Samajika Samassegalu MCQ | SSLC Social Science Chapter 4 MCQ

10th Social Science Sociology Chapter 4 Samajika Samassegalu MCQ

ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ:

1) ಇಂದು ಜಗತ್ತಿನ ಶಸ್ತ್ತಾಸ್ತ್ರಗಳ ಕಳ್ಳ ಸಾಗಾಣಿಕೆ ನಂತರ ಎರಡನೇ ಅತ್ಯಂತ ದೊಡ್ಡ ಕಾನೂನು ಬಾಹಿರ ವ್ಯವಹಾರ ಎಂದರೆ
A) ಚಿನ್ನದ ಕಳ್ಳಸಾಗಣೆ
B) ಮಾದಕ ವಸ್ತು ಕಳ್ಳಸಾಗಣೆ
C) ಲ್ಯಾಂಡ್ ಮಾಫಿಯಾ
D) ಮಾನವ ಕಳ್ಳ ಸಾಗಾಣಿಕೆ

ಉತ್ತರ : D) ಮಾನವ ಕಳ್ಳ ಸಾಗಾಣಿಕೆ

2) ಮಕ್ಕಳ ಸಹಾಯವಾಣಿ ಸಂಖ್ಯೆ ____
A) 1088
B) 1010
C) 1099
D) 1098

ಉತ್ತರ : D) 1098

3) ಬಾಲಿಕಾ ಸಂಘದಲ್ಲಿ ಸಂಘಟಿಸಲಾಗಿರುವ ಹುಡುಗಿಯರ ವಯೋಮಾನ ____
A) 10 ರಿಂದ 15 ವರ್ಷ
B) 11 ರಿಂದ 18 ವರ್ಷ
C) 13 ರಿಂದ 18 ವರ್ಷ
D) 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು

ಉತ್ತರ : B) 11 ರಿಂದ 18 ವರ್ಷ

4) ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಭಾರತದಲ್ಲಿ ದಿನಕ್ಕೆ ಒಬ್ಬ ವ್ಯಕ್ತಿಗೆ ಬೇಕಾಗಿರುವ ಕನಿಷ್ಠ ಸರಾಸರಿ ಕ್ಯಾಲೋರಿ ಆಹಾರ ____
A) 1530 ಕ್ಯಾಲೋರಿ
B) 1950 ಕ್ಯಾಲೋರಿ
C) 1820 ಕ್ಯಾಲೋರಿ
D) 1420 ಕ್ಯಾಲೋರಿ

ಉತ್ತರ : C) 1820 ಕ್ಯಾಲೋರಿ

5) ಭಾರತದಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ಬಂದ ದಿನಾಂಕ
A) ಜೂನ್ 19, 2012
B) ಜೂಲೈ 19, 2013
C) ಜನೆವರಿ 19, 2013
D) ಜನೆವರಿ 19, 2012

ಉತ್ತರ : A) ಜೂನ್ 19, 2012

6) ಬಾಲ ಕಾರ್ಮಿಕರು ಎಂದರೆ
A) 16 ವರ್ಷದ ಒಳಗಿನವರು
B) 18 ವರ್ಷದೊಳಗಿನವರು
C) 14 ವರ್ಷದೊಳಗಿನವರು
D) 12 ವರ್ಷದೊಳಗಿನವರು

ಉತ್ತರ : C) 14 ವರ್ಷದೊಳಗಿನವರು

7) ಕಾಣದ ಹಸಿವು ಎಂದರೆ ____
A) ಪೋಷಣೆ
B) ಅಪೌಷ್ಟಿಕತೆ
C) ಶ್ರೀಮಂತ ಜನರಲ್ಲಿ ಹಸಿವು
D) ಸಮತೋಲಿತ ಆಹಾರ

ಉತ್ತರ : B) ಅಪೌಷ್ಟಿಕತೆ

8) ಬಾಲಕಾರ್ಮಿಕ, ಹದಿಹರೆಯದವರ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ ____
A) 1986
B) 1955
C) 1990
D) 2002

ಉತ್ತರ : A) 1986

9) ಕಾನೂನು ಪ್ರಕಾರ ಮದುವೆಯಾಗುವ ಹೆಣ್ಣು ಮತ್ತು ಗಂಡಿಗೆ ಪೂರ್ಣಗೊಂಡಿರಬೇಕಾದ ಕನಿಷ್ಠ ವಯಸ್ಸು ____
A) 17-21
B) 20-18
C) 21-18
D) 18-21

ಉತ್ತರ : D) 18-21

10) ಅಮರ್ತ್ಯ ಸೇನ್ ಗುರುತಿಸಿರುವ ಮಹಿಳೆ ಮತ್ತು ಪುರುಷರ ನಡುವೆ ಇರುವ ಸ್ಥೂಲವಾದ ಅಸಮಾನತೆಯೆಂದರೆ ____
A) ಜನನ ಪ್ರಮಾಣದಲ್ಲಿ ಅಸಮಾನತೆ
B) ಮೂಲಸೌಕರ್ಯಗಳಲ್ಲಿ ಅಸಮಾನತೆ
C) ಒಡೆತನದ ಅಸಮಾನತೆ
D) ಮೇಲಿನ ಎಲ್ಲವೂ

ಉತ್ತರ : D) ಮೇಲಿನ ಎಲ್ಲವೂ

11) ಬಾಲಕಾರ್ಮಿಕ, ಹದಿಹರೆಯದವರ ದುಡಿಮ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ-1986, 2016ರ ತಿದ್ದುಪಡಿಯಂತೆ, 14 ವರ್ಷದೊಳಗಿನ ಮಕ್ಕಳನ್ನು ಶಾಲಾ ಅವಧಿಯಲ್ಲಿ ತಮ್ಮ ಸ್ವಂತ ಹೊಲಗದ್ದೆ, ವ್ಯಾಪಾರ ಇತ್ಯಾದಿಗಳಲ್ಲಿ ಕೆಲಸಕ್ಕೆ ಇಟ್ಟುಕೊಂಡರೆ ಪೋಷಕರಿಗೆ ವಿಧಿಸಲಾಗುವ ದಂಡ ರೂ.
A) 10,000
B) 20,000
C) 30,000
D) 50,000

ಉತ್ತರ : A) 10,000

12) ಬಾಲಕಾರ್ಮಿಕ, ಹದಿಹರೆಯದವರ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ತಿದ್ದುಪಡಿಯಾದ ವರ್ಷ ____
A) 2010
B) 2016
C) 1986
D) 1985

ಉತ್ತರ : B) 2016

13) ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಲಿಂಗಾನುಪಾತ
A) 1000/935
B) 1000/855
C) 1000/940
D) 1000/915

ಉತ್ತರ : C) 1000/940

14) ಒಂದು ಕಾರ್ಖಾನೆಯ ಮಾಲೀಕ 12 ವರ್ಷದ ಬಾಲಕನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾನೆ ಆ ಮಾಲಿಕನಿಗೆ ನೀಡಬಹುದಾದ ಶಿಕ್ಷೆ
A) ಒಂದು ವರ್ಷ ಜೈಲು 20 ಸಾವಿರ ದಂಡ
B) ಎರಡು ವರ್ಷ ಜೈಲು 10 ಸಾವಿರ ದಂಡ
C) ಒಂದು ವರ್ಷ ಜೈಲು 50 ಸಾವಿರ ದಂಡ
D) ಎರಡು ವರ್ಷ ಜೈಲು 50 ಸಾವಿರ ದಂಡ

ಉತ್ತರ : D) ಎರಡು ವರ್ಷ ಜೈಲು 50 ಸಾವಿರ ದಂಡ
Thank you for reading 10th Social Science Sociology Chapter 4 Samajika Samassegalu MCQ article also read more article are here:

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon