KSEEB Model Question Paper-2 With Answers Part-3 | 10th Social Science Question Paper Model Ans |

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.    8x2=16
17) ಬಕ್ಸರಕದನದ ಪರಿಣಾಮಗಳನ್ನು ವಿವರಿಸಿ.
ಉತ್ತರ : ಎರಡನೇ ಷಾ ಆಲಂ ಬ್ರಿಟಿಷರಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಬಿಟ್ಟುಕೊಟ್ಟನು.
ವಾರ್ಷಿಕ 26 ಲಕ್ಷ ರೂಪಾಯಿ ಪಡೆದು ಎರಡನೇ ಷಾ ಆಲಂ ಬಂಗಾಳದ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡಬೇಕಾಯಿತು.
ಔಧದ ನವಾಬ ಷುಜ-ಉದ್-ದೌಲ್ ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿ ಕೊಡಬೇಕಾಯಿತು.
ಮೀರ್ ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ, ಬಂಗಾಳದ ಮೇಲೆ ಕಂಪನಿ ಪೂರ್ಣ ಆಡಳಿತ ನಡೆಸತೊಡಗಿತು.

18) ಮೂರನೇ ಆಂಗ್ಲೋ ಮರಾಠ ಯುದ್ಧ ದ ಫಲಿತಾಂಶಗಳು ಯಾವುವು ?
ಉತ್ತರ :
* ಮರಾಠರಿಗೆ ಸೋಲಾಯಿತು
* ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿದರು
* ಬಾಜಿರಾಯನ ಗೆ ವಿಶ್ರಾಂತಿ ವೇತನ ನೀಡಿದರು
* ಶಿವಾಜಿ ವಂಶಸ್ಥ ಪ್ರತಾಪ್ ಸಿಂಹ ನನ್ನು ಸತಾರದ ರಾಜನನ್ನಾಗಿ ನೇಮಿಸಿದರು.

19) ಕೋಮುವಾದ ದೇಶದ ಐಕ್ಯತೆಗೆ ಮಾರಕ ಹೇಗೆ ?
ಉತ್ತರ :
* ಇದು ಸಾಮಾಜಿಕವಾಗಿ ಭಿನ್ನತೆ, ಅಪನಂಬಿಕೆ, ಭಯದ ವಾತಾವರಣವನ್ನು ನಿರ್ಮಿಸುತ್ತದೆ.
* ಮತೀಯ ಗುಂಪುಗಳ ಹಿತಾಸಕ್ತಿಯನ್ನು ರಾಷ್ಟ್ರದ ಹಿತಾಸಕ್ತಿಗಿಂತ ಹೆಚ್ಚು ಎಂದು ಪರಿಗಣಿಸುತ್ತದೆ.
* ಮತಿಯರಿ ಗೆ ಪೂರಕವಾಗಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ವೃದ್ಧಿಸುವ ಪ್ರಯತ್ನಗಳನ್ನು ಮತಿಯ ಶಕ್ತಿಗಳು ಮಾಡುತ್ತವೆ.
* ತಮ್ಮ ತಮ್ಮ ಧರ್ಮಗಳ ಪ್ರಚಾರ ಪಡಿಸುತ್ತವೆ ಆದರೆ ಪರ ಧರ್ಮಗಳನ್ನು ಬೇರೆ ರೀತಿಯಲ್ಲಿ ನೋಡುತ್ತವೆ.
ಅಥವಾ
ಪಂಚಶೀಲ ತತ್ವಗಳು ಭಾರತ ಮತ್ತು ಚೀನಾದ ನಡುವಿನ ಸಂಬಂಧ ವೃದ್ಧಿಗೆ ಹೇಗೆ ಸಹಾಯಕವಾಗಿವೆ ?
ಉತ್ತರ :
* ಪಂಚಶೀಲ ತತ್ವಗಳು ಮೂಲಕ ಭಾರತ ಮತ್ತು ಚೀನಾ ಈ ಕೆಳಗಿನ ಅಂಶಗಳನ್ನು ಅನುಸರಿಸುತ್ತಿವೆ.
* ಪರಸ್ಪರ ರಾಷ್ಟ್ರಗಳ ಪ್ರಾದೇಶಿಕತೆ ಮತ್ತು ಸಾರ್ವಭೌಮತೆಗೆ ಗೌರವ.
* ಪರಸ್ಪರ ಆಕ್ರಮಣ ಮಾಡದೇ ಇರುವುದು.
* ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದೇ ಇರುವುದು.
* ಪರಸ್ಪರ ಸಹಕಾರ ಮತ್ತು ಸಮಾನತೆ.
* ಶಾಂತಿಯುತ ಸಹಬಾಳ್ವೆ.

20) ಶ್ರಮ ವಿಭಜನೆಯಿಂದ ಆಗುವ ಅನುಕೂಲಗಳೇನು ?
ಉತ್ತರ :
* ವಿಶೇಷ ಪರಿಣಿತಿಗೆ ಕಾರಣವಾಗುತ್ತದೆ.
* ನಿರ್ದಿಷ್ಟ ಕ್ಷೇತ್ರದಲ್ಲಿ ಆಳವಾದ ಪರಿಣಿತಿ, ತರಬೇತಿ, ಕೌಶಲ್ಯ ಉಂಟಾಗುತ್ತದೆ.
* ವ್ಯಾಪಾರ ಮತ್ತು ವಾಣಿಜ್ಯೋದ್ಯಮ ಗಳ ವಿಸ್ತಾರವಾಗುತ್ತದೆ.
* ಆರ್ಥಿಕವಾಗಿ ಲಾಭ ಉಂಟಾಗುತ್ತದೆ.
ಅಥವಾ
ದುಂಬಿ / ಗಲಭೆಯಿಂದ ಆಗುವ ದುಷ್ಪರಿಣಾಮಗಳೇನು ?
ಉತ್ತರ
* ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗುತ್ತದೆ
* ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ.
* ಅಪಾರವಾದ ಜೀವಹಾನಿಗೆ ಕಾರಣವಾಗುತ್ತದೆ.
* ಕಾನೂನು ಹಾಗೂ ಸುವ್ಯವಸ್ಥೆಯಲ್ಲಿ ದೊಡ್ಡ ಸವಾಲಾಗುತ್ತದೆ.
* ಸಮಾಜಘಾತುಕ ಚಟುವಟಿಕೆಗಳು ಹೆಚ್ಚುತ್ತವೆ.

21) ಮಣ್ಣನ್ನು ಹೇಗೆ ಸಂರಕ್ಷಿಸಬಹುದು ?
ಉತ್ತರ :
* ಅರಣ್ಯ ಪೋಷಣೆ ಮತ್ತು ಮರು ಅರಣ್ಯಕರಣ
* ಅತಿಯಾಗಿ ಮೇಯಿಸುವುದು ನಿಯಂತ್ರಿಸುವುದು.
* ಸಮೋನ್ನತಿ ಬೇಸಾಯ.
* ಚೆಕ್ ಡ್ಯಾಮ್ ಗಳ ನಿರ್ಮಾಣ.
* ಬದುಗಳ ನಿರ್ಮಾಣ.
* ಕೊರಕಲು ನಿಯಂತ್ರಣ
* ಮೆಟ್ಟಿಲು ಪಂಕ್ತಿ ಬೇಸಾಯ.

22) ಪರ್ವತ ಕಾಡುಗಳು ಮತ್ತು ಮ್ಯಾಂಗ್ರೋ ಕಾಡುಗಳು ವ್ಯತ್ಯಾಸಗಳನ್ನು ತಿಳಿಸಿ.
ಉತ್ತರ :
ಪರ್ವತ ಕಾಡುಗಳು
* ಪರ್ವತಗಳ ಇಳಿಜಾರಿನಲ್ಲಿ ಬೆಳೆಯುತ್ತವೆ
* ಹಿಮಾಲಯ ಪರ್ವತಗಳು ಮತ್ತು ಸ್ವಲ್ಪಮಟ್ಟಿಗೆ ನೀಲಗಿರಿ ಬೆಟ್ಟಗಳಲ್ಲಿ ಕಂಡುಬರುತ್ತವೆ.
* ಪ್ರಮುಖ ಮರಗಳು ಓಕ್, ವಾಲ್ ನಟ್, ಚೆಸ್ಟ್ ನಟ್, ಫೈನ್,
ಮ್ಯಾಂಗ್ರೋವ್ ಕಾಡುಗಳು
* ಅಧಿಕ ಮಳೆ ಬೀಳುವ ಜೌಗು ಭೂಮಿ, ನದಿ ಮುಖಜ ಪ್ರದೇಶ, ಉಬ್ಬರ ವಿಳಿತ ಇರುವ ಸಮುದ್ರ ತೀರದಲ್ಲಿ ಕಂಡುಬರುತ್ತವೆ.
* ಚದುರಿದಂತೆ ಪಶ್ಚಿಮ ಕರಾವಳಿಯಲ್ಲಿ ಕಂಡುಬರುತ್ತವೆ.
* ಪ್ರಮುಖ ಮರಗಳು ಸುಂದರಿ, ಬೆತ್ತ, ಜರಿಗಿಡ, ತಾಳೆ ಮರ, ಕೆಂದಾಳೆ, ಕೇದಿಗೆ.

23.    ಅಧಿಕಾರ ವಿಕೇಂದ್ರೀಕರಣವು ಪ್ರಜಾ ಪ್ರಭುತ್ವದಲ್ಲಿ ಅಗತ್ಯವಾಗಿದೆ ಏಕೆ?
·        ಗ್ರಾಮದ ಆಡಳಿತ ಮತ್ತು ಅಭಿವೃದ್ಧಿಯ ಜವಾಬ್ಧಾರಿಯನ್ನು ಗ್ರಾಮಸ್ಥರಿಗೆ ವಹಿಸುವುದು.
·        ಅಧಿಕಾರ ಹಂಚಿಕೆಯ ಪ್ರಕ್ರಿಯೆ
·        ನಿರ್ಧಾರ ಕೈಗೊಳ್ಳುವ ಜನರ ಪಾಲುದಾರಿಕೆಯನ್ನು ಹೆಚ್ಚಿಸುವುದು
·        ತಳಮಟ್ಟದಿಂದ ಯೋಜನೆ ನಿರೂಪಿಸುವಿಕೆ ಮತ್ತು ಅಭಿವೃದ್ಧಿ ಸಾಧನೆಯ ಪ್ರಕ್ರಿಯೆ ಇದಾಗಿದೆ
·        ಎಲ್ಲ ರೀತಿಯ ಶೋಷಣೆಗಳನ್ನು ತಡೆಯುವುದು
·        ಸಹಾನುಭೂತಿ ಹಾಗೂ ಸಹಕಾರದಂತಹ ಮಾನವೀಯ ಮೌಲ್ಯಗಳ ವೃದ್ಧಿ

24.    ಭಾರತೀಯ ಅಂಚೆ ಕಛೇರಿಗಳು ಒದಗಿಸುವ ಸೇವೆಗಳಾವುವು?
·        ರಾಷ್ಟ್ರೀಯ ಉಳಿತಾಯ ಪತ್ರಗಳು
·        ಅಂಚೆ ಉಳಿತಾಯ ಖಾತೆ
·        ಕಿಸಾನ್‌ ವಿಕಾಸ್‌ ಪತ್ರ
·        ಮಾಹೆಯಾನ ತಿರು ಠೇವಣಿಗಳು
·        ಅಂಚೆ ವಿಮೆ
·        ನಿವೃತ್ತಿ ವೇತನ
·        ಹಣದ ವರ್ಗಾವಣೆ


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon