2nd PUC Political Science Notes | Chapter 5 | ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು

ಅಧ್ಯಾಯ-5
ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು

ಒಂದು ಅಂಕದ ಪ್ರಶ್ನೆಗಳು

1.ರಾಷ್ಟ್ರ-ರಾಜ್ಯ ಎಂದರೇನು?

ಉ:ಆಧುನಿಕ ವೈವಿದ್ಯಮಯ ಹಿನ್ನೆಲೆಯ ದೇಶವೊಂದನ್ನು “ರಾಷ್ಟ್ರ-ರಾಜ್ಯ” ಎಂದು ಕರೆಯುತ್ತಾರೆ.

2.ರಾಷ್ಟ್ರೀಯತೆ ಎಂದರೇನು?

ಉ: ಒಂದೇ ಭಾಷೆ, ಸಂಸ್ಕೃತಿ, ಇತಿಹಾಸ, ಆಕಾಂಕ್ಷೆಗಳಿಂದ ಜನರಲ್ಲಿ ಉಂಟಾಗುವ ಒಗ್ಗಟ್ಟಿನ ಭಾವನೆಯನ್ನು ರಾಷ್ಟ್ರೀಯತೆ ಎಂದು ಕರೆಯುತ್ತಾರೆ. ಇದು ಪರಕೀಯರ ದಬ್ಬಾಳಿಕೆಗೆ ಒಳಗಾದ ಜನರಲ್ಲಿ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟನ್ನು ಪ್ರೇರೇಪಿಸುತ್ತದೆ.

3.ರಾಷ್ಟ್ರ-ರಾಜ್ಯ ಪ್ರಕ್ರಿಯೆಯು ಯಾವ ಒಪ್ಪಂದದಿಂದ ಮೂಡಿ ಬಂದಿತು?

ಉ: ಇಂತಹ ಪ್ರಕ್ರಿಯೆಯು ಕ್ರಿ.ಶ.1648ರಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಏರ್ಪಟ್ಟ “ವೆಸ್ಟ್‌ ಫಾಲಿಯಾ” ಒಪ್ಪಂದದ ನಂತರ ಉಗಮವಾಯಿತು.

4.ರಾಷ್ಟ್ರ ಎಂದರೇನು?

ಉ: ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ನೆಲೆಸಿರುವ ಸಮಾನ ಮನಸ್ಕರಿಂದ ಕೂಡಿರುವ ಜನಸಮುದಾಯವೇ ರಾಷ್ಟ್ರ.

5.ರಾಷ್ಟ್ರ ನಿರ್ಮಾಣ ಎಂದರೇನು?

ಉ: ರಾಷ್ಟ್ರ ನಿರ್ಮಾಣ ಎಂಬುದು ಜನರನ್ನು ಸಂಘಟಿಸಿ ಅವರಲ್ಲಿ ಸಾಮರಸ್ಯ ಸಾಧಿಸಿ ಎಲ್ಲರೂ ಒಪ್ಪಿಕೊಳ್ಳುವ ವ್ಯವಸ್ಥೆಯನ್ನು ನಿರ್ಮಿಸುವ ವಿಶಾಲ ಪ್ರಕ್ರಿಯೆ ಆಗಿದೆ.

6.ಯಾವ ರಾಷ್ಟ್ರವನ್ನು ಸಾಂಸ್ಕೃತಿಕ ವೈವಿದ್ಯತೆಗಳ ನಾಡು ಜನಾಂಗೀಯತೆಯ ನಾಡು ಎಂದು ಕರೆಯಲಾಗಿದೆ?

ಉ: ಭಾರತವನ್ನು ಸಾಂಸ್ಕೃತಿಕ ವೈವಿದ್ಯತೆಗಳ ನಾಡು, ದಕ್ಷಿಣ ಆಫ್ರಿಕಾವನ್ನು ಜನಾಂಗೀಯತೆಯ ನಾಡು ಎಂದು ಕರೆಯಲಾಗಿದೆ.

7.ರಾಷ್ಟ್ರ ನಿರ್ಮಾಣದಲ್ಲಿ ಎದುರಾಗುವ ಯಾವುದಾದರು ಒಂದು ಅಡಚಣೆಯನ್ನು ತಿಳಿಸಿ?

ಉ: “ಬಡತನವು” ಒಂದು ಅಡಚಣೆ ಆಗಿದೆ.

8. ರಾಷ್ಟ್ರ ನಿರ್ಮಾಣದ ಸಮಸ್ಯೆಗೆ ಒಂದು ಪರಿಹಾರವನ್ನು ತಿಳಿಸಿ?

ಉ: ಸರಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಇದಕ್ಕೆ ಒಂದು ಪರಿಹಾರವಾಗಿದೆ “ರಾಜಕೀಯ ಸ್ಥಿರತೆ” ಯು ಈ ಸಮಸ್ಯೆಯನ್ನು ಪರಿಹರಿಸಲು ಅತ್ಯಂತ ಅಗತ್ಯ.

9.ಅಸಮಾನತೆ ಎಂದರೇನು?

ಉ: ಜಾತಿ, ಧರ್ಮ, ಲಿಂಗ, ಜನ್ಮಸ್ಥಳ, ಇತ್ಯಾದಿ ಅಂಶಗಳನ್ನು ಆಧರಿಸಿ ಕೆಲವು ಜನವರ್ಗಗಳನ್ನು ಅವಕಾಶಗಳು ಮತ್ತು ಸೌಲಭ್ಯಗಳು ವಂಚಿತರನ್ನಾಗಿಸಿ ತಾರತಮ್ಯ ಮಾಡುವುದೇ ಅಸಮಾನತೆ.

10.ಜಾತಿ ಆಧಾರಿತ ಅಸಮಾನತೆ ಎಂದರೇನು?

ಉ: ಜಾತಿಯನ್ನು ಆಧರಿಸಿ ಜನರನ್ನು ಮೇಲು-ಕೀಳೆಂದು ತಾರತಮ್ಯದಿಂದ ನೋಡುವುದನ್ನು ಜಾತಿ ಆಧಾರಿತ ಅಸಮಾನತೆ ಎನ್ನುತ್ತಾರೆ.

11.ಜಾತಿ ಆಧಾರಿತ ಅಸಮಾನತೆ ಎಂದರೇನು?

ಉ: ಜಾತಿಯನ್ನು ಆಧಾರವಾಗಿಸಿ ಜನರನ್ನು ತಾರತಮ್ಯ ಭಾವನೆಯಿಂದ ನೋಡುವುದನ್ನು ಜಾತಿ ಆಧಾರಿತ ಅಸಮಾನತೆ ಎನ್ನುತ್ತಾರೆ.

12.ಜಾತಿ ಆಧಾರಿತ ಅಸಮಾನತೆಗೆ ಒಂದು ಕಾರಣ ತಿಳಿಸಿ?

ಉ: ಅನಾದಿ ಕಾಲದಿಂದ ಬಂದಿರುವ ವರ್ಣಾಶ್ರಮ ವ್ಯವಸ್ಥೆಯು ಇದಕ್ಕೆ ಒಂದು ಪ್ರಮುಖವಾದ ಕಾರಣವಾಗಿದೆ.

13.ಲಿಂಗಾಧಾರಿತ ಅಸಮಾನತೆ ಎಂದರೇನು?

ಉ: ಗಂಡು ಮತ್ತು ಹೆಣ್ಣು ಎಂಬ ಕಾರಣಕ್ಕಾಗಿ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವುದನ್ನು ಈ ರೀತಿ ಕರೆಯುತ್ತಾರೆ.

14.ಲಿಂಗಾಧಾರಿತ ಅಸಮಾನತೆಗೆ ಒಂದು ಕಾರಣ ತಿಳಿಸಿ?

ಉ: ಮನುಸ್ಮೃತಿಯು ಎಲ್ಲ ವಿಚಾರಗಳಲ್ಲೂ ಮಹಿಳೆ ಪುರುಷನ ಅಧೀನದಲ್ಲಿ ಇರಬೇಕೆಂದು ಪ್ರತಿಪಾದಿಸಿರುವುದು ಇದಕ್ಕೆ ಒಂದು ಕಾರಣ

15.ಅನಕ್ಷರತೆ ಎಂದರೇನು?

ಉ: ಅನಕ್ಷರತೆ ಎಂದರೆ ಒಬ್ಬ ವ್ಯಕ್ತಿಗೆ ಯಾವುದೇ ಭಾಷೆಯಲ್ಲಿ ಓದಲು ಮತ್ತು ಬರೆಯಲು ಹಾಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದಂತಹ ಸ್ಥಿತಿಯಾಗಿದೆ.

16.ಕರ್ನಾಟಕದ ಸಾಕ್ಷರತೆಯ ಪ್ರಮಾಣ ಎಷ್ಟು?

ಉ: 2011ರ ಜನಗಣತಿಯ ವರದಿಯ ಪ್ರಕಾರ ಕರ್ನಾಟಕ ರಾಜ್ಯದ ಸಾಕ್ಷರತೆಯ ಪ್ರಮಾಣ 75.36

17.ಅನಕ್ಷರತೆಗೆ ಒಂದು ಕಾರಣಕೊಡಿ?

ಉ: ಕಳಪೆ ಗುಣಮಟ್ಟದ ಮೂಲಭೂತ ಸೌಕರ್ಯಗಳು ಇದಕ್ಕೆ ಒಂದು ಕಾರಣ.

18.86ನೇ ಸಂವಿಧಾನ ತಿದ್ದುಪಡಿಯು ಯಾವಾಗ ಅಂಗೀಕಾರವಾಯಿತು?

ಉ: ಭಾರತದ ಪಾರ್ಲಿಮೆಂಟ್‌ ಈ ತಿದ್ದುಪಡಿ ಕಾಯ್ದೆಯನ್ನು 2002ರಲ್ಲಿ ಅಂಗೀಕರಿಸಿತು.

19.ಯಾವ ವಯೋಮಿತಿಯ ಮಕ್ಕಳು ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಬರುತ್ತಾರೆ?

ಉ: 86ನೇ ಸಂವಿಧಾನ ತಿದ್ದುಪಡಿಯ “210” ಕಾಯ್ದೆಯ ಪ್ರಕಾರ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದಾರೆ.

20.RTE ಇದನ್ನು ವಿಸ್ತರಿಸಿ?

ಉ: Right To Education ಕಡ್ಡಾಯ ಶಿಕ್ಷಣದ ಹಕ್ಕು

21.ಕೋಮುವಾದ ಎಂದರೇನು?

ಉ: ಒಂದು ನಿರ್ದಿಷ್ಟ ಧಾರ್ಮಿಕ ವರ್ಗವು ತಾವೇ ಶ್ರೇಷ್ಠ ಮತ್ತು ಇತರ ಧರ್ಮದ ಜನರೆಂದರೆ ಕನಿಷ್ಠ ಎಂಬ ಪ್ರವೃತ್ತಿ ಬೆಳೆಸಿಕೊಳ್ಳುವುದೇ ಕೋಮುವಾದವಾಗಿದೆ.

22.ಕೋಮುವಾದಕ್ಕೆ ಒಂದು ಕಾರಣವನ್ನು ಕೊಡಿ?

ಉ: ಭಾರತದಲ್ಲಿ ಬ್ರಿಟಿಷರು ಹಿಂದೂ, ಮುಸ್ಲಿಂ ಧರ್ಮಗಳ ನಡುವೆ ಒಡಕನ್ನು ಮೂಡಿಸಿ ಕೋಮುವಾದವನ್ನು ಪ್ರೋತ್ಸಾಹಿಸಿದರು.

23.ಭಯೋತ್ಪಾದನೆ ಇದರ ಮೂಲ ಪದ ಯಾವುದು?

ಉ: ಈ ಪದವು ಲ್ಯಾಟಿನ್‌ ಭಾಷೆಯ ಟೆರೆರೆ (ಭಯೋತ್ಪಾದನೆ) ಎಂಬ ಮೂಲ ಪದದಿಂದ ಬಂದಿದೆ.

24.ಭಯೋತ್ಪಾದನೆ ಅಥವಾ ಉಗ್ರವಾದ ಅಥವಾ ಆತಂಕವಾದ ಎಂದರೇನು?

ಉ: ಒಂದು ಸಂಘಟಿತ ಗುಂಪು ಅಥವಾ ಪಕ್ಷ ವ್ಯವಸ್ಥಿತವಾದ ಹಿಂಸೆಯನ್ನು ಉಪಯೋಗಿಸಿ ತನ್ನ ಮುಖ್ಯ ಗುರಿ ಸಾಧಿಸಿಕೊಳ್ಳಲು ಅನುಸರಿಸುವ ವಿಧಾನವೇ ಭಯೋತ್ಪಾದನೆ.

25.ಭಯೋತ್ಪಾದನೆಗೆ ಒಂದು ಕಾರಣ ಕೊಡಿ?

ಉ: ಧಾರ್ಮಿಕ ಮೂಲಭೂತವಾದವು ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ.

26.ಎರಡು ಭಯೋತ್ಪಾದಕ ಸಂಘಟನೆಗಳ ಹೆಸರು ಬರೆಯಿರಿ?

ಉ: ತಾಲಿಬಾನ್‌, ಇಂಡಿಯನ್‌, ಮುಜಾಹಿದ್ದೀನ್.‌

27.MISA ವಿಸ್ತರಿಸಿ ಬರೆಯಿರಿ?

ಉ: ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ – 1971ರಲ್ಲಿ ಜಾರಿ.

28.NSA ವಿಸ್ತರಿಸಿ ಬರೆಯಿರಿ?

ಉ: ರಾಷ್ಟ್ರೀಯ ಭದ್ರತಾ ಕಾಯ್ದೆ – 1980ರಲ್ಲಿ ಜಾರಿ.

29.TADA ವಿಸ್ತರಿಸಿ ಬರೆಯಿರಿ?

ಉ: ಭಯೋತ್ಪಾದನೆ ಮತ್ತು ವಿಚ್ಚಿದ್ರಕಾರಿ ಚಟುವಟಿಕೆಗಳು ನಿಗ್ರಹ ಕಾಯ್ದೆ -1987ರಲ್ಲಿ ಜಾರಿ.

30.POTA ವಿಸ್ತರಿಸಿ ಬರೆಯಿರಿ?

ಉ: ಭಯೋತ್ಪಾದನೆ ಕೃತ್ಯಗಳ ನಿಗ್ರಹ ಕಾಯ್ದೆ.

31.UAPA ವಿಸ್ತರಿಸಿ ಬರೆಯಿರಿ?

ಉ: ಕಾನೂನು ವಿರೋದಿ ಚಟುವಟಿಕೆಗಳ ನಿಗ್ರಹ ಕಾಯ್ದೆ.

32.JKLF ವಿಸ್ತರಿಸಿ ಬರೆಯಿರಿ?

ಉ: ಜಮ್ಮು-ಕಾಶ್ಮೀರ್‌ ಲಿಬರೇಶನ್‌ ಫ್ರಂಟ್.‌

33.HC ವಿಸ್ತರಿಸಿ ಬರೆಯಿರಿ?

ಉ: ಹುರಿಯತ್‌ ಕಾನ್ಫರೆನ್ಸ್‌

34.MNF ವಿಸ್ತರಿಸಿ ಬರೆಯಿರಿ?

ಉ: ಮಿಜೋ ನ್ಯಾಷನಲ್ ಫ್ರಂಟ್.‌

35.ULFN ವಿಸ್ತರಿಸಿ ಬರೆಯಿರಿ?

ಉ: ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ನಾಗಾಲ್ಯಾಂಡ್.‌

36.PWG ವಿಸ್ತರಿಸಿ ಬರೆಯಿರಿ?

ಉ: ಪೀಪಲ್ಸ್‌ ವಾರ್‌ ಗ್ರೂಪ್.‌

37.ಭ್ರಷ್ಟಾಚಾರ ಎಂದರೇನು?

ಉ: ವ್ಯಕ್ತಿಗತ ಲಾಭಕ್ಕಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವುದೇ ಭ್ರಷ್ಟಾಚಾರ.

38.ಭ್ರಷ್ಟಾಚಾರದ ಕೆಲವು ರೂಪಗಳನ್ನು ತಿಳಿಸಿ?

ಉ: ಭ್ರಷ್ಟಾಚಾರ ಎನ್ನುವುದು ಅನಧಿಕೃತ ಶುಲ್ಕಗಳು, ಕೊಡುಗೆಗಳು, ಲಂಚ-ರುಷವತ್ತು, ಹಫ್ತಾ, ಇತ್ಯಾದಿ ಹಲವು ರೂಪಗಳನ್ನು ಒಳಗೊಂಡಿದೆ.

39.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯು ಯಾವಾಗ ಜಾರಿಗೆ ಬಂದಿತು?

ಉ: 1988ರಲ್ಲಿ ಜಾರಿಗೆ ಬಂದಿತು.

40.ಲೋಕ ಪಾಲರನ್ನು ಯಾರು ನೇಮಿಸುತ್ತಾರೆ? ಇವರ ಅಧಿಕಾರ ಅವಧಿ ಎಷ್ಟು?

ಉ: ಭಾರತದ ರಾಷ್ಟ್ರಪತಿ ನೇಮಿಸುತ್ತಾರೆ. ಅಧಿಕಾರ ಅವಧಿ 5 ವರ್ಷಗಳು.

41.ಲೋಕಾಯುಕ್ತರನ್ನು ಯಾರು ನೇಮಿಸುತ್ತಾರೆ? ಇವರ ಅಧಿಕಾರ ಅವಧಿ ಎಷ್ಟು?

ಉ: ರಾಜ್ಯದ ರಾಜ್ಯಪಾಲರು ನೇಮಿಸುತ್ತಾರೆ. ಇವರ ಅಧಿಕಾರ 5 ವರ್ಷಗಳು.

42.ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆ ಯಾವಾಗ ಜಾರಿಗೆ ಬಂದಿತು?

ಉ: ರಾಮಕೃಷ್ಣಹೆಗಡೆ ನೇತೃತ್ವದಲ್ಲಿ ಸರ್ಕಾರವು ಇದನ್ನು ಕರ್ನಾಟಕದಲ್ಲಿ 1984ರಲ್ಲಿ ಸ್ಥಾಪಿಸಿದರು.

43.ದೇಶದಲ್ಲೇ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ತಂದ ಮೊದಲನೆಯ ರಾಜ್ಯ ಯಾವುದು?

ಉ: 1973ರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಗೆ ಬಂದಿತು.

44.ಇಂದಿನ ಕರ್ನಾಟಕ ಲೋಕಾಯುಕ್ತರು ಯಾರು?

ಉ: ನ್ಯಾಯಮೂರ್ತಿ, ಪಿ.ವಿಶ್ವನಾಥಶೆಟ್ಟಿ.

45.ಇಂದಿನ ಕರ್ನಾಟಕ ಉಪಲೋಕಾಯುಕ್ತರು ಯಾರು?

ಉ: ನ್ಯಾಯಮೂರ್ತಿ, ಎನ್.ಆನಂದ್‌ ಮತ್ತು ಬಿ.ಎಸ್.ಪಾಟೀಲ್.‌

46. ಭ್ರಷ್ಟಾಚಾರದ ವಿರುದ್ಧ ಭಾರತ ಎಂಬ ಚಳುವಳಿಯನ್ನು ಯಾರು ನಡೆಸಿದರು?

ಉ: ಅಣ್ಣಾಹಜಾರೆ ಅವರ ನಾಯಕತ್ವದಲ್ಲಿ 2011ರಲ್ಲಿ ಚಳುವಳಿ ನಡೆಯಿತು?

ಎರಡು ಅಂಕದ ಪ್ರಶ್ನೆಗಳು

1.ಉತ್ತಮ ಆಡಳಿತ ಎಂದರೇನು?

ಉ: ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರದುರುಪಯೋಗ, ಅಧಿಕಾರಲಾಲಸೆ, ಉದಾಸೀನ, ಇತ್ಯಾದಿಗಳಿಗೆ ಅವಕಾಶ ನೀಡದೆ, ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ, ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವುದನ್ನು ಉತ್ತಮ ಆಡಳಿತ ಎಂದು ಕರೆಯಬಹುದು.

2.ರಾಷ್ಟ್ರ ನಿರ್ಮಾಣದ ಅರ್ಥವನ್ನು ತಿಳಿಸಿ?

ಉ: ರಾಷ್ಟ್ರ ನಿರ್ಮಾಣ ಎನ್ನುವುದು ರಾಷ್ಟ್ರ-ರಾಜ್ಯಗಳ ಮೂಲ ಸಿದ್ಧಾಂತದಿಂದ ಪ್ರೇರಿತವಾಗಿದೆ. ಪ್ರಜೆಗಳು ತಮ್ಮ ಬೇಧ-ಭಾವನೆಗಳನ್ನು ತೊರೆದು ಸಂಘಟಿತರಾಗಿ ಏಕತೆಯಿಂದ ಒಗ್ಗಟ್ಟಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಿ ದೇಶದ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಪರಿಹರಿಸಲು ಪ್ರಯತ್ನಿಸುವ ಪ್ರಕ್ರಿಯೆಯಾಗಿದೆ.

3.ಬಾಲ ಕಾರ್ಮಿಕ ಪದ್ಧತಿಯು ಅನಕ್ಷರತೆಗೆ ಹೇಗೆ ಕಾರಣವಾಗಿದೆ?

ಉ: ಭಾರತದಲ್ಲಿ ದುರ್ಬಲ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಿಂದ ಬಾಲಕಾರ್ಮಿಕ ಪದ್ಧತಿಯು ವ್ಯಾಪಕವಾಗಿದೆ. 2011ರ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು ಎರಡುಕೋಟಿ ಬಾಲಕಾರ್ಮಿಕರಿದ್ದಾರೆ. ಇವರ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದು ಅನಕ್ಷರತೆಗೆ ಒಂದು ಕಾರಣವಾಗಿದೆ.

4.ಅನಕ್ಷರತೆಯನ್ನು ಒಂದು ಅಸ್ವಾತಂತ್ರ್ಯ ಎಂದು ಹೇಳಿದವರು ಯಾರು ಅದಕ್ಕೆ ಕಾರಣವೇನು?

ಉ:ಭಾರತದ ಖ್ಯಾತ ಅಂತರಾಷ್ಟ್ರೀಯ ಮಾನ್ಯತೆಗಳಿಸಿರುವ ಮತ್ತು ನೋಬಲ್‌ ಬಹುಮಾನ ಪಡೆದಿರುವ ಅರ್ಥಶಾಸ್ತ್ರಜ್ಞರಾದ ಅಮಾರ್ಥ್ಯಸೇನ್‌ ಈ ರೀತಿ ಹೇಳಿದ್ದಾರೆ ಅನಕ್ಷರಸ್ಥರು ಸ್ವಾತಂತ್ರ್ಯದ ಫಲ ಮತ್ತು ಅವಕಾಶಗಳನ್ನು ಅನುಭವಿಸಲು ವಿಫಲರಾಗುತ್ತಾರೆಂಬುದು ಅವರ ಅಭಿಪ್ರಾಯ.

5.ಭಯೋತ್ಪಾದನೆಯ ಒಂದು ವ್ಯಾಖ್ಯಾನವನ್ನು ಬರೆಯಿರಿ?

ಉ: ಅಮೆರಿಕಾದ ರಕ್ಷಣಾ ಇಲಾಖೆಯ ಅಭಿಪ್ರಾಯದಂತೆ ಭಯೋತ್ಪಾದನೆಯು ಪೂರ್ವಯೋಜಿತ ಉತ್ತಮವಾಗಿ ಸಂಘಟಿತವಾದ ತರಬೇತಿ ಹೊಂದಿದ ಗುಂಪುಗಳು, ಕಾನೂನು ವಿರೋಧಿ ಶಸ್ತ್ರಸಜ್ಜಿತ ಮತ್ತು ಹಿಂಸೆಯ ಮೂಲಕ ತಮ್ಮ ಗುರಿಗಳನ್ನು ಸಾಧಿಸಿಕೊಳ್ಳಲು ಅನುಸರಿಸುವ ಕೃತ್ಯವಾಗಿದೆ.

6.ಭಯೋತ್ಪಾದಕರು ಚುನಾವಣೆಗಳನ್ನು ಏಕೆ ಬಹಿಷ್ಕರಿಸುತ್ತಾರೆ?

ಉ: ಭಯೋತ್ಪಾದಕರು ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ ಅಧಿಕಾರಿಗಳನ್ನು, ಅಭ್ಯರ್ಥಿಗಳನ್ನು ಅಪಹರಿಸುವುದು, ಮತಗಟ್ಟೆ ಮತಯಂತ್ರಗಳನ್ನು ನಾಶಪಡಿಸುವ ಮೂಲಕ ಶಾಂತಿಯುತ ಮತದಾನಕ್ಕೆ ಅಡ್ಡಿಪಡಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನೇ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಾರೆ. ಜನರಲ್ಲಿ ಇದರಿಂದ ಅಭದ್ರತೆಯ ಭಾವನೆ ಉಂಟಾಗಲು ಕಾರಣವಾಗುತ್ತದೆ.

7.ಭ್ರಷ್ಟಾಚಾರದ ಒಂದು ವ್ಯಾಖ್ಯಾನವನ್ನು ಬರೆಯಿರಿ?

ಉ: ಭ್ರಷ್ಟಾಚಾರ ಎನ್ನುವುದು ಖಾಸಗಿ ಸ್ವಾರ್ಥ ಉದ್ದೇಶಗಳಿಗಾಗಿ ಸಾರ್ವಜನಿಕ ಕರ್ತವ್ಯಗಳ ಔಪಚಾರಿಕ ಮಾರ್ಗವನ್ನು ಬದಲಿಸುವುದಾಗಿದೆ.

8.ಕಡ್ಡಾಯ ಶಿಕ್ಷಣ ಕಾಯ್ದೆಯ ಎರಡು ಮುಖ್ಯಾಂಶಗಳನ್ನು ತಿಳಿಸಿ?

ಉ:    1) 6 ರಿಂದ 14 ವರ್ಷದೊಳಗಿನ ವಯೋಮಾನದ ದೇಶದ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವುದು ಸರ್ಕಾರದ ಜವಾಬ್ದಾರಿ.

        2)ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವುದು.

9.ಅನಕ್ಷರತೆಗೆ ಕಾರಣಗಳನ್ನು ತಿಳಿಸಿ?

ಉ:    1) ಜನಸಂಖ್ಯಾ ಸ್ಪೋಟ

        2) ಬಡತನ

        3) ಸಾಮಾಜಿಕ ಹಿಂದುಳಿದಿರುವಿಕೆ

        4) ಬಾಲಕಾರ್ಮಿಕ ಪದ್ಧತಿ

10.ಕೋಮುವಾದಕ್ಕೆ ಕಾರಣಗಳನ್ನು ತಿಳಿಸಿ?

ಉ:    1) ಭಾರತದಲ್ಲಿ ಬ್ರಿಟೀಷರು ಅನುಸರಿಸಿದ ಒಡೆದು ಆಳುವ ನೀತಿ.

        2) ಹಿಂದೂ-ಮುಸ್ಲೀಂ ರಾಷ್ಟ್ರೀಯ ವಾದ [ಕೋಮುವಾದ]

        3) ಸ್ವಾತಂತ್ರ್ಯ ನಂತರ ಸಂಭಿವಸಿದ ಹಿಂದೂ-ಮುಸ್ಲಿಂ ಕೋಮುಗಲಬೆಗಳು.

        4) ರಾಜಕೀಯ ಪಕ್ಷಗಳಿಂದ ಕೋಮುಭಾವನೆಗೆ ಪ್ರಚೋದನೆ.

11.ಭ್ರಷ್ಟಾಚಾರದ ಅರ್ಥವನ್ನು ಬರೆಯಿರಿ?

ಉ: ರಾಜಕಾರಣಿಗಳು, ಸರ್ಕಾರಿನೌಕರರು, ತಮ್ಮ ವ್ಯಕ್ತಿಗತ ಲಾಭಕ್ಕಾಗಿ ತಮ್ಮ ಅಧಿಕಾರ ಸ್ಥಾನಗಳನ್ನು ದುರುಪಯೋಗ ಪಡಿಸಿಕೊಂಡು ಹಣ ಗಳಿಸುವುದೇ ಭ್ರಷ್ಟಾಚಾರ.

12. ಭ್ರಷ್ಟಾಚಾರಕ್ಕೆ ಕಾರಣಗಳನ್ನು ತಿಳಿಸಿ?

ಉ:    1) ಹಣಗಳಿಸಬೇಕೆಂಬ ದುರಾಸೆ

        2) ಸ್ವಾರ್ಥಪರ ಚಿಂತನೆ

        3) ಭ್ರಷ್ಟರಾಜಕಾರಣಿಗಳು

        4) ನೈತಿಕ ಮೌಲ್ಯಗಳ ಕೊರತೆ

13.ಜಾತಿ ಆಧಾರಿತ ಅಸಮಾನತೆಗೆ ಪರಿಹಾರಗಳನ್ನು ತಿಳಿಸಿ?

ಉ:    1) ಶೋಷಿತ ವರ್ಗಗಳಿಗೆ ಶಿಕ್ಷಣದಲ್ಲಿ ಕಲ್ಪಿಸಿರುವ ಮೀಸಲಾತಿ

        2) ಶೋಷಿತ ವರ್ಗಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಕಲ್ಪಿಸಿರುವ ಮೀಸಲಾತಿ

        3) ಪರಿಶಿಷ್ಟಜಾತಿ-ಪರಿಶಿಷ್ಟ ಪಂಗಡಗಳಿಗೆ ಶಾಸನ ಸಭೆಗಳಲ್ಲಿ ಕಲ್ಪಿಸಿರುವ ಮೀಸಲಾತಿ

        4) ಸ್ಥಳೀಯ ಸಂಸ್ಥೆಗಳಲ್ಲಿ ಕಲ್ಪಿಸಿರುವ ಮೀಸಲಾತಿ

14.ಭಯೋತ್ಪಾದನೆಯನ್ನು ತಡೆಯಲು ಪರಿಹಾರವಾಗಿ ಸರ್ಕಾರ ಕೈಗೊಂಡಿರುವ ಸಾಮಾಜಿಕ ಆರ್ಥಿಕ ಕ್ರಮಗಳನ್ನು ತಿಳಿಸಿ?

ಉ:    1) ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದವರನ್ನು ಮನವೊಲಿಸಿ ಸಾಮಾಜಿಕ ಮುಖ್ಯವಾಹಿನಿಗೆ ತರುವುದು.

        2) ಯುವಕರಿಗೆ ಉತ್ತಮವಾದ ನೈತಿಕ ಮತ್ತು ರಾಷ್ಟ್ರಪ್ರೇಮ ಕುರಿತು ಶಿಕ್ಷಣವನ್ನು ನೀಡುವುದು.

        3) ಯುವ ಜನರಿಗೆ ಉದ್ಯೋಗ ಅವಕಾಶಗಳನ್ನು ನೀಡುವ ಮೂಲಕ ಆರ್ಥಿಕ ಭದ್ರತೆಯನ್ನು ನೀಡುವುದು.

        4) ದೇಶದ ವಿವಿಧ ಭಾಗಗಳಲ್ಲಿ ಕಂಡುಬರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವುದು.

15.ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ ಇಬ್ಬರು ನ್ಯಾಯಾಧೀಶರು ಯಾರು?

ಉ:    1) ನ್ಯಾಯಮೂರ್ತಿ, ಎನ್.ವೆಂಕಟಾಚಲ

        2) ನ್ಯಾಯಮೂರ್ತಿ, ಎನ್.ಸಂತೋಷ್‌ ಹೆಗಡೆ

16.ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುವ ಅಗತ್ಯ ಅಂಶಗಳನ್ನು ತಿಳಿಸಿ?

ಉ:    1) ಜನತೆಯ ಬೆಂಬಲ

        2) ಉತ್ತಮವಾದ ಆಡಳಿತ ವ್ಯವಸ್ಥೆ

        3) ಸಮರ್ಥವಾದ ನಾಯಕತ್ವ

        4) ಉತ್ತಮ ರಾಜಕೀಯ ಸಂಸ್ಕೃತಿ

        5) ಸಮಾಜದ ಎಲ್ಲಾ ವರ್ಗಗಳ ಜನರಿಗೆ ಅಧಿಕಾರದ ಹಂಚಿಕೆ

        6) ಉತ್ತಮ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ

        7) ರಾಷ್ಟ್ರೀಯ ಗುಣ ಮತ್ತು ದೇಶಾಭಿಮಾನವನ್ನು ಬೆಳೆಸುವುದು

        8) ಉತ್ತಮ ಮತ್ತು ಜವಾಬ್ದಾರಿಯುತ ಸಮೂಹ ಮಾಧ್ಯಮಗಳು

        9) ಬುದ್ಧಿಜೀವಿಗಳ ಮಾರ್ಗದರ್ಶನ

        10) ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು.

*******

PUC I Year All Chapter Videos

PUC II Year All Chapter Videos

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon