COVID-19 Essay ಕೋರೋನಾ ಪ್ರಬಂಧ

ಕೊರೋನಾ ಪ್ರಬಂಧ

ಇಂದು ಜಾಗತಿಕವಾಗಿ ಒಂದು ಬೃಹತ್ ಸಮಸ್ಯೆಯಾಗಿ ಕಾಡುತ್ತಿರುವ ರೋಗ Covid 19. ಇದು ಒಂದು ವೈರಸ್ ನಿಂದ ಬರುವ ರೋಗವಾಗಿದ್ದು ಈ ವೈರಸ್ ಕಿರೀಟದ ಆಕಾರದ ರಚನೆ ಹೊಂದಿರುವ ಕಾರಣಕ್ಕಾಗಿ ಇದನ್ನು Corona ಎನ್ನುವ ಹೆಸರು ಇಡಲಾಗಿದೆ. ಇದು ಮನುಷ್ಯರಲ್ಲಿ ಉಸಿರಾಟದ ತೊಂದರೆ ಮತ್ತು ಇತರ ಪರಿಣಾಮಗಳನ್ನು ಉಂಟು ಮಾಡಿ ಮಾರಣಾಂತಿಕವಾಗಿ ಕಾಡುವಂತ ರೋಗವಾಗಿದೆ.

Covid 19 ಮೊಟ್ಟಮೊದಲ ಬಾರಿಗೆ ಚೀನಾ ದೇಶದ  Wuhan ಎನ್ನುವ ಸ್ಥಳದಲ್ಲಿ 2019 ರ ಡಿಸೆಂಬರ್ ನಲ್ಲಿ ಕಂಡುಬಂದಿದ್ದು. ನಂತರ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳಿಗೆ ಹರಡಿಕೊಂಡು ಬಂದಿದೆ. ಇದು ಮೊದಲು 'ಬಾವಲಿ' ಯಿಂದ ಹರಡಿರುವುದು ಆದರೆ ಮುಂದೆ ಮನುಷ್ಯನಿಂದ ಮನುಷ್ಯನಿಗೆ ಹರಡಿಕೊಂಡು ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಯು 4.1.2021 ರಲ್ಲಿ ಹೊರಡಿಸುವ ಅಂಕಿ ಅಂಶಗಳ ಪ್ರಕಾರವಾಗಿ ಜಗತ್ತಿನಲ್ಲಿ ಒಟ್ಟು 129,000,000 ಈ ರೋಗಕ್ಕೆ ತುತ್ತಾಗಿರುವರು, 2,800,000 ಜನರು ಈ ರೋಗದಿಂದಾಗಿ ಮರಣ  ಹೊಂದಿರುವರು. 'ಅಂಟಾರ್ಟಿಕ್' ಅವನ್ನು ಹೊರತುಪಡಿಸಿ ಜಗತ್ತಿನ ಸುಮಾರು 192 ರಾಷ್ಟ್ರಗಳು ಈ ರೋಗಕ್ಕೆ ತುತ್ತಾಗಿರುವುದು ಕಂಡುಬರುತ್ತದೆ. ಈ ರೋಗಕ್ಕೆ ತುತ್ತಾಗಿರುವ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರವೆಂದರೆ ಅಮೆರಿಕ ದೇಶವಾಗಿದೆ.

* ಈ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವ ರೋಗವಾಗಿದ್ದು ವ್ಯಕ್ತಿಯ ಸ್ವಾಸ ಕೆಮ್ಮು ಮತ್ತಿತರ ಮೂಲಗಳಿಂದ ಸುಲಭವಾಗಿ ಹರಡುತ್ತದೆ.
* ರೋಗಗ್ರಸ್ತ ವ್ಯಕ್ತಿಯು ಆರು ಅಡಿ ಅಂತರದಲ್ಲಿ ಇದ್ದಾಗ ಹರಡುವ ಸಾಧ್ಯತೆ ಇರುತ್ತದೆ.
* ರೋಗಗ್ರಸ್ತ ವ್ಯಕ್ತಿಯನ್ನು  ಸ್ಪರ್ಶಿಸುವುದು, ಮತ್ತು ವ್ಯಕ್ತಿಯ ಸ್ವಾಸ ದಿಂದ ಹರಡುತ್ತಿರುವುದು.

ಮುಂಜಾಗೃತ ಕ್ರಮಗಳು :

* ರೋಗದಿಂದ ರಕ್ಷಣೆಗಾಗಿ ವ್ಯಕ್ತಿಯಿಂದ ಸುಮಾರು ಆರು ಅಡಿಗಳ ಅಂತರವನ್ನು ಕಾಪಾಡಿಕೊಳ್ಳುವುದು.
* ಮೂಗು ಮತ್ತು ಬಾಯಿಯ ನ್ನು ಮಾಸ್ಕ್ ನ ಮೂಲಕ ಮುಚ್ಚಿಕೊಳ್ಳುವುದು.
* ಆಗಾಗ ಕೈಗಳನ್ನು ಸಾಬುನ ಮೂಲಕ ತೊಳೆದುಕೊಳ್ಳುವುದು.
* ಸುರಕ್ಷಿತ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು.
* ಆಗಾಗ ಕೈಗಳನ್ನು ಸ್ಯಾನಿಟೇಷನ್ ಮಾಡಿಕೊಳ್ಳುವುದು.
* ಗುಂಪುಗಳಲ್ಲಿ ಓಡಾಡದೆ ಗುಂಪುಗಳು ನಿರ್ಮಾಣವಾಗದಂತೆ ನೋಡಿಕೊಳ್ಳುವುದು.
* ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಕಾಣುವುದು.

ಕೋರೋನಾ ರೋಗ ಬರದಂತೆ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಸೂಕ್ತವಾಗಿದೆ. ಒಂದು ವೇಳೆ ರೋಗದ ಯಾವುದೇ ರೀತಿಯಾದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು. ವೈದ್ಯರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಅಗತ್ಯವಿದ್ದಲ್ಲಿ ಸ್ವತಹ ಐಸೋಲೇಷನ್ ಆಗಿ ಉಳಿದುಕೊಳ್ಳುವುದು.

ಇತ್ತೀಚಿಗೆ ಕೊರೊನಾ ರೋಗದ ಲಸಿಕೆಗಳನ್ನು ಸಹ ಕಂಡುಹಿಡಿಯಲಾಗಿದೆ. ಅವುಗಳ ಬಳಕೆಯು ಸಹ ಪ್ರಾರಂಭವಾಗಿದ್ದು ಲಸಿಕೆಗಳು ಲಭ್ಯವಿದ್ದಲ್ಲಿ ಲಸಿಕೆಗಳನ್ನು ಹಾಕಿಸಿಕೊಳ್ಳುವುದು. ತಕ್ಷಣಕ್ಕೆ ಎಲ್ಲರಿಗೂ ಲಸಿಕೆಗಳು ಲಭ್ಯವಾಗದಿದ್ದರೂ ಸಹ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ಈ ರೋಗದ ವಿರುದ್ಧ ಎಲ್ಲರೂ ಒಟ್ಟಿಗೆ ಹೋರಾಟ ಮಾಡುವುದರೊಂದಿಗೆ ರೋಗದ ವಿರುದ್ಧ ವಿಜಯವನ್ನು ಸಾಧಿಸಲು ಪ್ರಯತ್ನಿಸಬೇಕು.


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon