ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-1 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-1

ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು



1. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು ?
ಉ: ಕಾನ್‍ಸ್ಟಾಂಟಿನೋಪಲ್
2. ಯೂರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದು? 
ಉ: ಕಾನ್‍ಸ್ಟಾಂಟಿನೋಪಲ್

3. ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ ಯಾವುದು ?
ಉ: ಕಾನ್‍ಸ್ಟಾಂಟಿನೋಪಲ್
4. ಅಟೋಮನ್ ಟರ್ಕರು ಕಾನ್‍ಸ್ಟಾಂಟಿನೋಪಲ್ ವಶÀಪಡಿಸಿಕೊಂಡ ವರ್ಷ ಯಾವುದು ? 
ಉ: 1453 

5. 1498ರಲ್ಲಿ ವಾಸ್ಕೊಡಗಾಮ ಭಾರತದಲ್ಲಿ ಬಂದಿಳಿದ ಸ್ಥಳ ಯಾವುದು ?
ಉ: ಕಾಪ್ಪಡ್
6. ಭಾರತದೊಂದಿಗೆ ಮರುವ್ಯಾಪಾರ ಸಂಬಂಧ ಸ್ಥಾಪಿಸಿದ ಮೊದಲ ಯೂರೋಪಿಯನ್ನರು ಯಾರು ?
ಉ: ಪೋರ್ಚುಗೀಸರು 

7. ಭಾರತವನ್ನು ಮೊದಲು ಪ್ರವೇಶಿಸಿದ ಮತ್ತು ಭಾರತವನ್ನು ತೊರೆದಕೊನೆಯ ಯೂರೋಪಿಯನ್ನರು ಯಾರು ? 
ಉ: ಪೊರ್ಚುಗೀಸರು 
8. ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಯಾರು ?
ಉ: ಫ್ರಾನ್ಸಿಸ್ಕೊ-ಡಿ-ಆಲ್ಮೆಡ್

9. ನೀಲಿ ನೀರಿನ ನೀತಿ ಜಾರಿಗೆ ತಂದವರು ಯಾರು ?
ಉ: ಆಲ್ಮೆಡ
10. ನೀಲಿ ನೀರಿನ ನೀತಿ ಜಾರಿಗೆ ತರಲು ಕಾರಣವೇನು ?
ಉ: ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ

11. ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು.
ಉ: ಅಲ್ಬುಕರ್ಕ್
12. ಅಲ್ಬುಕರ್ಕ್ ಬಿಜಾಪೂರ ಸುಲ್ತಾನನಿಂದ ಗೋವೆ ಗೆದ್ದುಕೊಂಡ ವರ್ಷ ಯಾವುದು ?
ಉ: 1510

13. ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ (ರಾಜಧಾನಿ) ಯಾವುದು ?
ಉ: ಗೋವಾ
14. 1602 ರಲ್ಲಿ ಯುನೈಟೆಟ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಲುಕಾರಣವೇನು ?
ಉ: ಪೂರ್ವ ದೇಶಗಳಲ್ಲಿ ವ್ಯಾಪಾರ ಮಾಡುವುದು

15. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು ?
ಉ: 1600 ಡಿಸೆಂಬರ್
16. ಸೂರತ್‍ನಲ್ಲಿ ಇಂಗ್ಲಿರಿಗೆ ಮೊದಲ ಫ್ಯಾಕ್ಟರಿ (ದಾಸ್ತಾನುಮಳಿಗೆ) ತೆರೆಯಲು ಅನುಮತಿ ನೀಡಿದ ಮೊಗಲ್ ಸುಲ್ತಾನ ಯಾರು ?
ಉ: ಜಹಂಗೀರ

17. ಭಾರತದಲ್ಲಿ ಇಂಗೀಷರ ರಾಜಧಾನಿ ಯಾವುದು ?
ಉ: ಕಲ್ಕತ್ತ
18. ಫ್ರೆಂಚ್ ಈಸ್ಟ್ ಇಂಡಿಯಾ (1664) ಕಂಪನಿಯ ಪ್ರಥಮ ವ್ಯಾಪಾರಕೋಠಿ ಯಾವುದು ? 
ಉ: ಸೂರತ್

19. ಭಾರತದಲ್ಲಿ ಫ್ರೆಂಚ್‍ರ ರಾಜಧಾನಿ ಯಾವುದು ? 
ಉ: ಪುದುಚೇರಿ (ಪಾಂಡಿಚೇರಿ)
20. ದಕ್ಷಿಣ ಭಾರತದÀಲ್ಲಿ ಫ್ರೆಂಚ್‍ರ ಅಧಿಪತ್ಯ ಸ್ಥಾಪಿಸಲು ಹವಣಿಸಿದ ಫ್ರೆಂಚ್ ಅಧಿಕಾರಿ ಯಾರು ? 
ಉ: ಡೂಪ್ಲೆ 

21. ಮೊದಲ ಕರ್ನಾಟಕ್ ಯುದ್ಧ ಯಾವ ಒಪ್ಪಂದದೊಂದಿಗೆಕೊನೆಗೊಂಡಿತು  
ಉ: ಏಕ್ಸ್-ಲಾ- ಚಾಪೆಲ್ ಒಪ್ಪಂದ
22. ಕರ್ನಾಟಿಕ್ ದ ರಾಜಧಾನಿ ಯಾವುದು ?
ಉ: ಆರ್ಕಾಟ್ 

23. ಎರಡನೆಯ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು 
ಉ: ಪಾಂಡಿಚೇರಿ 
24. ಫ್ರೆಂಚ್‍ರಿಗೆ ರಾಜಕೀಯ ಹಿನ್ನಡೆ, ಬ್ರಿಟಿಷರಿಗೆ ಪ್ರತಿಷ್ಟೆಯನ್ನು ತಂದುಕೊಟ್ಟ ಯುದ್ಧ ಯಾವುದು ? 
ಉ: 2 ಕರ್ನಾಟಿಕ್ ಯುದ್ಧ 

25. ಫ್ರೆಂಚ್‍ರನ್ನು ನಿರ್ಣಾಯಕ ವಾಂಡಿವಾಷ (1760) ಕದನದಲ್ಲಿ ಸೋಲಿಸಿದವನು ಯಾರು ? 
ಉ: ಸರ್ ಐರ್ ಕೂಟ 
26. 1763ರಲ್ಲಿ ಪ್ಯಾರಿಸ್ ಒಪ್ಪಂದದÀ ಪ್ರಕಾರ ಫ್ರೆಂಚ್‍ರಿಗೆ ಹಿಂದಿರುಗಿಸಲಾದ ಸ್ಥಳ ಯಾವುದು ?
ಉ: ಪಾಂಡಿಚೇರಿ

27. ಬ್ರಿಟಿಷರಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಗಲ್ ದೊರೆ ಯಾರು ?
ಉ: ಫಾರೂಕ್ ಶಿಯಾರ 
28. ಪ್ಲಾಸಿ ಕದನ ನಡೆದ ವರ್ಷ ಯಾವುದು ?
ಉ: 1757 ಜೂನ್ 23

29. ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವರು ಯಾರು ?
ಉ: ಎರಡನೇ ಷಾ ಆಲಂ 
30. 1764 ರಲ್ಲಿ ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯ ಸೋಲಿಸಿದವರು ಯಾರು ?
ಉ: ಹೆಕ್ಟರ್ ಮನ್ರೋ 


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon