10th Social Science 156 IMP MCQ Questions For SSLC-2021 Exam | Part-5- 101 to 125

10th Social Science 156 IMP MCQ Questions For SSLC-2021 Exam | Part-5- 101 to 125

101. ಭಾರತದ _____ ಸ್ಥಳದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ.
 ಮಾಸಿನ್‍ರಾಮ್
102. ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶವು _____ ನಲ್ಲಿ ದಾಖಲಾಗುತ್ತದೆ.
 ಡ್ರಾಸ್
103. ಭಾರತದ ____ ತಿಂಗಳು ಅತ್ಯಂತ ಶೀತವಾದದು. 
 ಜನೆವರಿÀ
104. ನದಿಗಳ ಸಂಚಯದಿಂದ ನಿರ್ಮಾಣಗೊಂಡ ಮಣ್ಣಿಗೆ _____ ಎನ್ನುವರು.
 ಮೆಕ್ಕಳು ಮಣ್ಣು.
105. ಕಪ್ಪು ಮಣ್ಣನ್ನು ____ ಮತ್ತು _____ ಎಂತಲೂ ಕರೆಯಲಾಗಿದೆ.
 ರೀಗರ ಮಣ್ಣು & ಕಪ್ಪು ಹತ್ತಿ ಮಣ್ಣು
106. ಅತ್ಯಧಿಕ ಉಷ್ಣಾಂಶ ಮತ್ತು ಮಳೆಯ ಪರಿಸ್ಥಿತಿಯುಳ್ಳ ಉಷ್ಣವಲಯದಲ್ಲಿ ಉತ್ಪತ್ತಿಯಾಗುವ ಮಣ್ಣು _____ ಆಗಿರುತ್ತದೆ.
 ಲ್ಯಾಟರೈಟ್
107. ಪರ್ವತ ಮಣ್ಣು _____ ಬೆಳೆಗಳ ಬೇಸಾಯಕ್ಕೆ ಸೂಕ್ತವಾದುದು. 
 ನೆಡು ತೋಟದ
108. ವರ್ಷದ ಯಾವುದೇ ಕಾಲದಲ್ಲೂ ____ ಅರಣ್ಯಗಳು ಎಲೆ ಉದುರಿಸುವುದಿಲ್ಲ. 
 ಉಷ್ಣವಲಯದ ನಿತ್ಯ ಹರಿದ್ವರ್ಣದ
109. ಮಾನ್ಸೂನ್ ಕಾಡುಗಳು _____ ಅರಣ್ಯಗಳೆಂತಲೂ ಕರೆಯಲಾಗಿದೆ.
 ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
110. ಹಿಮಾಲಯ ಪರ್ವತಗಳಲ್ಲಿ ____ ವಿಧದ ಅರಣ್ಯಗಳಿವೆ.
 ಅಲ್ಫೈನ್
111. ಹೆಚ್ಚಾಗಿ ನದಿಮುಖಜ ಭೂಮಿಗಳಲ್ಲಿ _____ ಅರಣ್ಯಗಳು ಕಂಡುಬರುತ್ತವೆ.
 ಮ್ಯಾಂಗ್ರೋವ್
112. ನಾಗಾರ್ಜುನ ಸಾಗರ ವನ್ಯಜೀವಿಧಾಮವು _____ ರಾಜ್ಯದಲ್ಲಿದೆ.
 ತೆಲಂಗಾಣ
113. ಸಿಂಧೂ ನದಿಯು _____ ಬಳಿ ಉಗಮವಾಗುತ್ತದೆ.
 ಕೈಲಾಸ ಪರ್ವತದ
114. ದಕ್ಷಿಣ ಭಾರತದಲ್ಲೇ ಉದ್ದವಾದ ನದಿ ____ ಆಗಿರುತ್ತದೆ.
 ಗೋದಾವರಿ
115. ಹಿರಾಕೂಡ್ ಆಣೆಕಟ್ಟೆಯನ್ನು ____ ನದಿಗೆ ನಿರ್ಮಿಸಲಾಗಿದೆ.
 ಮಹಾನದಿ
116. ಗಂಗಾ ನದಿಗೆ ಬಂದು ಸೇರುವ _____ ನದಿಯು ಉದ್ದವಾದ ಉಪನದಿ.
 ಯಮುನಾ
117. ಕೋಸಿ ಯೋಜನೆಯು _____ ಮತ್ತು _____ ದೇಶಗಳ ಸಂಯುಕ್ತ ಯೋಜನೆಯಾಗಿದೆ.
 ಭಾರತ & ನೇಪಾಳ
118. ಸಾಗುವಳಿಗೆ ಬಳಕೆಯಾಗದ ಭೂಮಿಯನ್ನು _____ ಎಂದು ಕರೆಯಲಾಗಿದೆ.
 ಪಾಳು ಭೂಮಿ
119. ಬೆಳೆ ಮತ್ತು ಪಶುಪಾಲನೆಗಳೆರಡನ್ನೂ ಒಳಗೊಂಡ ಕೃಷಿ ಪದ್ಧತಿಗೆ _____ ಎಂದು ಕರೆಯಲಾಗಿದೆ.
 ಮಿಶ್ರ ಬೇಸಾಯ
120. ಮುಂಗಾರು ಮತ್ತು ಹಿಂಗಾರು ಬೆಳೆ ಬೆಳೆಯುವ ಅವಧಿಗಳ ನಡುವಣ ಅವಧಿಯಲ್ಲಿ ಬೆಳೆಯುವ ಬೆಳೆಗಳಿಗೆ _____ ಎನ್ನುವರು.
 ಜ್ಯಾಡ್ 
121. ಭಾರತದಲ್ಲಿ ____ ರಾಜ್ಯವು ಅತಿ ಹೆಚ್ಚು ಭತ್ತ ಉತ್ಪಾದಿಸುತ್ತದೆ.
 ಪಶ್ಚಿಮ ಬಂಗಾಳ
122. ಭಾರತದ ಹಳ್ಳಿಗಳು ಮತ್ತು ಕೃಷಿ ಅಭಿವೃದ್ಧಿಗೆ _____ ಸಾರಿಗೆ ಮಾಧ್ಯಮ ಅತ್ಯಾವಶಕವಾದುದು.
 ರಸ್ತೆಗಳು.
123. ಭಾರತದಲ್ಲಿ ಮೊಟ್ಟಮೊದಲಿಗೆ ರೈಲುಮಾರ್ಗವನ್ನು _____ ಮತ್ತು _____ ಗಳ ನಡುವೆ ನಿರ್ಮಿಸಲಾಯಿತು.
 ಬಾಂಬೆ & ಥಾಣೆ.
124. ಭಾರತದ ಹೆಬ್ಬಾಗಿಲು ಎಂದು ______ ಬಂದರನ್ನು ಕರೆಯಲಾಗಿದೆ.
 ಮುಂಬೈ ಬಂದರು.
125. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ _______ ಎಂದು ಹೆಸರು ಕೊಡಲಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon