2nd PUC Political Science Question And Answer | Chapter 1 | ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ |
2nd PUC Political Science Question And Answer
ಅಧ್ಯಾಯ-1
ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ
ಒಂದು ಅಂಕದ ಪ್ರಶ್ನೋತ್ತರಗಳು:
1. ಭಾರತ ಯಾವಾಗ ಸ್ವಾತಂತ್ರ್ಯವಾಯಿತು?
ಉ: 1947 ಅಗಸ್ಟ್ 15
2. ಭಾರತ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಉ: 1950 ಜನೆವರಿ 26
3. ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಅಸ್ತಿತ್ವಕ್ಕೆ ಬಂದಿತು.
ಉ: 1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಿತು.
4. ಯಾವ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕ್ರೌನ್ಗೆ ವರ್ಗಾಯಿಸಿತು?
ಉ: 1858ರ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕ್ರೌನ್ಗೆ ವರ್ಗಾಯಿಸಿತು.
5. ಡಯಾರ್ಕಿ ಎಂದರೇನು?
ಉ: ದ್ವಿ ಸರ್ಕಾರ ಪದ್ಧತಿಯನ್ನು ಡಯಾರ್ಕಿ ಎಂದು ಕರೆಯಲಾಗುತ್ತದೆ.
6. ಸೈಮನ್ ಆಯೋಗ & ಶಾಸನಾತ್ಮಕ ಆಯೋಗವನ್ನು ಏಕೆ ರಚಿಸಲಾಯಿತು?
ಉ: 1919ರ ಕಾಯ್ದೆಯ ಬಗ್ಗೆ ವಿಮರ್ಶಿಸಲು ಹಾಗೂ ಡಯಾರ್ಕಿಯ ಕಾರ್ಯವೈಖರಿಯ ಬಗ್ಗೆ ವರದಿ ನೀಡಲು ಶಾಸನಾತ್ಮಕ ಆಯೋಗವನ್ನು ರಚಿಸಲಾಯಿತು.
7. ಸೈಮನ್ ಆಯೋಗವು ಏನನ್ನು ಶಿಫಾರಸ್ಸು ಮಾಡಿತು?
ಉ: ಸೈಮನ್ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕು ಎಂದು ಶಿಫಾರಸ್ಸು ಮಾಡಿತು.
8. 3ನೇ ದುಂಡು ಮೇಜಿನ ಸಮ್ಮೇಳನ ಯಾವಾಗ ನಡೆಯಿತು?
ಉ: 1932ರಲ್ಲಿ 3ನೇ ದುಂಡು ಮೇಜಿನ ಸಮ್ಮೇಳನ ನಡೆಯಿತು.
9. 1935ರ ಭಾರತದ ಸ್ವಾತಂತ್ರ್ಯ ಕಾಯ್ದೆಯ ಒಂದು ಮುಖ್ಯಾಂಶವನ್ನು ಬರೆಯಿರಿ?
ಉ: ಸಂಯುಕ್ತ ಸರ್ಕಾರ ಪದ್ಧತಿ ಮತ್ತು ಅಧಿಕಾರಿ ವಿಭಜನೆ 1935ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಮುಖ್ಯಾಂಶಗಳಾಗಿವೆ.
10. 1947ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಒಂದು ಮುಖ್ಯಾಂಶವನ್ನು ಬರೆಯಿರಿ?
ಉ: 15ನೇ ಆಗಸ್ಟ್ 1947ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವಾತಂತ್ರ ಡೊಮಿನಿಯನ್ಗಳನ್ನು ಸ್ಥಾಪಿಸಿ ಈ ಕಾಯ್ದೆಗೆ ಅವಕಾಶ ನೀಡಿತು.
11. ಗಡಿ ರೇಖೆ ಆಯೋಗದ ಅಧ್ಯಕ್ಷರು ಯಾರು?
ಉ: ಸರ್ ಸಿರಿಲ್ ರಾಡ್ ಕ್ಲಿಪ್ ರವರು ಗಡಿ ರೇಖೆ ಆಯೋಗದ ಅಧ್ಯಕ್ಷರಾಗಿದ್ದರು.
12. ಮಧ್ಯಂತರ ಸರ್ಕಾರ ಯಾವಾಗ ರಚನೆಯಾಯಿತು?
ಉ: 2ನೇ ಸೆಪ್ಟೆಂಬರ್ 1946 ರಂದು ಮಧ್ಯಂತರ ಸರ್ಕಾರ ರಚನೆಯಾಯಿತು.
13. ಯಾವ ಸಭೆಯು ಮಧ್ಯಂತರ ಸರ್ಕಾರವನ್ನು ರಚಿಸಿತು?
ಉ: ರಾಜ್ಯಾಂಗ ರಚನಾ ಸಭೆಯು ಮಧ್ಯಂತರ ಸರ್ಕಾರವನ್ನು ರಚಿಸಿತು.
14. ಎಲ್ಲಿಯವರೆಗೂ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು?
ಉ: 15ನೇ ಆಗಸ್ಟ್ 1947 ರವರೆಗೆ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿತ್ತು.
15. ವೈಸ್ರಾಯ್ ರವರ ಕಾರ್ಯಕಾರಿ ಮಂಡಲಿಯ ಉಪಾಧ್ಯಕ್ಷರು ಯಾರು?
ಉ: ಪಂಡಿತ್ ಜವಾಹರಲಾಲ್ ನೆಹರೂರವರು ವೈಸ್ರಾಯ್ ರವರ ಕಾರ್ಯಕಾರಿ ಮಂಡಲಿಯ ಉಪಾಧ್ಯಕ್ಷರಾಗಿದ್ದರು.
16. ಪ್ರಥಮ ಸಾರ್ವತ್ರಿಕ ಚುನಾವಣೆ ಯಾವಾಗ ನಡೆಯಿತು?
ಉ: ಅಕ್ಟೋಬರ್ 1951ರಿಂದ ಫೆಬ್ರವರಿ 1952ರವರೆಗೆ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆಯಿತು.
17. ಯಾವ ದೇಶವನ್ನು ಜಗತ್ತಿನ ಬೃಹತ್ ಪ್ರಜಾಸತ್ತಾತ್ಮಕ ದೇಶ ಎಂದು ಕರೆಯುತ್ತಾರೆ?
ಉ: ಭಾರತ ದೇಶವನ್ನು ಜಗತ್ತಿನ ಬೃಹತ್ ಪ್ರಜಾಸತ್ತಾತ್ಮಕ ದೇಶ ಎಂದು ಕರೆಯುತ್ತಾರೆ.
18. ಪ್ಯಾರಾಮೌಂಟ್ಸಿ ಎಂದರೇನು?
ಉ: ದೇಶೀಯ ಸಂಸ್ಥಾನಗಳು ಆಂತರಿಕ ವಿಷಯಗಳಿಗೆ ಮಾತ್ರ ಆಡಳಿತ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ವಿದೇಶಿ ವ್ಯವಹಾರಗಳು ಮತ್ತು ಮಿಲಿಟರಿ ವಿಷಯಗಳಿಗೆ ಸಂಬಂಧಿಸಿದಂತೆ ಬ್ರಿಟೀಷರ ನಿಯಂತ್ರಣಕ್ಕೆ ಒಳಪಟ್ಟಿರುವುದನ್ನು ಪ್ಯಾರಾಮೌಂಟ್ಸಿ ಎನ್ನುವರು.
19. “ಆಪರೇಷನ್ ಪೋಲೋ” ಎಂದರೇನು?
ಉ: ಹೈದರಬಾದ್ ನಿಜಾಮರ ದುರಾಡಳಿತದ ಅರಾಜಕತೆಯನ್ನು ಅಂತ್ಯಗೊಳಿಸಲು ಭಾರತದ ಸೇನೆಯು ನಡೆಸಿದ ಪೋಲೀಸ್ ಕಾರ್ಯಾಚರಣೆಯನ್ನು “ಆಪರೇಷನ್ ಪೋಲೋ” ಎಂದು ಕರೆಯುವರು.
20. ಇನ್ ಸ್ಟ್ರುಮೆಂಟ್ ಆಫ್ ಅಕ್ಸೆಷನ್ ಎಂದರೇನು?
ಉ: ಭಾರತದ ರಾಜ್ಯಗಳು ಮೂರು ವಿಷಯಗಳಾದ ರಕ್ಷಣೆ, ವಿದೇಶಾಂಗ ವ್ಯವಹಾರಗಳು ಮತ್ತು ಸಂಪರ್ಕಗಳಿಗೆ ಸಂಬಂಧಿಸಿದಂತೆ ಭಾರತದ ಒಕ್ಕೂಟದಲ್ಲಿ ಸೇರ್ಪಡೆಯಾಗಲು ಮಾಡಿಕೊಂಡ ಒಪ್ಪಂದ ಪತ್ರವನ್ನು ಇನ್ ಸ್ಟ್ರುಮೆಂಟ್ ಆಫ್ ಅಕ್ಸೆಷನ್ ಎನ್ನುವರು.
21. ಸಂವಿಧಾನದ ಯಾವ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿತು?
ಉ: ಸಂವಿಧಾನದ 370ನೇ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿತು.
22. ರಾಜ್ಯಗಳ ಏಕೀಕರಣದ ರೂವಾರಿ ಯಾರು?
ಉ: ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರು ರಾಜ್ಯಗಳ ಏಕೀಕರಣದ ರೂವಾರಿಯಾಗಿದ್ದರು.
23. ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ?
ಉ: ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರನ್ನು ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ.
24. ರಾಜ್ಯ ಪುನರ್ ರಚನಾ ಆಯೋಗದ ಒಬ್ಬ ಸದಸ್ಯರನ್ನು ಹೆಸರಿಸಿ?
ಉ: ಫಜಲ್ ಆಲಿ, ಕೆ.ಎಂ.ಪಣಿಕ್ಕರ್ ಮತ್ತು ಹೃದಯನಾಥ್ ಕುಂಜ್ರು ರಾಜ್ಯ ಪುನರ್ ರಚನಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರಾಗಿದ್ದಾರೆ.
25. ರಾಜ್ಯ ಪುನರ್ ರಚನಾ ಆಯೋಗ ಯಾವಾಗ ರಚನೆಯಾಯಿತು?
ಉ: 1953ರಲ್ಲಿ ರಾಜ್ಯ ಪುನರ್ ರಚನಾ ಆಯೋಗ ರಚನೆಯಾಯಿತು.
26. ರಾಜ್ಯ ಪುನರ್ ರಚನಾ ಕಾಯ್ದೆಯು ಯಾವಾಗ ಅಂಗೀಕಾರವಾಯಿತು?
ಉ:1956ರಲ್ಲಿ ರಾಜ್ಯ ಪುನರ್ ರಚನಾ ಕಾಯ್ದೆಯು ಅಂಗೀಕಾರವಾಯಿತು.
27. 1956ರಲ್ಲಿ ರಾಜ್ಯ ಪುನರ್ ರಚನಾ ಕಾಯ್ದೆಯು ಎಷ್ಟುರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತು?
ಉ: 1956ರಲ್ಲಿ ರಾಜ್ಯ ಪುನರ್ ರಚನಾ ಕಾಯ್ದೆಯು ಭಾರತದ ಒಕ್ಕೂಟವನ್ನು 14 ರಾಜ್ಯಗಳಲ್ಲಿ ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಚಿಸಿತು.
28. ಬಾಂಬೆಯನ್ನು ಯಾವಾಗ ವಿಭಜಿಸಲಾಯಿತು?
ಉ: 1960ರಲ್ಲಿ ಬಾಂಬೆಯನ್ನು ವಿಭಜಿಸಲಾಯಿತು.
29. ಪಂಜಾಬ್ ಅನ್ನು ಯಾವಾಗ ವಿಭಜಿಸಲಾಯಿತು?
ಉ: 1966ರಲ್ಲಿ ಪಂಜಾಬ್ ಅನ್ನು ವಿಭಜಿಸಲಾಯಿತು.
30. 2014ರಲ್ಲಿ ಯಾವ ರಾಜ್ಯವನ್ನು ವಿಭಜಿಸಲಾಯಿತು?
ಉ: ಆಂಧ್ರಪ್ರದೇಶವನ್ನು 2014ರಲ್ಲಿ ವಿಭಜಿಸಲಾಯಿತು.
31. ಯಾವ ಕಾಯ್ದೆಯು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಪ್ರಚುರ ಪಡಿಸಿತು?
ಉ: 1919ರ ಕಾಯ್ದೆಯು ಭಾರತದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಪ್ರಚುರ ಪಡಿಸಿತು.
32. ಭಾರತದಲ್ಲಿ ಸಂಯುಕ್ತ ವ್ಯವಸ್ಥೆಗೆ ಯಾವ ಕಾಯ್ದೆಯು ಅವಕಾಶ ಕಲ್ಪಿಸಿತು?
ಉ: 1935ರ ಕಾಯ್ದೆಯು ಭಾರತದಲ್ಲಿ ಸಂಯುಕ್ತ ವ್ಯವಸ್ಥೆಗೆ ಅವಕಾಶ ಕಲ್ಪಿಸಿತು.
33. ಪ್ರಥಮ ಲೋಕಸಭೆಯ ಸ್ಪೀಕರ್ ಯಾರು?
ಉ: ಶ್ರೀ ಜಿ.ವಿ.ಮಾವಳಂಕರ್ ರವರು ಪ್ರಥಮ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು.
ಎರಡು ಅಂಕದ ಪ್ರಶ್ನೋತ್ತರಗಳು
1. ಫೆಡರಲ್ ನ್ಯಾಯಾಲಯ ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು?
ಉ: ಫೆಡರಲ್ ನ್ಯಾಯಾಲಯ 1937ರಲ್ಲಿ ದೆಹಲಿಯಲ್ಲಿ ಸ್ಥಾಪನೆಯಾಯಿತು.
2. ಬಾಂಬೆಯನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಮತ್ತು ಅವು ಯಾವುವು?
ಉ:ಬಾಂಬೆಯನ್ನು ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಅವುಗಳೆಂದರೆ ಮಹಾರಾಷ್ಟ್ರ ಮತ್ತು ಗುಜರಾತ್
3. ಪಂಜಾಬನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಮತ್ತು ಅವು ಯಾವುವು?
ಉ: ಪಂಜಾಬನ್ನು ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ಅವುಗಳೆಂದರೆ ಪಂಜಾಬ್ ಮತ್ತು ಹರ್ಯಾಣ.
4. ಪ್ರಥಮ ಲೋಕಸಭಾ ಚುನಾವಣೆಯ ಬಗ್ಗೆ ಟಿಪ್ಪಣಿ ಬರೆಯಿರಿ?
ಉ: ಪ್ರಥಮ ಲೋಕಸಭಾ ಚುನಾವಣೆ 1951 ಅಕ್ಟೋಬರ್ ನಿಂದ 1952 ಫೆಬ್ರವರಿ ವರೆಗೆ ನಡೆಯಿತು. 70 ರಾಜಕೀಯ ಪಕ್ಷಗಳು ಸ್ಪರ್ದಿಸಿದ್ದವು. ಕಾಂಗ್ರೇಸ್ ಪಕ್ಷ ಬಹುಮತದೊಂದಿಗೆ ಜಯಗಳಿಸಿತು. ಡಾ.ಬಿ.ಆರ್.ಅಂಬೇಡ್ಕರ್ ರವರು ಬಾಂಬೆಯಲ್ಲಿ ಸೋಲನ್ನು ಅನುಭವಿಸಿದರು.
5. 1935ರ ಕಾಯ್ದೆಯಲ್ಲಿ ಎಷ್ಟು ವಿಧಿಗಳು ಮತ್ತು ಷೆಡ್ಯೂಲ್ ಗಳಿವೆ?
ಉ: 1935ರ ಕಾಯ್ದೆಯಲ್ಲಿ 321 ವಿಧಿಗಳು ಮತ್ತು 10 ಷೆಡ್ಯೂಲ್ ಗಳಿವೆ.
Comments
Post a Comment
If any doubt Comment me