2nd PUC Political Science Notes | Chapter 3 | ಭಾರತದಲ್ಲಿ ಆಡಳಿತ ಯಂತ್ರ

ಅಧ್ಯಾಯ-03

ಭಾರತದಲ್ಲಿ ಆಡಳಿತ ಯಂತ್ರ

ಒಂದು ಅಂಕದ ಪ್ರಶ್ನೆಗಳು

1.ಆಡಳಿತ ಎಂದರೇನು?

ಉ: ಆಡಳಿತವೆಂದರೆ ಸರ್ಕಾರ ನಡೆಸುವುದು ಮತ್ತು ಜನರನ್ನು ನೋಡಿಕೊಳ್ಳುವುದು.

2. ಆಡಳಿತ ಮೂಲ ಪದಗಳು ಯಾವುವು?

ಉ: ಲ್ಯಾಟಿನ್‌ ಪದಗಳಾದ Ad ಮತ್ತು Ministiare ಎಂಬ ಎರಡು ಪದಗಳು.

3. ಕೇಂದ್ರಾಡಳಿತದ ಮುಖ್ಯಸ್ಥರು ಯಾರು?

ಉ: ರಾಷ್ಟ್ರಪತಿ (ರಾಜಕೀಯ ಮುಖ್ಯಸ್ಥರು) ಸಂಪುಟ ಕಾರ್ಯದರ್ಶಿ (ಆಡಳಿತದ ಮುಖ್ಯಸ್ಥರು)

4. ರಾಜ್ಯಾಡಳಿತದ ಮುಖ್ಯಸ್ಥರು ಯಾರು?

ಉ: ರಾಜ್ಯಪಾಲರು (ರಾಜಕೀಯ ಮುಖ್ಯಸ್ಥರು) ಮುಖ್ಯ ಕಾರ್ಯದರ್ಶಿ (ಆಡಳಿತದ ಮುಖ್ಯಸ್ಥರು)

5.ಜಿಲ್ಲಾಡಳಿತದ ಮುಖ್ಯಸ್ಥರು ಯಾರು?

ಉ: ಜಿಲ್ಲಾಧಿಕಾರಿ

6.CAT – ಇದನ್ನು ವಿಸ್ತರಿಸಿ?

ಉ: ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಲಿ

7.KAT  ವಿಸ್ತರಿಸಿ?

ಉ: ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಲಿ

8.UPSC ವಿಸ್ತರಿಸಿ?

ಉ: ಕೇಂದ್ರ ಲೋಕಸೇವಾ ಆಯೋಗ.

9.KPSC ವಿಸ್ತರಿಸಿ?

ಉ: ಕರ್ನಾಟಕ ಲೋಕಸೇವಾ ಆಯೋಗ

10.IPSC ವಿಸ್ತರಿಸಿ?

ಉ: ಜಂಟಿ ಲೋಕ ಸೇವಾ ಆಯೋಗ.

11.IAS ವಿಸ್ತರಿಸಿ?

ಉ: ಭಾರತೀಯ ಆಡಳಿತ ಸೇವೆ.

12. IPS ವಿಸ್ತರಿಸಿ?

ಉ: ಭಾರತೀಯ ಪೋಲೀಸ್‌ ಸೇವೆ.

13.KAS ವಿಸ್ತರಿಸಿ?

ಉ: ಕರ್ನಾಟಕ ಆಡಳಿತ ಸೇವೆ.

14.ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?

ಉ: ರಾಷ್ಟ್ರಪತಿಗಳು

15.ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?

ಉ: ರಾಜ್ಯಪಾಲರು.

16.ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು ಎಷ್ಟು?

ಉ: 65 ವರ್ಷಗಳು

17.ಕರ್ನಾಟಕದ ಲೋಕ ಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು ಎಷ್ಟು?

ಉ: 62 ವರ್ಷಗಳು

18.ರಾಜ್ಯ ಸೇವೆಗೆ ಒಂದು ಉದಾಹರಣೆ ಕೊಡಿ?

ಉ: KAS

19.ಯಾವ ವಿಧಿಯು ಅಖಿಲ ಭಾರತ ಸೇವೆಗೆ ಅವಕಾಶ ಕಲ್ಪಿಸಿದೆ?

ಉ: ಭಾರತ ಸಂವಿಧಾನದ 312ನೇ ವಿಧಿ.

20.ಅಖಿಲ ಭಾರತ ಸೇವೆಗೆ ಒಂದು ಉದಾಹರಣೆ ಕೊಡಿ?

ಉ: IAS

21.ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಕಾಡೆಮಿ ಎಲ್ಲಿದೆ?

ಉ: ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಕಾಡೆಮಿ ಮಸ್ಸೂರಿಯಲ್ಲಿದೆ, ಐ.ಎ.ಎಸ್.‌ ತೇರ್ಗಡೆ ಹೊಂದಿದ ಅಧಿಕಾರಿಗಳಿಗೆ ತರಭೇತಿ ನೀಡಲಾಗುತ್ತದೆ.

22.ಸರ್ದಾರ್‌ ವಲ್ಲಭಭಾಯಿ ಅಕಾಡೆಮಿ ಎಲ್ಲಿದೆ?

ಉ: ಹೈದರಬಾದಿನಲ್ಲಿದೆ, IPS ತೇರ್ಗಡೆ ಹೊಂದಿದ ಅಧಿಕಾರಿಗಳಿಗೆ ತರಭೇತಿ ನೀಡಲಾಗುತ್ತದೆ.

23.ಕೇಂದ್ರ ಸೇವೆಗೆ ಒಂದು ಉದಾಹರಣೆ ಕೊಡಿ?

ಉ: IRS ಭಾರತೀಯ ಕಂದಾಯ ಸೇವೆ.

24.ಜಿಲ್ಲಾಡಳಿತ ಎಂದರೇನು?

ಉ: ಜಿಲ್ಲಾಡಳಿತವು ರಾಜ್ಯದ ಪ್ರಾಥಮಿಕ ಆಡಳಿತಾತ್ಮಕ ಘಟಕವಾಗಿದ್ದು ಜಿಲ್ಲೆಯೊಳಗಿನ ಸಾರ್ವಜನಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ.

25.ಸರ್ಕಾರದ ನಾಲ್ಕನೇ ಅಂಗ ಯಾವುದು?

ಉ: ಸರ್ಕಾರದ ನಾಲ್ಕನೇ ಅಂಗ “ಆಡಳಿತ ಸೇವಾವರ್ಗ” ಅಥವಾ “ನಾಗರಿಕ ಸೇವಾವರ್ಗ”.

26.ಕೇಂದ್ರ ಲೋಕಸೇವಾ ಆಯೋಗದ ಸದಸ್ಯರ ಅಧಿಕಾರಾವಧಿ ಎಷ್ಟು?

ಉ: ಸದಸ್ಯರ ನೇಮಕವಾದಾಗಿನಿಂದ 6 ವರ್ಷಗಳ ಕಾಲ ಅಥವಾ 65 ವರ್ಷದ ವಯೋಮಿತಿ.

27.ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಅಧಿಕಾರಾವಧಿ ಎಷ್ಟು?

ಉ: ಸದಸ್ಯರ ನೇಮಕವಾದಾಗಿನಿಂದ 6 ವರ್ಷಗಳ ಕಾಲ ಅಥವಾ 62 ವರ್ಷದ ವಯೋಮಿತಿ.

28.ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಯಾವಾಗ ಸ್ಥಾಪನೆಯಾಯಿತು?

ಉ: 06ನೇ ಅಕ್ಟೋಬರ್‌ 1986.

ಎರಡು ಅಂಕದ ಪ್ರಶ್ನೆಗಳು:

1.ಆಡಳಿತ ಸೇವೆ ಎಂದರೇನು?

ಉ: ಆಡಳಿತ ಎಂಬ ಪದವು ಅಡ್‌ ಎಂದರೆ ಸಾರ್ವಜನಿಕ ಮತ್ತು ಮಿನಿಸ್ಟ್ರೇ ಎಂದರೆ ಸೇವೆ ಎಂದರ್ಥ. ಆಡಳಿತ ಎಂದರೆ ಸರ್ಕಾರದ ನಿರ್ವಹಣೆಯ ಮೂಲಕ ಜನರ ಯೋಗಕ್ಷೇಮ ನೋಡಿಕೊಳ್ಳುವುದು.

2.ಆಡಳಿತ ಸೇವೆಯ ವರ್ಗೀಕರಣ ಮಾಡಿ?

ಉ:    1)ಅಖಿಲಭಾರತ ಸೇವೆಗಳು

        2)ಕೇಂದ್ರ ಸೇವೆಗಳು

        3)ರಾಜ್ಯ ಸೇವೆಗಳು

3.ಕೇಂದ್ರ ಸೇವೆಗೆ ಎರಡು ಉದಾಹರಣೆ ಕೊಡಿ?

ಉ:    1)ಭಾರತೀಯ ವಿದೇಶಾಂಗ ಸೇವೆ

        2)ಭಾರತೀಯ ರೈಲ್ವೆಸೇವೆ.

4.ನಾಗರಿಕ ಸೇವೆಯ ಎರಡು ಲಕ್ಷಣಗಳನ್ನು ತಿಳಿಸಿ?

ಉ:    1)ವೃತ್ತಿನಿರತ ವರ್ಗ

        2)ಅಧಿಕಾರ ಶ್ರೇಣಿ ಪದ್ದತಿ

5.ಆಡಳಿತ ಸೇವೆಯ ತಾಟಸ್ಥ್ಯ ಎಂದರೇನು?

ಉ: ನಾಗರಿಕ ಸೇವಾ ಸಿಬ್ಬಂದಿ ಯಾವುದೇ ರಾಜಕೀಯ ಚಟುವಟಿಕೆಗಳಿಂದ ದೂರವಿರಬೇಕು ಮತ್ತು ತಮ್ಮ ಕರ್ತವ್ಯಕ್ಕೆ ಧಕ್ಕೆಯಾಗದಂತೆ ಕಾರ್ಯ ನಿರ್ವಹಿಸಬೇಕು.

6.ಕೇಂದ್ರ ಲೋಕಸೇವಾ ಆಯೋಗದ ಎರಡು ಕಾರ್ಯಗಳನ್ನು ತಿಳಿಸಿ?

ಉ:    1)ಕೇಂದ್ರ ಮತ್ತು ಅಖಿಲ ಭಾರತ ಸೇವೆಗಳಿಗೆ ನೇಮಕ ಮಾಡಲು ಪರೀಕ್ಷೆಗಳನ್ನು ನಡೆಸುವುದು.

        2)ತಮ್ಮ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ವಾರ್ಷಿಕ ವರದಿಯನ್ನು ರಾಷ್ಟ್ರಪತಿಗೆ ಸಲ್ಲಿಸುವುದು.

7.ಕರ್ನಾಟಕ ಲೋಕಸೇವಾ ಆಯೋಗದ ಎರಡು ಕಾರ್ಯಗಳನ್ನು ತಿಳಿಸಿ?

ಉ:    1)ರಾಜ್ಯ ಸರ್ಕಾರಿ ಸೇವೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು.

        2)ಇಲಾಖಾ ಪರೀಕ್ಷೆಗಳನ್ನು ನಡೆಸುವುದು.

8.ಅಧಿಕಾರ ಶ್ರೇಣಿ ಪದ್ಧತಿ ಎಂದರೇನು?

ಉ: ನಾಗರಿಕ ಸೇವಾ ವರ್ಗದಲ್ಲಿ ಅಧಿಕಾರಿಗಳನ್ನು ವಿವಿಧ ಶ್ರೇಣಿಗಳಾಗಿ ವಿಂಗಡಿಸಿ ಒಂದು ನಿಯಮದಡಿ ತರಲಾಗಿದೆ. ಪ್ರತಿಯೊಬ್ಬ ನಾಗರಿಕ ಸಿಬ್ಬಂದಿಯು ಅವನ ನಂತರದ ಉನ್ನತ ಅಧಿಕಾರಿಯ ಆದೇಶಗಳನ್ನು ಪಾಲಿಸಬೇಕಾಗುತ್ತದೆ.

9.ಮುಖ್ಯ ಕಾರ್ಯದರ್ಶಿಯ ಎರಡು ಕಾರ್ಯಗಳನ್ನು ತಿಳಿಸಿ?

ಉ:    1)ರಾಜ್ಯದಲ್ಲಿ ಮುಖ್ಯಮಂತ್ರಿಗೆ ಅಗತ್ಯವಾದ ಸಲಹೆಗಳನ್ನು ನೀಡುವುದು.

        2)ಇಡೀ ರಾಜ್ಯಾಡಳಿತದ ಮೇಲ್ವಚಾರಣೆ ಜವಾಬ್ದಾರಿ.

10.ಹರ್ಮನ್‌ ಫೈನರ್‌ ರವರ ವ್ಯಾಖ್ಯೆಯನ್ನು ತಿಳಿಸಿ?

ಉ: ಹರ್ಮನ್‌ ಫೈನರ್‌ ರವರ ಪ್ರಕಾರ “ಖಾಯಂ ಉದ್ಯೋಗ ಹೊಂದಿದ ಉತ್ತಮ ಸಂಬಳ ಪಡೆಯುವ ಮತ್ತು ಅರ್ಹ ವೃತ್ತಿನಿರತ ಅಧಿಕಾರ ವರ್ಗವೇ ನಾಗರೀಕ ಸೇವಾವರ್ಗ.

11.ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯರನ್ನು ಹೇಗೆ ಪದಚ್ಯುತಗೊಳಿಸಲಾಗುತ್ತದೆ?

ಉ: ಸದಸ್ಯರ ದುರ್ನಡತೆಯ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯದ ವಿಚಾರಣೆ ಮುಗಿದ ನಂತರ ರಾಷ್ಟ್ರಪತಿಗಳು ಪದಚ್ಯುತಗೊಳಿಸುತ್ತಾರೆ.

12.ಆಡಳಿತ ಸೇವೆಯ ಆನಾಮಕತ್ವ ಎಂದರೇನು?

ಉ: ನಾಗರಿಕ ಸೇವಾ ಸಿಬ್ಬಂದಿಯು ಹೊಗಳಿಕೆ, ತೆಗಳಿಕೆಯ, ಯಶಸ್ಸು, ಅಪಯಶಸ್ಸು, ಕೀರ್ತಿ-ಅಪಕೀರ್ತಿಗಳನ್ನು ಪರಿಗಣಿಸದೆ ಕಾರ್ಯನಿರ್ವಹಣೆ ಮಾಡುವುದನ್ನು ಆಡಳಿತ ಸೇವೆಯ ಅನಾಮಕತ್ವ ಎನ್ನುವರು.

13.ಸಚಿವಾಲಯದ ಎರಡು ಜವಾಬ್ದಾರಿಗಳನ್ನು ತಿಳಿಸಿ?

ಉ:    1)ಕಾಲದಿಂದ ಕಾಲಕ್ಕೆ ಶಾಸನಗಳನ್ನು ರಚಿಸುವಿಕೆ ಮತ್ತು ಮಾರ್ಪಡಿಸುವುದು.

        2)ಯೋಜನೆಗಳು ಮತ್ತು ಆಯ-ವ್ಯಯ ರಚನೆ.

14.ಇಲಾಖೆ ಎಂದರೇನು?

ಉ:ಇದು ಸಚಿವಾಲಯದ ಪ್ರಾಥಮಿಕ ಘಟಕವಾಗಿದ್ದು ಸಚಿವಾಲಯ ಮತ್ತು ಇಲಾಖೆಗಳ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ.

******

PUC I Year All Chapter Videos

PUC II Year All Chapter Videos

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon