Posts

Showing posts from June, 2021

Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ ಕ್ರಿಯಾ ಯೋಜನೆ

Image
ಆತ್ಮೀಯ ಶಿಕ್ಷಕರೇ 2021-22 ನೇ ಸಾಲಿನ ಶೈಕ್ಷಣಿಕ ವರ್ಷವು ಕೋವಿಡ್ 19 ಕಾರಣದಿಂದಾಗಿ ಸರಿಯಾದ ಕ್ರಮದಲ್ಲಿ ಪ್ರಾರಂಭವಾಗಿಲ್ಲ. ಆದರೇ ವಿದ್ಯಾರ್ಥಿಗಳು ಕಲಿಕೆಯಿಂದ ಹೊರಗಡೆ ಉಳಿಯಬಾರದು ಮತ್ತು ಅವರಿಗೆ ಕಲಿಕೆಯು ಆಕರ್ಷಕವಾಗಿ ಇರುವಂತೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು. " ಇಂದಿನ ವಿದ್ಯಾರ್ಥಿಗಳೇ ನಾಳಿನ ಸತ್ಪ್ರಜೆಗಳು" ಹಾಗಾಗಿ ನಾವುಗಳು ಅವರ ಉತ್ತಮ ಭವಿಷ ರೂಪಿಸುವ ಪ್ರಯತ್ನ ಮಾಡಬೇಕಾಗಿರುವುದು ಬಹಳ ಅವಶಕವಾಗಿರುವಂತಹದು. ಈ ಎಲ್ಲಾ ಅಂಶಗಳ ಹಿನ್ನೇಲೆಯಲ್ಲಿ ಈ ವರ್ಷದ ಶೈಕ್ಷಣಿಕ ವರ್ಷ ಬೇರೆ ರೀತಿಯಲ್ಲಿ ರೂಪಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ  ಕ್ರಿಯಾ ಯೋಜನೆ ಎನ್ನುವ ಟೈಟಲ್ ನಲ್ಲಿ ವಿದ್ಯಾರ್ಥಿಗಳಿಗೆ ಸರ್ವೋತ್ತೋಮುಖ ಬೆಳವಣಿಗೆ ಮತ್ತು ಕಲಿಕೆಗಾಗಿ ಮಾಡುವ ಪ್ರಯತ್ನದ ಕ್ರಿಯಾ ಯೋಜನೆ ಇದು ಆಗಿದ್ದು. ನಿಮಗೆ ಅನುಕೂಲವಾಗಿದ್ದಲ್ಲಿ ನಿಮ್ಮ ಶಾಲೆಗಳಲ್ಲಿಯು ಸಹ ಇದನ್ನು ನಿಮ್ಮ ಪರಿಸರಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. SSLC English MCQ ಈ ವರ್ಷಕ್ಕಾಗಿ ರಚಿಸಿರುವ ಮಾದರಿ ಕ್ರಿಯಾ ಯೋಜನೆ: Action Plan for Alternative Educational Plan 2021-22  2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ  ಕ್ರಿಯಾ ಯೋಜನೆ ಶಾಲೆಯ ಹೆಸರು: ...

ಭಾರತದ ವಿದೇಶಾಂಗ ನೀತಿ MCQ 12 SSLC Social Science MCQ

Image
10ನೇ ತರಗತಿಯ ಸಮಾಜ ವಿಜ್ಞಾನದಲ್ಲಿ 6 ವಿಭಾಗಗಳು ಇರುವುದು ಅವುಗಳೆಂದರೆ ಇತಿಹಾಸ, ಭೂಗೋಳ ವಿಜ್ಞಾನ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಇದರಲ್ಲಿ ರಾಜ್ಯಶಾಸ್ತ್ರದಲ್ಲಿ ಬರುವ 2ನೇ ಅಧ್ಯಾಯ ಭಾರತದ ವಿದೇಶಾಂಗ ನೀತಿ MCQ 12 ಭಾಗ ಇದು ಆಗಿರುವುದು ಇದು SSLC Social Science MCQ ಪ್ರಶ್ನೋತ್ತರ ಸರಣಿಯ 12ನೇ ಭಾಗವಾಗಿದ್ದು ಇದರಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಪರೀಕ್ಷಾ ದೃಷ್ಟಿಯಿಂದ ಸಿದ್ದಪಡಿಸಲಾಗಿದೆ. I. ಈ ಕೆಳಗಿನ ಬಹು ಆಯ್ಕೆಗಳ ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಇವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 1) ಭಾರತದ ವಿದೇಶಾಂಗ ನೀತಿಯ ರೂಪುರೇಷೆಗಳ ಬಗ್ಗೆ ಜವಾಹರಲಾಲ್ ನೆಹರು ಅವರು ರೇಡಿಯೋ ಭಾಷಣ ಮಾಡಿದ ದಿನಾಂಕ ಮತ್ತು ವರ್ಷ. A) ಅಕ್ಟೋಬರ್ 7, 1948 B) ಸೆಪ್ಟೆಂಬರ್ 7, 1946 C) ಆಗಸ್ಟ್ 15, 1947 D) ನವೆಂಬರ್ 1, 1950 ಉತ್ತರ : B) ಸೆಪ್ಟೆಂಬರ್ 7, 1946 2) ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು. A) ಜಾಗತೀಕರಣ B) ಔದ್ಯಮಿ ಕರಣ C) ಉದಾರಿಕರಣ D) ನಿಶಸ್ತ್ರೀಕರಣ ಉತ್ತರ : D) ನಿಶಸ್ತ್ರೀಕರಣ 3) ಭಾರತದ ವಿದೇಶಾಂಗ ನೀತಿಯ ಬಗ್ಗೆ ವಿವರಣೆ ನೀಡುವ ಸಂವಿಧಾನದ ವಿಧಿ. A) 51 B) 55 C) 58 D) 50 ಉತ್ತರ : A) 51 4) ನಮ್ಮ ದೇಶದ ವಿದೇಶಾಂಗ ನೀತಿಯ ವಿ...

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು SSLC Social Science MCQ-11

Image
ಆತ್ಮಿಯರೆ, 10ನೇ ತರಗತಿ ಸಮಾಜ ವಿಜ್ಞಾನದ ಇತಿಹಾಸ ವಿಭಾಗದಲ್ಲಿ ಬರುವ 5 ನೇ ಅಧ್ಯಾಯ  ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು ಈ ಅಧ್ಯಾಯದಲ್ಲಿ 2021ರ 10ನೇ ತರಗತಿಯ ಪರೀಕ್ಷಾ ದೃಷ್ಟಿಯಿಂದ ಬರುವ  SSLC Social Science MCQ-11 ಪ್ರಶ್ನೋತ್ತರಗಳನ್ನು ಸಿದ್ದಪಡಿಸಲಾಗಿದೆ. ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು ಅಧ್ಯಾಯದಲ್ಲಿ ಬರುವ ಈ ಪ್ರಶ್ನೆಗಳು ಕೇವಲ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿರುವುದರ ಜೋತೆಗೆ ಸ್ಪರ್ದಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುತ್ತಿರುವ ಎಲ್ಲಾ ಸ್ಪಾರ್ದಾ ಮಿತ್ರರಿಗೂ ಸಹ ಉಪಯೋಗಕಾರಿಯಾಗಿರುವ ಪ್ರಶ್ನೆಗಳಾಗಿವೆ. 10ನೇ ತರಗತಿಯ ಇತಿಹಾಸದಲ್ಲಿಯ 5ನೇ ಅಧ್ಯಾಯ ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳು SSLC Social Science MCQ-11 ಇದರಲ್ಲಿಯ ಪ್ರಮುಖ ಪ್ರಶ್ನೆಗಳು ಈ ರೀತಿಯಾಗಿವೆ. ಕೊಟ್ಟಿರುವ ಹೇಳಿಕೆಗಳಿಗೆ ಕೆಳಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ . ಸರಿಯಾದದ್ದು ಆರಿಸಿ ಬರೆಯಿರಿ . 1) " ಸತಿ ಪದ್ಧತಿ ನಿಷೇಧ ಕಾಯ್ದೆ " ಜಾರಿಗೆ ಬಂದ ವರ್ಷ ಇದಾಗಿದೆ . A) ಸಾ . ಶ . 1828 B) ಸಾ . ಶ . 1829 C) ಸಾ . ಶ . 1830 D) ಸಾ . ಶ . 1875 ಉತ್ತರ : B) ಸಾ . ಶ . 1829 2) " ಗೋ ರಕ್ಷಣಾ ಸಂಘ " ವನ್ನು ಈ ಸಮಾಜ ಸುಧಾರಕರು ಆರಂಭಿಸಿದರು . A) ರಾಜಾರಾಮ್ ಮೋಹನ್ ರಾಯ್ B) ದಯಾನಂದ ಸರಸ್ವತಿ C) ...

Middle Adds

amezon