಇತರರು ಎನ್ನುವ ಮಾಹಿತಿಯನ್ನು ಆಯ್ಕೆ ಮಾಡಬೇಕು. ನೀವು ಶಿಕ್ಷಕರಾಗಿದ್ದಲ್ಲಿ ಶಿಕ್ಷಕರು ಎಂದು ಇತರರು ಆಗಿದಲ್ಲಿ ಅಲ್ಲಿ ಇರುವ ಆಯ್ಕೆಯನ್ನು ಮಾಡಿಕೊಳ್ಳಬೇಕು.

ರಾಜ್ಯದಲ್ಲಿ : ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು.

ಜಿಲ್ಲೆಯನ್ನು ನಮೂದಿಸಬೇಕು. ಪಿನ್ ಕೋಡ ಅನ್ನು ನಮೂದಿಸಬೇಕು.

ಶಿಕ್ಷಕರು ಆಯ್ಕೆ ಮಾಡಿದಲ್ಲಿ ಶಾಲೆಯ ಮಾಹಿತಿ ಕೇಳುತ್ತದೆ ಅದರಲ್ಲಿ ಎರಡು ಆಯ್ಕೆಗಳಿದ್ದು ನಿಮಗೆ ನಿಮ್ಮ ಶಾಲೆಯ ಡೈಸ ಕೋಡ್ ಗುರುತ್ತಿದ್ದಲ್ಲಿ ಡೈಸ್ ಕೋಡ ಅನ್ನು ನಮೂದಿಸಿದ್ದಲಿ ಎಲ್ಲಾ ಮಾಹಿತಿಗಳು ತಾನಾಗೆಯೇ ಬರುತ್ತದೆ. ಡೈಸ ಕೋಡ್ ಗುರುತ್ತಿರದೆ ಇದ್ದಲ್ಲಿ Know More ಸೆಲೆಕ್ಟ ಮಾಡಿಯು ಸಹ ಹುಡುಕುವುದಕ್ಕೆ ಬರುತ್ತದೆ.

ಡೈಸ್ ಕೋಡ್ ಹಾಕಿದ ನಂತರ Verify ಮಾಡಿ

ಶಾಲೆಯ ಎಲ್ಲಾ ಮಾಹಿತಿಯು ಈ ರೀತಿಯಾಗಿ ಪ್ರದರ್ಶಿಸುತ್ತದೆ.

ನಂತರ ಈ ರೀತಿಯಾಗಿರುವ ಹೋಮ ಪೇಜ್ Open ಆಗುತ್ತದೆ. ಇದರಲ್ಲಿ Home, Chapters & Downloads ಎನ್ನುವ ಆಯ್ಕೆಗಳು ಇದ್ದು ಜೋತೆ ಮೇಲೆ ಬಲಭಾಗದಲ್ಲಿ 3 ಡಾಟ್ಸ್ ಇರುವುದು ಈ 3 ಡಾಟ್ಸ್ ಮೇಲೆ ಕ್ಲಿಕ್ ಮಾಡಿ


3 ಡಾಟ್ಸ್ ಮೇಲೆ ಕ್ಲಿಕ್ ಮಾಡಿದ ನಂತರ ಈ ರೀತಿಯಾಗಿ ಬರುತ್ತದೆ. ಅದರಲ್ಲಿ Sync ಎನ್ನುವ ಆಯ್ಕೆಯನ್ನು ಮಾಡಿ.


ಎಲ್ಲಾ ವಿಷಯಗಳು ಮತ್ತು ತರಗತಿಗಳು ಅಧ್ಯಾಯಗಳು ಎಲ್ಲವು ಸ್ವಲ್ಪ ಸಮಯದಲ್ಲಿ Sync ಆಗುತ್ತದೆ.


ಆ ನಂತರ ಕೇಳಗಿನ ಭಾಗದಲ್ಲಿ ಇರುವ Chapters ಎನ್ನುವ ಮೇನುವನ್ನು ಆಯ್ಕೆ ಮಾಡಿಕೊಳ್ಳಬೇಕು, ಅದನ್ನು ಆಯ್ಕೆ ಮಾಡಿಕೊಮಡ ನಂತರ ಈ ರೀತಿಯಾಗಿ ಬಂದಿರುತ್ತದೆ. ಅದರಲ್ಲಿ ಮೇಲಿನ ಭಾಗದಲ್ಲಿ ಕಾಣುವ ಮೂರು ಗೆರೆಗಳು ಕಾಣಿಸುವ ಸ್ಥಳದಲ್ಲಿ ಕ್ಲಿಕ್ ಮಾಡಬೇಕು


ಆ ನಂತರ ಈ ರೀತಿಯಾಗಿ ಬಂದಿರುತ್ತದೆ. ಇದ್ಲರಲಿ ಮೊದಲು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು

ಭಾಷೆ- ಭಾಷೆಯಲ್ಲಿ 3 ಬಾಷೆಗಳ ಆಯ್ಕೆ ಇದ್ದು ಕನ್ನಡ, ಇಂಗ್ಲಿಷ ಮತ್ತು ಹಿಂದಿ ಭಾಷೆಗಳಲ್ಲಿ ನಿಮಗೆ ಬೇಕಾಗಿರುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು


ಕನ್ನಡ ಭಾಷೆಯನ್ನು  ಆಯ್ಕೆ ಮಾಡಿದಲ್ಲಿ ಈ ರೀತೀಯಾಗಿ ಬಂದಿರುತ್ತದೆ. ನಂತರ ಯಾವ ಬೋರ್ಡನವರ ಪಠ್ಯಕ್ರಮ ಬೇಕು ಎನ್ನುವ ಆಯ್ಕೆಯನ್ನು ಮಾಡಿಕೊಳ್ಳಬೇಕು. ಇದರಲ್ಲಿ KSEEB, NCERT, ಇತರ ಆಯ್ಕೆಗಳು ಇದ್ದು ಅವುಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು.


KSEEB ಅನ್ನು ಆಯ್ಕೆ ಮಾಡಿಕೊಂಡಲ್ಲಿ ಈ ರೀತಿಯಾಗಿ ಬಂದಿರುತ್ತದೆ. ಅದರಲ್ಲಿ ಯಾವ ವಿಷಯ ಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವುದು.

ವಿಷಯಗಳಲ್ಲಿ ಇಂಗ್ಲೀಷ, ವಿಜ್ಞಾನ, ಪರಿಸರ ವಿಜ್ಞಾನ, ಗಣಿತ ಶಾಸ್ತ್ರ, ಸಮಾಜ ವಿಜ್ಞಾನ ವಿಷಯಗಳು ಒಳಗೊಂಡಿರುವುದು.


ಆ ನಂತರ ವಿಷಯದ ಉಪ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದು.


ಆ ನಂತರ ತರಗತಿಯನ್ನು ಆಯ್ಕೆ ಮಾಡಿಕೊಳ್ಳುವುದು ಇದರಲ್ಲಿ 1, 2, 3 , 4, 5, 6, 7 ಮತ್ತು 8ನೇ ತರಗತಿಗಳನ್ನು ಒಳಗೊಂಡಿದ್ದು ನಿಮಗೆ ಬೇಕಾಗಿರುವ ತರಗತಿಯನ್ನು ಆಯ್ಕೆ ಮಾಡಿಕೊಳ್ಳುವುದು.

ತರಗತಿಯನ್ನು ಆಯ್ಕೆ ಮಾಡಿಕೊಂಡ ನಂತರ ಸೆಮಿಸ್ಟರಗಳನ್ನು ಆಯ್ಕೆ ಮಾಡಿಕೊಳ್ಳುವುದು.

ಸೆಮಿಸ್ಟರ್ ಅನ್ನು ಆಯ್ಕೆ ಮಾಡಿಕೊಂಡ ನಂತರ ಫಿಲ್ಟರ್ ಅನ್ವಯಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಈ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಅಧ್ಯಾಯಗಳು ತೆರೆದು ಕೊಳ್ಳುತ್ತವೆ.


ಇಲ್ಲಿ ಅಧ್ಯಾಯಗಳು 1, 2, 3, 4,.......... ಎಂದು ತೆರೆದುಕೊಳ್ಳುತ್ತದೆ.


ನಮಗೆ ಬೇಕಾಗಿರುವ ಅಧ್ಯಾಯವನ್ನು ಆಯ್ಕೆ ಮಾಡಿಕೊಂಡು ಡೌನ್ ಲೋಡ್ ಮಾಡಿಕೊಳ್ಳುವುದು ಆ ನಂತರ ಅದರಲ್ಲಿ ಪಾಠಗಳು ತೆರೆದುಕೊಳ್ಳುತ್ತವೆ. ಉದಾ: ಪಾಠ1, 2, 3, ........


ನಮಗೆ ಬೇಕಾಗಿರುವ ಪಾಠವನ್ನು ಆಯ್ಕೆ ಮಾಡಿಕೊಂಡು ಆ ಪಾಠದ ತಯಾರಿ ಮತ್ತು ಕಲಿಸುವ ಆಯ್ಕೆಗಳು ಒಳಗೊಂಡಿದ್ದು. ತಯಾರಿ ಮಾಡುವಾಗ ತಯಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಇರುವಾಗ ಕಲಿಸು ಎನ್ನುವ ಆಯ್ಕೆಯನ್ನು ಮಾಡಿಕೊಳ್ಳುವುದು.

ಹೀಗೆ MeghShala Online App ಅನ್ನು ಬಳಸಿಕೊಂಡು ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮ ಪಡಿಸುವುದರ ಜೋತೆಗೆ ಶಿಕ್ಷಕರಿಗೆ ಉತ್ತಮ ಕಲಿಕಾ ಉಪಕರಣವಾಗಿಯೂ ಸಹ ಬಹಳ ಉಪಯೋಗಕಾರಿಯಾಗಿದೆ.



Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon