2nd PUC Political Science Notes | Chapter 2 | ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ

ಅಧ್ಯಾಯ-2
ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ

ಒಂದು ಅಂಕದ ಪ್ರಶ್ನೆಗಳು:
1.ಚುನಾವಣೆ ಪದದ ಮೂಲಪದ ಯಾವುದು?
ಉ: ಲ್ಯಾಟಿನ್ ಭಾಷೆಯ ಎಲಿಗೆರೆ ಅಂದರೆ ಆಯ್ಕೆ ಮಾಡು ಎಂದರ್ಥ.
2.ಚುನಾವಣೆ ಎಂದರೇನು?
ಉ: ಮತದಾರರು ತಮ್ಮನ್ನು ಆಳುವ ಪ್ರತಿನಿಧಿಗಳನ್ನು ತಾವೇ ಆಯ್ಕೆಮಾಡುವ ವಿಧಾನ.
3. ಸಾರ್ವತ್ರಿಕ ಚುನಾವಣೆ ಎಂದರೇನು?
ಉ: ಶಾಸನಸಭೆಗೆ ಜನ ಪ್ರತಿನಿಧಿಗಳನ್ನು ಆಯ್ಕೆಮಾಡಲು ದೇಶದ ಎಲ್ಲ ಮತದಾರರು ನಿಯತಕಾಲಿಕವಾಗಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾಯಿಸುವ ಪದ್ಧತಿ.
4. ಉಪ ಚುನಾವಣೆ ಎಂದರೇನು?
ಉ: ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಆಯ್ಕೆಯಾದ ಪ್ರತಿನಿಧಿ ತನ್ನ ಅವಧಿಗೆ ಮುನ್ನ ರಾಜೀನಾಮೆ ನೀಡಿದರೆ, ನಿಧನ ಹೊಂದಿದರೆ, ಅಥವಾ ಇನ್ನಿತರ ಕಾರಣಗಳಿಂದ ತನ್ನ ಸದಸ್ಯತ್ವ ಕಳೆದುಕೊಂಡರೆ 6 ತಿಂಗಳ ಒಳಗೆ ನಡೆಯುವುದೇ ಉಪಚುನಾವಣೆ.
5. ಮರು ಚುನಾವಣೆ ಎಂದರೇನು?
ಉ: ಚುನಾವಣೆಗಳು ನಡೆಯುವಾಗ ಹಿಂಸಾಚಾರ, ದೊಂಬಿ, ಗಲಭೆ, ಮತಗಟ್ಟೆವಶ, ಮತಯಂತ್ರನಾಶ, ಅವ್ಯವಹಾರ, ತಾಂತ್ರಿಕ ತೊಂದರೆ, ಇವೇ ಮೊದಲಾದ ಕಾರಣಗಳಿಗಾಗಿ ಅಂತಹ ಸ್ಥಳದಲ್ಲಿ ಚುನಾವಣೆಗಳನ್ನು ರದ್ದುಪಡಿಸಿ ಪುನಃ ಮತ್ತೊಮ್ಮೆ ನಿರ್ವಹಿಸುವುದೇ “ಮರುಚುನಾವಣೆ”.
6.ಮಧ್ಯಂತರ ಚುನಾವಣೆ ಎಂದರೇನು?
ಉ: ಐದು ವರ್ಷ ಅಧಿಕಾರ ಅವಧಿಗೆ ಆಯ್ಕೆಯಾದ ಸರ್ಕಾರ ಕಾರಣಾಂತರಗಳಿಂದ ತನ್ನ ಪೂರ್ಣಾವಧಿಗೆ ಮುನ್ನವೇ ಅಧಿಕಾರ ಕಳೆದುಕೊಂಡಾಗ ಅಥವಾ ಶಾಸಕಾಂಗದ ಕೆಳಸದನ ವಿಸರ್ಜಿಸಲ್ಪಟ್ಟಾಗ ನಡೆಯುವುದೇ “ಮಧ್ಯಂತರ ಚುನಾವಣೆ”.
7.ಪ್ರತ್ಯಕ್ಷ ಚುನಾವಣೆ ಎಂದರೇನು?
ಉ: ವಯಸ್ಕ ಮತದಾರರು ನೇರವಾಗಿ ತಾವೇ ಮತಗಟ್ಟೆಗೆ ಹೋಗಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ರಹಸ್ಯ ಮತದಾನದ ಮೂಲಕ ಆಯ್ಕೆಮಾಡುವ ಪದ್ಧತಿ.
8.ಪ್ರತ್ಯಕ್ಷ ಚುನಾವಣೆಗೆ  ಉದಾಹರಣೆ ಕೊಡಿ?
ಉ: ಲೋಕಸಭೆ ಮತ್ತು ವಿಧಾನಸಭೆಗೆ ನಡೆಯುವ ಚುನಾವಣೆ.
9.ಪರೋಕ್ಷ ಚುನಾವಣೆ ಎಂದರೇನು?
ಉ: ಒಂದು ರಾಷ್ಟ್ರದ ಚುನಾವಣೆ ವ್ಯವಸ್ಥೆಯಲ್ಲಿ ಮತದಾರರು ನೇರವಾಗಿ ಮತದಾನದಲ್ಲಿ ಭಾಗವಹಿಸದೆ ಅವರ ಪ್ರತಿನಿಧಿಗಳು ಮಧ್ಯವರ್ತಿಗಳಾಗಿ ಮತ ಚಲಾಯಿಸುವುದು.
10.ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ?
ಉ: ಭಾರತದ ರಾಷ್ಟ್ರಪತಿಯನ್ನು ಆಯ್ಕೆಮಾಡಲು ನಿರ್ವಹಿಸುವ ಚುನಾವಣೆ.
11.ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು?
ಉ: ಭಾರತ ಸಂವಿಧಾನವು 18ವರ್ಷ ವಯಸ್ಸಾದ ಎಲ್ಲರಿಗೂ ಲಿಂಗ, ಧರ್ಮ, ಜಾತಿ, ಬುಡಕಟ್ಟು, ಭಾಷೆ, ಪ್ರದೇಶ, ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ, ಶಿಕ್ಷಣ, ಇತ್ಯಾದಿಗಳನ್ನು ಪರಿಗಣಿಸದೆ ಮತ ಚಲಾಯಿಸುವ ಹಕ್ಕನ್ನು ಕಲ್ಪಿಸಿದೆ. ಇದನ್ನೆ “ಸಾರ್ವತ್ರಿಕ ವಯಸ್ಕ ಮತದಾನ” ಎಂದು ಕರೆಯುತ್ತಾರೆ. ಇದನ್ನು ಪ್ರೌಢಮತದಾನ ಎಂದೂ ಸಹ ಕರೆಯುತ್ತಾರೆ.
12.ಭಾರತ ಚುನಾವಣಾ ಆಯೋಗದಲ್ಲಿ ಎಷ್ಟು ಸದಸ್ಯರಿದ್ದಾರೆ?
ಉ: ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರಿದ್ದಾರೆ.
13.ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ಯಾರು ನೇಮಿಸುತ್ತಾರೆ?
ಉ: ಕೇಂದ್ರ ಮಂತ್ರಿಮಂಡಲದ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ನೇಮಿಸುತ್ತಾರೆ.
14.ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರ ಅವಧಿ ಎಷ್ಟು?
ಉ: 6ವರ್ಷಗಳು ಅಥವಾ 65 ವರ್ಷ ವಯೋಮಾನ ತುಂಬುವವರೆಗೆ.
15.EVM ಅನ್ನು ವಿಸ್ತರಿಸಿ?
ಉ: ವಿದ್ಯುನ್ಮಾನ ಮತ ಯಂತ್ರ.
16.EPIC ಅನ್ನು ವಿಸ್ತರಿಸಿ?
ಉ: ಮತದಾರರ ಗುರುತಿನ ಚೀಟಿ.
17.ಮತದಾರರ ಗುರುತಿನ ಚೀಟಿ ಎಂದರೇನು?
ಉ: ಮತದಾರರ ಹೆಸರು, ವಯಸ್ಸು, ಲಿಂಗ, ವಿಳಾಸ, ಭಾವಚಿತ್ರ, ಮುಂತಾದ ವಿವರಗಳನ್ನು ಒಳಗೊಂಡಿರುವ ದಾಖಲೆ.
18.ವಿದ್ಯುನ್ಮಾನ ಮತಯಂತ್ರ ಎಂದರೇನು?
ಉ: ಮತದಾರರು ತಮ್ಮ ಮತವನ್ನು ದಾಖಲಿಸಲು ಅವಕಾಶವನ್ನು ಕಲ್ಪಿಸುವ ಆಧುನಿಕ ತಂತ್ರಜ್ಞಾನದಿಂದ ತಯಾರಿಸಲಾದ ವಿಶೇಷ ವಿದ್ಯುನ್ಮಾನ ನಿಯಂತ್ರಿತ ಯಂತ್ರ.
19.ರಾಜಕೀಯ ಪಕ್ಷಗಳು ಎಂದರೇನು?
ಉ: ಕೆಲವು ಸಾಮಾನ್ಯ ತತ್ವಗಳ ಆಧಾರದ ಮೇಲೆ ರಾಜಕೀಯ ಚಟುವಟಿಕಗಳಲ್ಲಿ ಪಾಲ್ಗೊಳ್ಳುವ ಜನರ ಗುಂಪುಗಳನ್ನು ರಾಜಕೀಯ ಪಕ್ಷಗಳೆಂದು ಕರೆಯುತ್ತಾರೆ.
20.ಭಾರತದಲ್ಲಿ ಎಂತಹ ಪಕ್ಷ ಪದ್ಧತಿ ಇದೆ?
ಉ: ಭಾರತದಲ್ಲಿ “ಬಹುಪಕ್ಷ ಪದ್ಧತಿ” ಇದೆ.
21.ರಾಷ್ಟ್ರೀಯ ಪಕ್ಷ ಎಂದರೇನು?
ಉ: ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ 4 ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಚಲಾಯಿಸಲ್ಪಟ್ಟ ಮತಗಳಲ್ಲಿ ಶೇಕಡಾ 6ರಷ್ಟು ಮತಗಳನ್ನು ಪಡೆಯುವ ರಾಜಕೀಯ ಪಕ್ಷಕ್ಕೆ “ರಾಷ್ಟ್ರೀಯ ಪಕ್ಷ” ಎನ್ನುವ ಮಾನ್ಯತೆ ಸಿಗುತ್ತದೆ.
22.ಪ್ರಾದೇಶಿಕ ಪಕ್ಷ ಎಂದರೇನು?
ಉ: ರಾಜ್ಯದ ಒಟ್ಟು ವಿಧಾನ ಸಭಾ ಸ್ಥಾನಗಳಲ್ಲಿ ಶೇಕಡ 3ರಷ್ಟು ಮತಗಳನ್ನು ಅಥವಾ ಕನಿಷ್ಠ 3 ಸ್ಥಾನಗಳನ್ನು ಪಡೆಯುವ ಪಕ್ಷಕ್ಕೆ “ಪ್ರಾದೇಶಿಕ ಪಕ್ಷದ” ಮಾನ್ಯತೆ ಸಿಗುತ್ತದೆ.
23.ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು ಯಾರು?
ಉ: ಸರ್ ಎ.ಒ.ಹ್ಯೂಮ್ ಎನ್ನುವ ಬ್ರಿಟೀಷ್ ಅಧಿಕಾರಿಯು ಕ್ರಿ.ಶ. 1885ರಲ್ಲಿ “ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಿದರು.
24.NDA ಇದನ್ನು ವಿಸ್ತರಿಸಿ?
ಉ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ.
25.UPA ಇದನ್ನು ವಿಸ್ತರಿಸಿ.
ಉ: ಸಂಯುಕ್ತ ಪ್ರಗತಿಪರ ಮೈತ್ರಿಕೂಟ.
26.BJP ಪಕ್ಷ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಉ:1980 ಏಪ್ರಿಲ್ 6 ರಂದು ಅಸ್ತಿತ್ವಕ್ಕೆ ಬಂದಿತು.
27.ಕಮ್ಯುನಿಸ್ಟ್ ಪಕ್ಷ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಉ: 1924 ರಂದು ಅಸ್ತಿತ್ವಕ್ಕೆ ಬಂದಿತು.
28. ಪಕ್ಷಾಂತರ ಎಂದರೇನು?
ಉ: ಶಾಸಕಾಂಗದ ಸದಸ್ಯರು ತಮ್ಮ ಪಕ್ಷವನ್ನು ಬಿಟ್ಟು ಬೇರೆ ಪಕ್ಷವನ್ನು ಸೇರುವುದನ್ನು “ಪಕ್ಷಾಂತರ” ಎಂದು ಕರೆಯುತ್ತಾರೆ.
29. ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
ಉ: ಶಾಸಕಾಂಗದ ಸದಸ್ಯರು ತಾವು ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದನ್ನು ನಿರ್ಬಂಧಿಸುವ ಕಾಯ್ದೆ.
30. ಪಕ್ಷಾಂತರ ನಿಷೇಧ ಕಾಯ್ದೆ ಯಾವಾಗ ಜಾರಿಗೆ ಬಂದಿತು?
ಉ: 1ನೇ ಏಪ್ರಿಲ್ 1985ರಂದು ಈ ಕಾಯ್ದೆಯು ಜಾರಿಗೆ ಬಂದಿತು.
31. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಯಾರು ಜಾರಿಗೆ ತಂದರು?
ಉ: ಭಾರತದ ಪ್ರಧಾನಮಂತ್ರಿಯಾಗಿದ್ದ ಶ್ರೀ ರಾಜೀವ್ ಗಾಂಧಿ ಇದನ್ನು ಜಾರಿಗೆ ತಂದರು.
32. NOTA ಇದನ್ನು ವಿಸ್ತರಿಸಿ.
ಉ: None of the above.
ಎರಡು ಅಂಕದ ಪ್ರಶ್ನೆಗಳು:

1.ಚುನಾವಣಾ ಆಯೋಗ ಎಂದರೇನು?
ಉ: ಭಾರತದಲ್ಲಿ ನಡೆಯುವ ವಿವಿಧ ಚುನಾವಣೆಯನ್ನು ನಡೆಸಲು ಸಂವಿಧಾನದಿಂದ ಅಸ್ತಿತ್ವಕ್ಕೆ ಬಂದಿರುವ ಸ್ವಾಯತ್ತ ಸಂಸ್ಥೆಯೇ “ಚುನಾವಣಾ ಆಯೋಗ”
2. ಚುನಾವಣಾ ಆಯೋಗದ ಎರಡು ಕಾರ್ಯಗಳನ್ನು ಬರೆಯಿರಿ?
ಉ:   1) ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡಿ ಚಿನ್ಹೆಗಳನ್ನು ನೀಡುವುದು.
2) ಚುನಾವಣಾ ದಿನಾಂಕಗಳನ್ನು ಪ್ರಕಟಿಸುವುದು.
3. ಚುನಾವಣಾ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಘೋಷಿಸಬೇಕಾದ ದಾಖಲೆಗಳು ಯಾವುವು?
ಉ:    1)ಅಪರಾಧ ವಿವರಗಳ ಕಡ್ಡಾಯ ಘೋಷಣೆ.
2)ಶೈಕ್ಷಣಿಕ ಮತ್ತು ಆಸ್ತಿಯ ವಿವರಗಳ ಘೋಷಣೆ.
4. ವಿದ್ಯುನ್ಮಾನ ಮತ ಯಂತ್ರದಿಂದಾಗುವ ಎರಡು ಅನುಕೂಲಗಳನ್ನು ತಿಳಿಸಿ?
ಉ: 1)ಇವನ್ನು ಸುಲಭವಾಗಿ ಬಳಕೆ ಮಾಡಬಹುದು ಮತ್ತು ಇದರಿಂದ ಸಮಯ ಉಳಿತಾಯವಾಗುವುದು.
2) ಶೀಘ್ರ ಮತ್ತು ಸ್ಪಷ್ಟ ಫಲಿತಾಂಶವನ್ನು ಪಡೆಯಬಹುದು.
5. ಮತದಾರರ ಗುರುತಿನ ಚೀಟಿಯ ಎರಡು ಪ್ರಯೋಜನಗಳನ್ನು ತಿಳಿಸಿ?
ಉ: 1)ನಕಲಿ ಮತದಾರರನ್ನು ತಡೆಗಟ್ಟಿ ನಿಜವಾದ ಮತದಾರರನ್ನು ಗುರ್ತಿಸಬಹುದು.
2)ಇದರಿಂದ ಮತದಾರರು ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆಯಬಹುದು.
6. ರಾಜ್ಯ ಹಣಕಾಸು ನೆರವು ಕುರಿತು ಬರೆಯಿರಿ?
ಉ:ಚುನಾವಣೆಗಳ ಪಾವಿತ್ರ್ಯತೆಯನ್ನು ಕಾಪಾಡಿ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲು, ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರವನ್ನು ಸಾಧ್ಯವಾದಷ್ಟು ತಡೆಗಟ್ಟಿ ಯೋಗ್ಯ, ಸಮರ್ಥ ವ್ಯಕ್ತಿಗಳು ಚುನಾವಣೆಗೆ ನಿಲ್ಲಲು  ಅವಕಾಶ ಕಲ್ಪಿಸುವ ಸಲುವಾಗಿ ಚುನಾವಣೆ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ಬಂದರೆ ಕಪ್ಪು ಹಣದ ಹಾವಳಿಯನ್ನು ತಡೆಯಬಹುದು.
7.ಚುನಾವಣಾ ಸುಧಾರಣೆಗಳಿಗೆ ಶಿಫಾರಸ್ಸು ಮಾಡಿದ ಎರಡು ಸಮಿತಿಗಳು ಯಾವುವು?
ಉ: 1)ದಿನೇಶ್ ಗೋಸ್ವಾಮಿ ಸಮಿತಿ [1990]
2)ನ್ಯಾಯಮೂರ್ತಿ, ವಿ.ಆರ್.ಕೃಷ್ಣ ಅಯ್ಯರ್ ಸಮಿತಿ [1994]
8. ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸಲು ಶಿಫಾರಸ್ಸು ಮಾಡಿದ ಎರಡು ಸಮಿತಿಗಳು ಯಾವುವು?
ಉ: 1)ತಾರ್ಕುಂಡೆ ಸಮಿತಿ.
2)ವಾಂಚೂ ಸಮಿತಿ.
9. ರಾಜಕೀಯ ಪಕ್ಷದ ಒಂದು ವ್ಯಾಖ್ಯೆಯನ್ನು ಬರೆಯಿರಿ?
ಉ: ಎಡ್ಮಂಡ್ ಬರ್ಕ್ ಅವರ ವ್ಯಾಖ್ಯಾನದಂತೆ “ಕೆಲವು ಸಾಮಾನ್ಯ ತತ್ವಗಳ ಆಧಾರದ ಮೇಲೆ ರಾಷ್ಟ್ರೀಯ ಹಿತಾಸಕ್ತಿಯನ್ನು ಸಾಧಿಸಲು ಶ್ರಮಿಸುವ ಸಂಘಟನೆ ಗುಂಪೇ ರಾಜಕೀಯ ಪಕ್ಷ.
10. ಏಕ ಪಕ್ಷ ಪದ್ಧತಿ ಎಂದರೇನು? ಉದಾಹರಣೆ ಕೊಡಿ.
ಉ:ಯಾವುದೇ ದೇಶದಲ್ಲಿ ಒಂದೇ ರಾಜಕೀಯ ಪಕ್ಷವು ಅಸ್ತಿತ್ವದಲ್ಲಿದ್ದರೆ, ಅದನ್ನು “ಏಕಪಕ್ಷ ಪದ್ಧತಿ” ಎಂದು ಕರೆಯುತ್ತಾರೆ. ಉದಾಹರಣೆಗೆ ಚೀನಾ ದೇಶದಲ್ಲಿರುವ – ಕಮ್ಯೂನಿಸ್ಟ್ ಪಕ್ಷ.
11. ದ್ವಿ ಪಕ್ಷ ಪದ್ಧತಿ ಎಂದರೇನು? ಉದಾಹರಣೆಕೊಡಿ.
ಉ: ಯಾವುದೇ ದೇಶದಲ್ಲಿ ಎರಡು ರಾಜಕೀಯ ಪಕ್ಷಗಳು ಮಾತ್ರ ನಿರ್ಣಾಯಕ ಪಾತ್ರ ವಹಿಸಿದರೆ ಅದನ್ನು “ದ್ವಿಪಕ್ಷ ಪದ್ಧತಿ” ಎಂದು ಕರೆಯುತ್ತಾರೆ. ಉದಾಹರಣೆಗೆ ಇಂಗ್ಲೇಂಡ್ ಇಲ್ಲಿ ಲೇಬರ್ ಮತ್ತು ಕನ್ಸರ್ವೇಟೀವ್ ಪಕ್ಷಗಳಿವೆ.
12. ಬಹುಪಕ್ಷ ಪದ್ಧತಿ ಎಂದರೇನು? ಉದಾಹರಣೆಕೊಡಿ.
ಉ: ಯಾವುದೇ ದೇಶದಲ್ಲಿ ಎರಡಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳಿದ್ದರೆ ಅದನ್ನು “ಬಹುಪಕ್ಷ ಪದ್ಧತಿ” ಎಂದು ಕರೆಯುತ್ತಾರೆ. ಉದಾ: ಭಾರತ.
13. ರಾಜಕೀಯ ಪಕ್ಷಗಳ ಎರಡು ಕಾರ್ಯಗಳನ್ನು ಬರೆಯಿರಿ?
ಉ: 1)ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು.
2)ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಲ್ಪಿಸುವುದು.
14. ಸಮಿಶ್ರ ಸರ್ಕಾರ ಎಂದರೇನು?
ಉ: ಎರಡು ಅಥವಾ ಇನ್ನೂ ಹೆಚ್ಚಿನ ರಾಜಕೀಯ ಪಕ್ಷಗಳು ಒಗ್ಗೂಡಿ ಸಾಮಾನ್ಯ ಕಾರ್ಯಕ್ರಮದ ಆಧಾರದ ಮೇಲೆ ಮೈತ್ರಿಕೂಟವನ್ನು ರಚಿಸಿಕೊಂಡು ಅಸ್ತಿತ್ವಕ್ಕೆ ಬರುವ ಸರ್ಕಾರವೇ “ಸಮಿಶ್ರ ಸರ್ಕಾರ” ಉದಾ: ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಡಿ.ಎ. ಸರ್ಕಾರ.
15. ಸಮಿಶ್ರ ಸರ್ಕಾರ ಯಾವಾಗ ರಚನೆಯಾಗುತ್ತದೆ?
ಉ: ಚುನಾವಣೆ ನಡೆದು ಫಲಿತಾಂಶ ಪ್ರಕಟವಾದಾಗ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸರ್ಕಾರವನ್ನು ರಚನೆಮಾಡಲು ಸ್ಪಷ್ಟ ಬಹುಮತ ದೊರೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ರಚಿಸಿಕೊಂಡಾಗ ಸಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.
16. ಭಾರತದಲ್ಲಿರುವ ರಾಷ್ಟ್ರೀಯ ಪಕ್ಷಗಳನ್ನು ಹೆಸರಿಸಿ?
ಉ: 1)ಭಾರತ ರಾಷ್ಟ್ರೀಯ ಕಾಂಗ್ರೆಸ್  -INC
2)ಭಾರತೀಯ ಜನತಾಪಕ್ಷ - BJP
3)ರಾಷ್ಟ್ರೀಯ ಕಾಂಗ್ರೆಸ್ ಪಕ್ಷ –NCP
4)ಬಹುಜನ ಸಮಾಜವಾದಿ ಪಕ್ಷ
5)ಭಾರತೀಯ ಕಮ್ಯುನಿಸ್ಟ್ ಪಕ್ಷ
6)ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ
17. ಭಾರತದಲ್ಲಿರುವ ಪ್ರಮುಖ ಪ್ರಾಂತೀಯ ಪಕ್ಷಗಳನ್ನು ಹೆಸರಿಸಿ?
ಉ: 1)ತೆಲುಗುದೇಶಂ ಪಕ್ಷ – ಆಂದ್ರ ಪ್ರದೇಶ
2)TRS – ತೆಲಂಗಾಣ
3)BJD – ಒರಿಸ್ಸಾ
4)JDS – ಕರ್ನಾಟಕ
5)ಶಿವಸೇನೆ – ಮಹಾರಾಷ್ಟ್ರ
6)S.P – ಉತ್ತರ ಪ್ರದೇಶ
18. ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ತಮ್ಮ ಶಾಸಕಾಂಗದ ಸದಸ್ಯತ್ವದಿಂದ ಅನರ್ಹಗೊಂಡ ಇಬ್ಬರು ರಾಜಕೀಯ ನಾಯಕರನ್ನು ಹೆಸರಿಸಿ?
ಉ: 1)ಜಯಲಲಿತ – ತಮಿಳುನಾಡಿನ ಮಾಜಿಮುಖ್ಯಮಂತ್ರಿ
2)ಲಾಲು ಪ್ರಸಾದ್ ಯಾದವ್ – ಬಿಹಾರದ ಮಾಜಿಮುಖ್ಯಮಂತ್ರಿ.

********

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon