KSEEB Model Question Paper-2 With Answers Part-2 | 10th Social Science Question Paper Model Ans |

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.  8x1=8
9) ಜುನಾಘಡದ ಪ್ರಜೆಗಳು ತಮ್ಮ ನವಾಬನ ವಿರುದ್ಧ ದಂಗೆ ಎದ್ದರು. ಏಕೆ ?
ಉತ್ತರ : ಜುನಾಗಢದ ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಚಿಸಿದನು. ಆದ್ದರಿಂದ ಪ್ರಜೆಗಳು ದಂಗೆಯೆದ್ದರು.
10) 'ವೇದಗಳಿಗೆ ಮರಳಿ, ಎಂದು ಕರೆ ಕೊಟ್ಟವರು ಯಾರು?
ಉತ್ತರ : ಸ್ವಾಮಿ ದಯಾನಂದ ಸರಸ್ವತಿ.
 
11) ವಿಶ್ವಸಂಸ್ಥೆಯು ಮಾನವ ಹಕ್ಕುಗಳನ್ನು ಯಾವಾಗ ಅಳವಡಿಸಿಕೊಂಡಿತು ?
ಉತ್ತರ : ವಿಶ್ವಸಂಸ್ಥೆಯು ಮಾನವ ಹಕ್ಕುಗಳನ್ನು 1948 ಡಿಸೆಂಬರ್ 10 ರಂದು ಅಳವಡಿಸಿಕೊಂಡಿತು.
12) ಹೆಣ್ಣು ಭ್ರೂಣಹತ್ಯೆ ಎಂದರೇನು ?
ಉತ್ತರ : ಹೆಣ್ಣು ಭ್ರೂಣವನ್ನು ಬೆಳೆಯದಂತೆ ತಡೆಯುವುದು ಅಥವಾ ಕಾನೂನನ್ನು ಕಡೆಗಣಿಸಿ ಉದ್ದೇಶಪೂರ್ವಕವಾಗಿ ಗರ್ಭಪಾತ ಮಾಡುವುದು.

13) ಕಾಫಿಯ ಹೂವು ಮಳೆ ಎಂದರೇನು ?
ಉತ್ತರ : ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಕಾಫಿಯ ಹೂಮಳೆ ಎಂದು ಕರೆಯುತ್ತಾರೆ.
14) ಇಂದು ಒಳನಾಡಿನ ಜಲಸಾರಿಗೆಯ ಪಾತ್ರ ಕಡಿಮೆಯಾಗುತ್ತದೆ. ಏಕೆ ?
ಉತ್ತರ : ರಸ್ತೆ ಮತ್ತು ರೈಲು ಸಾರಿಗೆಗಳ ಪ್ರಗತಿಯಿಂದಾಗಿ ಒಳನಾಡಿನ ಜಲಸಾರಿಗೆ ಪಾತ್ರ ಕಡಿಮೆಯಾಗುತ್ತಿದೆ.

15) ವಸತಿಹೀನರಿಗೆ ವಸತಿಯನ್ನು ಒದಗಿಸಲು ಜಾರಿಗೊಳಿಸಿರುವ ಯಾವುದಾದರೂ ಎರಡು ವಸತಿ ಯೋಜನೆ ಗಳನ್ನು ಹೆಸರಿಸಿ.
ಉತ್ತರ : ಪ್ರಧಾನಮಂತ್ರಿ ಅವಾಸ್ ಯೋಜನೆ.
ಅಂಬೇಡ್ಕರ್ ವಾಲ್ಮೀಕಿ ವಸತಿ ಯೋಜನೆ.
ಆಶ್ರಯ ಯೋಜನೆ
16) 1986 ರ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಏಕೆ ಜಾರಿಗೊಳಿಸಲಾಗಿದೆ
ಉತ್ತರ : ಗ್ರಾಹಕರನ್ನು ಉತ್ಪಾದಕರ ಮತ್ತು ವ್ಯಾಪಾರಿಗಳ ಶೋಷಣೆಯಿಂದ ರಕ್ಷಿಸಲು.


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon