2nd PUC Sociology Notes | ಅಧ್ಯಾಯ-2 | ಸಾಮಾಜಿಕ ಅಸಮಾನತೆ ಮತ್ತು ಹೊರಗುಳಿಯುವಿಕೆ

ಅಧ್ಯಾಯ-2
ಸಾಮಾಜಿಕ ಅಸಮಾನತೆ ಮತ್ತು ಹೊರಗುಳಿಯುವಿಕೆ

I.ಒಂದು ಅಂಕದ ಪ್ರಶ್ನೆಗಳಿಗೆ ತಲಾ ಒಂದು ವಾಕ್ಯದಲ್ಲಿ ಉತ್ತರಿಸಿ:-
1.ಜಾತಿ ಎಂಬ ಪದವು ಹೇಗೆ ಉತ್ಪತ್ತಿಯಾಗಿದೆ?
ಉ: ಸ್ಪಾನಿಷ್‌ ಅಥವಾ ಪೋರ್ಚುಗೀಸ್‌ ಪದವಾದ ಕಾಸ್ಟಾ ಎಂಬ ಪದದಿಂದ ಉತ್ಪತ್ತಿಯಾಗಿದೆ.


2.ಬುಡಕಟ್ಟು ಪಂಚಶೀಲದ ಪ್ರತಿಪಾದಕರು ಯಾರು?
ಉ: ಪಂಡಿತ್‌ ಜವಾಹರ್‌ ಲಾಲ್‌ ನೆಹರು.


3.ಪರಿಶಿಷ್ಟ ಜಾತಿ ಎಂಬ ಪದವನ್ನು ಪರಿಚಯಿಸಿದವರು ಯಾರು?
ಉ: ಬ್ರಿಟೀಷರು 1928ರ ಸೈಮನ್‌ ಆಯೋಗದಲ್ಲಿ ಪರಿಚಯಿಸಿದರು.


4.ಹರಿಜನ ಎಂಬ ಪದವನ್ನು ಜನಪ್ರಿಯ ಗೊಳಿಸಿದವರು ಯಾರು?
ಉ: ಮಹಾತ್ಮಾಗಾಂಧೀಜಿ.


5.ಹರಿಜನ ಎಂಬ ಪದವನ್ನು ಪರಿಚಯಿಸಿದವರು ಯಾರು?
ಉ: ಗುಜರಾತಿನ ಸಂನ್ಯಾಸಿ ನರಸಿನ್ಹಾ ಮೆಹತ್ತಾ.


6.ದಕ್ಷಿಣ ವಲಯದ ಯಾವುದಾದರು ಒಂದು ಬುಡಕಟ್ಟು ಜನಾಂಗವನ್ನು ಹೆಸರಿಸಿ?
ಉ: ಸೋಲಿಗರು.


7.ಪ್ರತ್ಯೇಕತಾನೀತಿಯನ್ನು ಪ್ರತಿಪಾದಿಸಿದವರು ಯಾರು?
ಉ: ವೆರಿಯರ್‌ ಎಲ್ಫಿನ್‌ ಮತ್ತು ಜೆ.ಹೆಚ್.ಹಟನ್‌


8.ಭಾರತ ಸರ್ಕಾರ ನೇಮಿಸಿದ ಹಿಂದುಳಿದ ವರ್ಗಗಳ ಆಯೋಗಗಳಲ್ಲಿ ಒಂದನ್ನು ತಿಳಿಸಿ?
ಉ: ಕಾಕಾಸಾಹೇಬ್‌ ಕಾಲೇಲ್ಕರ್.‌


9.ಕ್ಯಾಸ್ಟ್‌ ಅಂಡ್‌ ರೇಸ್‌ ಇನ್‌ ಇಂಡಿಯಾ ಗ್ರಂಥದ ಲೇಖಕರು ಯಾರು?
ಉ: ಜಿ.ಎಸ್.ಘುರ್ಯ


10.ಪ್ರಬಲ ಜಾತಿಯ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು?
ಉ: ಡಾ.ಎಂ.ಎನ್.ಶ್ರೀನಿವಾಸ್.‌


11.ಕ್ಯಾಸ್ಟ್‌ ಇನ್‌ ಇಂಡಿಯಾ ಗ್ರಂಥದ ಲೇಖಕರು ಯಾರು?
ಉ: ಜೆ.ಹೆಚ್.ಹಟನ್‌


12.ಪೀಪಲ್‌ ಆಫ್‌ ಇಂಡಿಯಾ ಗ್ರಂಥದ ಲೇಖಕರು ಯಾರು?
ಉ: ಹರ್ಬರ್ಟ್‌ ರಿಸ್ಲೆ


13.ಆದಿವಾಸಿಗಳನ್ನು ಗಿರಿಜನ ಎಂದು ಕರೆದವರು ಯಾರು?
ಉ: ಮಹಾತ್ಮ ಗಾಂಧೀಜಿ.


14.ಆದಿವಾಸಿಗಳನ್ನು ಹಿಂದುಳಿದ ಹಿಂದುಗಳು ಎಂದು ಕರೆದವರು ಯಾರು?
ಉ: ಜಿ.ಎಸ್.ಘುರ್ಯೆ


15.ಜಾತಿಯ ಯಾವುದಾದರು ಒಂದು ಲಕ್ಷಣವನ್ನು ತಿಳಿಸಿ?
ಉ: ವಿವಾಹದ ಮೇಲಿನ ನಿರ್ಬಂಧಗಳು.


16.ಕರ್ನಾಟಕದ ಮೊದಲ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಯಾರು?
ಉ: ನಾಗನ ಗೌಡ ಆಮೋಗ.


17.ಭಾರತದ ಮೊದಲ ಹಿಂದುಳಿದ ಆಯೋಗದ ಅಧ್ಯಕ್ಷರು ಯಾರು?
ಉ: ಕಾಕಾಸಾಹೇಬ್‌ ಕಾಲೇಲ್ಕರ್.‌


18.ಕರ್ನಾಟಕದ ಶಾಶ್ವತ ಹಿಂದುಳಿದ ಆಯೋಗದ ಪ್ರಸ್ತುತ ಅಧ್ಯಕ್ಷರು ಯಾರು?
ಉ: ಹೆಚ್.ಕಾಂತರಾಜು.


19.ಹಿಸ್ಟರಿ ಆಫ್‌ ಕ್ಯಾಸ್ಟ್‌ ಇನ್‌ ಇಂಡಿಯಾದ ಲೇಖಕರು ಯಾರು?
ಉ: ಎಸ್.ವಿ.ಕೇತ್ಕರ್.‌


20.ಯಾವ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಪಂಗಡದ ಜನರಿದ್ದಾರೆ?
ಉ: ಮಿಝೋರಾಂ.


21.ಯಾವ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಪಂಗಡಗಳಿವೆ?
ಉ: ಮಧ್ಯಪ್ರದೇಶ


22.ಪಕ್ಕಾ ಆಹಾರ ಎಂದರೇನು?
ಉ: ಬೆಣ್ಣೆ ಅಥವಾ ತುಪ್ಪದಿಂದ ತಯಾರಾದ ಆಹಾರ.


23.ಕಚ್ಚಾ ಆಹಾರ ಎಂದರೇನು?
ಉ: ನೀರಿನಿಂದ ತಯಾರಾದ ಆಹಾರ.


24.ಯಾವ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ ಜನರಿದ್ದಾರೆ?
ಉ: ಉತ್ತರಪ್ರದೇಶ


25.ಆಧುನಿಕ ಭಾರತದಲ್ಲಿ ಜಾತಿಯಲ್ಲಿ ಬದಲಾವಣೆಗಳು ಎಂಬ ಗ್ರಂಥವನ್ನು ಬರೆದವರು ಯಾರು?
ಉ: ಎಂ.ಎನ್.ಶ್ರೀನಿವಾಸ್‌


II.ಎರಡು ಅಂಕದ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ:-
1.ಕರ್ನಾಟಕದ ಎರಡು ಪ್ರಬಲ ಜಾತಿಗಳನ್ನು ಹೆಸರಿಸಿ?
ಉ: ಒಕ್ಕಲಿಗರು ಮತ್ತು ಲಿಂಗಾಯಿತರು.


2.ಸಾಮಾಜಿಕ ಅಸಮಾನತೆಯ ಅರ್ಥವನ್ನು ತಿಳಿಸಿ?
ಉ: ಸಾಮಾಜಿಕ ಸಂಪನ್ಮೂಲಗಳ ಲಭ್ಯತೆಯ ಅಸಮಾನ ಅವಕಾಶಗಳನ್ನು ಸಾಮಾಜಿಕ ಅಸಮಾನತೆ ಎನ್ನುತ್ತೇವೆ.


3.ಜಾತಿಯ ಒಂದು ವ್ಯಾಖ್ಯೆಯನ್ನು ತಿಳಿಸಿ?
ಉ: ಹರ್ಬರ್ಟ್‌ ರಿಸ್ಲೆ “ಸಾಮಾನ್ಯ ಹೆಸರು ಪುರಾಣ ಪುರುಷನೊಬ್ಬನ ಮೂಲವನ್ನು ವಂಶಾವಳಿಯ ಆಧಾರ” ಒಂದೇ ವೃತ್ತಿಯನ್ನು ಕೈಗೊಳ್ಳುವ ಏಕರೂಪಿ ಸಮುದಾಯವಾಗಿದೆ.


4.ಜಾತಿ ವ್ಯವಸ್ಥೆಯಲ್ಲಾದ ಎರಡು ಬದಲಾವಣೆಗಳನ್ನು ತಿಳಿಸಿ?
ಉ:    1)ಆಹಾರ ನಿರ್ಬಂಧನೆಗಳಲ್ಲಿ ಬದಲಾವಣೆಗಳು.
        2)ವಿವಾಹ ನಿರ್ಬಂಧನೆಗಳಲ್ಲಿನ ಬದಲಾವಣೆಗಳು.


5.ವೇದಗಳಲ್ಲಿ ಉಲ್ಲೇಖಿಸಿರುವ ಯಾವುದಾದರೂ ಎರಡು ಬುಡಕಟ್ಟು ಪಂಗಡಗಳನ್ನು ತಿಳಿಸಿ?
ಉ: ಭರತ, ಕಿನ್ನರ, ನಿಷಾದ


6.ಯಾವುದಾದರೂ ಎರಡು ಸಮಾಜಸುಧಾರಣಾ ಆಂದೋಲನವನ್ನು ತಿಳಿಸಿರಿ?
ಉ:    1)ಬ್ರಹ್ಮ ಸಮಾಜ
        2)ಆರ್ಯ ಸಮಾಜ


7.ಸಾಮಾಜಿಕ ಪ್ರತ್ಯೇಕತೆ ಅಥವಾ ಹೊರಗುಳಿಯುವಿಕೆ ಎಂದರೇನು?
ಉ: ಸಮಾಜದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸುವ ವಿಧಾನಗಳಿಗೆ ಸಾಮಾಜಿಕ ಹೊರಗುಳಿಯುವಿಕೆ ಎನ್ನುತ್ತೇವೆ.


8.ಜಾತಿ ವ್ಯವಸ್ಥೆಯ ಬದಲಾವಣೆಗೆ  ಕಾರಣವಾದ ಎರಡು ಅಂಶಗಳನ್ನು ತಿಳಿಸಿ?
ಉ:   1)ಸಾರ್ವತ್ರಿಕ ಕಾನೂನುಗಳನ್ನು ಜಾರಿಗೊಳಿಸಿರುವುದು
        2)ಆಂಗ್ಲಶಿಕ್ಷಣದ ಪ್ರಭಾವ


9.ಪ್ರಬಲ ಜಾತಿಯ ಎರಡು ನಿರ್ಧಾರಕ ಅಂಶಗಳನ್ನು ತಿಳಿಸಿ?
ಉ:   1)ಸಂಖ್ಯೆಯಲ್ಲಿ ಹೆಚ್ಚಳ
        2)ಉನ್ನತ ಸ್ಥಾನಮಾನ


10.ಪರಿಶಿಷ್ಟ ಜಾತಿಯವರ ಎರಡು ಸಮಸ್ಯೆಗಳನ್ನು ತಿಳಿಸಿ?
ಉ:  1)ಸಾಮಾಜಿಕ ದೌರ್ಬಲ್ಯತೆ – ಸಾರ್ವಜನಿಕ ಸೌಲಭ್ಯಗಳ ಅನರ್ಹತೆಗಳು
        2)ಧಾರ್ಮಿಕ ನಿರ್ಬಂಧನೆಗಳು – ಧಾರ್ಮಿಕ ಸ್ಥಳಗಳಲ್ಲಿ ಪ್ರವೇಶಾವಕಾಶ ನಿರಾಕರಣೆ.


11.ಬುಡಕಟ್ಟು ಜನಾಂಗದ ಮೂರು ವಲಯಗಳನ್ನು ತಿಳಿಸಿ?
ಉ:  1)ಉತ್ತರ ಹಾಗೂ ಈಶಾನ್ಯ ವಲಯ
        2)ಕೇಂದ್ರವಲಯ
        3)ದಕ್ಷಿಣವಲಯ


12.ಭಾರತೀಯ ಬುಡಕಟ್ಟು ಪಂಗಡಗಳ ಯಾವುದಾದರೂ ಎರಡು ಸಮಸ್ಯೆಗಳನ್ನು ತಿಳಿಸಿ?
ಉ:   1)ಭೌಗೋಳಿಕ ಪ್ರತ್ಯೇಕತೆ
        2)ಸಾಂಸ್ಕೃತಿಕ ಸಮಸ್ಯೆಗಳು


13.ಬುಡಕಟ್ಟು ಕಲ್ಯಾಣದ ಮೂರು ದೃಷ್ಟಿಕೋನವನ್ನು ತಿಳಿಸಿ?
ಉ:   1)ಪ್ರತ್ಯೇಕತೆಯ ನೀತಿ
        2)ಸ್ವಾಂಗೀಕರಣದ ನೀತಿ
        3)ಐಕ್ಯತೆಯ ನೀತಿ


14.ಹಿಂದುಳಿದಿರುವಿಕೆಯನ್ನು ನಿರ್ಧರಿಸುವ ಎರಡು ಮಾನದಂಡಗಳನ್ನು ತಿಳಿಸಿ?
ಉ:    1)ಸಾಮಾಜಿಕ ಮಾನದಂಡ
        2)ಆರ್ಥಿಕ ಮಾನದಂಡ
        3)ಶೈಕ್ಷಣಿಕ ಮಾನದಂಡ
15.ಜಾತಿಪದ್ಧತಿಯ ಬದಲಾವಣೆಗೆ ಕಾರಣವಾದ ಎರಡು ಸಾಮಾಜಿಕ ಸುಧಾರಣಾ ಚಳುವಳಿಗಳನ್ನು ತಿಳಿಸಿ?
ಉ:  1)ಆರ್ಯಸಮಾಜ
        2)ಪ್ರಾರ್ಥನಾಸಮಾಜ


16.ಪ್ರಬಲ ಜಾತಿಯನ್ನು ವ್ಯಾಖ್ಯಾನಿಸಿ?
ಉ: ಸಂಖ್ಯಾತ್ಮಕ ಪ್ರಾಬಲ್ಯವನ್ನು ಹೊಂದಿರುವ, ಆರ್ಥಿಕ ಮತ್ತು ರಾಜಕೀಯ ಅಧಿಕಾರ ಹೊಂದಿರುವ, ಸ್ಥಳೀಯ ಜಾತಿ ಏಣಿಯಲ್ಲಿ ಉನ್ನತ ಮಟ್ಟದ ಧಾರ್ಮಿಕ ಅಂತಸ್ತು ಹೊಂದಿರುವ ಜಾತಿಯನ್ನು ಪ್ರಬಲ ಜಾತಿ ಎನ್ನುತ್ತೇವೆ.


17.ಹಿಂದುಳಿದ ವರ್ಗ ಅಥವಾ ಜಾತಿಯನ್ನು ವ್ಯಾಖ್ಯಾನಿಸಿ?
ಉ: ಜಾತಿ, ಧರ್ಮ, ಜನಾಂಗ, ಭಾಷೆ, ವೃತ್ತಿ ಮುಂತಾದ ಅಂಶಗಳಲ್ಲಿ ಹಿಂದುಳಿದಿವೆ ಎಂದು ಗುರುತಿಸಬಹುದಾದ ಸಮೂಹವಾಗಿದ್ದು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ರಾಜಕೀಯ ಇತ್ಯಾದಿಗಳಲ್ಲಿ ಹಿಂದುಳಿದಿರುವುದಕ್ಕೆ ಖಚಿತವಾದ ಲಕ್ಷಣಗಳನ್ನು ಹೊಂದಿರಬಹುದಾದ ಸಮೂಹವನ್ನು ಹಿಂದುಳಿದ ವರ್ಗವನ್ನು  ಹಿಂದುಳಿದ ವರ್ಗ ಎನ್ನುತ್ತೇವೆ.


18.ಕರ್ನಾಟಕದ ಯಾವುದಾದರು ಎರಡು ಪರಿಶಿಷ್ಟ ಜಾತಿಯನ್ನು ಹೆಸರಿಸಿ?
ಉ: ಲಂಬಾಣಿ, ಬೋವಿ


19.ಕರ್ನಾಟಕದ ಯಾವುದಾದರು ಎರಡು ಪರಿಶಿಷ್ಟ ಪಂಗಡಗಳನ್ನು ತಿಳಿಸಿ?
ಉ:   1)ಸೋಲಿಗ
        2)ಕಾಡುಕುರುಬ
        3)ಜೇನುಕುರುಬ
        4)ಕೆನರಾ


20.ಭಾರತದ ಹಿಂದುಳಿದ ವರ್ಗದ ಎರಡು ಆಯೋಗಗಳನ್ನು ತಿಳಿಸಿ?
ಉ:   1)ಕಾಕಾಸಾಹೇಬ್‌ ಕಾಲೇಲ್ಕರ್‌ ಆಯೋಗ
        2)ಬಿ.ಪಿ.ಮಂಡಲ್‌ ಆಯೋಗ


21.ಕರ್ನಾಟಕದ ಯಾವುದಾದರು ಎರಡು ಹಿಂದುಳಿದ ವರ್ಗಗಳ ಆಯೋಗವನ್ನು ತಿಳಿಸಿ?
ಉ:   1)ನಾಗನಗೌಡ ಆಯೋಗ
        2)ವೆಂಕಟಸ್ವಾಮಿ ಆಯೋಗ


22.ಕೆನೆಪದರ ಪರಿಕಲ್ಪನೆಯನ್ನು ವ್ಯಾಖ್ಯಾನಿಸಿ?
ಉ: ಕೆನೆಪದರ ಪರಿಕಲ್ಪನೆ 1971ರಲ್ಲಿ ಸಂತಾನಂ ಆಯೋಗದಲ್ಲಿ ತಿಳಿಸಲಾಯಿತು ಈ ಆಯೋಗವು ಇತರೇ ಹಿಂದುಳಿದ ಕೆನೆಪದರ ವರ್ಗವನ್ನು ಮೀಸಲಾತಿಯಿಂದ ಹೊರಗಿಡಬೇಕೆಂದು ಸೂಚಿಸಿತು. ಇತರೆ ಹಿಂದುಳಿದ ಜಾತಿ, ವರ್ಗ ಶ್ರೀಮಂತ ಮತ್ತು ಸುರಕ್ಷಿತ ವರ್ಗವನ್ನು ಸೂಚಿಸಲು ಬಳಸುತ್ತೇವೆ. ಇವರು ಸರ್ಕಾರದ ಮೀಸಲಾತಿ ಮತ್ತು ಇತರ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.


23.ಇತರೆ ಹಿಂದುಳಿದ ವರ್ಗಗಳು ಎಂದರೇನು?
ಉ: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರದ ಕೆಳ ಮತ್ತು ಮಧ್ಯಶ್ರೇಣಿ ಜಾತಿಗಳನ್ನು ಇತರೆ ಹಿಂದುಳಿದ ವರ್ಗ ಎನ್ನುತ್ತೇವೆ.


24.ಜಾತಿ ವ್ಯವಸ್ಥೆಯ ಬದಲಾವಣೆಗೆ ಕಾರಣವಾದ ಯಾವುದಾದರೂ ಎರಡು ಶಾಸನಗಳನ್ನು ತಿಳಿಸಿ?
ಉ:   1)ವಿಧವಾ ಪುನರ್‌ ವಿವಾಹ ಕಾಯ್ದೆ – 1856
        2)ವಿಶೇಷ ವಿವಾಹ ಕಾಯ್ದೆ – 1872


ಐದು ಅಂಕಗಳ ಪ್ರಶ್ನೆಗಳು:-
1.ಬುಡಕಟ್ಟು ಪಂಚಶೀಲ ತತ್ವಗಳನ್ನು ವಿವರಿಸಿ?
ಉ:   1)ಬುಡಕಟ್ಟು ಪಂಗಡಗಳು ತಮ್ಮದೇ ಆದ ಸಾಮರ್ಥ್ಯದಿಂದ  ಅಭಿವೃದ್ಧಿಹೊಂದಲು ಅವಕಾಶ ನೀಡಿ ಅವರ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಹಿಸಬೇಕು.
        2)ಭೂಮಿ ಮತ್ತು ಅರಣ್ಯಗಳ ವಿಚಾರದಲ್ಲಿ ಬುಡಕಟ್ಟುಗಳ ಹಕ್ಕುಗಳನ್ನು ಗೌರವಿಸುವುದು.
        3)ಬುಡಕಟ್ಟು ಪ್ರದೇಶಗಳ ಆಡಳಿತ ಅಭಿವೃದ್ಧಿಗೆ ತರಬೇತಿನೀಡಿ ಅವರ ಕ್ಷೇತ್ರಗಳಿಗೆ ಹೊರಗಿನವರ ಪ್ರವೇಶವನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
        4)ಬುಡಕಟ್ಟು ಪ್ರದೇಶಗಳಲ್ಲಿ ಒಂದೇಸಾರಿಗೆ ಹಲವಾರು ಯೋಜನೆಗಳನ್ನು ಕೈಗೊಳ್ಳಬಾರದು ಮತ್ತು ಅವರ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡಬಾರದು.
        5)ಬುಡಕಟ್ಟುಗಳ ಕಲ್ಯಾಣ ಸಾಧನೆಯನ್ನು ಅವರ ವ್ಯಕ್ತಿತ್ವದ ಪ್ರಗತಿಯ ಮೂಲಕ ಗುರುತಿಸಬೇಕೇ ವಿನಃ ಅವರಿಗಾಗಿ ಖರ್ಚುಮಾಡಿದ ಹಣದಿಂದಲ್ಲ.


2.ಸ್ವಾತಂತ್ರ್ಯ ಪೂರ್ವ ಅಥವಾ ಬ್ರಿಟೀಷ್‌ ಕಾಲಾವಧಿಯಲ್ಲಿ ಜಾತಿವ್ಯವಸ್ಥೆಯ ಬದಲಾವಣೆಗಳನ್ನು ವಿವರಿಸಿ?
ಉ:   1)ಸಾರ್ವತ್ರಿಕ ಕಾನೂನುಗಳ ಪರಿಚಯ.
        2)ಆಂಗ್ಲ ಶಿಕ್ಷಣದ ಪ್ರಭಾವ.
        3)ಸಮಾಜ ಸುಧಾರಣಾ ಚಳುವಳಿಗಳ ಪ್ರಭಾವ.
        4)ಹೊಸ ಸಾಮಾಜಿಕ ವ್ಯವಸ್ಥೆಯ ಪ್ರಭಾವ.
        5)ಸ್ವಾತಂತ್ರ್ಯ ಚಳುವಳಿಯ ಪ್ರಭಾವ.
        6)ಔದ್ಯೋಗೀಕರಣ ಮತ್ತು ನಗರೀಕರಣದ ಪ್ರಭಾವ.


3.ಸ್ವತಂತ್ರ ಭಾರತದಲ್ಲಿ ಜಾತಿ ವ್ಯವಸ್ಥೆಯಲ್ಲಾದ ಕಾರ್ಯತ್ಮಕ ಬದಲಾವಣೆ ತಿಳಿಸಿ?
ಉ:   1)ವೃತ್ತಿಯ ಆಯ್ಕೆಗಳು ಮುಕ್ತವಾಗಿದೆ.
        2)ಜಾತಿ ಪಂಚಾಯಿತಿಗಳು ನಶಿಸಿದೆ.
        3)ಸಹ ಭೋಜನ ನಿರ್ಬಂಧಗಳು ಸಡಿಲಗೊಂಡಿವೆ.
        4)ಜಾತಿಯ ದೈವ ಸೃಷ್ಠಿ ನಂಬಿಕೆ ಬದಲಾಗಿದೆ.
        5)ವೃತ್ತಿ ಮತ್ತು ವೈವಾಹಿಕ ನಿರ್ಬಂಧನಗಳು ಕಡಿಮೆಯಾಗಿವೆ.


4.ಸ್ವತಂತ್ರ ಭಾರತದಲ್ಲಿ ಜಾತಿ ವ್ಯವಸ್ಥೆಯಲ್ಲಿ ಪಾತ್ರದಲ್ಲಿನ ಅಥವಾ ರಚನಾತ್ಮಕ ಬದಲಾವಣೆಗಳನ್ನು ತಿಳಿಸಿ?
ಉ:   1)ಜಾತಿ ಆಧಾರಿತ ಚುನಾವಣೆ.
        2)ಹೆಚ್ಚುತ್ತಿರುವ ಜಾತಿ ಪ್ರಜ್ಞೆ ಮತ್ತು ಜಾತಿ ಸಂಘಟನೆಗಳು.
        3)ಆಧುನಿಕ ಸಂಪರ್ಕ ಮತ್ತು ಸಂವಹನ ಮಾಧ್ಯಮಗಳ ಪ್ರಭಾವ.
        4)ಆಧುನಿಕ ಶಿಕ್ಷಣದ ಪ್ರಭಾವ.
        5)ಆಧುನಿಕ ಜಾತಿ ಸಂಘಟನೆಗಳು.


5.ಪ್ರಬಲ ಜಾತಿಯ ಸ್ವರೂಪ ಅಥವಾ ನಿರ್ಧಾರಕ ಅಂಶಗಳನ್ನು ತಿಳಿಸಿ?
ಉ:   1)ಪ್ರಾಬಲ್ಯ ನಿರ್ಧಾರಕಗಳು.
        2)ಪ್ರಾಬಲ್ಯದ ಹಂಚಿಕೆ.
        3)ಪ್ರಾಬಲ್ಯವು ಪೂರ್ಣವಾಗಿ ಸ್ಥಳೀಯವಲ್ಲ.
        4)ಜಾತಿಯ ಪ್ರಾಬಲ್ಯವನ್ನು ಪ್ರಭಾವಿಸುತ್ತಿರುವ ಹೊಸ ಅಂಶಗಳು.
        5)ರಾಜ್ಯ ಮಟ್ಟದಲ್ಲಿ ಪ್ರಬಲ ಜಾತಿಗಳು.


6.ಪರಿಶಿಷ್ಟ ಜಾತಿಗಳ ಸಮಸ್ಯೆ ಅಥವಾ ದೌರ್ಬಲ್ಯಗಳನ್ನು ವಿವರಿಸಿ?
ಉ:   1)ಸಾಮಾಜಿಕ ದೌರ್ಬಲ್ಯಗಳು-ಸಾರ್ವಜನಿಕ ಸೌಲಭ್ಯಗಳ ಬಳಕೆಗೆ ನಿರಾಕರಣೆ.
        2)ಆರ್ಥಿಕ ದೌರ್ಬಲ್ಯತೆಗಳು-ಸಾಮಾಜಿಕ ಘನತೆ ಮತ್ತು ಲಾಭದಾಯಕ ವೃತ್ತಿಯಿಂದ ಹೊರಗಿಡುವಿಕೆ. ದೈಹಿಕ ಶ್ರಮಕ್ಕೆ ಸೀಮಿತ.
        3)ಧಾರ್ಮಿಕ ದೌರ್ಬಲ್ಯಗಳು-ಧಾರ್ಮಿಕ ನಿರ್ಬಂಧಗಳಿಗೆ ಗುರಿಯಾಗಿದ್ದರು.


7.ಭಾರತೀಯ ಬುಡಕಟ್ಟುಪಂಗಡಗಳ ಭೌಗೋಳಿಕ ಹಂಚಿಕೆಯನ್ನು ತಿಳಿಸಿ?
ಉ:   1)ಉತ್ತರ ಮತ್ತು ಈಶಾನ್ಯ ವಲಯ-ಗಾರೋ, ಖಾಸಿ, ನಾಗಾ
        2)ಮಧ್ಯಮ ವಲಯ-ಗೊಂಡರು, ಭಿಲ್ಲರು, ಸಂತಾಲರು.
        3)ದಕ್ಷಿಣ ವಲಯ-ಸೋಲಿಗ, ಕೆನರಾ, ಕಾಡುಕುರುಬ.


8.ಪರಿಶಿಷ್ಟ ಪಂಗಡಗಳ ಸಮಸ್ಯೆಗಳನ್ನು ವಿವರಿಸಿ?
ಉ:   1)ಭೌಗೋಳಿಕ ಪ್ರತ್ಯೇಕತೆ

2)ಸಾಂಸ್ಕೃತಿಕ ಸಮಸ್ಯೆಗಳು.

3)ಸಾಮಾಜಿಕ ಸಮಸ್ಯೆ

4)ಆರ್ಥಿಕಸಮಸ್ಯೆಗಳು.

5)ಅರಣ್ಯ ಕಾರ್ಯಾಚರಣೆಯಲ್ಲಿ ಬುಡಕಟ್ಟು ಜನರ ಶೋಷಣೆ.

6)ಆರೋಗ್ಯ ಸಮಸ್ಯೆ

7)ಶೈಕ್ಷಣಿಕ ಸಮಸ್ಯೆ.                   

9.ಬುಡಕಟ್ಟು ಕಲ್ಯಾಣದ ಮೂರು ದೃಷ್ಟಿಕೋನಗಳು ಯಾವುವು?
ಉ:   1)ಪ್ರತ್ಯೇಕತೆಯ ನೀತಿ ವೆರಿಯರ್‌ ಎಲ್ವಿನ್‌, ಜೆ.ಹೆಚ್.ಹಟನ್.‌
        2)ಸ್ವಾಂಗೀಕರಣ ನೀತಿ ಠಕ್ಕರ್‌ ಭಾಪ, ಜಿ.ಎಸ್.ಘುರ್ಯೆ ಸ್ವಯಂ ಸೇವಾಸಂಘಟನೆಗಳು.
        3)ಐಕ್ಯತೆಯ ನೀತಿ ಪಂಡಿತ್‌ ಜವಹರಲಾಲ್‌ ನೆಹರು, ಎಂ.ಎನ್.ಶ್ರೀನಿವಾಸ್.‌


10.ಇತರ ಹಿಂದುಳಿದ ವರ್ಗಗಳ ಸಮಸ್ಯೆಯನ್ನು ತಿಳಿಸಿ?
ಉ:    1)ಹಿಂದುಳಿದ ವರ್ಗಗಳು ಅನಿಶ್ಚಿತವಾದ ಅಮೂರ್ತವಾದ ಮತ್ತು ಅಸಂಘಟಿತವಾದ ಸಮೂಹಗಳಾಗಿವೆ.
        2)ಆರ್ಥಿಕವಾಗಿ ಹಿಂದುಳಿದಿರುವಿಕೆ.
        3)ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿಯುವಿಕೆ.
        4)ರಾಜಕೀಯ ಅಸಂಘಟಿತರು.


11.ಬಿ.ಪಿ.ಮಂಡಲ್‌ ಆಯೋಗದ ಮಾನದಂಡಗಳನ್ನು ತಿಳಿಸಿ?
ಉ:    1)ಸಾಮಾಜಿಕ ಮಾನದಂಡ.
        2)ಶೈಕ್ಷಣಿಕ ಮಾನದಂಡ.
        3)ಆರ್ಥಿಕ ಮಾನದಂಡ.


ಹತ್ತು ಅಂಕಗಳ ಪ್ರಶ್ನೆಗಳು:-
1.ಸಾಂಪ್ರದಾಯಿಕ ಜಾತಿ ವ್ಯವಸ್ಥೆಯಲ್ಲಿನ ಲಕ್ಷಣಗಳನ್ನು ವಿವರಿಸಿ?
ಉ: ಜಿ.ಎಸ್.ಘುರ್ಯ ಅವರು ತಮ್ಮ “ಕ್ಯಾಸ್ಟ್‌ ಅಂಡ್‌ ರೇಸ್‌ ಇನ್‌ ಇಂಡಿಯಾ” ಎಂಬ ಕೃತಿಯಲ್ಲಿ ಜಾತಿಯ ಸಾಂಪ್ರದಾಯಿಕ ಲಕ್ಷಣವನ್ನು ವಿವರಿಸಿದ್ದಾರೆ ಅವು.
        1)ಜಾತಿಯು ಸಮಾಜದ ಹೋಳು ಹೋಳಾದ ಭಾಗವಾಗಿದೆ.
        2)ಶ್ರೇಣಿಕೃತವಾದುದು.
        3)ಆಹಾರದ ಮೇಲಿನ ನಿರ್ಬಂಧನೆಗಳು.
        4)ವಿವಾಹದ ಮೇಲಿನ ನಿರ್ಬಂಧನೆಗಳು.
        5)ವೃತ್ತಿ ಸಂಬಂಧಿತ ನಿರ್ಬಂಧನೆಗಳು.
        6)ನಾಗರಿಕ ಮತ್ತು ಧಾರ್ಮಿಕ ನಿರ್ಬಂಧನೆಗಳು.


2.ಜಾತಿ ವ್ಯವಸ್ಥೆಯಲ್ಲಾದ ಬದಲಾವಣೆಗಳನ್ನು ವಿವರಿಸಿ?
ಉ: ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿ ವ್ಯವಸ್ಥೆಯಲ್ಲಿನ ಬದಲಾವಣೆಗಳು.
        1)ಸಾರ್ವತ್ರಿಕ ಕಾನೂನುಗಳ ಪರಿಚಯ.
        2)ಆಧುನಿಕ ಶಿಕ್ಷಣದ ಪ್ರಭಾವ.
        3)ಸಮಾಜ ಸುಧಾರಣಾ ಚಳುವಳಿಗಳ ಪ್ರಭಾವ.
        4)ಹೊಸ ಸಾಮಾಜಿಕ ವ್ಯವಸ್ಥೆಯ ಪ್ರಭಾವ.
        5)ಸ್ವತಂತ್ರ್ಯ ಚಳುವಳಿಯ ಪ್ರಭಾವ.
        6)ಔದ್ಯೋಗೀಕರಣ ಮತ್ತು ನಗರೀಕರಣ ಪ್ರಭಾವ.
        ಸ್ವಾತಂತ್ರ್ಯ ನಂತರ ಭಾರತದಲ್ಲಿ ಜಾತಿ
        1)ಜಾತಿ ವ್ಯವಸ್ಥೆಯಲ್ಲಿನ ಕಾರ್ಯಾತ್ಮಕ ಬದಲಾವಣೆಗಳು.
        2)ಜಾತಿ ವ್ಯವಸ್ಥೆಯಲ್ಲಿನ ಪಾತ್ರದಲ್ಲಿನ ಬದಲಾವಣೆಗಳು.


3.ಬುಡಕಟ್ಟು ಕುರಿತಂತೆ ಬದಲಾಗುತ್ತಿರುವ ಪರಿಕಲ್ಪನೆಗಳನ್ನು ವಿವರಿಸಿ?
ಉ:    1)ಸಮರೂಪಿ ಸ್ವಾವಲಂಬಿ ಘಟಕವಾಗಿ ಬುಡಕಟ್ಟು ಪಂಗಡಗಳು.
        2)ರಾಜಕೀಯ ವಿಭಾಗವಾಗಿ ಬುಡಕಟ್ಟು ಪಂಗಡಗಳು.
        3)ಒಂದು ಜನಾಂಗವಾಗಿ ಬುಡಕಟ್ಟು ಪಂಗಡಗಳು.
        4)ಬುಡಕಟ್ಟು ಮತ್ತು ಪರಿಶಿಷ್ಟ ಬುಡಕಟ್ಟುಗಳು.
        5)ಪರಿಶಿಷ್ಟ ಪಂಗಡಗಳು ಜನಸಂಖ್ಯಾ ಅಂಶಗಳು.


4.ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗಗಳನ್ನು ವಿವರಿಸಿ?
ಉ:    1)ನಾಗನಗೌಡ ಆಯೋಗ
        2)ಎಲ್.ಜಿ.ಹಾವನೂರ್‌ ಆಯೋಗ
        3)ವೆಂಕಟಸ್ವಾಮಿ ಆಯೋಗ
        4)ಚಿನ್ನಪ್ಪರೆಡ್ಡಿ ಆಯೋಗ
        5)ಶಾಶ್ವತ ಹಿಂದುಳಿದ ಆಯೋಗ.
                1)ಕೆ.ನಾರಾಯಣರೈ           4)ಹೆಚ್.ಕಾಂತರಾಜು
                2)ರವಿವರ್ಮಕುಮಾರ್‌        5)ಮುನಿರಾಜು
                3)ಶಂಕರಪ್ಪ                    6)ಡಾ.ಸಿ.ಎಸ್.ದ್ವಾರಕನಾಥ್‌


5.ಸಮಾನತೆಯತ್ತ ವರದಿ 1974ರ ಬಗ್ಗೆ ಟಿಪ್ಪಣಿ ಬರೆಯಿರಿ?
ಉ:    1)ಸಮಾನತೆಯತ್ತ ವರದಿ 1974ರ ಅರ್ಥ.
        2)ಸಮಾನತೆಯತ್ತ ವರದಿಯ ಉದ್ದೇಶಗಳು.
        3)ವರದಿಯ ಮಹತ್ವ.
******

ದ್ವಿತೀಯ ಪಿ.ಯು.ಸಿ. ಸಮಾಜಶಾಸ್ತ್ರದ ಎಲ್ಲಾ ಅಧ್ಯಾಯಗಳ ನೋಟ್ಸ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon