KSEEB Model Question Paper-2 With Answers Part-4 | 10th Social Science Question Paper Model Ans |

IV.     ಈ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ 3 ರಿಂದ 6 ವಾಕ್ಯಗಳಲ್ಲಿ ಉತ್ತರಿಸಿ.            9 X 3 = 27
25.    ಬ್ರಿಟಿಷ್‌ ಶಿಕ್ಷಣದಿಂದ ಭಾರತದ ಮೇಲಾದ ಪರಿಣಾಮಗಳನ್ನು ವಿವರಿಸಿ?
·        ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ರಾಷ್ಟ್ರೀಯ ದೃಷ್ಟಿಕೋನ ಬೆಳೆಸಿಕೊಳ್ಳಲು ಸಾಧ್ಯವಾಯಿತು.
·        ಸ್ಥಳೀಯ ಭಾಷೆ ಮತ್ತು ಸಾಹಿತ್ಯ ರಚನೆಗೆ ಪ್ರೋತ್ಸಾಹ
·        ವೃತ್ತ ಪತ್ರಿಕೆಗಳ ಬೆಳವಣಿಗೆ
·        ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳುವಳಿಗಳ ಹುಟ್ಟು
·        ಜೆ.ಎಸ್.ಮಿಲ್‌, ರೂಸೋ, ಮಾಂಟೆಸ್ಕೋರವರ ಚಿಂತನೆಗಳಿಂದ ಪ್ರಭಾವ
·        ವಿಶ್ವದ ಸ್ವಾತಂತ್ರ್ಯ ಚಳುವಳಿಗಳ ಪ್ರಭಾವ ಭಾರತೀಯರ ಮೇಲೆ ಉಂಟಾಯಿತು
·        ಭಾರತೀಯರು ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು ಅರಿಯಲು ಸಾಧ್ಯವಾಯಿತು.

26.    ಮೂರನೇ ಆಂಗ್ಲೋ ಮೈಸೂರು ಯುದ್ಧದ ಪರಿಣಾಮಗಳೇನು?
·        ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ
·        ಟಿಪ್ಪುವನ್ನು ಮಣಿಸಲು ಅಸಮಾನ ಷರತ್ತುಗಳು
·        ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟುಕೊಡುವುದು
·        ಮೂರು ಕೋಟಿ ರೂಪಾಯಿ ಯುದ್ಧನಷ್ಟ ಭರ್ತಿ ಮಾಡುವುದು
·        ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ಇಬ್ಬರು ಮಕ್ಕಳ ಒತ್ತೆಯಾಗಿ ಇಡುವುದು
·        ಯುದ್ಧ ಸಂದರ್ಭದಲ್ಲಿ ಸೆರೆ ಹಿಡಿದಿದ್ದ ಸೈನಿಕರ ಬಿಡುಗಡೆ
·        ಬ್ರಿಟಿಷ್‌ ಸೈನ್ಯದ ಹಿಂತೆಗೆತ

ಅಥವಾ
ಭಾರತಕ್ಕೆ ಅನಿಬೆಸೆಂಟರ ಕೊಡುಗೆಗಳೇನು?
·        ಭಗವದ್ಗೀತೆಯನ್ನು ಇಂಗ್ಲಿಷ್ ಗೆ ಅನುವಾದ ಮಾಡಿ ಶ್ವೇತ ಸರಸ್ವತಿ ಎನಿಸಿದರು
·        ಎಲ್ಲ ವರ್ಗಗಳಿಗೂ ಶಿಕ್ಷಣವನ್ನು ಪ್ರತಿಪಾದಿಸಿ ಶಾಲೆಗಳನ್ನು ತೆರೆದರು
·        ಬನಾರಸ್‌ ನಲ್ಲಿ ಹಿಂದೂ ಸೆಂಟ್ರಲ್‌ ಕಾಲೇಜು ಪ್ರಾರಂಭಿಸಿದರು
·        ನ್ಯೂ ಇಂಡಿಯಾ ಮತ್ತು ಕಾಮನ್‌ ವ್ಹೀಲ್‌ ಪತ್ರಿಕೆಗಳ ಪ್ರಾರಂಭ
·        1916ರಲ್ಲಿ ಹೋಮ್‌ ರೂಲ್‌ ಚಳುವಳಿಯ ಪ್ರಾರಂಭ
·        ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು
 
27.     1857ರ ಕ್ರಾಂತಿಗೆ ಕಾರಣವಾದ ಆರ್ಥಿಕ ಅಂಶಗಳನ್ನು ಪಟ್ಟಿಮಾಡಿರಿ.
·        ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮ
·        ಭಾರತದ ಕರಕುಶಲತೆ & ದೇಶೀಯ ಕೈಗಾರಿಕೆಗಳ ನಾಶ
·        ಭಾರತದ ಕರಕುಶಲಗಾರರು ನಿರುದ್ಯೋಗಿಗಳಾದರು
·        ಬಟ್ಟೆ & ಉಣ್ಣೆ ಕೈಗಾರಿಕೆಗಳ ಅವನತಿ
·        ಗೃಹ ಕೈಗಾರಿಕೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾದವು
·        ಭಾರತದ ವಸ್ತುಗಳ ಮೇಲೆ ದುಬಾರಿ ಸುಂಕ
·        ಜಮೀನ್ದಾರನು ರೈತರನ್ನು ಶೋಷಿಸುತ್ತಿದ್ದನು
·        ತಾಲ್ಲೂಕುದಾರರಿಗಿದ್ದ ಕಂದಾಯ ವಸೂಲಿ ಹಕ್ಕನ್ನು ಹಿಂಪಡೆಯಲಾಯಿತು
·        ಇನಾಂ ಆಯೋಗ ನೇಮಕ- ಇನಾಂ ಭೂಮಿ ವಾಪಸು ಪಡೆಯಲಾಯಿತು
·        ಕೃಷಿಕರಿಗೆ ತೀವ್ರ ಅವಮಾನ & ಆರ್ಥಿಕ ಸಂಕಷ್ಟ

28.    ಭಾರತ ಮತ್ತು ರಷ್ಯಾಗಳ ನಡುವಿನ ಸಂಬಂಧಗಳನ್ನು ವಿವರಿಸಿ.
·        ಭಾರತವು ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿದೆ
·        1962ರ ಚೈನಾ ದಾಳಿಯನ್ನು ರಷ್ಯಾ ಖಂಡಿಸಿತು
·        1961ರಲ್ಲಿ ಗೋವಾ ವಿಮೋಚನೆಯ ಸಂದರ್ಭದಲ್ಲಿ ರಷ್ಯಾ ಸಹಕರಿಸಿತು
·        1966ರಲ್ಲಿ ತಾಷ್ಕೆಂಟ್‌ ನಲ್ಲಿ ಭಾರತ – ಪಾಕಿಸ್ತಾನಗಳ ಮಧ್ಯೆ ಒಪ್ಪಂದಕ್ಕೆ ಸಹಕಾರ
·        1971ರಲ್ಲಿ ಭಾರತ & ರಷ್ಯಾಗಳು 20 ವರ್ಷಗಳ ಶಾಂತಿ, ಮೈತ್ರಿ & ಸಹಕಾರ ಒಪ್ಪಂದಕ್ಕೆ ಸಹಿ
·        ಭಾರತದ ಭಿಲೈ & ಬೊಕಾರೋ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ರಷ್ಯಾ ಸಹಕಾರ
·        ರಾಷ್ಟ್ರದ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಗೆ ನೆರವು
·        ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ನೀಡಲು ಆಗ್ರಹ

29.    ಅಸ್ಪೃಶ್ಯತೆ ನಿವಾರಣೆಗೆ ಕೈಗೊಂಡಿರುವ ಕಾನೂನು ಕ್ರಮಗಳನ್ನು ವಿವರಿಸಿ.
·        ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ನಿಷೇಧಿಸಿದೆ.
·        1955ರಲ್ಲಿ ಅಸ್ಪೃಶ್ಯತೆ ಅಪರಾಧಗಳ ಕಾಯ್ದೆ ಜಾರಿ
·        1976ರಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿ
·        ಎಲ್ಲ ನಾಗರಿಕರಿಗೆ ಸಮಾನ ಅವಕಾಶ
·        ಪ.ಜಾ, ಪ.ಪಂ & ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ & ಉದ್ಯೋಗ ಮೀಸಲಾತಿ
·        1989 ಶಾಸನದನ್ವಯ ರಾಜ್ಯ ಸರ್ಕಾರಗಳಿಗೆ ವಿಶೇಷ ಜವಾಬ್ದಾರಿ

30.    ದೇಶದ ಅಭಿವೃದ್ಧಿಯಲ್ಲಿ ಸಂಪರ್ಕದ ಪ್ರಾಮುಖ್ಯತೆಯನ್ನು ವಿವರಿಸಿ.
·        ಸರ್ಕಾರದ ನೀತಿ & ಅಭಿವೃದ್ಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಹಾಯಕ
·        ನೈಸರ್ಗಿಕ ವಿಪತ್ತು, ಹವಾಗುಣದ ಬಗ್ಗೆ ಮುನ್ನೆಚ್ಚರಿಕೆ ಸಾದ್ಯ
·        ಕೃಷಿಯ ಪ್ರಗತಿ
·        ಕೈಗಾರಿಕಾ ಪ್ರಗತಿಗೆ ಉತ್ತೇಜನ
·        ವ್ಯಾಪಾರ & ವಾಣಿಜ್ಯ ಪ್ರಗತಿ
·        ಕೈಗಾರಿಕಾ ಪ್ರಗತಿಗೆ ಉತ್ತೇಜನ
·        ಮನೋರಂಜನೆ
·        ಪ್ರಪಂಚದ ಪ್ರತಿನಿತ್ಯದ ಮಾಹಿತಿ ಒದಗಿಸುವುದು
·        ದೇಶದ ಏಕತೆ ಮತ್ತು ಸಮಗ್ರತೆ ನಿರ್ವಹಣೆ

ಅಥವಾ
ಕೈಗಾರಿಕೆಗಳು ಕೆಲವೇ ಪ್ರದೇಶಗಳಲ್ಲಿ ಸ್ಥಾನೀಕರಣಗೊಂಡಿವೆ ಏಕೆ?
·        ಕಚ್ಚಾವಸ್ತುಗಳ ಸರಬರಾಜು
·        ಶಕ್ತಿಸಂಪನ್ಮೂಲಗಳ ಪೂರೈಕೆ
·        ಸಾರಿಗೆ & ಸಂಪರ್ಕ ವ್ಯವಸ್ಥೆ
·        ಮಾರುಕಟ್ಟೆ ಸೌಲಭ್ಯ
·        ಬಂಡವಾಳ
·        ಕಾರ್ಮಿಕರು ಮತ್ತು ನೀರು ದೊರೆಯುವಿಕೆ
·        ಸೂಕ್ತವಾಯುಗುಣ
·        ಸರ್ಕಾರದ ನೀತಿಗಳು

31.     ಭೂಕಂಪಗಳಿಂದಾಗುವ ಪರಿಣಾಮಗಳನ್ನು ಹೇಗೆ ಮಿತಗೊಳಿಸಬಹುದು?
·        ಭೂಕಂಪನ ವಲಯಗಳಲ್ಲ; ಜನವಸತಿ ನಿರ್ಮಾಣ ನಿಷೇಧ
·        ಭೂಕಂಪನ ನಿರೋಧಕ ಕಟ್ಟಡಗಳ ನಿರ್ಮಾಣ
·        ಬಹುಮಹಡಿ ಕಟ್ಟಡ ನಿರ್ಮಾಣ ಕೈಬಿಡುವುದು
·        ಆಳ ಬಾವಿಗಳ ಕೊರೆತ ನಿಷೇಧ
·        ಭೂಕಂಪನ ಬೆಟ್ಟಗುಡ್ಡ ಪ್ರದೇಶಗಳಲ್ಲಿ ನಗರ ನಿರ್ಮಾಣ ನಿಷೇಧ
·        ಬಹುದೊಡ್ಡ ಅಣೆಕಟ್ಟು & ಜಲಾಶಯಗಳ ನಿರ್ಮಾಣ ನಿಷೇಧ
·        ಅರಣ್ಯ ನಾಶ & ಗಣಿಗಾರಿಕೆ ಚಟುವಟಿಕೆಗಳಿಗೆ ತಡೆ
·        ಭೂಕಂಪನ ಸಂಭವಿಸಿದಾಗ ಪರಿಹಾರ ಕಾರ್ಯ ಉದಾ: ಆಹಾರ, ವಸತಿ, ರೋಗ ನಿಯಂತ್ರಣ

32.    ಸ್ವಸಹಾಯ ಸಂಘಗಳ ಕಾರ್ಯಗಳನ್ನು ತಿಳಿಸಿ.
·        ಸಣ್ಣ ಉಳಿತಾಯ ಸಂಗ್ರಹ
·        ಉತ್ಪಾದಕ ಚಟುವಟಿಕೆಗಳು
·        ಸಾಲವಸೂಲಾತಿ
·        ಕುಡಿತ, ಜೂಜು, ವರದಕ್ಷಿಣೆ, ಬಾಲ್ಯ ವಿವಾಹಗಳ ವಿರುದ್ಧ ಸಂಘಟಿತ ಹೋರಟ
·        ಆರ್ಥಿಕ ಸ್ವಾವಲಂಬನೆ
·        ಸ್ವಚ್ಛ ಮತ್ತು ಪ್ರಗತಿಪರ ಸಮಾಜ ನಿರ್ಮಾಣ
·        ಪಂಚಾಯತ ರಾಜ್ಯ ಸಂಸ್ಥೆಗಳಲ್ಲಿ ಅವಕಾಶ

ಅಥವಾ
ಪಂಚಾಯತ್‌ ರಾಜ್‌ ವ್ಯವಸ್ಥೆಯ ಪ್ರಮುಖ ಲಕ್ಷಣಗಳನ್ನು ತಿಳಿಸಿ.
·        ಗ್ರಾಮ, ತಾಲ್ಲೂಕು & ಜಿಲ್ಲಾ ಪಂಚಾಯತಿಗಳು
·        ನೇರ & ನಿಯಮಿತ ಚುನಾವಣೆಗಳು
·        ಪ.ಜಾ, ಪ.ಪಂ, ಹಿಂದುಳಿದ ವರ್ಗ & ಮಹಿಳಾ ಮೀಸಲಾತಿ
·        ಹಣಕಾಸು & ಆಡಳಿತಾತ್ಮಕ ಜವಾಬ್ದಾರಿಗಳು
·        ಕಾರ್ಯನಿರ್ವಾಹಕ & ಇತರ ಸಿಬ್ಬಂದಿ ನೀಡಿಕೆ
·        ಪಂಚಾಯತಿ ವಿಸರ್ಜನಾ ಕ್ರಮಗಳು

33.    ಬ್ಯಾಂಕು ಖಾತೆ ತೆರೆಯುವುದರಿಂದಾಗುವ ಅನುಕೂಲತೆಗಳಾವುವು?
·        ಹಣದ ಭದ್ರತೆ ಕಾಪಾಡುತ್ತದೆ
·        ಹಣದ ಪಾವತಿಗಳನ್ನು ಮಾಡಲು ಸಹಾಯಕ
·        ಹಣ ವಸೂಲಿ ಮಾಡಲು ಸಹಾಯಕ
·        ಖಾತೆ ಹೊಂದಿದವರು ಸಾಲ ಪಡೆಯಲು ಸಹಾಯಕ
·        ವ್ಯವಹಾರ ಸುಗಮವಾಗಿ ನಡೆಯಲು ಸಹಾಯಕ
·        ಭದ್ರತಾ ಕಪಾಡುಗಳನ್ನು ಪಡೆಯಬಹುದು

ಅಥವಾ
ಬಳಕೆದಾರರ ಶೋಷನೆಗೆ ಕಾರಣಗಳಾವುವು?
·        ಮಧ್ಯವರ್ತಿಗಳ ಹಾವಳಿ
·        ಮಾರಾಟದ ವಿಧಾನದಲ್ಲಿ ಬದಲಾವಣೆ
·        ಗ್ರಾಹಕ ಮತ್ತು ಪೂರೈಕೆದಾರರ ನಡುವೆ ಅಂತರ ಹೆಚ್ಚಾಗಿರುವುದು
·        ನೇರ ವ್ಯವಹಾರವಿಲ್ಲದಿರುವುದು
·        ಮಧ್ಯವರ್ತಿಗಳಿಂದ ಬೆಲೆ ನಿರ್ಧಾರ
·        ಗ್ರಾಹಕರಿಗೆ ಕಷ್ಟ-ನಷ್ಟ


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon