ಅಭ್ಯಾಸ ಹಾಳೆ 18 |10ನೇ ತರಗತಿ ಸಮಾಜ ವಿಜ್ಞಾನ ಪ್ರಮುಖವಾದ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಪ್ರಮುಖ ಪ್ರಶ್ನೆಗಳು | ಇತಿಹಾಸದ ಪ್ರಶ್ನೆಗಳು | karntakaeducations

karntakaeducations

10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ 18

I. ಕೆಳಗಿನ ಪ್ರತಿ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಆಯ್ಕೆಗಳನ್ನು ನೀಡಲಾಗಿದ್ದು ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು ______

A) ಮಹಾತ್ಮ ಗಾಂಧೀಜಿ

B) A.O ಹ್ಯೂಮ್

C) ಬಾಲಗಂಗಾಧರ್ ತಿಲಕ್

D) ಗೋಪಾಲಕೃಷ್ಣ ಗೋಖಲೆ

ಉತ್ತರ : B) A.O ಹ್ಯೂಮ್

karntakaeducations

2) 'ಮರಾಠ' ಪತ್ರಿಕೆಯನ್ನು ಪ್ರಕಟಿಸಿದವರು __

A) ನೆಹರೂ

B) ರಾಸ್ ಬಿಹಾರಿ ಬೋಸ್

C) ಬಾಲಗಂಗಾಧರ್ ತಿಲಕ್

D) ವಿ ಡಿ ಸಾವರ್ಕರ್

ಉತ್ತರ : C) ಬಾಲಗಂಗಾಧರ್ ತಿಲಕ್

karntakaeducations

10th Social Science Questions Karnatakaeducations


3) ಮುಸ್ಲಿಂ ಲೀಗ್ __ ರಲ್ಲಿ ಹುಟ್ಟಿಕೊಂಡಿತು.

A) 1905

B) 1906

C) 1907

D) 1909

ಉತ್ತರ : B) 1906

karntakaeducations

4) ಬಂಗಾಳದ ವಿಭಜನೆ ರೂಪಿಸಿದ ವೈಸರಾಯ್ __

A) ಲಾರ್ಡ್ ಡಾಲ್ ಹೌಸಿ

B) ಲಾರ್ಡ್ ವೆಲ್ಲೆಸ್ಲಿ

C) ಲಾರ್ಡ್ ಕ್ಯಾನಿಂಗ್

D) ಲಾರ್ಡ್ ಕರ್ಜನ್

ಉತ್ತರ : D) ಲಾರ್ಡ್ ಕರ್ಜನ್

karntakaeducations

5) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ___

A) 1857

B) 1885

C) 1907

D) 1909

ಉತ್ತರ : B) 1885


6) ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು ___

A) ಮಹಾತ್ಮ ಗಾಂಧೀಜಿ

B) A O ಹ್ಯೂಮ್

C) ದಾದಾಬಾಯಿ ನವರೋಜಿ

D) ಗೋಪಾಲಕೃಷ್ಣ ಗೋಖಲೆ

ಉತ್ತರ : C) ದಾದಾಬಾಯಿ ನವರೋಜಿ


7) "ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು" ಎಂದು ಘೋಷಿಸಿದವರು.

A) ಮಹಾತ್ಮ ಗಾಂಧೀಜಿ

B) ಸುಭಾಷ್ ಚಂದ್ರ ಬೋಸ್

C) ಬಾಲಗಂಗಾಧರ್ ತಿಲಕ್

D) ಗೋಪಾಲಕೃಷ್ಣ ಗೋಖಲೆ

ಉತ್ತರ : C) ಬಾಲಗಂಗಾಧರ್ ತಿಲಕ್

karntakaeducations

II. ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1) 1857 ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದ ಅಂಶಗಳಾವುವು ?

ಉತ್ತರ :  ಸೈನಿಕರಿಗೆ 'ರಾಯಲ್ ಎನ್ಫೀಲ್ಡ್' ಎಂಬ ನವೀನ ಬಂದುಕುಗಳನ್ನು ನೀಡುತ್ತಿದ್ದರು.

ಬಂದೂಕುಗಳಿಗೆ ಉಪಯೋಗಿಸುತ್ತಿದ್ದರು ತುಪಾಕಿ ಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಹಿಂದುಗಳಿಗೆ ಹಸು ಪವಿತ್ರವಾದ ಪ್ರಾಣಿ ಯಾದರೆ, ಮುಸ್ಲಿಮರಿಗೆ ಹಂದಿಯು ನಿಷಿದ್ಧವಾಗಿತ್ತು.

ಅಂಶಗಳು ಸೈನಿಕರಿಗೆ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದವು.


2) ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಕ್ಷಣದ ಕಾರಣವೇನು ?

ಉತ್ತರ : ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ ತುಪಾಕಿ ಗಳನ್ನು ಬಳಸಲು ಆದೇಶಿಸಿದಾಗ ಇದನ್ನು ತಿರಸ್ಕರಿಸಿದ ಬ್ಯಾರಕ್ಪುರ ಸೈನಿಕರು ಮೇಲಾಧಿಕಾರಿಗಳ ವಿರುದ್ಧ ಬಂಡಾಯವೆದ್ದರು.

ಇದೇ ಸಂದರ್ಭದಲ್ಲಿ ಮಂಗಲ್ ಪಾಂಡೆ ಎಂಬ ಸೈನಿಕನು ಬ್ರಿಟಿಷ್ ಸೈನ್ಯದ ಅಧಿಕಾರಿಯೊಬ್ಬನನ್ನು ಕೊಂದನು.

ಇದು ತತಕ್ಷಣದ ಕಾರಣ.

karntakaeducations

3) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೂ ಮೊದಲು ಇದ್ದ ಸಂಘಟನೆಗಳು ಯಾವುವು ?

ಉತ್ತರ : ಹಿಂದು ಮೇಳ

ದಿ ಈಸ್ಟ್ ಇಂಡಿಯನ್ ಅಸೋಶಿಯೇಶನ್

ಪೂನಾ ಸಾರ್ವಜನಿಕ ಸಭಾ ಮತ್ತು

ಇಂಡಿಯನ್ ಅಸೋಸಿಯೇಷನ್ ಮುಂತಾದವು.


4) ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ವಿವರಿಸಿ.

ಉತ್ತರ : ಸಂಪತ್ತಿನ ಸೋರಿಕೆ ಸಿದ್ಧಾಂತ ವನ್ನು ದಾದಾಬಾಯಿ ನವರೋಜಿಯವರ ಮಂಡಿಸಿದರು.

ಆಮದನ್ನು ಹೆಚ್ಚಿಸಿ ರಫ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ ದೇಶದ ಸಂಪತ್ತು ಹರಿಯಲು ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಬ್ರಿಟಿಷ್ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ನಿಗೆ ಪರೋಕ್ಷವಾಗಿ ಹರಿದುಹೋಗುತ್ತಿತ್ತು ಎಂಬುದನ್ನು ವಿವರವಾಗಿ ವಿಶ್ಲೇಷಿಸಿ ಜನರ ಮುಂದಿಟ್ಟರು.

karntakaeducations

5) ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕ್ರಾಂತಿಕಾರಿಗಳನ್ನು ಹೆಸರಿಸಿ.

ಉತ್ತರ : ವಿ ಡಿ ಸಾವರ್ಕರ್

ಅರಬಿಂದೋ ಘೋಷ್

ಅಶ್ವಿನಿ ಕುಮಾರ್ ದತ್ತ

ರಾಜನಾರಾಯಣ ಬೋಸ್

ರಾಜಗುರು

ಚಾಕ್ಸಿ ಕರ್ ಸಹೋದರರು

ವಿಷ್ಣುಶಾಸ್ತ್ರಿ

ಚಂಪುಕರ್

ಶ್ಯಾಮ್ ಜಿ ಕೃಷ್ಣವರ್ಮ

ರಾಸ್ ಬಿಹಾರಿ ಬೋಸ್

ಮೇಡಂ ಕಾಮಾ

ಖುದಿರಾಮ್ ಬೋಸ್

ರಾಮ್ ಪ್ರಸಾದ್ ಬಿಸ್ಮಿಲ್ಲಾ

ಭಗತ್ ಸಿಂಗ್

ಚಂದ್ರಶೇಖರ್ ಆಜಾದ್

ಜತಿನ್ ದಾಸ್

karntakaeducations

6) ಬಂಗಾಳದ ವಿಭಜನೆ ಯನ್ನು ಹಿಂಪಡೆಯಲು ಕಾರಣವೇನು ?

ಉತ್ತರ : ಬಂಗಾಳದ ವಿಭಜನೆ ಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿರೋಧಿಸಿತು.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಸಾಧಿಸಲು ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಂಗಾಳ ವಿಭಜನೆ ವಿರುದ್ಧ ದೇಶ್ಯಾದ್ಯಂತ ಪ್ರತಿರೋಧಗಳು ವ್ಯಕ್ತವಾದವು.

ಸ್ವದೇಶಿ ಆಂದೋಲನಕ್ಕೆ ಕರೆ ನೀಡಿದರು.

ಭಾರತೀಯರ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಬಂಗಾಳದ ವಿಭಜನೆಯನ್ನು 1911 ರಲ್ಲಿ ಬ್ರಿಟಿಷ್ ಸರ್ಕಾರವು ಹಿಂಪಡೆಯಿತು.

karntakaeducations

III. ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1) ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಯಿಂದಾದ ಪರಿಣಾಮಗಳಾವುವು ? ವಿಶ್ಲೇಷಿಸಿ

ಉತ್ತರ: ಬ್ರಿಟಿಷರು ಜಾರಿಗೆ ತಂದಿದದದತ್ತು ಮಕ್ಕಳಿಗೆ ಹಕ್ಕಿಲ್ಲಎಂಬ ನೀತಿಯಿಂದಾಗಿ ಹಲವು ದೇಶೀ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು.

ನೀತಿಯಿಂದಾಗಿ ಸತಾರ, ಜೈಪುರ, ಝಾನ್ಸಿ, ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು.

ಇವುಗಳು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದ ಉಂಟಾದ ಪರಿಣಾಮಳು

karntakaeducations

2. 1857 ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ವಿವರಿಸಿ.

ಉತ್ತರ: ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಭಾರತದ ಕರಕುಶಲತೆ ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು.

ಇಂಗ್ಲೇಂಡ್ ಕೇವಲ ವ್ಯಾಪಾರಿ ರಾಷ್ಟ್ರವಾಗಿರದೆ ಕೈಗಾರಿಕೆಗಳ ಕಾರ್ಯಾಗಾರವಾಯಿತು.

ಭಾರತದಲ್ಲಿದ್ದ ಕರಕುಶಲಗಾರರು ನಿರುದ್ಯೋಗಿಗಳಾದರು.

ವಿಶೇಷವಾಗಿ ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು.

ಗೃಹಕೈಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕ ನಷ್ಟ ಅನುಭವಿಸಿ ಶಿಥಿಲಗೊಂಡವು.

ಭಾರತದ ವಸ್ತುಗಳನ್ನು ಇಂಗ್ಲೆಂಡ್ನಲ್ಲಿ ಮಾರಲು ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು.

ಜಮೀನ್ದಾರಿ ಪದ್ಧತಿಯಿಂದಾಗಿ ಸರ್ಕಾರ ಮತ್ತು ರೈತನ ಮದ್ಯೆ ಇದ್ದ ಮಧ್ಯವರ್ತಿ ಜಮೀನ್ದಾರರು ಕೃಷಿಕರನ್ನು ಶೋಷಿಸುತ್ತಿದ್ದರು.

ಕಂದಾಯ ವಸೂಲಿ ಮಾಡಲು ತಾಲ್ಲೂಕುದಾರರಗೆ ನೀಡಿದ್ದ ಹಕ್ಕುಗಳನ್ನು ಹಿಂಪಡಯಲಾಯಿತು.

ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು.

ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ ಮತ್ತು ಆರ್ಥಿಕ ಸಂಕಷ್ಟ ಅನುಭವಿಸಿದರು.

ಎಲ್ಲಾ ಆರ್ಥಿಕ ಬದಲಾವಣೆಗಳು 1857 ದಂಗೆಗೆ ಕಾರಣವಾದವು.

 karntakaeducations

3. 1857 ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿ.

ಉತ್ತರ: ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ.

ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ರಾಜರ/ರಾಣಿಯರ ಸ್ವಹಿತಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು.

ಇದು ಯೋಜಿತ ದಂಗೆಯಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು.

ಬ್ರಿಟಿಷ್ ಸೈನಿಕರಲ್ಲಿನ ಒಗ್ಗಟ್ಟು ಮತ್ತು ಭಾರತೀಯ ಸೈನಿಕರಲ್ಲಿದ್ದ ಭಿನ್ನತೆಯು ದಂಗೆಯ ವಿಫಲತೆಗೆ ಕಾರಣವಾಗಿದೆ.

ದಂಗೆಗೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು.

ಭಾರತೀಯರಲ್ಲಿ ಯುದ್ಧ ತಂತ್ರ ಸೈನಿಕ ಪರಿಣತಿ, ಸೂಕ್ತ ಸೇನಾ ನಾಯಕತ್ವ ಮತ್ತು ಶಿಸ್ತು ಮುಂತಾದವುಗಳ ಕೊರತೆ ಇತ್ತು.

ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ.

ಹಲವಾರು ದೇಶೀಯ ಸಂಸ್ಥಾನಗಳ ರಾಜರು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ.

ಸಿಪಾಯಿಗಳು ಮಾಡಿದಂತಹ ಲೂಟಿ, ದರೋಡೆ ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು.

ಎಲ್ಲಾ ಕಾರಣಗಳಿಂದಾಗಿ 1857 ದಂಗೆಯು ವಿಫಲತೆ ಹೊಂದಿತು.

karntakaeducations

4. 1857ರ ದಂಗೆಯ ಪರಿಣಾಮಗಳನ್ನು ಪಟ್ಟಿಮಾಡಿ.

ಉತ್ತರ : 1857ರ ದಂಗೆಯ ಪರಿಣಾಮಗಳು ಈ ರೀತಿಯಾಗಿವೆ.

ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಬ್ರಿಟನ್ ಸಾಮ್ರಾಜ್ಞಿಗೆ ಆಡಳಿತವು ವರ್ಗಾವಣೆಗೊಂಡಿತು.

ಭಾರತದ ವ್ಯವಹಾರವು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಒಪ್ಪಿಸಲಾಯಿತು.

1858ರಲ್ಲಿ ಬ್ರಿಟನ್ ರಾಣಿಯು ಒಂದು ಘೋಷಣೆ ಹೊರಡಿಸಿದರು.

 karntakaeducations

5. ‘1858ರ ಬ್ರಿಟಿನ್ ರಾಣಿಯ ಘೋಷಣೆ’ಯಲ್ಲಿದ್ದ ಅಂಶಗಳಾವುವು?

ಉತ್ತರ: 1858ರಲ್ಲಿ ಬ್ರಿಟನ್ ರಾಣಿಯು ಒಂದು ಘೋಷಣೆ ಹೊರಡಿಸಿದರು.

ಅದರಲ್ಲಿ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು.

1.ಕಂಪನಿಯು ದೇಶೀ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಳನ್ನು ಅಂಗೀಕರಿಸಲಾಯಿತು.

2. ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು.

3. ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು.

4. ಕಾನೂನಿನ ಮುಂದೆ ಸಮಾನತೆ.

5. ಧಾರ್ಮಿಕ ಸಹಿಷ್ಣುತೆಯೊಂದಿಗೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

 karntakaeducations

6. 1857ರ ದಂಗೆಯ ಕಾರಣಗಳನ್ನು ಪಟ್ಟಿಮಾಡಿ. ಒಂದನ್ನು ವಿವರಿಸಿ.

ಉತ್ತರ: 1857ರ ದಂಗೆಗೆ ಕಾರಣಗಳು:

1. ರಾಜಕೀಯ ಕಾರಣಗಳು

2. ಆರ್ಥಿಕ ಕಾರಣಗಳು

3. ಆಡಳಿತಾತ್ಮಕ ಕಾರಣಗಳು

4. ಸೈನಿಕ ಕಾರಣಗಳು

5. ತಕ್ಷಣದ ಕಾರಣಗಳು. : ಇಂಗ್ಲಿಷ್ ಸೇನೆಯಲ್ಲಿದ್ದ ಹೆಚಿನ ಪ್ರಮಾಣದ ಭಾರತೀಯ ಸಿಪಾಯಿಗಳು ತಾವೆಲ್ಲರೂ ಒಂದಾಗಿ ಹೋರಾಡಿದರೆ ಇಂಗ್ಲೀಷರನ್ನು ಭಾರತದಿಂದ ಓಡಿಸಬಹುದು ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದರು.

ಈ ಸನ್ನಿವೇಶದಲ್ಲಿ ಸೈನಿಕರಿಗೆ ‘ರಾಯಲ್ ಎನ್‍ಫೀಲ್ಡ್ ಎಂಬ ನವೀನ ಬಂದೂಕುಗಳನ್ನು ನೀಡುತ್ತಿದ್ದರು.

ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು.

ಹಿಂದುಗಳಿಗೆ ಹಸು ಪವಿತ್ರವಾದರೆ, ಮುಸ್ಲಿಮರಿಗೆ ಹಂದಿಯು ನಿಷಿದ್ಧವಾಗಿತ್ತು.

ಈ ವದಂತಿಯು ದಂಗೆಗೆ ತಕ್ಷಣದ ಕಾರಣವಾಯಿತು.

karntakaeducations

7. ಮಂದಗಾಮಿಗಳೆಂದರೇನು ? ಅವರ ಪ್ರಮುಖ ಬೇಡಿಕೆಗಳೇನು ?

ಉತ್ತರ : ಮಂದಗಾಮಿಗಳು ಬ್ರಿಟಿಷ್ ಆಳ್ವಿಕೆ ಮತ್ತು ನ್ಯಾಯಪರತೆಯಲ್ಲಿ ನಂಬಿಕೆ ಇಟ್ಟಿದ್ದರು.

ಸಾಂವಿಧಾನಿಕ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನವಿಗಳ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದ್ದರು.

ಮಂದಗಾಮಿಗಳು ಜನರಲ್ಲಿ ರಾಜಕೀಯ ಎಚ್ಚರವನ್ನು ತರುವ ಪ್ರಯತ್ನ ಮಾಡಿದರು.

ಇವರು ಬಾರತೀಯರಿಗೆ ಸಲ್ಲಬೇಕಾದ ನ್ಯಾಯವನ್ನು ಕುರಿತು ಸಭೆಗಳನ್ನು ನಡೆಸಿ, ಚರ್ಚಿಸಿ, ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದರು.

ದೇಶದ ಕೈಗಾರಿಗೆಗಳ ಅಭಿವೃದ್ಧಿ, ಸೈನಿಕ ವೆಚ್ಚ ಕಡಿಮೆ ಮಾಡುವುದು, ಉತ್ತಮ ಶಿಕ್ಷಣ ಕೊಡುವುದು, ಬಡತನದ ಬಗ್ಗೆ ಅಧ್ಯಯನ ಮತ್ತು ಪರಿಹಾರ ಕಾರ್ಯಕ್ರಮಗಳನ್ನು ಬ್ರಿಟಿಷ್ ಸರ್ಕಾರ ಕೈಗೊಳ್ಳಬೇಕೆಂದು ಒತ್ತಾಯಿಸುವುದು ಇವೇ ಮೊದಲಾದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

karntakaeducations

8. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ

ಉತ್ತರ:  ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘೋಷಿಸುವ ಮೂಲಕ ಬಹುಸಂಖ್ಯಾತ ಭಾರತೀಯರ ಮನದಾಳದ ಭಾವನೆಯನ್ನು ಹೊರಹಾಕಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸುವ ಪ್ರಯತ್ನ ಮಾಡಿದರು.

ಧಾರ್ಮಿಕ ಆಚರಣೆಗಳ ಮೂಲಕ ಜನರನ್ನು ಸಂಘಟಿಸಿ ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಸಜ್ಜುಗೊಳಿಸಿದರು.

ಗಣೇಶ, ಶಿವಾಜಿ, ದುರ್ಗಾ ಮುಂತಾದ ಉತ್ಸವಗಳ ಮೂಲಕ ಜನರನ್ನು ಹೋರಾಟಕ್ಕೆ ಪ್ರೇರೇಪಿಸಿದರು.

ಮರಾಠಿ ಭಾಷೆಯಲ್ಲಿ ಕೇಸರಿ ಮತ್ತು

ಇಂಗ್ಲೀಷ್ ಭಾಷೆಯಲ್ಲಿ ಮರಾಠ ಪತ್ರಿಕೆಗಳನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಬಳಸಿಕೊಂಡರು.

ಈ ಪತ್ರಿಕೆಗಳ ಮೂಲಕ ಜನಸಾಮಾನ್ಯರನ್ನು ರಾಷ್ಟ್ರೀಯ ಹೋರಾಟಕ್ಕೆ ಪ್ರೇರೇಪಿಸಿದರು.

karntakaeducations

9. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ವಿವರಿಸಿ.

ಉತ್ತರ : ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು,

ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಮಾತ್ರ ಭಾರತದಿಮದ ಓಡಿಸಬಹುದೆಂದು ಅವರು ಬಲವಾಗಿ ನಂಬಿದ್ದರು.

ಇವರುಗಳು ರಹಸ್ಯ ಸಂಘಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಹಣಕಾಸು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಕಾರ್ಯದೊಂದಿಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡಿದರು.

ಇಂಗ್ಲೆಂಡಿನ್ಲಿ `ಲೋಟಸ್’ ಮತ್ತು `ಡಾಗರ್’ ಎನ್ನುವ ಗುಪ್ತ ಸಂಘಟನೆ ಹುಟ್ಟಿತು.

ಅದರ ಮೂಲಕ ಅಲ್ಲಿದ್ದ ಅರಬಿಂದೋ ಘೋಷ್ ಮುಂತಾದ ಕ್ರಾಂತಿಕಾರಿಗಳು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಒತ್ತಾಸೆಯನ್ನು ನೀಡಿದರು.

ಹಾಗೆಯೇ ಅಮೆರಿಕದಲ್ಲಿ ಪ್ರಾರಂಭವಾದ `ಗದ’ ಕ್ರಾಂತಿಕಾರಿ ಸಂಘಟನೆಯನ್ನು ಹೆಸರಿಸಬಹುದು.

ಹಾಗೆಯೇ ಭಾರತದಲ್ಲಿದ್ದ `ಅನುಶೀಲನ ಸಮಿತಿ’ ಮತ್ತು `ಅಭಿನವ ಭಾರತ’ ರಹಸ್ಯ ಸಂಘಟನೆಗಳು ಮುಖ್ಯವಾದವು.

ಇವರು ತಮ್ಮ ಗುರಿ ಸಾಧನೆಗಾಗಿ ಬಾಂಬುಗಳು ಮತ್ತು ಬಂದೂಕುಗಳ ಪ್ರಯೋಗ ಮಾಡಿದರು.

ಕ್ರಾಂತಿಕಾರಿಗಳು ಬ್ರಿಟಿಷ್ ಆಡಳಿತ ವ್ಯವಸ್ಥೆಗೆ ಧಕ್ಕೆ ತರುವ ಮೂಲಕ ತ್ವರಿತಾವಗಿ ಸ್ವಾತಂತ್ರ್ಯವನ್ನು ತಂದು ಕೊಡುವ ಅವರ ತೀವ್ರವಾದ ಕನಸು ನನಸಾಗಲಿಲ್ಲ.

ಆದಾಗ್ಯೂ ರಾಷ್ಟ್ರೀಯ ಆಂದೋಲನಕ್ಕೆ ಅವರು ಸ್ಪೂರ್ತಿಯ ಚಿಲುಮೆಯಾಗಿದ್ದರು.


*****

KarnatakaEducations
ಅಭ್ಯಾಸ ಹಾಳೆ 18 |10ನೇ ತರಗತಿ ಸಮಾಜ ವಿಜ್ಞಾನ ಪ್ರಮುಖವಾದ ಪ್ರಶ್ನೆಗಳು | ಸ್ಪರ್ದಾತ್ಮಕ ಪರೀಕ್ಷೆಗಾಗಿ ಪ್ರಮುಖ ಪ್ರಶ್ನೆಗಳು | ಇತಿಹಾಸದ ಪ್ರಶ್ನೆಗಳು | 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon