2nd PUC Sociology Notes | ಅಧ್ಯಾಯ-3 ಒಳಗೊಳ್ಳುವಿಕೆಯ ತಂತ್ರಗಳು

ಅಧ್ಯಾಯ-3
ಒಳಗೊಳ್ಳುವಿಕೆಯ ತಂತ್ರಗಳು

1.ಅಸ್ಪೃಶ್ಯತೆಯನ್ನು  ನಿಷೇದಿಸಿರುವ ಸಂವಿಧಾನದ ವಿಧಿ ಅಥವಾ ಕಲಮು ಯಾವುದು?

ಉ: ಕಲಮು-17ರ ಅನ್ವಯ ಅಸ್ಪೃಶ್ಯತೆಯನ್ನು ನಿಷೇದಿಸಿದೆ.

2.ಸೂಕ್ಷ್ಮ ಹಣಕಾಸು ಪರಿಕಲ್ಪನೆಯನ್ನು ಯಾರು ಪರಿಚಯಿಸಿದರು?

ಉ: ಬಾಂಗ್ಲಾದೇಶದ ಮಹಮದ್‌ ಯುನಿಸ್‌ ರವರು ಪರಿಚಯಿಸಿದ್ದಾರೆ.

3.ಲಿಜ್ಜತ್‌ ಕೇಂದ್ರ ಕಛೇರಿಯು ಎಲ್ಲಿದೆ?

ಉ: ಮುಂಬೈಯಲ್ಲಿದೆ.

4.ಕರ್ನಾಟಕದಲ್ಲಿ ಸೋಲಿಗರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಟನೆ ಯಾವುದು?

ಉ: ವಿವೇಕಾನಂದ ಗಿರಿಜನಕೇಂದ್ರ.

5.”ನಿಶ್ಚಯಾತ್ಮಕಕ್ರಿಯೆ” ಎಂಬ ಪರಿಕಲ್ಪನೆಯನ್ನು ಮೊದಲು ಬಳಸಿದವರು ಯಾರು?

ಉ: ಜಾನ್‌ ಎಫ್.ಕೆನಡಿ.

6.ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಪ್ರಾರಂಭಿಸಿದ ಪತ್ರಿಕೆ ಯಾವುದು?

ಉ: ಹರಿಜನ ಪತ್ರಿಕೆ.

7.ಮೂಕನಾಯಕ ಪತ್ರಿಕೆಯನ್ನು ಪ್ರಾರಂಭಿಸಿದವರು ಯಾರು?

ಉ: ಡಾ.ಬಿ.ಆರ್.ಅಂಬೇಡ್ಕರ್‌

8.”ಅಭಿನವ ಮನು” ಎಂದು ಯಾರನ್ನು ಕರೆದಿದ್ದಾರೆ?

ಉ: ಡಾ.ಬಿ.ಆರ್.ಅಂಬೇಡ್ಕರ್‌.

9.ಎಸ್.ಹೆಚ್.ಜಿ. ಅನ್ನು ವಿಸ್ತರಿಸಿ ಬರೆಯಿರಿ?

ಉ: ಸ್ವ ಸಹಾಯ ಗುಂಪು.

10.ಯಾವ ವರ್ಷವನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷ ಎಂದು ಘೋಷಿಸಲಾಗಿದೆ?

ಉ: 1975ನೇ ವರ್ಷವನ್ನು.

11.”ಬಹಿಷ್ಕೃತ ಹಿತಕಾರಿಣಿಸಭಾ” ಎಂಬ ಸಂಘಟನೆಯನ್ನು ಸ್ಥಾಪಿಸಿದವರು ಯಾರು?

ಉ: ಡಾ.ಬಿ.ಆರ್.ಅಂಬೇಡ್ಕರ್‌ ರವರು ದಲಿತರಿಗೆ ಆತ್ಮಗೌರವವನ್ನೂ ಹೆಚ್ಚಿಸಿಕೊಳ್ಳಲು ಪ್ರಾರಂಭಿಸಿದರು.

12.SEWA ಅನ್ನು ವಿಸ್ತರಿಸಿ?

ಉ: “ಮಹಿಳೆಯರ ಸ್ವ-ಉದ್ಯೋಗ ಸಂಘ”

13.ಸ್ವ ಉದ್ಯೋಗ ಸಂಘವನ್ನು ಸ್ಥಾಪಿಸಿದವರು ಯಾರು?

ಉ: ಇ.ಳಾ.ರ.ಭಟ್.‌

14.ಆದಿವಾಸಿಗಳನ್ನು “ಆದಿಪ್ರಜಾ” ಎಂದು ಕರೆದವರು ಯಾರು?

ಉ: ಠಕ್ಕರ್‌ ಬಾಪಾರವರು.

15.”ಸುಲಭ್‌ ಶೌಚಾಲಯ” ಪರಿಕಲ್ಪನೆಯನ್ನು ಸ್ಥಾಪಿಸಿದವರು ಯಾರು?

ಉ: ಡಾ.ಬಿಂದೇಶ್ವರ ಪಾಠಕ್‌

16. LAMPS ಅನ್ನು ವಿಸ್ತರಿಸಿ?

ಉ: Large Area Multipurpose co-operative Society.

17.SKDRDP ಅನ್ನು  ವಿಸ್ತರಿಸಿ?

ಉ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ.

18.NABARD ಅನ್ನು ವಿಸ್ತರಿಸಿ?

ಉ: National Bank for Agricultural and Rural Development.

(ರಾಷ್ಟ್ರೀಯ ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್.)‌

19.ನಿಶ್ಚಯಾತ್ಮಕ ಕ್ರಿಯೆ ಎಂದರೇನು?

ಉ: ಜಾತಿ, ಧರ್ಮ ಮತ್ತು ಲಿಂಗಗಳನ್ನು ಆಧರಿಸಿ ಉದ್ಯೋಗ ಶಿಕ್ಷಣ ಮತ್ತು ವ್ಯವಹಾರಿಕ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಹೊಂದಿರುವ ಸಮೂಹಿಗಳಿಗೆ ಲಾಭದಾಯಕವಾದ ನೀತಿಗಳನ್ನು ರೂಪಿಸುವುದನ್ನು ನಿಶ್ಚಯಾತ್ಮಕ ಕ್ರಿಯೆ ಎಂದು ಕರೆಯಲಾಗಿದೆ.

20.”ಸೂಕ್ಷ್ಮ ಹಣಕಾಸು” ಎಂದರೇನು?

ಉ: ಬಡ ಮತ್ತು ಕಡಿಮೆ ಆದಾಯವುಳ್ಳ ಕುಟುಂಬಗಳಿಗೆ ಉಳಿತಾಯ ಖಾತೆಗಳು, ಜೀವವಿಮಾನಿಧಿ ಮತ್ತು ಸಾಲ ಮುಂತಾದ ಆರ್ಥಿಕ ಸೇವೆಗಳನ್ನು ಒದಗಿಸುವುದು ಇದರ ಮೂಲಕ ಆದಾಯವನ್ನು ಹೆಚ್ಚಿಸಿ ಅವರ ಜೀವನ ಮಟ್ಟವನ್ನು ಸುಧಾರಿಸಲು ನೆರವಾಗುವುದನ್ನು ಸೂಕ್ಷ್ಮ ಹಣಕಾಸು ಎನ್ನಲಾಗಿದೆ.

21.ಸ್ತ್ರೀ ಶಕ್ತಿ ಎಂದರೇನು?

ಉ: ಸ್ತ್ರೀ ಶಕ್ತಿ ಕಾರ್ಯಕ್ರಮವನ್ನು 2001ನೇ ಸಾಲಿನಲ್ಲಿ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಜಾರಿಗೊಳಿಸಲು ಗ್ರಾಮೀಣ ಮಟ್ಟದಲ್ಲಿ ರಚಿಸಲಾದ ಸ್ತ್ರೀ ಶಕ್ತಿ ಸಮೂಹಗಳನ್ನು ಸ್ತ್ರೀ ಶಕ್ತಿ ಎಂದು ಕರೆಯಲಾಗಿದೆ.

22. ಸ್ತ್ರೀ ಶಕ್ತಿಯ ಎರಡು ಉದ್ದೇಶಗಳನ್ನು ತಿಳಿಸಿ?

ಉ:    1)ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸುವುದು ಮತ್ತು ಸಾಮಾಜಿಕ ಬದಲಾವಣೆಗೆ ವಾತಾವರಣ ನಿರ್ಮಿಸುವುದು.

        2)ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಾಲ ಸೌಲಭ್ಯವನ್ನು ನೀಡುವುದು.

23.ಪರಿಶಿಷ್ಟರ ಉನ್ನತಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಲಾದ 2 ವಿಶಿಷ್ಟ ಯೋಜನೆಗಳನ್ನು ತಿಳಿಸಿ?

ಉ:    1)ಎಸ್.ಸಿ.ಪಿ (ವಿಶೇಷ ಘಟಕ ಯೋಜನೆ)

        2)ಎಸ್.ಸಿ.ಎ.(ವಿಶೇಷ ಕೇಂದ್ರ ನೆರವು)

24.ಆದಿವಾಸಿಗಳ ಕಲ್ಯಾಣಕ್ಕಾಗಿ ಸರಕಾರವು ಕೈಗೊಂಡಿರುವ 2 ಕಾರ್ಯಕ್ರಮಗಳನ್ನು ತಿಳಿಸಿ?

ಉ:    1)ವಿಶಾಲ ಪ್ರದೇಶ ವಿವಿದೋದ್ದೇಶ ಸಂಘಗಳು.

        2)ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ.

25.ರಾಷ್ಟ್ರೀಯ ಮಹಿಳಾ ಆಯೋಗದ 2 ಕಾರ್ಯಗಳನ್ನು ತಿಳಿಸಿ?

ಉ:    1)ಮಹಿಳೆಯರ ದೌರ್ಜನ್ಯಗಳನ್ನು ನಿಯಂತ್ರಿಸುವುದು.

        2)ಸಾಮಾಜಿಕ ಆರ್ಥಿಕ ಮತ್ತು ಕಾನೂನಿನ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು.

5 ಅಂಕದ ಪ್ರಶ್ನೆಗಳು:-

26.ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಜಾರಿಗೆ ತರಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿವರಿಸಿ?

ಉ:    1)ಆರ್ಥಿಕ ಕಲ್ಯಾಣಕ್ಕಾಗಿ ಆಯೋಗಗಳ ರಚನೆಮಾಡುವುದು.

        2)ಆರ್ಥಿಕ ಅವಕಾಶಗಳ ವಿಸ್ತರಣೆ.

        3)ಶೈಕ್ಷಣಿಕ ಅವಕಾಶಗಳ ವಿಸ್ತರಣೆ.

        4)ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದು.

        5)ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಶಿಷ್ಟ ಕಲ್ಯಾಣ.

27.ಮಹಿಳಾ ಸಬಲೀಕರಣದ ಕಾರ್ಯತಂತ್ರಗಳನ್ನು ವಿವರಿಸಿ?

ಉ:    1)ಕಾನೂನಾತ್ಮಕ ತಂತ್ರಗಳು

ಅ) ಸ್ತ್ರೀ ಶೋಷಣೆಯನ್ನು ಕಾನೂನಿನ ದೃಷ್ಟಿಯಿಂದ ನೋಡದೆ ಸಮಾಜ ಶಾಸ್ತ್ರೀಯ ಹಿನ್ನೆಲೆಯಲ್ಲಿ ನೋಡುವುದು. ೧)ಹಿಂದು ವಿವಾಹ ಕಾಯ್ದೆ 1955

ಆ)ಮಹಿಳೆಯರಿಗೆ ಕಾನೂನಿನ ಅಗತ್ಯನೆರವು. ೨)ವರದಕ್ಷಿಣಾ ನಿಷೇಧ ಕಾಯ್ದೆ 1961

ಇ)ಮಹಿಳಾ ಸಂಘಟನೆಗಳಿಗೆ ಕಾನೂನಿನ ನೆರವು.

        2)ಸಾಮಾಜಿಕ ತಂತ್ರಗಳು.

                ಅ)ಮಹಿಳಾ ಕಲ್ಯಾಣ ಕಾರ್ಯಕ್ರಮಗಳ ಜಾರಿ.

                ಆ)ಸಾಮೂಹಿಕ ಮಧ್ಯಮಗಳ ಮಾಲಿಕ ಮಹಿಳೆಯರಿಗೆ ಕಾನೂನಿನ ಜಾಗೃತಿ.

                ಇ)ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರೆಹೊರೆಯವರ ಸಹಾಯ.

                ಈ)ಸಾರ್ವಜನಿಕ ಶಿಕ್ಷಣ ಮತ್ತು ಜಾಗೃತಿ ಹೋರಾಡುವ ಬಲ ಸೃಷ್ಟಿಸುವುದು.

        3)ಆರ್ಥಿಕ ತಂತ್ರಗಳು

ಅ)ಉದ್ಯೋಗಾವಕಾಶಗಳನ್ನು ಪಡೆಯಲು ಶೈಕ್ಷಣಿಕ ಮತ್ತು ವೃತ್ತಿ ತರಬೇತಿ ನೀಡುವುದು.

ಆ)ದೈಹಿಕ ಶ್ರಮ ಕಡಿಮೆ ಮಾಡುವ ತಂತ್ರಜ್ಞಾನದ ಬಲಕೆ.

ಇ)ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ನೀಡುವುದು.

ಈ)ಸ್ವ-ಉದ್ಯೋಗಕ್ಕಾಗಿ ಸಾಲ ಸೌಲಭ್ಯ ನೀಡುವುದು.

ಉ)ಪ್ರಮುಖ ಹುದ್ದೆಗಳಿಗೆ ಮಹಿಳೆಯರಿಗೆ ಅವಕಾಶ ಕಲ್ಪಿಸುವುದು.

28.ಸೂಕ್ಷ್ಮ ಹಣಕಾಸಿನ ಲಕ್ಷಣಗಳನ್ನು ವಿವರಿಸಿ?

ಉ:    1)ಭದ್ರತೆ ಇಲ್ಲದ ಸಾಲ.

        2)ಬಡತನದ ರೇಖೆಯ ಕೆಳಗಿರುವವರಿಗೆ ಸಾಲ ನೀಡುವುದು.

        3)ಸ್ವಸಹಾಯ ಸಂಘದ ಸದಸ್ಯರು ಕೂಡ ಸೂಕ್ಷ್ಮ ಹಣಕಾಸಿನ ಲಾಭ ಪಡೆಯುವುದು.

        4) ಸೂಕ್ಷ್ಮ ಹಣಕಾಸಿನಲ್ಲಿ ಗರಿಷ್ಟಸಾಲದ ಮೊತ್ತ ಕಡಿಮೆಯಿರುತ್ತದೆ.

        5) ಸೂಕ್ಷ್ಮ ಹಣಕಾಸಿನಲ್ಲಿ ಸಾಲವನ್ನು ಸ್ವ-ಸಹಾಯ ಗುಂಪುಗಳು ನಿರ್ಧರಿಸುತ್ತವೆ.

10 ಅಂಕದ ಪ್ರಶ್ನೆಗಳು:-

29.1974ರ ಸಮಾನತೆಯನ್ನು ವರದಿಯನ್ನು ಉದ್ದೇಶಗಳನ್ನು ವಿವರಿಸಿ?

ಉ: ಅರ್ಥ:-ಭಾರತೀಯ ಮಹಿಳೆಯರ ಅಂತಸ್ತು ಮತ್ತು ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರೀಯ ಆಯೋಗವನ್ನು ರಚಿಸಲಾಯಿತು. ಈ ಆಯೋಗದ ವರದಿಯನ್ನು ಸಮಾನತೆಯತ್ತ ವರದಿ 1974 ಎಂದು ಕರೆಯಲಾಗಿದೆ.

ಉದ್ದೇಶಗಳು:-

        1)ಮಹಿಳೆಯರ ಸಾಮಾಜಿಕ ಅಂತಸ್ತು, ಶಿಕ್ಷಣ, ಉದ್ಯೋಗಗಳು ಪ್ರಭಾವವನ್ನು ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಅವಕಾಶಗಳ ಪರಿಶೀಲನೆ.

        2)ಗ್ರಾಮೀಣ ಭಾಗದ ಮಹಿಳೆಯರ ಅಂತಸ್ತಿನ ಪ್ರಭಾವ ಬೀರುವ ಪ್ರಭಾವವನ್ನು ಮೌಲ್ಯಮಾಪನ ಮಾಡುವುದು.

        3)ಮಹಿಳೆಯರಲ್ಲಿ ಶಿಕ್ಷಣದ ಅಭಿವೃದ್ಧಿಯನ್ನು ಅಭ್ಯಸಿಸುವುದು ಕೆಲವು ಕ್ಷೇತ್ರಗಳಲ್ಲಿ ನಿಧಾನ ಪ್ರಗತಿಯ ಕಾರಣಗಳನ್ನು ಸೂಕ್ತ ಪರಿಹಾರಾತ್ಮಕ ಸಲಹೆಗಳನ್ನು ನೀಡುವುದು.

        4)ದುಡಿಯುವ ಮಹಿಳೆಯರ ಸಮಸ್ಯೆಗಳನ್ನು ಪರಿಶೀಲಿಸುವುದು.

        5)ದೇಶ ನಿರ್ಮಾಣದ ಕಾರ್ಯದಲ್ಲಿ ಮಹಿಳೆಯರ ಪಾತ್ರ ನಿರ್ವಹಣೆ ನೀಡುವುದು.

30.ಪರಿಶಿಷ್ಟರ ಉನ್ನತಿಗಾಗಿ ರಚಿಸಲಾದ ಸಂವಿಧಾನಾತ್ಮಕ ಕ್ರಮ ವಿವರಿಸಿ?

ಉ:    1)15ನೇ ಕಲಮು:- ಭಾರತದ ಎಲ್ಲಾ ನಾಗರಿಕರೂ ಸಮಾನರು ಜಾತಿ, ಧರ್ಮ, ಜನಾಂಗ, ಲಿಂಗ, ಜನ್ಮಸ್ಥಳದ ಆದಾರದ ಮೇಲೆ ತಾರತಮ್ಯ ನಿಷೇಧಿಸಿದೆ.

        2)16ನೇ ಕಲಮು:- ಸರ್ಕಾರದ ನೇಮಕಾತಿಗಳನ್ನು ಎಲ್ಲಾ ನಾಗರಿಕರಿಗೂ ಸಮಾನ ಅವಕಾಶ.

        3)17ನೇ ಕಲಮು:- ಅಸ್ಪೃಶ್ಯತೆಯನ್ನು ನಿಷೇಧಿಸಿದೆ.

        4)23ನೇ ಕಲಮು:- ಮಾನವ ಸಾಗಾಣಿಕೆ ಮತ್ತು ಬಲವಂತದ ದುಡಿಮೆ ಕಾನೂನು ಬಾಹಿರ.

        5)25ನೇ ಕಲಮು:- ಸಾರ್ವಜನಿಕ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಎಲ್ಲಾ ಹಿಂದೂಗಳಿಗೆ ಮುಕ್ತ ಪ್ರವೇಶ.

        6)29ನೇ ಕಲಮು:- ಅಲ್ಪ ಸಂಖ್ಯಾತ ಸಮೂಹಗಳಿಗೆ ಅವರ ಭಾಷೆ ಮತ್ತು ಸಂಸ್ಕೃತಿ ಸಂರಕ್ಷಣೆಯ ಹಕ್ಕು.

        7)46ನೇ ಕಲಮು:- ದುರ್ಬಲ ವರ್ಗಗಳ ಹಿತಾಸಕ್ತಿಗಳನ್ನು ರಕ್ಷಿಸಲು ವಿಶೇಷ ಕಾಳಜಿ ವಹಿಸುವುದು.

        8)325ನೇ ಕಲಮು:- ಎಲ್ಲಾ ಭಾರತೀಯ ನಾಗರಿಕರಿಗೂ ಮತದಾನದ ಹಕ್ಕು.

        9)330, 332, 334ನೇ ಕಲಮು:-ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಎಸ್ಸಿ ಮತ್ತು ಎಸ್ಟಿ ಸಮೂದಾಯಗಳನ್ನು ಮೀಸಲಾತಿ ಕಲ್ಪಿಸುವುದು.

        10)335ನೇ ಕಲಮು:- ಉದ್ಯೋಗಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ.

        11)339ನೇ ಕಲಮು:- ಪರಿಶಿಷ್ಟರ ಕಲ್ಯಾಣಕ್ಕಾಗಿ ಆಯೋಗಗಳ ರಚನೆ.

*******

ದ್ವಿತೀಯ ಪಿ.ಯು.ಸಿ. ಸಮಾಜಶಾಸ್ತ್ರದ ಎಲ್ಲಾ ಅಧ್ಯಾಯಗಳ ನೋಟ್ಸ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon