ರಾಜ್ಯ ಸಭೆ ರಚನೆ ಚುನಾವಣೆ ಅಧಿಕಾರ ಅವಧಿ | ಸದಸ್ಯರಾಗಲು ಇರಬೇಕಾದ ಅರ್ಹತೆಗಳು | ಅಧಿವೇಶನ | ಸಂಸತ್ತಿನ ಮೇಲ್ಮನೆ |

ರಾಜ್ಯ ಸಭೆ ರಚನೆ ಚುನಾವಣೆ ಅಧಿಕಾರ ಅವಧಿ | ಸದಸ್ಯರಾಗಲು ಇರಬೇಕಾದ ಅರ್ಹತೆಗಳು | ಅಧಿವೇಶನ | ಸಂಸತ್ತಿನ ಮೇಲ್ಮನೆ |


Parliament Rajyasabhe

Rajyasabhe ರಾಜ್ಯಸಭೆ

ಸಂಸತ್ತು 2 ಸಧನಗಳನ್ನು ಹೊಂದಿದೆ

1)      ರಾಜ್ಯ ಸಭೆ

2)      ಲೋಕಸಭೆ

ರಾಜ್ಯಸಭೆಯ ರಚನೆ:

* ರಾಜ್ಯಸಭೆಯು 250 ಸದಸ್ಯರನ್ನು ಒಳಗೊಂಡಿದೆ.

* ಇದರಲ್ಲಿ 238 ಸದಸ್ಯರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾಗುತ್ತಾರೆ.

* ಉಳಿತ 12 ಜನ ಸದಸ್ಯರು ಸಾಹಿತ್ಯ, ಕಲೆ, ವಿಜ್ಞಾನ ಮತ್ತು ಸಮಾಜ ಸೇವೆಯಲ್ಲಿ ವಿಶೇಷ ಅನುಭವ ಪಡೆದವರನ್ನು ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ.

ಚುನಾವಣೆ :

* ಪ್ರತಿ ರಾಜ್ಯಕ್ಕೂ ರಾಜ್ಯಸಭೆಯಲ್ಲಿ ನಿಗಧಿತ ಸಂಖ್ಯೆಯ ಸ್ಥಾನಗಳಿರುತ್ತವೆ.

* ಇವರು ರಾಜ್ಯ ವಿಧಾನ ಮಂಡಲಗಳಿಂದ ಪ್ರಾತಿನಿದ್ಯ ಮತದಾನದ ಮೂಲಕ ಆಯ್ಕೆಯಾಗುತ್ತಾರೆ.

ಅಧಿಕಾರ ಅವಧಿ:

* ರಾಜ್ಯಸಭೆಯು ಒಂದು ಖಾಯಂ ಸಧನವಾಗಿದ್ದು. ಇದು ಲೋಕಸಭೆಯಂತೆ ವಿಸರ್ಜನೆಯಾಗುವುದಿಲ್ಲ.

* ಸದಸ್ಯರ ಅಧಿಕಾರ ಅವಧಿ 6 ವರ್ಷಗಳಾಗಿರುತ್ತವೆ.

* ಪ್ರತಿ ಎರಡು ವರ್ಷಗಳಿಗೊಮ್ಮೆ 1/3 (ಮೂರನೆ ಒಂದು) ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ ಮತ್ತು ಅಷ್ಟೆ ಸದಸ್ಯರು ಆಯ್ಕೆಯಾಗುತ್ತಾರೆ.

* ಸದಸ್ಯರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಬಹುದು.

ಸದಸ್ಯರಾಗಲು ಇರಬೇಕಾದ ಅರ್ಹತೆಗಳು :

  1. ಭಾರತದ ಪ್ರಜೆಯಾಗಿರಬೇಕು.
  2. ಕನಿಷ್ಠ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು.
  3. ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು.
  4. ಮತ್ತಿಭ್ರಮಣೆಯುಳ್ಳವರಾಗಿರಬಾರದು.
  5. ಸಂಸತ್ತು ಕಾಲಕಾಲಕ್ಕೆ ನಿಗಧಿಪಡಿಸುವ ಅರ್ಹತೆ ಪಡೆದಿರಬೇಕು.

ಸಭಾಪತಿ :

* ಭಾರತದ ಉಪರಾಷ್ಟ್ರಪತಿಯವರು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು (ಸಭಾಪತಿ) ಆಗಿರುತ್ತಾರೆ.

* ಉಪರಾಷ್ಟ್ರಪತಿಯವರನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರ ಚುನಾಯಿಕ ಗಣದ ಮೂಲಕ ಚುನಾಯಿಸಲಾಗುತ್ತದೆ.

* ಇವರು ಲೋಕಸಭೆಯ ಸಭಾಧ್ಯಕ್ಷರಿಗಿರುವ ಅಧಿಕಾರ ಮತ್ತು ಕಾರ್ಯಗಳನ್ನು ಹೊಂದಿರುತ್ತಾರೆ.

* ಆದರೆ ಇವರು ರಾಜ್ಯಸಭೆಯ ಸದಸ್ಯರಲ್ಲ.

ಉಪಸಭಾಪತಿ:

* ರಾಜ್ಯಸಭೆಯ ಅಧಿಕಾರ ಮತ್ತು ಕಾರ್ಯಗಳನ್ನು ಉಪಸಭಾಪತಿಗಳು ನಿರ್ವಹಿಸುತ್ತಾರೆ.

* ರಾಜ್ಯಸಭೆಯ ಸದಸ್ಯರಲ್ಲಿ ಒಬ್ಬರನ್ನು ಉಪಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ.

ಅಧಿವೇಶನ :

* ರಾಜ್ಯಸಭೆಯ ಅಧಿವೇಶನ ನಡೆಯಬೇಕಾದರೆ ಸದನದ 10%  (ಕನಿಷ್ಠ-25) ಸದಸ್ಯರು ಹಾಜರಿರಬೇಕು.

* ಒಂದು ಅಧಿವೇಶನಕ್ಕೂ ಮತ್ತೊಂದು ಅಧಿವೇಶನಕ್ಕೂ ಗರಿಷ್ಠ ಅಂತರ 6 ತಿಂಗಳು ಮೀರಿರಬಾರದು.


*****





Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon