ಭಾರತಕ್ಕೆ ಯೂರೋಪಿಯನ್ನರ ಆಗಮನ | 10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ-1 | ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 | ಸ್ಪರ್ದಾತ್ಮಕ ಪರೀಕ್ಷೆ |

ಹತ್ತನೇ ತರಗತಿ ಭಾರತಕ್ಕೆ ಯೂರೋಪಿಯನ್ನರ ಆಗಮನ | 10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ-1 | ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 |

ಸಮಾಜ ವಿಜ್ಞಾನ ಅಭ್ಯಾಸ ಹಾಳೆ 1
10th Social Science Chapter 1

I. ಕೆಳಗಿನ ಪ್ರಶ್ನೆಗಳಿಗೆ ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1) ' ನೀಲಿ ನೀರಿನ ನೀತಿ' ಜಾರಿಗೆ ತಂದವರು ಯಾರು?
1) ಡೂಪ್ಲೆ
2) ಲಾ ಬೋರ್ಡಿನ
3) ಸರ್ ಥಾಮಸ್ ರೋ
4) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

ಉತ್ತರ: 4) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

2) ಕಾನ್ಸ್ಟಾಂಟಿನೋಪಲ್ ಈಗಿನ ಹೆಸರೇನು?
1) ರೋಮ್
2) ಪೋರ್ಚುಗಲ್
3) ಇಸ್ತಾಂಬುಲ್
4) ಹಾಲೆಂಡ್

ಉತ್ತರ: 3) ಇಸ್ತಾಂಬುಲ್

3) ಕ್ರಿ. . 1453 ರಲ್ಲಿ ಅಟೋಮನ್ ಟರ್ಕರು _ ನಗರವನ್ನು ವಶಪಡಿಸಿಕೊಂಡರು.
1) ರೂಮ್
2) ವೆನಿಸ್
3) ಇಸ್ರೇಲ್
4) ಕಾನ್ಸ್ಟಾಂಟಿನೋಪಲ್

ಉತ್ತರ: 4) ಕಾನ್ಸ್ಟಾಂಟಿನೋಪಲ್

4) ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು __ ಕಂಡುಹಿಡಿದನು.
1) ವಾಸ್ಕೋಡಿಗಾಮ
2) ರಾಬರ್ಟ್ ಕ್ಲೈವ್
3) ಥಾಮಸ್ ಮನ್ರೋ
4) ಡೂಪ್ಲೇ

ಉತ್ತರ: 1) ವಾಸ್ಕೋಡಿಗಾಮ

II. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1) ಪ್ರಾಚೀನ ಕಾಲದಲ್ಲಿ ಯುರೋಪಿನ ವ್ಯಾಪಾರದ ಹೆಬ್ಬಾಗಿಲ ಎಂದು ಪರಿಗಣಿಸಲ್ಪಟ್ಟ ನಗರ _
ಉತ್ತರ : ಕಾನ್ ಸ್ಟಾಂಟಿನೋಪಲ್

2) ಗೋವಾ ಇವರ ವ್ಯಾಪಾರ ಕೇಂದ್ರವಾಗಿತ್ತು __
ಉತ್ತರ : ಪೋರ್ಚುಗೀಸರ

3) ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ _
ಉತ್ತರ ಪುದುಚೇರಿ ಅಥವಾ ಪಾಂಡಿಚೇರಿ

4) ರಾಬರ್ಟ್ ಕ್ಲೈವ್ 1757 ರಲ್ಲಿ ಸಿರಾಜುದ್ದೌಲನ ಮೇಲೆ __ ಕದನ ಸಾರಿದನು.
ಉತ್ತರ : ಪ್ಲಾಸಿ

5) ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು _ ನೀಡಿದನು.
ಉತ್ತರ : ಎರಡನೇ ಎರಡನೇ ಅಲಂ

6) ಬಂಗಾಳದಲ್ಲಿ 'ದ್ವಿಪ್ರಭುತ್ವ' ಪದ್ಧತಿಯನ್ನು ಜಾರಿಗೆ ತಂದವನು__
ಉತ್ತರ : ರಾಬರ್ಟ್ ಕ್ಲೈವ್ (1765)

7) ಪ್ರಾಚೀನ ಕಾಲದಿಂದಲೂ ಯುರೋಪಿನ ದೇಶಗಳ ವ್ಯಾಪಾರದ ಮೇಲೆ _ ವರ್ತಕರು ಏಕಸ್ವಾಮ್ಯ ಏಕಸೌಮ್ಯ ಸಾಧಿಸಿದ್ದರು.
ಉತ್ತರ : ಇಟಲಿ

8) ಸಮುದ್ರಯಾನಕ್ಕೆ ಪ್ರೋತ್ಸಾಹಿಸಿದ ಯೂರೋಪಿನ ದೇಶಗಳು __
ಉತ್ತರ : ಸ್ಪೇನ್ ಮತ್ತು ಪೋರ್ಚುಗಲ್

9) ಫ್ರೆಂಚರ ಪ್ರಸಿದ್ಧ ಗೌರ್ನರ್ ಜನರಲ್ __
ಉತ್ತರ : ಡೂಪ್ಲೇ

10) ವಾಸ್ಕೋಡಿಗಾಮನು ಭಾರತದ ತೀರಕ್ಕೆ ಬಂದು ತಲುಪಿದನು _
ಉತ್ತರ : ಪಶ್ಚಿಮ ತೀರದ ಕೇರಳ ರಾಜ್ಯದ ಕಲ್ಲಿಕೋಟೆಯ ಸಮೀಪದ 'ಕಾಪಡ'

III. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ :
1) ಭಾರತದಲ್ಲಿ ಪೋರ್ಚುಗೀಸ ಸಾಮ್ರಾಜ್ಯದ  ನಿಜವಾದ ಸ್ಥಾಪಕ ಯಾರು?
ಉತ್ತರ : ಭಾರತದಲ್ಲಿ ಪೋರ್ಚುಗೀಸರ ರಾಜ್ಯದ ನಿಜವಾದ ಸ್ಥಾಪಕ ಅಲ್ಫೋನ್ಸೋ ಡಿ ಆಲ್ಬುಕರ್ಕ್.

2) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಸೂರತ್ ನಲ್ಲಿ ದಾಸ್ತಾನು ಮಳಿಗೆ ತೆರೆಯಲು ಫರ್ಮಾನು ನೀಡಿದ ಮೊಘಲ್ ದೊರೆ ಯಾರು?
ಉತ್ತರ : ಫಾರೂಕ್ ಶಿಯಾ

3) ಬಾಂಬೆಯನ್ನು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಬಾಡಿಗೆ ನೀಡಿದ ಇಂಗ್ಲೆಂಡ್ ದೊರೆ ಯಾರು?
ಉತ್ತರ : ಎರಡನೇ ಚಾರ್ಲ್ಸ್

4) ಕಲ್ಕತ್ತಾ ಸಮೀಪದ ಕೆಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಗಲ್ ಚಕ್ರವರ್ತಿ ಯಾರು?
ಉತ್ತರ : ಜಹಾಂಗೀರ್

5) ಇಂಗ್ಲಿಷರು ಮದ್ರಾಸಿನಲ್ಲಿ ಹೊಂದಿದ್ದ ವ್ಯಾಪಾರ ಕೇಂದ್ರದ ಹೆಸರೇನು?
ಉತ್ತರ : ಸೇಂಟ್ ಜಾರ್ಜ್ ಪೋರ್ಟ್

6) ದಿವಾನಿ ಹಕ್ಕು ಎಂದರೇನು?
ಉತ್ತರ : ಭೂಕಂದಾಯ ವಸೂಲಿ ಮಾಡುವ ಹಕ್ಕು.

7) ಕ್ರಿಸ್ತಶಕ 1004 153 ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?
ಉತ್ತರ : ಅಟೋಮನ್ ಟರ್ಕರು

8) ಮೀರ್ ಖಾಸಿಂ ನನ್ನು ಪದಚ್ಯುತಗೊಳಿಸಲು ಕಾರಣವೇನು?
ಉತ್ತರ : ಮೀರ್ ಖಾಸಿಂನು ದಸ್ತಕ ದುರ್ಬಳಕೆಯನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿದನು.
ಇದರಿಂದ ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಂದಿಗೆ ನೇರ ಸ್ಪರ್ಧೆಗಿಳಿದರೆ.
ಪರಿಣಾಮವಾಗಿ ಬ್ರಿಟಿಷ್ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿತ್ತು.
 ಇದರಿಂದಾಗಿ ಬ್ರಿಟಿಷರು ಮೀರ್ ಖಾಸಿಂನನ್ನು ಪದಚ್ಯುತಗೊಳಿಸಿ ಮೀರ್ ಜಾಫರ್ ನನ್ನು ನವಾಬ ನನ್ನಾಗಿ ಮಾಡಿದರು.

IV. ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:
1) ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?
ಅಥವಾ
ಕಾನ್ಸ್ಟಾಂಟಿನೋಪಲ್ "ಯುರೋಪಿನ  ವ್ಯಾಪಾರದ ಹೆಬ್ಬಾಗಿಲು" ಎಂದೇ ಪರಿಗಣಿಸಲ್ಪಟ್ಟಿತ್ತು ಸಮರ್ಥಿಸಿ.
ಉತ್ತರ
* ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವ ರೋಮನ್ ( ಬೈಜಾಂಟಿಯಂ) ಸಾಮ್ರಾಜ್ಯದ ರಾಜಧಾನಿಯಾದ  ಕಾನ್ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.
* ಅಲ್ಲಿಂದ ಇಟಲಿಯ (ರೋಮನ್ ಸಾಮ್ರಾಜ್ಯದ ಭಾಗ) ವರ್ತಕರು ಅವುಗಳನ್ನು ಕೊಂಡು ರೋಪಿನ ದೇಶಗಳಲ್ಲಿ ಮಾರುತ್ತಿದ್ದರು.
* ಹೀಗೆ ಕಾನ್ಸ್ಟಾಂಟಿನೋಪಲ್ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗುವ ಮೂಲಕ ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದೇ ಪರಿಗಣಿಸಲ್ಪಟ್ಟಿತ್ತು.

2) ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳು ಯಾವುವು?
ಉತ್ತರ : ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾಗಿರುವ ಅಂಶಗಳು ರೀತಿಯಾಗಿವೆ:
1) 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದು.
2) ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್ ಮೊದಲಾದ ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು.
3) ಇದಕ್ಕೆ ಪೂರಕವಾಗಿ ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಅಸ್ಟ್ರೋಲೋಬ್ (ನಕ್ಷತ್ರವನ್ನ ಉನ್ನತಿ ತಿಮಾಪನ) ಸಿಡಿಮದ್ದು, ಮೊದಲಾದವುಗಳು ನೆರವಿಗೆ ಬಂದವು.

3) ಬಕ್ಸಾರ್ ಕದನ ಕ್ಕೆ ಕಾರಣಗಳೇನು?
ಉತ್ತರ: ಮೀರ್ ಖಾಸಿಂ ಒಬ್ಬ ಸಮರ್ಥ ಆಡಳಿತಗಾರ.
ಈತನು ಸಹ ಆರಂಭದಲ್ಲಿ ಕಂಪನಿಗೆ ನಿಷ್ಠೆಯಿಂದ ಇದ್ದನು.
ಎರಡು ಲಕ್ಷ ಪೌಂಡ್ ಹಣದ ಜೊತೆಗೆ ಕೆಲವು ಪ್ರದೇಶಗಳನ್ನು ಕಂಪನಿಗೆ ಬಿಟ್ಟುಕೊಟ್ಟನು.
ಆದರೆ ಶೀಘ್ರವೇ ಮೀರ್ ಖಾಸಿಂ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದನು.
ದಸ್ತಕ್ ದುರ್ಬಳಕೆಯನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿದನು.
ಇದರಿಂದಾಗಿ ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರಸ್ಪರ್ಧೆ ಹೇಳಿದರು.
ಪರಿಣಾಮ ಬ್ರಿಟಿಷರ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿತ್ತು.
ಬ್ರಿಟಿಷರಿಗೆ ನವಾಬ ನನ್ನು ವಿರೋಧಿಸಲು ಇದಿಷ್ಟೇ ಸಾಕಿತ್ತು.
ಅವರು ಮೀರ್ ಖಾಸಿಂ ಅನ್ನು ಇಳಿಸಿ ಮತ್ತೆ ಮೀರ್ ಜಾಫರ್ ನನ್ನು ನವಾಬನ ನ್ನಾಗಿ ಮಾಡಿದರು.
ಬ್ರಿಟಿಷರ ಕುಟಿಲತೆಯ ನೆಲ್ಲ ಅರಿತಿದ್ದ ಮೀರ್ ಖಾಸಿಂನು ಬ್ರಿಟಿಷರ ವಿರುದ್ಧ ಸಂಘಟನಾತ್ಮಕ ಹೋರಾಟಕ್ಕೆ ಮುಂದಾದನು.
ಭಾರತೀಯ ವ್ಯಾಪಾರಿಗಳು ಮತ್ತು ವಿವಿಧ ಕಸುಬುದಾರರು ಅವನ ಬೆಂಬಲಕ್ಕೆ ನಿಂತರು.
ಇವುಗಳು ಬಾಕ್ಸರ್ ಕದನ ಕ್ಕೆ ಕಾರಣವಾದ ಅಂಶಗಳಾಗಿವೆ.

4) ಬಕ್ಸರ್ ಕದನ ದಿಂದಾಗಿ ಬ್ರಿಟಿಷರು ಅನೇಕ ಲಾಭಗಳನ್ನು ಗಳಿಸಲು ಸಾಧ್ಯವಾಯಿತು. ಸ್ಪಷ್ಟೀಕರಿಸಿ.
ಉತ್ತರ:
1. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಎರಡನೇ ಷಾ ಅಲಂ ನೀಡಿದನು.
2. ಷಾ ಅಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ  ಹಕ್ಕನ್ನುಲ್ಲಾ ಬಿಟ್ಟು ಕೊಡಬೇಕಾಯಿತು.
3. ಔದನ ನವಾಬನ ಷುಜ್-ಉದ್- ದೌಲನು ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
4. ಮೀರ್ ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸ ತೊಡಗಿತ್ತು.
5. ಅಂತಿಮವಾಗಿ ಬಕ್ಸರ್ ಕದನವು ಬ್ರಿಟಿಷರು ಬಂಗಾಳ, ಬಿಹಾರ ಮತ್ತು ಒರಿಸ್ಸಾದ ನಿಜವಾದ ಒಡೆಯರೆಂದು ಎಂದು ದೃಢೀಕರಿಸಲು ಪಟ್ಟಿತ್ತು.
6. ಔದ ಕೂಡ ಅವರ ಅಧೀನದಲ್ಲಿ ಉಳಿಯುವಂತಾಯಿತು.
7. ಹೀಗೆ ಬಕ್ಸರ್ ಕದನ ದಿಂದಾಗಿ ಬ್ರಿಟಿಷರು ಅನೇಕ ಲಾಭ ಗಳಿಸಲು ಸಾಧ್ಯವಾಯಿತು.


*****
karnataka educations ಭಾರತಕ್ಕೆ ಯೂರೋಪಿಯನ್ನರ ಆಗಮನ | 10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ-1 | ಸಮಾಜ ವಿಜ್ಞಾನ ಇತಿಹಾಸ ಅಧ್ಯಾಯ-1 | ಸ್ಪರ್ದಾತ್ಮಕ ಪರೀಕ್ಷೆ |

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon