Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ ಕ್ರಿಯಾ ಯೋಜನೆ

Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ  ಕ್ರಿಯಾ ಯೋಜನೆ
ಆತ್ಮೀಯ ಶಿಕ್ಷಕರೇ 2021-22 ನೇ ಸಾಲಿನ ಶೈಕ್ಷಣಿಕ ವರ್ಷವು ಕೋವಿಡ್ 19 ಕಾರಣದಿಂದಾಗಿ ಸರಿಯಾದ ಕ್ರಮದಲ್ಲಿ ಪ್ರಾರಂಭವಾಗಿಲ್ಲ. ಆದರೇ ವಿದ್ಯಾರ್ಥಿಗಳು ಕಲಿಕೆಯಿಂದ ಹೊರಗಡೆ ಉಳಿಯಬಾರದು ಮತ್ತು ಅವರಿಗೆ ಕಲಿಕೆಯು ಆಕರ್ಷಕವಾಗಿ ಇರುವಂತೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು. " ಇಂದಿನ ವಿದ್ಯಾರ್ಥಿಗಳೇ ನಾಳಿನ ಸತ್ಪ್ರಜೆಗಳು" ಹಾಗಾಗಿ ನಾವುಗಳು ಅವರ ಉತ್ತಮ ಭವಿಷ ರೂಪಿಸುವ ಪ್ರಯತ್ನ ಮಾಡಬೇಕಾಗಿರುವುದು ಬಹಳ ಅವಶಕವಾಗಿರುವಂತಹದು.

ಈ ಎಲ್ಲಾ ಅಂಶಗಳ ಹಿನ್ನೇಲೆಯಲ್ಲಿ ಈ ವರ್ಷದ ಶೈಕ್ಷಣಿಕ ವರ್ಷ ಬೇರೆ ರೀತಿಯಲ್ಲಿ ರೂಪಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ  ಕ್ರಿಯಾ ಯೋಜನೆ ಎನ್ನುವ ಟೈಟಲ್ ನಲ್ಲಿ ವಿದ್ಯಾರ್ಥಿಗಳಿಗೆ ಸರ್ವೋತ್ತೋಮುಖ ಬೆಳವಣಿಗೆ ಮತ್ತು ಕಲಿಕೆಗಾಗಿ ಮಾಡುವ ಪ್ರಯತ್ನದ ಕ್ರಿಯಾ ಯೋಜನೆ ಇದು ಆಗಿದ್ದು. ನಿಮಗೆ ಅನುಕೂಲವಾಗಿದ್ದಲ್ಲಿ ನಿಮ್ಮ ಶಾಲೆಗಳಲ್ಲಿಯು ಸಹ ಇದನ್ನು ನಿಮ್ಮ ಪರಿಸರಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ವರ್ಷಕ್ಕಾಗಿ ರಚಿಸಿರುವ ಮಾದರಿ ಕ್ರಿಯಾ ಯೋಜನೆ:
Action Plan for Alternative Educational Plan 2021-22 
2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ  ಕ್ರಿಯಾ ಯೋಜನೆ
ಶಾಲೆಯ ಹೆಸರು:
ವಿಳಾಸ: 
ತಾಲ್ಲೂಕು: 
ಜಿಲ್ಲೆ:

ಯೋಜನೆ - 1 ರ ನಮೂನೆ
(ಯಾವುದೇ ಮೊಬೈಲ್ ಸಂಪರ್ಕ, ದೂರದರ್ಶನ ಚಂದನವಾಹಿನಿ ಲಭ್ಯತೆ ಇಲ್ಲದಿರುವ ವಿದ್ಯಾರ್ಥಿಗಳಿಗಾಗಿ ಕಾರ್ಯತಂತ್ರ)

ವಿದ್ಯಾರ್ಥಿಗಳ ಹೆಸರು:
1)
2)
3)
4)
5) ...........

ಯೋಜನೆ-1ರ ವಿದ್ಯಾರ್ಥಿಗಳಿಗೆ ರೂಪಿಸಿರುವ ಕಾರ್ಯತಂತ್ರಗಳು: 

* ವಿದ್ಯಾರ್ಥಿಯ ನೆರೆಮನೆಯಲ್ಲಿ ಸಮ್ಮತಿ ಮೇರೆಗೆ ದೂರದರ್ಶನ ಪಾಠಗಳನ್ನು ವೀಕ್ಷಿಸಲು ಪೋಷಕರಿಗೆ ಅರಿವು ಮೂಡಿಸುವುದು. 
* ವಿದ್ಯಾರ್ಥಿಯ ಮನೆಯವರು ಅಥವಾ ಅವರ ಸಂಬಂಧಿಕರು ಸಾಧ್ಯವಿದ್ದಲ್ಲಿ ಇವರ ಕಲಿಕೆಯ ಸಮಯಕ್ಕೆ ಮೊಬೈಲ ಒದಗಿಸಲು ಕೋರುವುದು.
ವಿದ್ಯಾರ್ಥಿಗೆ ನೆರವಾಗುವ ನೆರೆಯ ವಿದ್ಯಾವಂತ ಯುವಕರ ಸಹಾಯ ಪಡೆಯುವುದು.
ವಿದ್ಯಾರ್ಥಿಯ ಪಕ್ಕದ ಮನೆಯವರ ಸ್ಮಾರ್ಟ್ ಫೋನ್ ಗೆ ದೂರದರ್ಶನ ಪಾಠಗಳನ್ನು ಡೌನ್ಲೋಡ್ ಮಾಡಿ ವೀಕ್ಷಿಸಲು ತಿಳಿಸುವುದು.
ರೇಡಿಯೋ ಲಭ್ಯವಿದ್ದಲ್ಲಿ ಎಫ್.ಎಮ್.ಮೂಲಕ ಪ್ರಸಾರವಾಗುವ ರೇಡಿಯೋ ಪಾಠಗಳನ್ನು ಕೇಳಲು ಮಾರ್ಗದರ್ಶನ ನೀಡುವುದು.
ಮಗುವಿನ ಪಾಲಕರನ್ನು ಖುದ್ದಾಗಿ ಸಂಪರ್ಕಿಸಿ ಕಲಿಕಾ ಯೋಜನೆಯ ಬಗ್ಗೆ ಪಾಲಕರಿಗೆ ತಿಳುವಳಿಕೆ ನೀಡುವುದು.
ನಿರ್ದಿಷ್ಟ ದಿನದಂದು (ವಾರದಲ್ಲಿ ಎರಡು ದಿನ) (ಸರ್ಕಾರದ/ಇಲಾಖೆಯ ಅನುಮತಿ ಇದ್ದಲ್ಲಿ) ಕೋವಿಡ್-19 ರ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಶಾಲೆಗೆ ಕರೆಸಿ ಕಲಿಕಾ ಸುಧಾರಣೆಗಾಗಿ ಕ್ರಮ ಕೈಗೊಳ್ಳುವುದು. 
ಉದಾ: ಅಭ್ಯಾಸ ಹಾಳೆ, ಯೋಜನಾ ಕಾರ್ಯ, ನಿಯೋಜಿತ ಕಾರ್ಯ ಇತ್ಯಾದಿ. ಒದಗಿಸುವುದು.
ಮಗುವಿನ ಕೃತಿ ಸಂಪುಟ ನಿರ್ವಹಿಸಿ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಮಾಡುವುದು.
ಇಂತಹ ಮಗುವಿನ ನಿರಂತರ ಕಲಿಕೆಗಾಗಿ ಹಾಕಿಕೊಂಡ ಇನ್ನಿತರ ವಿನೂತನ ಕಾರ್ಯತಂತ್ರಗಳು. ಆಯಾ ವಿದ್ಯಾರ್ಥಿಗೆ ಪ್ರತ್ಯೇಕವಾಗಿ ಲಭ್ಯವಿದ್ದಲ್ಲಿ ಬಳಸಿಕೊಳ್ಳುವುದು.

ಯೋಜನೆ- 2

( ಮೊಬೈಲ್ ಸಂಪರ್ಕ, ದೂರದರ್ಶನ ಚಂದನವಾಹಿನಿ ಲಭ್ಯತೆ ಇರುವ ವಿದ್ಯಾರ್ಥಿಗಳಿಗಾಗಿ ಕಾರ್ಯತಂತ್ರ)

ವಿದ್ಯಾರ್ಥಿಗಳ ಹೆಸರು:

1)
2)
3)
4)
5) ...........

ನಮೂನೆ 2 A

(ದೂರದರ್ಶನ ಚಂದನವಾಹಿನಿ ಲಭ್ಯತೆ ಮಾತ್ರ ಇರುವ ವಿದ್ಯಾರ್ಥಿಗಳಿಗಾಗಿ ಕಾರ್ಯತಂತ್ರ)


* ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾಗುವ ವೀಡಿಯೋ ಪಾಠಗಳನ್ನು ವೀಕ್ಷಿಸಲು ವಿದ್ಯಾರ್ಥಿಗೆ ತಿಳಿಸಿ ಮಾರ್ಗದರ್ಶನ ನೀಡುವುದು.
ವೀಡಿಯೋ ಪಾಠಗಳಿಗೆ ಪೂರಕವಾಗಿ ಅಭ್ಯಾಸ ಹಾಳೆಗಳನ್ನು ತಯಾರಿಸಿ ವಿದ್ಯಾರ್ಥಿಯ ಕಲಿಕೆಯ ಮೌಲ್ಯಮಾಪನ ಮಾಡುವುದು.
ಕೃತಿ ಸಂಪುಟ ರಚಿಸಿ ನಿರ್ವಹಿಸಿವುದು.
ವಿದ್ಯಾರ್ಥಿಯ ನೆರೆಯವರ ಮೊಬೈಲ್ ನಂಬರ್ ಪಡೆದು ನಿರಂತರ ಕಲಿಕೆಯ ಸುಧಾರಣೆಗೆ ಕ್ರಮ ವಹಿಸುವುದು.
ಮಗುವಿನ ಪಾಲಕರನ್ನು ಖುದ್ದಾಗಿ ಸಂಪರ್ಕಿಸಿ ಕಲಿಕಾ ಯೋಜನೆಯ ಬಗ್ಗೆ ಪಾಲಕರಿಗೆ ತಿಳುವಳಿಕೆ ನೀಡುವುದು.
ನಿರ್ದಿಷ್ಟ ದಿನದಂದು (ವಾರದಲ್ಲಿ ಎರಡು ದಿನ) (ಸರ್ಕಾರದ/ಇಲಾಖೆಯ ಅನುಮತಿ ಇದ್ದಲ್ಲಿ) ಕೋವಿಡ್-19 ರ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಶಾಲೆಗೆ ಕರೆಸಿ ಕಲಿಕಾ ಸುಧಾರಣೆಗಾಗಿ ಕ್ರಮ ಕೈಗೊಳ್ಳುವುದು. 
ಉದಾ: ಅಭ್ಯಾಸ ಹಾಳೆ, ಯೋಜನಾ ಕಾರ್ಯ, ನಿಯೋಜಿತ ಕಾರ್ಯ ಇತ್ಯಾದಿ. ಒದಗಿಸಿಕೊಡುವುದು.
ವಿದ್ಯಾರ್ಥಿಗೆ ಕಲಿಕಾ ಹಿಮ್ಮಾಹಿತಿ ನೀಡುವುದು.
ಅಭ್ಯಾಸ ಹಾಳೆ, ಯೋಜನಾ ಕಾರ್ಯ, ನಿಯೋಜಿತ ಕಾರ್ಯ ನೀಡಿ ಶಾಲೆಯಲ್ಲಿ ಸಂಗ್ರಹಿಸಿ ಇಡುವುದು.
ಯೋಜನೆ-1 ರ ಕಾರ್ಯತಂತ್ರಗಳನ್ನು ಹಮ್ಮಿಕೊಳ್ಳುವುದು.
ಇಂತಹ ಮಗುವಿನ ನಿರಂತರ ಕಲಿಕೆಗಾಗಿ ಹಾಕಿಕೊಂಡ ಇನ್ನಿತರ ವಿನೂತನ ಕಾರ್ಯತಂತ್ರಗಳು. ಆಯಾ ವಿದ್ಯಾರ್ಥಿಗೆ ಪ್ರತ್ಯೇಕವಾಗಿ ಲಭ್ಯವಿದ್ದಲ್ಲಿ ಬಳಸಿಕೊಳ್ಳುವುದು.

ಯೋಜನೆ- 2

( ಮೊಬೈಲ್ ಸಂಪರ್ಕ, ದೂರದರ್ಶನ ಚಂದನವಾಹಿನಿ ಲಭ್ಯತೆ ಇಲ್ಲದಿರುವ ವಿದ್ಯಾರ್ಥಿಗಳಿಗಾಗಿ ಕಾರ್ಯತಂತ್ರ)

ವಿದ್ಯಾರ್ಥಿಗಳ ಹೆಸರು:

1)
2)
3)
4)
5) ...........

ನಮೂನೆ 2 B

(ಕೀ ಪ್ಯಾಡ್ ಮೊಬೈಲ್ ಸಂಪರ್ಕ ಮಾತ್ರ ಇರುವ ವಿದ್ಯಾರ್ಥಿಗಳಿಗಾಗಿ ಕಾರ್ಯತಂತ್ರ)
ರೇಡಿಯೋ ಲಭ್ಯತಿ ಇದೆ/ಇಲ್ಲ ಎನ್ನುವುದನ್ನು ಗುರುತಿಸಿ ಅದನ್ನು ಬಳಸಿಕೊಳ್ಳುವಂತೆ ಮಾಡುವುದು.
ರೇಡಿಯೋ ಲಭ್ಯವಿದ್ದಲ್ಲಿ ಎಫ್.ಎಮ್. ಮೂಲಕ ಪ್ರಸಾರವಾಗು ರೇಡಿಯೋ ಪಾಠಗಳನ್ನು ಕೇಳಲು ಮಾರ್ಗದರ್ಶನ ನೀಡುವುದು.
* ಕೀ ಪ್ಯಾಡ್ ಮೋಬೈಲ್ ನಲ್ಲಿ FM ರೇಡಿಯೋ ಲಭ್ಯವಿದ್ದಲ್ಲಿ ಅದನ್ನು ಬಳಸುವಂತೆ ಮಾಡುವುದು.
ಶಿಕ್ಷಕರು ದೂರವಾಣಿ ಕರೆ ಮಾಡುವ ಮೂಲಕ ಕಲಿಕಾಂಶಗಳನ್ನು ಮಕ್ಕಳಿಗೆ ವಿವರಿಸುವುದು.
ವಿದ್ಯಾರ್ಥಿಯ ಕಲಿಕಾ ಪ್ರಗತಿಯ ಬಗ್ಗೆ ಶಿಕ್ಷಕರು ದೂರವಾಣಿ ಕರೆ ಮಾಡುವ ಮೂಲಕ ವಿಚಾರಿಸುವುದು.
ವಿದ್ಯಾರ್ಥಿಯ ಪ್ರಗತಿಯನ್ನು ಕೃತಿ ಸಂಪುಟದಲ್ಲಿ ನಿರ್ವಹಣೆ ಮಾಡುವುದು.
ಕೃತಿ ಸಂಪುಟದ ಆಧಾರದ ಮೇಲೆ ವಿದ್ಯಾರ್ಥಿಯ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಮಾಡುವುದು.
ವಿದ್ಯಾರ್ಥಿಗೆ ಕಲಿಕಾ ಹಿಮ್ಮಾಹಿತಿ ನೀಡುವುದು.
ಅಭ್ಯಾಸ ಹಾಳೆ, ಯೋಜನಾ ಕಾರ್ಯ, ನಿಯೋಜಿತ ಕಾರ್ಯ ನೀಡಿ ಶಾಲೆಯಲ್ಲಿ ಸಂಗ್ರಹಿಸುವುದು.
ಯೋಜನೆ-1 ರ ಕಾರ್ಯತಂತ್ರಗಳನ್ನು ಹಮ್ಮಿಕೊಳ್ಳುವುದು.
ಇಂತಹ ಮಗುವಿನ ನಿರಂತರ ಕಲಿಕೆಗಾಗಿ ಹಾಕಿಕೊಂಡ ಇನ್ನಿತರ ವಿನೂತನ ಕಾರ್ಯತಂತ್ರಗಳು. ಆಯಾ ವಿದ್ಯಾರ್ಥಿಗೆ ಪ್ರತ್ಯೇಕವಾಗಿ ಲಭ್ಯವಿದ್ದಲ್ಲಿ ಬಳಸಿಕೊಳ್ಳುವುದು.

ಯೋಜನೆ- 2

(ಮೊಬೈಲ್ ಸಂಪರ್ಕ, ದೂರದರ್ಶನ ಚಂದನವಾಹಿನಿ ಲಭ್ಯತೆ ಇಲ್ಲದಿರುವ ವಿದ್ಯಾರ್ಥಿಗಳಿಗಾಗಿ ಕಾರ್ಯತಂತ್ರ)

ವಿದ್ಯಾರ್ಥಿಗಳ ಹೆಸರು:

1)
2)
3)
4)
5) ...........

 ನಮೂನೆ 2 C

(ಇಂಟರ್ನೆಟ್ ಸೌಲಭ್ಯದೊಂದಿಗೆ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಸೌಲಭ್ಯವಿರುವ ವಿದ್ಯರ್ಥಿಗಳಿಗಾಗಿ ಕಾರ್ಯತಂತ್ರ)

ಇಂಟರ್ನೆಟ್ ಸಹಿತ ಸ್ಮಾರ್ಟ್ ಫೋನ್ ಲಭ್ಯತೆ ಇದೆ/ಇಲ್ಲ. ಎನ್ನುವುದನ್ನು ಗುರಿತಿಸಿ ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಡುವುದು.
ಲ್ಯಾಪ್ ಟಾಪ್ ಇದೆ/ಇಲ್ಲ. ಎನ್ನುವುದನ್ನು ಗುರಿತಿಸಿ ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಡುವುದು.
ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾಗುವ ಸಂವೇದ ವೀಡಿಯೋ ಪಾಠಗಳನ್ನು ವೀಕ್ಷಿಸಿ ಕಲಿಕೆಯಲ್ಲಿ ತೊಡಗಲು ಮಾರ್ಗದರ್ಶನ ಮಾಡುವುದು.
FM ಮೂಲಕ ಪ್ರಸಾರವಾಗುವ ರೇಡಿಯೋ ಪಾಠಗಳನ್ನು ಕೇಳಲು ಮಾರ್ಗದರ್ಶನ ನೀಡುವುದು.
ದಿಕ್ಷಾ App ನಲ್ಲಿರುವ ಕಂಟೆಂಟ್ ಗಳನ್ನು ಡೌನ್ಲೋಡ್ ಮಾಡಿಕೊಂಡು ಕಲಿಯಲು ಸಹಾಯಕವಾಗುವಂತೆ ವಿದ್ಯರ್ಥಿ/ಪೋಷಕರಿಗೆ ಸಹಕರಿಸುವುದು.
* ಯೂಟ್ಯೂಬ್ ಚಾನಲ್ ನಲ್ಲಿರುವ ವೀಡಿಯೋ ಪಾಠಗಳನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.
ಕ್ಯೂ ಆರ್ ಕೋಡ್ ಹೊಂದಿರುವ ಮೌಲ್ಯವರ್ಧಿತ ಪಠ್ಯಗಳನ್ನು ಬಳಸಲು ಮಗುವಿಗೆ/ಪೋಷಕರಿಗೆ ತಿಳಿಸುವುದು.
ಶಿಕ್ಷಕರು ತಮ್ಮ ಬೋಧನಾ ವಿಷಯಕ್ಕೆ ಸಂಬಂಧಿಸಿದ ಚಿಕ್ಕ ವೀಡಿಯೋಗಳನ್ನು ಮಾಡಿ ಮಗು/ಪೋಷಕರೊಂದಿಗೆ ಹಂಚಿಕೊಂಡು ಮಗು ವೀಕ್ಷಿಸಲು ಕ್ರಮ ವಹಿಸುವುದು.
ಅಭ್ಯಾಸ ಹಾಳೆಗಳನ್ನು ಮೊಬೈಲ್ ಗೆ ಕಳಿಸಿ ಅದರ ಉತ್ತರ ಪ್ರತಿ ಪಡೆಯುವುದು.
ಕೃತಿ ಸಂಪುಟದ ಆಧಾರದ ಮೇಲೆ ವಿದ್ಯಾರ್ಥಿಯ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಮಾಡುವುದು.
ಪೋಷಕರೊಂದಿಗೆ  ವಿದ್ಯಾರ್ಥಿಯ ಕಲಿಕಾ ಪ್ರಗತಿಯನ್ನು ಚರ್ಚಿಸಿ ಹಿಮ್ಮಾಹಿತಿ ನೀಡುವುದು.
ಅಭ್ಯಾಸ ಹಾಳೆ, ಯೋಜನಾ ಕಾರ್ಯ, ನಿಯೋಜಿತ ಕಾರ್ಯ ನೀಡಿ ಶಾಲೆಯಲ್ಲಿ ಸಂಗ್ರಹಿಸಿ ಕೃತಿ ಸಂಪುಟ ನಿರ್ವಹಿಸುವುದು.
ಯೋಜನೆ-1 ರ ಕಾರ್ಯತಂತ್ರಗಳನ್ನು`ಹಮ್ಮಿಕೊಳ್ಳುವುದು.
ಇಂತಹ ಮಗುವಿನ ನಿರಂತರ ಕಲಿಕೆಗಾಗಿ ಹಾಕಿಕೊಂಡ ಇನ್ನಿತರ ವಿನೂತನ ಕಾರ್ಯತಂತ್ರಗಳು. ಆಯಾ ವಿದ್ಯಾರ್ಥಿಗೆ ಪ್ರತ್ಯೇಕವಾಗಿ ಲಭ್ಯವಿದ್ದಲ್ಲಿ ಬಳಸಿಕೊಳ್ಳುವುದು.
ಇವುಗಳನ್ನು ವಿಶೇಷವಾಗಿ ನಿರ್ವಹಿಸುವುದರ ಜೋತೆಗೆ, ಪ್ರತಿ ವರ್ಷ ನಿರ್ವಹಿಸುತ್ತಿರುವ  ಇತರ ಎಲ್ಲಾ ಯೋಜನೆಗಳನ್ನು ರೂಪಿಸಿಕೊಂಡು ಸಿದ್ದಪಡಿಸುಕೊಳ್ಳುವುದು.

ಈ ರೀತಿಯಾಗಿ ನಿರ್ವಹಣೆ ಮಾಡುವುದಕ್ಕಾಗಿ Action Plan for Alternative Educational Plan 2021-22 | 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಯೋಜನೆಯ  ಕ್ರಿಯಾ ಯೋಜನೆ ಯನ್ನು ಮಾದರಿಯಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon