KSEEB Model Question Paper-2 With Answers Part-5 | 10th Social Science Question Paper Model Ans |

V.      ಕೆಳಗಿನ ಪ್ರಶ್ನೆಗಳಿಗೆ ಎಂಟು –ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:                    4x4=16    
34.    ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್‌ ಚಂದ್ರ ಬೋಸ್‌ ರ ಸಾಧನೆಗಳನ್ನು ವಿವರಿಸಿ.
·        ಬ್ರಿಟಿಷ್‌ ಸರ್ಕಾರದ ಪ್ರತಿಷ್ಟಿತ ಹುದ್ದೆ ತ್ಯಜಿಸಿದರು
·        ನೇತಾಜಿ ಎಂದು ಹೆಸರಾಗಿದ್ದರು
·        ಜವಾಹರಲಾಲ್‌ ನೆಹರು ಜತೆಗೂಡಿ ಸಮಾಜವಾದಿ ಪಕ್ಷ ಸ್ಥಾಪನೆ
·        ಹರಿಪುರ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷರಾದರು
·        ಫಾರ್ವರ್ಡ್‌ ಬ್ಲಾಕ್‌ ಎಂಬ ಹೊಸ ಪಕ್ಷ ಸ್ಥಾಪನೆ
·        ಜರ್ಮನಿಯ ಹಿಟ್ಲರ್‌ ನಿಂದ ಸಹಾಯದ ಭರವಸೆ ಪಡೆದರು
·        ಆಜಾದ್‌ ಹಿಂದ್‌ ಆಡಿಯೋ ಭಾಷಣ
·        ಐ.ಎನ್.ಎ ಮುಖಂಡತ್ವವಹಿಸಿದರು
·        ದೆಹಲಿ ಚಲೋ ಚಳುವಳಿಗೆ ಕರೆ
·        ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ ಎಂದು ಘೋಷಿಸಿದರು.
·        ಆಕಸ್ಮಿಕ ವಿಮಾನ ಅಪಘಾತದಲ್ಲಿ ಮರಣ ಹೊಂದಿದರು

35.    ತೀವ್ರವಾದಿಗಳು ಬ್ರಿಟಿಷರ ವಿರುದ್ಧ ಹೇಗೆ ಹೋರಾಟ ನಡೆಸಿದರು?
·        ಮಂದಗಾಮಿಗಳನ್ನು ರಾಜಕೀಯ ಭಿಕ್ಷುಕರೆಂದು ಕರೆದರು
·        ಪ್ರಮುಖ ತೀವ್ರಗಾಮಿ ನಾಯಕರು – ಲಾಲ, ಬಾಲ, ಪಾಲ
·        ಬಂಗಾಳದ ವಿಭಜನೆಗೆ ವಿರೋಧ
·        ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ಪಡೆದೆ ತೀರುವೆ. ಘೋಷಣೆ
·        ಪೂರ್ಣಸ್ವರಾಜ್ಯದಗುರಿ
·        ಸ್ವಾತಂತ್ರ್ಯ ಹೋರಾಟಕ್ಕಾಗಿ ಜನ ಸಾಮಾನ್ಯರ ಸಂಘಟನೆ
·        ಗಣೇಶ, ಶಿವಾಜಿ, ದುರ್ಗಾ ಉತ್ಸವಗಳ ಮೂಲಕ ಜನರಿಗೆ ಹೋರಾಟಕ್ಕೆ ಪ್ರೇರಣೆ
·        ಕೇಸರಿ ಮತ್ತು ಮರಾಠಾ ಪತ್ರಿಕೆಗಳನ್ನು ಹೊರಡಿಸಿದರು
·        ಬ್ರಿಟಿಷರಿಂದ ತಿಲಕರ ಬಂಧನ
·        ಜೈಲಿನಲ್ಲಿ ಗೀತಾ ರಹಸ್ಯ ಕೃತಿ ರಚನೆ

ಅಥವಾ
ಅಸಹಕಾರ ಚಳುವಳಿಯನ್ನು ಹೇಗೆ ಸಂಘಟಿಸಲಾಗಿತ್ತು?
·        ಶಾಲಾ ಕಾಲೇಜು ಮತ್ತು ನ್ಯಾಯಾಲಯಗಳ ಬಹಿಷ್ಕಾರ
·        ಚುನಾವಣಾ ಬಹಿಷ್ಕಾರ
·        ಬ್ರಿಟಿಷರು ನೀಡಿರುವ ಗೌರವ & ಸ್ಥಾನಗಳನ್ನು ಮರಳಿಸುವುದು
·        ಸ್ಥಳೀಯ ಸಭೆಗಳಿಗೆ ನಾಮನಿರ್ಧೇಶನಗೊಂಡ ಸದಸ್ಯರ ರಾಜೀನಾಮೆ
·        ಸರ್ಕಾರಿ ಕಾರ್ಯಕ್ರಮಗಳಿಗೆ ಬಹಿಷ್ಕಾರ
·        ವಿದೇಶಿ ವಸ್ತುಗಳ ಬಹಿಷ್ಕಾರ
·        ಕೈಮಗ್ಗ ನೇಕಾರಿಕೆಗೆ ಉತ್ತೇಜನ & ಖಾದಿ ತಯಾರಿಕೆ
·        ರಾಷ್ಟ್ರೀಯ ಶಾಲೆ ತೆರೆಯುವುದು
·        ಹಿಂದು ಮುಸ್ಲಿಂ ಐಕ್ಯತೆ ಸಾಧಿಸುವುದು
·        ಅಸ್ಪೃಷ್ಯತೆ ಹೋಗಲಾಡಿಸುವುದು
·        ಮಹಿಳಾ ಸಬಲೀಕರಣ

36.    ವಿಶ್ವ ಸಂಸ್ಥೆಯ ಸಾಧನೆಗಳನ್ನು ವಿವರಿಸಿ.
·        ಶಾಂತಿ ಸ್ಥಾಪನಾ ಕಾರ್ಯಗಳು:
1.     ಸುಯೇಜ್‌ ಕಾಲುವೆ ಬಿಕ್ಕಟ್ಟು, ಕಾಶ್ಮೀರ, ಹಂಗೇರಿ ವಿವಾದ ಪರಿಹರಿಸಲು ಪ್ರಯತ್ನ
2.    ನಿಶ್ಯಸ್ತ್ರೀಕರಣಕ್ಕೆ ಪ್ರಯತ್ನ
3.    ವಿಶ್ವ ಶಾಂತಿ ಸ್ಥಾಪನೆ
·        ಆರ್ಥಿಕ & ಹಣಕಾಸಿನ ಸಾಧನೆ:
1.     ಸಾಮಾಜಿಕ ಪ್ರಗತಿ & ಉತ್ತಮ ಜೀವನ ಮಟ್ಟಕ್ಕೆ ಯತ್ನ
2.    ಸುಂಕ & ವ್ಯಾಪಾರದ ಸಾಮಾನ್ಯ ಒಪ್ಪಂದ
3.    ವಿಶ್ವ ಬ್ಯಾಂಕ್‌ & ಐ.ಎಂ.ಎಫ್‌ ಗಳ ಸ್ಥಾಪನೆ
·        ಸಾಮಾಜಿಕ ಸಾಧನೆಗಳು:
1.     ವಿಶ್ವ ಆರೋಗ್ಯ ಸಂಸ್ಥೆ, ಯುನೆಸ್ಕೋ & ಯುನಿಸೆಫ್‌ ಗಳ ಸ್ಥಾಪನೆ
2.    1948ರಲ್ಲಿ ಮಾನವ ಹಕ್ಕುಗಳ ಘೋಷಣೆ
3.    ವರ್ಣ ಬೇಧ ನೀತಿ, ವಸಾಹತು ಶಾಹಿತ್ವ & ಸಾಮ್ರಾಜ್ಯ ಶಾಹಿತ್ವ ಇಲ್ಲದಾಗಿಸಿದೆ.

37.     ಭಾರತದಲ್ಲಿ ಅನುಸರಿಸುತ್ತಿರುವ ವಿವಿಧ ಕೃಷಿ ವಿಧಾನಗಳನ್ನು ಹೆಸರಿಸಿ.
·        ಜೀವನಾಧಾರಿತ ಬೇಸಾಯ
·        ಸಾಂದ್ರ ಬೇಸಾಯ
·        ವಾಣಿಜ್ಯ ಬೇಸಾಯ
·        ಮಿಶ್ರಣ ಬೇಸಾಯ
·        ನೆಡುತೋಪು ಬೇಸಾಯ
·        ಒಣ ಬೇಸಾಯ
·        ಆದ್ರ ಬೇಸಾಯ
·        ನೀರಾವರಿ ಬೇಸಾಯ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon