ಅಭ್ಯಾಸ ಹಾಳೆ 6 | 10ನೇ ತರಗತಿ ಸಮಾಜ ವಿಜ್ಞಾನ | ಭೂಗೋಳ ವಿಜ್ಞಾನ | ಅಧ್ಯಾಯ-2 ಭಾರತದ ಮೇಲ್ಮೈ ಲಕ್ಷಣಗಳು | ಸಾಮಾನ್ಯ ಜ್ಞಾನದ ಪ್ರಶ್ನೆಗಳು |

ಅಭ್ಯಾಸ ಹಾಳೆ 6 | 10ನೇ ತರಗತಿ ಸಮಾಜ ವಿಜ್ಞಾನ | ಭೂಗೋಳ ವಿಜ್ಞಾನ 
ಅಧ್ಯಾಯ-2 ಭಾರತದ ಮೇಲ್ಮೈ ಲಕ್ಷಣಗಳು | ಸಾಮಾನ್ಯ ಜ್ಞಾನದ ಪ್ರಶ್ನೆಗಳು

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ

1) ಮಹಾ ಹಿಮಾಲಯ ಸರಣಿಗಳನ್ನು ____ ಎಂದು ಕರೆಯಲಾಗುತ್ತದೆ.
ಉತ್ತರ : ಹಿಮಾದ್ರಿ
2) ಒಳ ಹಿಮಾಲಯ ಗಳನ್ನು ____ ಎಂತಲೂ ಕರೆಯುತ್ತಾರೆ.
ಉತ್ತರ: ಹಿಮಾಚಲ

3) ದಕ್ಷಿಣ ಭಾರತದಲ್ಲಿ ____ ಅತಿ ಎತ್ತರವಾದ ಶಿಖರ.
ಉತ್ತರ : ಅಣ್ಣೈಮುಡಿ
4) ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳನ್ನು ____ ಬೆಟ್ಟಗಳಲ್ಲಿ ಸಂಧಿಸುತ್ತವೆ.
ಉತ್ತರ : ನೀಲಗಿರಿ

5) ಉತ್ತರ ಮಹಾ ಮೈದಾನವು ___ ಮಣ್ಣಿನಿಂದ ಅವರಿಸಿದೆ.
ಉತ್ತರ : ಮೆಕ್ಕಲು
6) ಭಾರತದ ಭೂ ಸ್ವರೂಪವನ್ನು ___ ವಿಭಾಗಗಳಾಗಿ ವಿಂಗಡಿಸಲಾಗಿದೆ.
ಉತ್ತರ : 4

7) ಪ್ರಪಂಚದಲ್ಲಿಯೇ ___ ಅತ್ಯುನ್ನತ ಶಿಖರವಾಗಿದೆ.
ಉತ್ತರ : ಮೌಂಟ್ ಎವರೆಸ್ಟ್
8) ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳನ್ನು ___ ಎಂದು ಕರೆಯುವರು.
ಉತ್ತರ : ಸಹ್ಯಾದ್ರಿ ಸರಣಿ

9) ಭಾರತದಲ್ಲಿ ಅತಿ ಎತ್ತರವಾದ ಶಿಖರ ____
ಉತ್ತರ ಮೌಂಟ್ ಗಾಡ್ವಿನ್ ಆಸ್ಟಿನ್ (ಕೆ2)
10) ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ___
ಉತ್ತರ : ಪರ್ಯಾಯ ಪ್ರಸ್ಥಭೂಮಿ (16 ಲಕ್ಷ ಚದರ ಕಿಲೋಮೀಟರ್)

11) ಗಂಗಾ ನದಿಯ ಉಗಮಸ್ಥಾನ ____
ಉತ್ತರ : ಗಂಗೋತ್ರಿ
12) ಉತ್ತರ ಭಾರತದ ಮೈದಾನವನ್ನು ___ ಮೈದಾನ ವೆಂತಲೂ ಕರೆಯುವರು.
ಉತ್ತರ : ಮೆಕ್ಕಲು ಮಣ್ಣು

13) ಪೂರ್ವ ಘಟ್ಟಗಳಲ್ಲೇ ಎತ್ತರವಾದ ಶಿಖರ ___
ಉತ್ತರ : ಅರ್ಮಕೊಂಡ
14) ಅಬು ಪರ್ವತದ ಅತಿ ಎತ್ತರವಾದ ಶಿಖರ ___
ಉತ್ತರ ಗುರುಶಿಖರ (1772 ಮೀ)

15) ಗಾಡ್ವಿನ್ ಆಸ್ಟಿನ್ ಅಥವಾ ಕೆ2 ____ ಸರಣಿ ಎಲ್ಲಿದೆ.
ಉತ್ತರ : ಕಾರಾಕೊರಂ
16) ಭೂವಿಜ್ಞಾನಿಗಳು ಅಭಿಪ್ರಾಯ ಪಟ್ಟಿರುವ ಅಂತೆ ಗೊಂಡ್ವಾನ ಭೂರಾಶಿಯ ಒಂದು ಭಾಗದ ____
ಉತ್ತರ : ಪುರಾತನ ಶಿಲೆಗಳಿಂದ ರಚಿತವಾಗಿದೆ.

17) ಹಿಮಾಲಯದ ಪಾದ ಬೆಟ್ಟಗಳ ಮತ್ತೊಂದು ಹೆಸರು ___
ಉತ್ತರ : ಶಿವಾಲಿಕ್ ಬೆಟ್ಟಗಳು
18) ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾದ ಶ್ರೇಣಿ ____
ಉತ್ತರ : ಹಿಮಾಲಯ ಶ್ರೇಣಿ

II ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1) ಭಾರತದ ಪ್ರಮುಖ ಪ್ರಾಕೃತಿಕ ವಿಭಾಗಗಳಾವುವು ?
ಉತ್ತರ : ಮೇಲ್ಮೈ ಲಕ್ಷಣಗಳನ್ನು ಆಧರಿಸಿ ಭಾರತವನ್ನು ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ :
1. ಉತ್ತರದ ಪರ್ವತಗಳು
2. ಉತ್ತರದ ಮೈದಾನಗಳು
3. ಪರ್ಯಾಯ ಪ್ರಸ್ಥಭೂಮಿ
4. ಕರಾವಳಿ ಮೈದಾನ ಮತ್ತು ದ್ವೀಪಗಳು.
 
2) ಉತ್ತರ ಪರ್ವತಗಳ ಪ್ರಾಮುಖ್ಯತೆಯನ್ನು ತಿಳಿಸಿ.
ಉತ್ತರ : ಉತ್ತರ ಪರ್ವತಗಳ ಪ್ರಾಮುಖ್ಯತೆ ರೀತಿಯಾಗಿವೆ:
1. ಹಿಮಾಲಯ ಪರ್ವತಗಳು ನೈಸರ್ಗಿಕ ಗಡಿ ಗಳಾಗಿದ್ದು ಪರಕೀಯರ ದಾಳಿ ಹಾಗೂ ಮಧ್ಯ ಏಷ್ಯಾದಿಂದ ಬೀಸುವ ಶೀತಗಾಳಿ ಗಳನ್ನು ನಿಯಂತ್ರಿಸುತ್ತವೆ.
2. ಮಳೆ ಮಾರುತಗಳನ್ನು ತಡೆದು ಅಧಿಕ ಮಳೆಯಾಗಲು ನೆರವಾಗುತ್ತವೆ.
3. ಅವುಗಳ ಇಳಿಜಾರುಗಳಲ್ಲಿ ದಟ್ಟ ಕಾಡು ಗಳಿವೆ ಮತ್ತು ನೆಡುತೋಟದ ಬೆಳೆಗಳಿಗೆ ಸೂಕ್ತ. ಉದಾ : ಅಸ್ಸಾಂನ ಚಹಾ ತೋಟಗಳು.
4. ಖನಿಜಗಳ ಉಗ್ರಾಣಗಳಾಗಿವೆ.
5. ಹಲವು ನದಿಗಳ ಉಗಮ ಸ್ಥಾನ, ಇಲ್ಲಿನ ಜಲಪಾತಗಳು ಜಲವಿದ್ಯುತ್ ಶಕ್ತಿ ಉತ್ಪಾದನೆಗೆ ಉಪಯುಕ್ತ.
 
3) ಪೂರ್ವ ಮತ್ತು ಪಶ್ಚಿಮ ಕರಾವಳಿ ಗಳ ವ್ಯತ್ಯಾಸಗಳನ್ನು ತಿಳಿಸಿ.
ಉತ್ತರ : ಪೂರ್ವ ಕರಾವಳಿ
1.ಪೂರ್ವ ಕರಾವಳಿ ಮೈದಾನವು ಸುವರ್ಣರೇಖಾ ನದಿಯ ಉತ್ತರ ಭಾಗದಿಂದ ಕನ್ಯಾಕುಮಾರಿ ವರೆಗೆ ವಿಸ್ತರಿಸಿದೆ.
2. ಅದು ಪೂರ್ವ ಘಟ್ಟಗಳು ಮತ್ತು ಬಂಗಾಳ ಕೊಲ್ಲಿ ಗಳ ನಡುವೆ ನೆಲೆಸಿದೆ.
3. ಪಶ್ಚಿಮ ಕರಾವಳಿ ಗಿಂತ ಅಗಲವಾಗಿದೆ.
4. ಪೂರ್ವಕ್ಕೆ ಹರಿವ ಅನೇಕ ದಕ್ಷಿಣ ಭಾರತದ ನದಿಗಳು ಮೂಲಕ ಹರಿಯುತ್ತವೆ. ಅವುಗಳು ನದಿ ಮುಖಜ ಭೂಮಿಯನ್ನು ನಿರ್ಮಿಸುತ್ತವೆ. ಉದಾಹರಣೆ ಮಹಾನದಿ ಗೋದಾವರಿ ಕೃಷ್ಣಾ ಮತ್ತು ಕಾವೇರಿ.

4. ಪೂರ್ವ ಕರಾವಳಿಯನ್ನು ಎರಡು ಭಾಗಗಳಲ್ಲಿ ವಿಭಾಗಿಸಲಾಗಿದೆ ಉತ್ತರ ಸರಕಾರ ತೀರ, ಕೋರಮಂಡಲ ತೀರ
ಪಶ್ಚಿಮ ಕರಾವಳಿ
:
1. ಪಶ್ಚಿಮ ಕರಾವಳಿ ಮೈದಾನವು ಪಶ್ಚಿಮಘಟ್ಟ ಮತ್ತು ಅರಬ್ಬಿಸಮುದ್ರ ಗಳ ನಡುವೆ ಕಂಡುಬರುತ್ತದೆ.
2. ಇದು ಕಚ್ಚ್ ಕನ್ಯಾಕುಮಾರಿ ವರೆಗೆ ವಿಸ್ತರಿಸಿದೆ.
3. ಕಿರಿದಾಗಿದ್ದು ಕಡಿದಾದ ಇಳಿಜಾರು ಮತ್ತು ಶಿಲಾಮಯವಾಗಿದೆ.
4. ಪಶ್ಚಿಮ ಕರಾವಳಿಯನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು : ಕೊಂಕಣ ತೀರ ಕರ್ನಾಟಕ ತೀರ ಮಲಬಾರ್ ತೀರ

5) ಪರ್ಯಾಯ / ದಖನ್ ಪ್ರಸ್ಥಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ.  ಏಕೆ ?
ಉತ್ತರ : ಪರ್ಯಾಯ ಪ್ರಸ್ಥಭೂಮಿ ಆರ್ಥಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ ಏಕೆಂದರೆ :
1. ಪರ್ಯಾಯ ಪ್ರಸ್ಥಭೂಮಿ ಸಮೃದ್ಧ ಖನಿಜಗಳು, ದಟ್ಟ ಕಾಡುಗಳು ಹಾಗೂ ಜೈವಿಕ ವೈವಿಧ್ಯದಿಂದ ಕೂಡಿದೆ.
2. ನೈರುತ್ಯ ಮಾನ್ಸೂನ್ ಮಾರುತಗಳ ಮೇಲೆ ಪ್ರಭಾವ ಬೀರುತ್ತದೆ. ಕಪ್ಪು ಮಣ್ಣಿನಿಂದ ಕೂಡಿದ್ದು ಕೃಷಿಗೆ ಪೂರಕವಾಗಿದೆ.
3. ಅನೇಕ ದಕ್ಷಿಣ ಭಾರತ ನದಿಗಳಿಗೆ ಉಗಮಸ್ಥಾನ. ಅವು ಜಲ ಶಕ್ತಿ ತಯಾರಿಕೆಯ ಉಪಯುಕ್ತ.
4. ಇಲ್ಲಿ ಗಿರಿಧಾಮಗಳು ಇವೆ. ಉದಾಹರಣೆ : ಊಟಿ (ಉದಕಮಂಡಲ)

6) ಉತ್ತರದ ಮೈದಾನದ ಪ್ರಾಮುಖ್ಯತೆಯನ್ನು ತಿಳಿಸಿ.
ಉತ್ತರ : ಉತ್ತರದ ಮೈದಾನದ ಪ್ರಾಮುಖ್ಯತೆ ರೀತಿಯಾಗಿದೆ.
1. ಹಿಮಾಲಯ ಪರ್ವತಗಳು ನೈಸರ್ಗಿಕ ಗಡಿ ಗಳಾಗಿದ್ದು ಪರಕೀಯರ ದಾಳಿ ಹಾಗೂ ಮಧ್ಯ ಏಷ್ಯಾದಿಂದ ಬೀಸುವ ಶೀತ ಗಾಳಿಗಳನ್ನು ನಿಯಂತ್ರಿಸುತ್ತವೆ.
2. ಮಳೆ ಮಾರುತಗಳನ್ನು ತಡೆದು ಅಧಿಕ ಮಳೆಯಾಗಲು ನೆರವಾಗುತ್ತವೆ.
3. ಇವುಗಳ ಇಳಿಜಾರುಗಳಲ್ಲಿ ದಟ್ಟ ಕಾಡುಗಳಿವೆ ಮತ್ತು ತೋಟದ ಬೆಳೆಗಳಿಗೆ ಸೂಕ್ತ. ಉದಾಹರಣೆ ಅಸ್ಸಾಂನ ಚಹ ತೋಟಗಳು.
4. ಖನಿಜಗಳ ಉಗ್ರಾಣ ಗಳಾಗಿವೆ.
5. ಹಲವು ನದಿಗಳ ಉಗಮ ಸ್ಥಾನ, ಇಲ್ಲಿನ ಜಲಪಾತಗಳು ಜಲವಿದ್ಯುತ್ ಶಕ್ತಿ ಉತ್ಪಾದನೆಗೆ ಉಪಯುಕ್ತ.

7) ಭಾರತದ ಕರಾವಳಿ ಮೈದಾನಗಳ ಪ್ರಾಮುಖ್ಯತೆ ಏನು ?
ಉತ್ತರ : ಭಾರತದ ಕರಾವಳಿ ಮೈದಾನಗಳು ಕೆಲವು ನೈಸರ್ಗಿಕ ಬಂದರುಗಳಿಗೆ ಪೂರಕವಾಗಿವೆ.
ಇದರಿಂದ ಭಾರತದ ವಿದೇಶ ವ್ಯಾಪಾರ ಅಭಿವೃದ್ಧಿ ಸಾಧ್ಯ.
ಉದಾರಣೆ ಕಾಂಡ್ಲಾ, ಮುಂಬೈ, ಮರ್ಮಗೋವಾ, ಕೊಚ್ಚಿ, ವಿಶಾಖಪಟ್ಟಣ, ಕೋಲ್ಕತ್ತಾ ಇತ್ಯಾದಿ.
ಅಲ್ಲದೇ ಕರಾವಳಿಯು ಮೀನುಗಾರಿಕೆ, ಹಡಗು ನಿರ್ಮಾಣ ಕೈಗಾರಿಕೆ, ಕೃಷಿ ಮತ್ತು ಉಪ್ಪು ಉತ್ಪಾದನೆಗಳಿಗೆ ನೆರವಾಗುತ್ತದೆ.
ನೌಕಾಯಾನ ಮತ್ತು ಆಕರ್ಷಕ ಬೀಚ್ ಗಳಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ನೆರವಾಗುತ್ತದೆ.

8) ಉತ್ತರದ ಮೈದಾನವನ್ನು ಸಂಚನ ಮಾಡಿದಾನ ವೆಂದು ಕರೆಯುತ್ತಾರೆ ಏಕೆ?
ಉತ್ತರ : ಉತ್ತರದ ಮೈದಾನವು ಹಿಮಾಲಯ ಪರ್ವತಗಳು ಮತ್ತು ಪರ್ಯಾಯ ಪ್ರಸ್ಥಭೂಮಿಯ ನಡುವೆ ವಿಸ್ತರಿಸಿದೆ.
ಇದು ಸಟ್ಲೆಜ್ ಗಂಗಾ ಮತ್ತು ಬ್ರಹ್ಮಪುತ್ರ ಮೂರು ನದಿಗಳ ಸಂಚಯನ ಕಾರ್ಯದಿಂದ ನಿರ್ಮಾಣಗೊಂಡಿದ್ದು.
ಪ್ರಪಂಚದ ಅತಿ ವಿಶಾಲವಾದ ಮೆಕ್ಕಲು ಮಣ್ಣು ಮೈದಾನ ಇದಾಗಿದೆ.
ಎಲ್ಲಾ ಕಾರಣಗಳಿಂದಾಗಿ ಉತ್ತರದ ಮೈದಾನವನ್ನು ಸಂಚಯನ ಮೈದಾನ ವೆಂದು ಕರೆಯಲಾಗುತ್ತದೆ.

9) ಹಿಮಾಲಯದ ಮೂರು ಪ್ರಮುಖ ಶ್ರೇಣಿಗಳು ಯಾವುವು ?
ಉತ್ತರ : ಹಿಮಾಲಯ ಪರ್ವತಗಳಲ್ಲಿ ಮೂರು ಸಮನಾಂತರ ಸರಣಿ ಗಳಿವೆ ಅವುಗಳೆಂದರೆ;
1. ಮಹಾಹಿಮಾಲಯ
2. ಒಳ ಹಿಮಾಲಯ ಮತ್ತು
3. ಸಿವಾಲಿಕ್ ಬೆಟ್ಟಗಳು.

10) ಭಾರತಕ್ಕೆ ಸೇರಿರುವ ಎರಡು ದ್ವೀಪಸ್ತೋಮ ಗಳಾವುವು ?
ಉತ್ತರ : ಭಾರತದಲ್ಲಿ 247 ದ್ವೀಪಗಳಿವೆ.
1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು - ಯು ಬಂಗಾಳಕೊಲ್ಲಿಯಲ್ಲಿವೆ - 204 ದ್ವೀಪಗಳು.
2. ಲಕ್ಷದ್ವೀಪಗಳು - ಇವುಗಳು ಅರಬ್ಬಿ ಸಮುದ್ರದಲ್ಲಿವೆ - 43 ದೀಪಗಳಿವೆ ಇವುಗಳು ಹವಳ ದ್ವೀಪ ಗಳಾಗಿವೆ.

*****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon