Swatantryottara Bharata MCQ | SSLC History Chpater 9 Multiple Choice Questions

Swatantryottara Bharata MCQ | SSLC History Chpater 9 Multiple Choice Questions
10ನೇ ತರಗತೀಯ ಸಮಾಜ ವಿಜ್ಞಾನವು 6 ವಿಭಾಗಗಳನ್ನು ಒಳಗೊಂಡಿದ್ದು. ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳ ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಇದರಲ್ಲಿ ಇತಿಹಾಸ ವಿಭಾಗದಲ್ಲಿ ಒಂಬತ್ತನೇಯ ಅಧ್ಯಾಯ ಸ್ವಾತಂತ್ರ್ಯೋತ್ತರ ಭಾರತ Swatantryottara Bharata MCQ ಗೆ ಸಂಬಂಧಿಸಿದಂತೆ SSLC ಪರೀಕ್ಷೆಗಾಗಿ ಕೇಳಬಹುದಾಗಿರುವ ಬಹು ಆಯ್ಕೆ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಈ ರೀತಿಯಾಗಿವೆ.
ಇತರ ಎಲ್ಲಾ ವಿಷಯಗಳ ಬಹು ಆಯ್ಕೆಗಳ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ:

1) ಭಾರತದ ಉಕ್ಕಿನ ಮನುಷ್ಯ ಎಂದು ಸರ್ದಾರ್ ವಲ್ಲಭ್ ಬಾಯಿ ಪಟೇಲರನ್ನು ಕರೆಯಲು ಕಾರಣವೇನು?

A) ಭಾರತದ ಮೊದಲ ಗೃಹಮಂತ್ರಿಗಳಾಗಿದ್ದರಿಂದ

B) ಸ್ವಾತಂತ್ರ್ಯ ಹೋರಾಟಗಾರರು

C) ಸಂಸ್ಥಾನಗಳನ್ನು ಒಂದುಗೂಡಿಸಿದರು

D) ಗಾಂಧೀಜಿಯವರ ಪ್ರೀತಿ ಪಾತ್ರರಾಗಿದ್ದರು

ಉತ್ತರ : C) ಸಂಸ್ಥಾನಗಳನ್ನು ಒಂದುಗೂಡಿಸಿದರು

2) ಇಡೀ ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದರೆ ಗಾಂಧೀಜಿಯವರು ಎಲ್ಲಿ ಇದ್ದರು.

A) ಲಾಹೋರ್ ನಲ್ಲಿ

B) ನೌಕಾಲಿಯಲ್ಲಿ

C) ದೆಹಲಿಯಲ್ಲಿ

D) ಅಮೃತಸರದಲ್ಲಿ

ಉತ್ತರ : B) ನೌಕಾಲಿಯಲ್ಲಿ

3) ಬಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರು ಬಂಗಾಳದಲ್ಲಿ ಮಾತ್ರ ನೆಲೆಯೂರಿದರು ಏಕೆಂದರೆ?

A) ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು

B) ಅಲ್ಲಿ ಬಹುಸಂಖ್ಯಾತರು ಮುಸ್ಲಿಮರಾಗಿದ್ದರು

C) ಬಂಗಾಳ ಅತ್ಯಂತ ವಿಶಾಲ ರಾಜ್ಯವಾಗಿತ್ತು

D) ಬಂಗಾಳವು ಬಾಂಗ್ಲಾದೇಶದ ಸಮೀಪದಲ್ಲಿತ್ತು.

ಉತ್ತರ : A) ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು

4) ದೇಶೀಯ ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ತೀವ್ರ ಪ್ರತಿರೋಧ ತೋರಿದ ಸಂಸ್ಥಾನಗಳೆಂದರೆ.

A) ಮೈಸೂರು, ಜುನಾಗಡ, ಹೈದರಾಬಾದ್

B) ಹೈದರಾಬಾದ್, ಜುನಾಗಡ, ಜಮ್ಮು-ಕಾಶ್ಮೀರ

C) ಜಮ್ಮು, ಕಾಶ್ಮೀರ, ಹೈದರಾಬಾದ್

D) ಜುನಾಗಡ, ಮೈಸೂರು, ಜಮ್ಮು-ಕಾಶ್ಮೀರ

ಉತ್ತರ : B) ಹೈದರಾಬಾದ್, ಜುನಾಗಡ, ಜಮ್ಮು-ಕಾಶ್ಮೀರ

5) ಹೈದರಾಬಾದಿನ ನಿಜಾಮನು ಭಾರತದ ಒಕ್ಕೂಟ ಸೇರಲು ನಿರಾಕರಿಸಲು ಕಾರಣವಾದ ಅಂಶವೇನು?

A) ಪಾಕಿಸ್ತಾನದಲ್ಲಿ ಸೇರಲು ಬಯಸಿದ್ದನು

B) ಸ್ವಯಂ ನಿವೃತ್ತನಾಗಲು ನಿರ್ಧರಿಸಿದ್ದನು

C) ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದ್ದನು

D) ಆತ ಭಾರತವನ್ನು ದ್ವೇಷಿಸುತ್ತಿದ್ದನು

ಉತ್ತರ : C) ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದ್ದನು

6) ಟಿಬೆಟ್ ನಿಂದ ಬಂದ ನಿರಾಶ್ರಿತರಿಗಾಗಿ ಮೈಸೂರು ಸರ್ಕಾರ _

A) ಬಂಗಾಳದಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿತು.

B) ತಾತ್ಕಾಲಿಕ ಊಟೋಪಚಾರದ ವ್ಯವಸ್ಥೆ ಮಾಡಿತು

C) ಬೈಲುಕುಪ್ಪೆ ಬಳಿ 3000 ಎಕರೆಗಳ ಜಮೀನು ಮಂಜೂರು ಮಾಡಿತು

D) ಯಾವುದೇ ಕಾಳಜಿ ತೋರಲಿಲ್ಲ

ಉತ್ತರ : C) ಬೈಲುಕುಪ್ಪೆ ಬಳಿ 3000 ಎಕರೆಗಳ ಜಮೀನು ಮಂಜೂರು ಮಾಡಿತು

7) ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗವನ್ನು ಹೀಗೆಂದು ಕರೆಯುವರು

A) ಸ್ವತಂತ್ರ ಕಾಶ್ಮೀರ

B) ಜಮ್ಮು ಕಾಶ್ಮೀರ

C) ವಿಶ್ವಸ್ಥ ಕಾಶ್ಮೀರ

D) ಪಾಕ್ ಆಕ್ರಮಿತ ಕಾಶ್ಮೀರ

ಉತ್ತರ : D) ಪಾಕ್ ಆಕ್ರಮಿತ ಕಾಶ್ಮೀರ

8) ವಿಶಾಲ ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದದ್ದು ಯಾವಾಗ

A) 1956 ನವೆಂಬರ್ 1

B) 1956 ಜನೆವರಿ 1

C) 1950 ಅಕ್ಟೋಬರ್ 24

D) 1955 ನವೆಂಬರ್ 1

ಉತ್ತರ : A) 1956 ನವೆಂಬರ್ 1

9) 1973 ರಲ್ಲಿ ವಿಶಾಲ ಮೈಸೂರು ರಾಜ್ಯಕ್ಕೆ ಹೀಗೆಂದು ಮರು ನಾಮಕರಣ ಮಾಡಲಾಯಿತು.

A) ಕರುನಾಡು

B) ಕನ್ನಡ ನಾಡು

C) ಕರ್ನಾಟಕ

D) ನವ ಕರ್ನಾಟಕ

ಉತ್ತರ : C) ಕರ್ನಾಟಕ

10) ಗೋವಾ ವಿಮೋಚನೆಯಾದ ವರ್ಷ _____

A) 1953

B) 1961

C) 1947

D) 1956

ಉತ್ತರ : B) 1961

ಇವುಗಳು 10ನೇ ತರಗತೀಯ ಸಮಾಜ ವಿಜ್ಞಾನದಲ್ಲಿಯ ಇತಿಹಾಸ ವಿಭಾಗದಲ್ಲಿ ಏಳನೇಯ ಅಧ್ಯಾಯ SSLC History Chpater 9 Multiple Choice Questions Swatantryottara Bharata MCQ ಈ ಅಧ್ಯಾಯಕ್ಕೆ ಸಂಬಂಧಿಸಿದಂತೆ SSLC ಪರೀಕ್ಷೆಗಾಗಿ ಕೇಳಬಹುದಾಗಿರುವ ಬಹು ಆಯ್ಕೆ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಆಗಿದ್ದು ಅಧ್ಯಯನಕ್ಕಾಗಿ ಇವುಗಳನ್ನು ಬಳಸಿಕೊಂಡಿರುವುದಕ್ಕೆ ಧನ್ಯವಾದಗಳು.

ಇತರ ಎಲ್ಲಾ ವಿಷಯಗಳ ಬಹು ಆಯ್ಕೆಗಳ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon