ಅಭ್ಯಾಸ ಹಾಳೆ-7 | ಸಮಾಜ ವಿಜ್ಞಾನ | ಸಾಮಾನ್ಯ ಜ್ಞಾನ | ಭೂಗೋಳ ವಿಜ್ಞಾನ | ಭಾರತದ ವಾಯುಗುಣ | ಭೂಗೋಳದ ಪ್ರಮುಖ ಪ್ರಶ್ನೆಗಳು |

ಅಭ್ಯಾಸ ಹಾಳೆ 7 | ಭೂಗೋಳ ವಿಜ್ಞಾನ | ಅಧ್ಯಾಯ-3 | ಭಾರತದ ವಾಯುಗುಣ |

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ :

1) ಭಾರತದಲ್ಲಿ ____ ವಿಧದ ವಾಯು ಗುಣವಿದೆ.
ಉತ್ತರ : ಉಷ್ಣ ವಲಯದ ಮಾನ್ಸುನ್
2) ಭಾರತದ __  ಸ್ಥಳದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ
ಉತ್ತರ : ಮಾಸಿನ್ ರಾಮ್

3) ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶವು ____ ನಲ್ಲಿ ದಾಖಲಾಗುತ್ತದೆ.
ಉತ್ತರ : ಡ್ರಾಸ್
4) ಭಾರತದ ___ ತಿಂಗಳು ಅತ್ಯಂತ ಶೀತ ವಾದದ್ದು
ಉತ್ತರ : ಜನೆವರಿ (ಚಳಿಗಾಲ)

5) ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿದ ಪ್ರದೇಶ ___ ಆಗಿದೆ.
ಉತ್ತರ: ರಾಜ್ಯಸ್ಥಾನದ ಗಂಗಾನಗರ್ (49.4⁰ ಸೆ.)
6) ಅತಿ ಹೆಚ್ಚು ಮಳೆ ಬೀಳುವ ಋತು __ ಆಗಿದೆ.
ಉತ್ತರ : ಮಳೆಗಾಲ (ಜೂನ್  - ಸೆಪ್ಟೆಂಬರ್)

7) ಭಾರತದ ಅತಿ ಕಡಿಮೆ ಮಳೆ ಬೆಳೆ ಪಡೆಯುವ ಅವಧಿ___
ಉತ್ತರ : ಚಳಿಗಾಲ (ಡಿಸೆಂಬರ್ - ಫೆಬ್ರುವರಿ)
8) ಭಾರತದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶ __
ಉತ್ತರ : ರಾಜಸ್ಥಾನದ ಜೈಸಲ್ಮೇರ್ "ರೂಯ್ಲಿ"

9) ಬೇಸಿಗೆಯಲ್ಲಿ ಉತ್ತರ ಭಾರತದ ಬಯಲು ಪ್ರದೇಶಗಳು ಅತಿ ಉಷ್ಣತೆಯನ್ನು ಹೊಂದಿರುತ್ತದೆ ಕಾರಣ ___
ಉತ್ತರ : ಉತ್ತರಾರ್ಧ ಗೋಳದ ಮೇಲೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುತ್ತವೆ.
10) ಚಂಡಮಾರುತಗಳು ಜೀವ ಮತ್ತು ಆಸ್ತಿ ಹಾನಿ ಉಂಟುಮಾಡುತ್ತವೆ. ಕಾರಣ ___
ಉತ್ತರ : ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ ಸಂಭವಿಸುವುದರಿಂದ

11) ಮಾನ್ಸೂನ್ ಎಂಬ ಪದವು ಅರೇಬಿಕ್ ಭಾಷೆಯ ___ ಎಂಬ ಪದದಿಂದ ರೂಢಿಗೆ ಬಂದಿದೆ.
ಉತ್ತರ : 'ಮೌಸಿಮ್'
12) ಭಾರತದಲ್ಲಿ ನೈರುತ್ಯ ಮಾನ್ಸೂನ್ ಎಂದರೆ ___ ಎಂದರ್ಥ.
ಉತ್ತರ : ಮುಂಗಾರು ಮಳೆಗಾಲ

13) ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಆಗುವ ಮಳೆಯನ್ನು ಪಶ್ಚಿಮಬಂಗಾಳದಲ್ಲಿ ____ ಎಂದು ಕರೆಯುತ್ತಾರೆ.
ಉತ್ತರ : ಕಾಲಬೈಸಾಕಿ
14) ಮಾವಿನ ಹೊಯ್ಲು ಬೀಳುವ ಪ್ರದೇಶ ____
ಉತ್ತರ : ಕೇರಳ

15) ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಅಂಶ ___
ಉತ್ತರ : ಮಾನ್ಸೂನ್ ಮಾರುತಗಳು
16) ಡಿಸೆಂಬರ್ ನಿಂದ ಫೆಬ್ರವರಿವರೆಗೆ ಭಾರತದಲ್ಲಿ ಚಳಿಗಾಲ ವಿದ್ದರೆ, ಬೇಸಿಗೆಕಾಲ ಇರುವುದು ____
ಉತ್ತರ : ಮಾರ್ಚ್ ನಿಂದ ಮೇ ವರೆಗೆ

17) ಭಾರತ ನೈರುತ್ಯ ಮಾನ್ಸೂನ್ ಮಾರುತ ದಿಂದ ___  ರಷ್ಟು ಮಳೆ ಪಡೆಯುತ್ತದೆ.
ಉತ್ತರ : ಶೇ. 75
18) ಭಾರತವು __ ಕಾಲದಲ್ಲಿ ಶೇಕಡ 13 ರಷ್ಟು ಮಳೆಯನ್ನು ಪಡೆಯುತ್ತದೆ.
ಉತ್ತರ : ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ( ಹಿಂಗಾರು ಮಳೆಗಾಲ)

19) ನೈರುತ್ಯ ಮಾನ್ಸೂನ್ ಮಾರುತಗಳು ಅಕ್ಟೋಬರ್ ನಿಂದ ಹಿಮ್ಮೆಟ್ಟಲು ಪ್ರಾರಂಭವಾಗುವ ಮಾಡುತ್ತವೆ. ಏಕೆಂದರೆ ಪ್ರದೇಶವು ___
ಉತ್ತರ : ಭೂಭಾಗದಲ್ಲಿ ಉಷ್ಣಾಂಶ ಕಡಿಮೆಗೊಂಡು ಅಧಿಕ ಒತ್ತಡ ಪ್ರದೇಶ ನಿರ್ಮಾಣವಾಗುವುದರಿಂದ
20) ಕರ್ನಾಟಕದಲ್ಲಿ ಬೇಸಿಗೆಯಲ್ಲಿ ಬೀಳುವ ಮಳೆ ಕಾಫಿ ಬೆಳಗ್ಗೆ ನೆರವಾಗುವುದರಿಂದ ಇದನ್ನು  ___ಎಂದು ಕರೆಯುತ್ತಾರೆ.
ಉತ್ತರ : ಕಾಫಿಯ ಹೂಮಳೆ

21) ನಿರ್ಗಮನ ಮಾನ್ಸೂನ್ ಕಾಲವನ್ನು ಹೀಗೆ ಕರೆಯುತ್ತಾರೆ ___
ಉತ್ತರ : ಹಿಂಗಾರು ಮಳೆಗಾಲ
22) ತಮಿಳುನಾಡು, ಆಂಧ್ರಪ್ರದೇಶ, ಒಡಿಸ್ಸಾ ರಾಜ್ಯಗಳ ಕರಾವಳಿ ಭಾಗಗಳಿಗೆ ಕಾಲದಲ್ಲಿ ಮಳೆಯಾಗುತ್ತದೆ.____
ಉತ್ತರ : ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ

23) ಭಾರತದ ವಾಯುಗುಣವನ್ನು ನಿರ್ಧರಿಸುವ ಅತ್ಯಂತ ಪ್ರಮುಖ ಅಂಶ ___ ಆಗಿದೆ
ಉತ್ತರ : ಮಾನ್ಸೂನ್ ಮಾರುತಗಳ
24) ಭಾರತದಲ್ಲಿರುವ ಮಾರ್ಚ್ ನಿಂದ ಮೇ ವರೆಗೆ ___ ಋತು ಕಂಡುಬರುತ್ತದೆ.
ಉತ್ತರ: ಬೇಸಿಗೆಕಾಲ

25) ಉತ್ತರಪ್ರದೇಶದಲ್ಲಿ ಬೇಸಿಗೆಕಾಲದಲ್ಲಿ ಬೀಳುವ ಮಳೆಯನ್ನು ____ ಎನ್ನುತ್ತಾರೆ.
ಉತ್ತರ : ಆಂಧಿಸ್
 
II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :-
1) ಭಾರತವು ಯಾವ ಬಗೆಯ ವಾಯುಗುಣವನ್ನು ಹೊಂದಿದೆ ?
ಉತ್ತರ : ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣ.

2) ಮಾನ್ಸೂನ್ ಎಂದರೇನು ?
ಉತ್ತರ : ಮಾನ್ಸೂನ್ ಎಂದರೆ ಋತುಕಾಲ ಎಂದರ್ಥ.

3) ಯಾವ ಋತುವನ್ನು ಸಾಮಾನ್ಯವಾಗಿ ಮಳೆಗಾಲ ಎಂದು ಕರೆಯುವರು ?
ಉತ್ತರ : ಜೂನ್ ನಿಂದ ಸೆಪ್ಟೆಂಬರ್ ವರೆಗೆ

4) ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಲ್ಲಲ್ಲಿ ಮಳೆಯಾಗಲು ಕಾರಣವೇನು?
ಉತ್ತರ : ಸ್ಥಳೀಯ ಉಷ್ಣಾಂಶದ ವ್ಯತ್ಯಾಸದ ಕಾರಣದಿಂದ.

5) ಕಾಫಿ ಹೂಮಳೆ ಎಂದರೇನು?
ಉತ್ತರ : ಕರ್ನಾಟಕದಲ್ಲಿ ಆಗುವ ಪರಿಸರಣ ಮಳೆಯನ್ನು ಕಾಫಿ ಹೂಮಳೆ ಎನ್ನಲಾಗುತ್ತದೆ.

6) ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು?
ಉತ್ತರ : ರೂಯ್ಲಿ

7) ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
ಉತ್ತರ : ಮಾಸಿನ್ ರಾಮ್

8) ಪರಿಸರಣ ಮಳೆ ಎಂದರೇನು?
ಉತ್ತರ : ಬೇಸಿಗೆ ಅವಧಿಯಲ್ಲಿ ಆಗುವ ಮಳೆಯನ್ನು ಪರಿಸರಣ ಮಳೆ ಎನ್ನಲಾಗುತ್ತದೆ.

9) ಮೆಕ್ಕಲು ಮಣ್ಣು ಹೇಗೆ ಉತ್ಪತ್ತಿಯಾಗುತ್ತದೆ?
ಉತ್ತರ : ನದಿಗಳ ಸಂಚಯನ ದಿಂದ

10) ಭಾರತದಲ್ಲಿ ಕಡಿಮೆ ಉಷ್ಣಾಂಶ ಹೊಂದಿರುವ ಪ್ರದೇಶ ಯಾವುದು?
ಉತ್ತರ : ಡ್ರಾಸ್
 
III. ಕೆಳಗಿನ ಪ್ರಶ್ನೆಗಳಿಗೆ 2- 4 ವಾಕ್ಯಗಳಲ್ಲಿ ಉತ್ತರಿಸಿ:-
1) ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?
ಉತ್ತರ : ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳೆಂದರೆ:-
ಸ್ಥಾನ
ಜಲರಾಶಿಗಳು
ಮೇಲ್ಮೈ ಲಕ್ಷಣಗಳು ಮತ್ತು ಮಾನ್ಸೂನ್ ಮಾರುತಗಳು.

2) ಭಾರತದ ಪ್ರಮುಖ ವಾಯುಗುಣದ ಋತುಕಾಲ ಗಳಾವುವು?
ಉತ್ತರ : ಭಾರತದಲ್ಲಿ ಒಂದು ವರ್ಷದ ವಾಯುಗುಣವನ್ನು 4 ಋತುಕಾಲ ಗಳಾಗಿ ವಿಂಗಡಿಸಬಹುದು.
1. ಚಳಿಗಾಲ (ಡಿಸೆಂಬರ್- ಫೆಬ್ರುವರಿ)
2. ಬೇಸಿಗೆಕಾಲ (ಮಾರ್ಚ್-ಮೇ)
3. ಮಳೆಗಾಲ (ಜೂನ್- ಸೆಪ್ಟೆಂಬರ್)
4. ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ ( ಸೆಪ್ಟೆಂಬರ್ ಮಧ್ಯ- ನವೆಂಬರ್)

3) ಭಾರತದಲ್ಲಿನ ಮಳೆಯ ಹಂಚಿಕೆಯ ವಿಭಾಗಗಳನ್ನು ಪಟ್ಟಿಮಾಡಿ.
ಉತ್ತರ : ಮಳೆಯ ಪ್ರಮಾಣವನ್ನು ಆಧರಿಸಿ ಭಾರತವನ್ನು 3 ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದು.
1. ಕಡಿಮೆ ಮಳೆ ಬೀಳುವ ಪ್ರದೇಶ
2. ಸಾಧಾರಣ ಮಳೆ ಬೀಳುವ ಪ್ರದೇಶ
3. ಅಧಿಕ ಮಳೆಯಾಗುವ ಪ್ರದೇಶ

4) ನೈರುತ್ಯ ಮಾನ್ಸೂನ್ ಮಾರುತದ ಎರಡು ಶಾಖೆಗಳು ಯಾವುವು?
ಉತ್ತರ : ನೈರುತ್ಯ ಮಾನ್ಸೂನ್ ಮಾರುತ ಎರಡು ಶಾಖೆಗಳು ಎಂದರೆ
1. ಅರಬ್ಬಿ ಸಮುದ್ರ ಶಾಖೆ
2. ಬಂಗಾಳಕೊಲ್ಲಿ ಶಾಖೆ
ಅರಬ್ಬಿ ಸಮುದ್ರ ಶಾಖೆಯು ಪಶ್ಚಿಮಘಟ್ಟಗಳಿಗೆ ಎದುರಾಗಿ ಬೀಸುತ್ತವೆ ಮತ್ತು ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗಗಳಿಗೆ ಅಧಿಕ ಮಳೆ ಸುರಿಸುತ್ತವೆ.
ಬಂಗಾಳಕೊಲ್ಲಿಯ ಶಾಖೆಯು ಮೇಘಾಲಯ ಮತ್ತು ಅಸ್ಸಾಂನ ಬೆಟ್ಟಗಳಿಂದ ತಡೆಯುವುದರಿಂದ ಅಧಿಕ ಮಳೆ ಬರುವುದು.

5) ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಎಂದರೇನು ?
ಅಥವಾ
ಮಾನ್ಸೂನ್ ಮಾರುತಗಳು ಯಾವಾಗ ನಿರ್ಗಮಿಸಲು ಪ್ರಾರಂಭಿಸುತ್ತವೆ ?
ಉತ್ತರ : ಅಕ್ಟೋಬರ್ ತಿಂಗಳ ಆರಂಭದಲ್ಲಿ ಉಷ್ಣಾಂಶ ಕಡಿಮೆಯಾಗುವುದರಿಂದ ಭೂಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ಕ್ರಮೇಣ ಕ್ಷೀಣಗೊಂಡು ಅಧಿಕ ಒತ್ತಡ ಪ್ರದೇಶವು ನಿರ್ಮಾಣಗೊಳ್ಳುವುದು.
ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣವಾಗುವುದು.
ಪರಿಣಾಮವಾಗಿ ನೈರುತ್ಯ ಮಾನ್ಸುನ್ ಮಾರುತಗಳು ಹಿಂದಿರುಗುತ್ತವೆ.
ಅವು ಈಶಾನ್ಯದಿಂದ ನೈಋತ್ಯದ ಕಡೆಗೆ ಬೀಸುತ್ತವೆ.
ಹೀಗಾಗಿ ಅವಧಿಯನ್ನು ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ ಎಂದು ಕರೆಯಲಾಗಿದೆ.
ಹವಾಗುಣವು ಅಸ್ಥಿರ ವಾಗಿರುತ್ತದೆ.

6) ನೈರುತ್ಯ ಮಾನ್ಸುನ್ ಮಾರುತಗಳು ಭಾರತದ ಹೆಚ್ಚು ಭಾಗಗಳಿಗೆ ಹೇಗೆ ಮಳೆಯನ್ನು ಸುರಿಸುತ್ತವೆ ?
ಉತ್ತರ : ಬೇಸಿಗೆ ಅಂತ್ಯದಿಂದ ಉಷ್ಣಾಂಶ ಹೆಚ್ಚಾಗುವುದರಿಂದ ಭಾರತದ ಮಧ್ಯಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣವಾಗುತ್ತದೆ.
ಇದಕ್ಕೆ ಪ್ರತಿಯಾಗಿ ಹಿಂದೂ ಸಾಗರದಲ್ಲಿ ಅಧಿಕ ಒತ್ತಡವಿರುತ್ತದೆ.
ಆದ್ದರಿಂದ ತೇವಾಂಶಭರಿತ ಮಾರುತಗಳು ನೈಋತ್ಯದಿಂದ ಭಾರತದೆಡೆಗೆ ಬೀಸುತ್ತವೆ.
ಇವು ದೇಶದ ವಿವಿಧ ಭಾಗಗಳಿಗೆ ಮಳೆಯನ್ನು ತರುತ್ತವೆ.
ಮಾರುತಗಳಲ್ಲಿ ಎರಡು ಶಾಖೆಗಳಿವೆ.
1) ಅರಬಿಸಮುದ್ರ ಶಾಖೆ
2) ಬಂಗಾಳಕೊಲ್ಲಿ ಶಾಖೆ.

*****

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon