ಅಧ್ಯಾಯ 2 ಸಾಮಾಜೀಕರಣ | 9ನೇ ತರಗತಿ ಸಮಾಜ ಶಾಸ್ತ್ರ | 9ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

ಅಧ್ಯಾಯ 2. ಸಾಮಾಜೀಕರಣ

I ಖಾಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಮಾನವ ಸಾಮಾಜಿಕ ವ್ಯಕ್ತಿಯಾಗುವ ಪ್ರಕ್ರಿಯೆಯನ್ನು _____ ಎನ್ನುತ್ತೇವೆ.

ಉತ್ತರ: ಸಾಮಾಜೀಕರಣ

2. ತಾಯಿಯೇ ಮಗುವಿನ ಮೊದಲ _____ .

ಉತ್ತರ: ಗುರು

3. ಸಾಮಾಜೀಕರಣದ ಪ್ರಮುಖ ನಿಯೋಗಿ ____

ಉತ್ತರ: ಕುಟುಂಬ

4. ರೇಡಿಯೊ ಸಾಮಾಜೀಕರಣದ ____ ನಿಯೋಗಿ.

ಉತ್ತರ: ಸಮೂಹ ಮಾಧ್ಯಮ


II ಈ ಕೆಳಗಿನ ಪ್ರಶ್ನೆಗಳಿಗೆ ಚರ್ಚಿಸಿ ಉತ್ತರ ಬರೆಯಿರಿ.

1. ಸಾಮಾಜೀಕರಣದಲ್ಲಿ ಶಾಲೆಯ ಪಾತ್ರವನ್ನು ವಿವರಿಸಿ.

ಉತ್ತರ: ಮಗುವಿನ ಸಾಮಾಜೀಕರಣದಲ್ಲಿ ಶಾಲೆಯ ಪಾತ್ರ ಮಹತ್ವಪೂರ್ಣವಾದದ್ದು.

* ಶಾಲೆಯಲ್ಲಿ ಶಿಕ್ಷಣದ ಪ್ರಭಾವದ ಜೊತೆಗೆ ಸಹ ವಿದ್ಯಾರ್ಥಿಗಳು ಮತ್ತು ಸ್ನೇಹಿತರ ವ್ಯಕ್ತಿತ್ವದ

ಪ್ರಭಾವಕ್ಕೆ ಮಕ್ಕಳು ಒಳಪಡುತ್ತಾರೆ.

* ಶಿಕ್ಷಣದಿಂದ ಮಗುವಿನ ಸಾಮಾಜಿಕ ವರ್ತನೆ, ಜ್ಞಾನ ಮತ್ತು ಅನುಭವಗಳು ರೂಪುಗೊಳ್ಳುತ್ತವೆ.

* ಮಕ್ಕಳ ಸುಪ್ತಶಕ್ತಿ, ಸಾಮಾಥ್ರ್ಯಗಳು ಬೆಳೆಯುತ್ತವೆ.

* ಮಗುವಿನ ಜೀವನವನ್ನು ವಿಶಾಲಗೊಳಿಸಿ, ಅವರನ್ನು ಸಾಮಾಜಿಕ ಜೀವನಕ್ಕೆ ಅಣಿಗೊಳಿಸುತ್ತವೆ.

* ಮಗುವಿನ ಸಾಮಾಜೀಕರಣದಲ್ಲಿ ಶಿಕ್ಷಕರ

ಪಾತ್ರ ಮಹತ್ವ ಪೂರ್ಣವಾದುದು.

* ಸನ್ನಡತೆ, ಸದ್ಭಾವನೆ, ಸಮಾನತೆ, ಮುಂತಾದ ಗುಣಗಳು ಶಿಕ್ಷಕರ ನಡೆನುಡಿಯಲ್ಲಿ ಅಭಿವ್ಯಕ್ತವಾಗಿ ಬರುತ್ತವೆ.

* ಮಕ್ಕಳಿಗೆ ಪ್ರೀತಿ, ವಿಶ್ವಾಸ, ಸಹನೆ, ಸಹಬಾಳ್ವೆ, ಸಹಜೀವನ, ಸಹೃದಯತೆ ಮೊದಲಾದ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುತ್ತವೆ.

* ಮಕ್ಕಳು ಪಠ್ಯೇತರ ಚಟುವಟಿಕೆಗಳು, ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತದೆ.

* ಹೀಗೆ ಮಗುವಿನ ಸಾಮಾಜೀಕರಣದಲ್ಲಿ ಶಾಲೆಯು ಪಾತ್ರವನ್ನು ವಹಿಸುತ್ತದೆ.

2. ಕುಟುಂಬದ ಸದಸ್ಯರ ಜೊತೆ ಮಗು ಕಲಿಯುವ ಮೌಲ್ಯಗಳು ಯಾವುವು?

ಉತ್ತರ: * ಪ್ರೀತಿ,

* ವಾತ್ಸಲ್ಯ,

* ವಿಶ್ವಾಸ,

* ಸಹನೆ,

* ಸಹೃದಯತೆ,

* ಸಹಕಾರ ಮೊದಲಾದ ಜೀವನ ಮೌಲ್ಯಗಳು

3. ಸಾಮಾಜೀಕರಣ ಪ್ರಕ್ರಿಯೆಯ ಮಹತ್ವವನ್ನು ವಿವರಿಸಿ.

ಉತ್ತರ: 1. ಮಾನವ ಜೀವಿಯನ್ನು ಸಾಮಾಜಿಕ ಜೀವಿಯನ್ನಾಗಿಸುತ್ತದೆ.

2. ವಿವಿಧ ಕೌಶಲ್ಯಗಳ ಕಲಿಕೆ ಮತ್ತು ಅಳವಡಿಕೆಗೆ ಅವಕಾಶ ಒದಗಿಸುತ್ತದೆ.

3. ಸಾಮಾಜಿಕ ಸಂಬಂಧಗಳನ್ನು ಬೆಳೆಸುತ್ತದೆ ಮತ್ತು ಸಾಮಾಜಿಕ ವ್ಯವಸ್ಥೆಗೆ ಬದ್ಧತೆ ಮತ್ತು ಬೆಂಬಲವನ್ನು ನೀಡುತ್ತದೆ.

4. ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

5. ಪರಂಪರೆಯ ಮುಂದುವರಿಕೆಗೆ ಸಹಕಾರಿಯಾಗಿದೆ.

4. ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಸಮೂಹ ಮಾಧ್ಯಮದ ಪಾತ್ರವನ್ನು ವಿವರಿಸಿ.

ಉತ್ತರ: ಆಧುನಿನಕ ಸಮಾಜದಲ್ಲಿ ಸಮೂಹ ಮಾಧ್ಯಮಗಳು ಸಾಮಾಜೀಕರಣದ ಪ್ರಮುಖ ನಿಯೋಗಿಯಾಗಿ ಕೆಲಸ ಮಾಡುತ್ತವೆ.

* ರೇಡಿಯೊ, ದೂರದರ್ಶನ, ಚಲನಚಿತ್ರ, ಸುದ್ದಿಪತ್ರಿಕೆಗಳು, ನಿಯತಕಾಲಿಕೆಗಳು, ಬೀದಿನಾಟಕಗಳು

ಮೊದಲಾದÀ ಸಮೂಹ ಮಾಧ್ಯಮಗಳು

ಸಾಹಿತ್ಯವನ್ನು ವಿಪುಲವಾಗಿ ಬಳಸುತ್ತವೆ.

* ಜಾಹೀರಾತು, ರೇಡಿಯೋ ಕಾರ್ಯಕ್ರಮಗಳು, ಕಥೆ, ಕವನ, ಕಾದಂಬರಿಗಳು, ನಾಟಕ, ನೃತ್ಯರೂಪಕ, ಸಂಗೀತ, ಭಿತ್ತಿಪತ್ರ, ಮಹಾನ್‍ವ್ಯಕ್ತಿಗಳ ವಿಶೇಷ ಹೇಳಿಕೆಗಳು, ಪರಿಚಯ, ಸಂವಾದ, ವಿಚಾರ ಸಂಕಿರಣ ವಿವಿಧ ಸ್ಥಳಗಳ ವೀಕ್ಷಣೆ, ಅನ್ವೇಷಣೆ ಮೊದಲಾದವುಗಳಿಂದ ಸಮೂಹ ಮಾಧ್ಯಮಗಳ ಸದ್ಬಳಕೆಯಾಗುತ್ತದೆ.

* ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯಕವಾಗುವ ಶೈಕ್ಷಣಿಕ ಮಹತ್ವವುಳ್ಳ ಕಾರ್ಯಕ್ರಗಳು ಮಹತ್ವದ ಪರಿಣಾಮವನ್ನು ಮಕ್ಕಳ ಸಾಮಾಜಿಕ ವರ್ತನೆಯಲ್ಲಿ ಬೀರುತ್ತವೆ.

5. ಸಾಮಾಜೀಕರಣ ಪ್ರಕ್ರಿಯೆಯಲ್ಲಿ ನೆರೆಹೊರೆಯ ಪಾತ್ರವನ್ನು ವಿವರಿಸಿ.

ಉತ್ತರ: ನೆರೆಹೊರೆ ಎಂದರೆ ಅಕ್ಕಪಕ್ಕದವರು ಎಂದರ್ಥ.

* ಇದು ಸಾಮುದಾಯಿಕ ಗುಣಗಳನ್ನು ಹೊಂದಿರುವ ಚಿಕ್ಕ ಸಮೂಹ.

* ನೆರೆಹೊರೆ ಗಾತ್ರದಲ್ಲಿ ಚಿಕ್ಕದಾಗಿರುತದೆ.

* ಇಲ್ಲಿನ ಜನರು ಪರಸ್ಪರ ಸಂಬಂಧ

ಹೊಂದಿರುತ್ತಾರೆ

* ಸ್ಥಳೀಯವಾಗಿ ವಾಸಿಸುವ ಜನರಿಗೆ ಹಲವಾರು ರೀತಿಯಲ್ಲಿ ಅಗತ್ಯ ಸಹಕಾರ ಮಾಡುತ್ತಾರೆ.

* ನೆರೆಹೊರೆಯ ಪಾತ್ರ ಗ್ರಾಮ ಮತ್ತು ನಗರ ಪ್ರದೇಶಗಳೆರಡರಲ್ಲೂ ಕಂಡು ಬರುತ್ತದೆ.

* ನೆರೆಹೊರೆಯ ಜನರು ಕಷ್ಟ-ಸುಖ, ಸಂತೋಷ ಸಮಾರಂಭ ಮುಂತಾದವುಗಳನ್ನು ಪರಸ್ಪರ ಹಂಚಿಕೊಂಡು

ಒಂದೇ ಕುಟುಂಬದವರಂತೆ ಜೀವಿಸುವರು.

* ಆಸಕ್ತಿ, ಅಭಿರುಚಿ, ಹಬ್ಬ, ಜಾತ್ರೆ, ವಿವಾಹ, ಧಾರ್ಮಿಕ ಸಮಾರಂಭ ಮುಂತಾದ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಸ್ಪಂದಿಸುವರು.

* ಇವುಗಳು ಸಾಮಾಜಿಕರಣ ಪ್ರಕ್ರಿಯೆಯಲ್ಲಿ ನೆರೆ ಹೊರೆಯ ಪಾತ್ರಗಳಾಗಿವೆ.

6. ಸಾಮಾಜೀಕರಣ ಎಂದರೇನು?

ಉತ್ತರ: `ಸಾಮಾಜೀಕರಣ ಎಂದರೆ ಸಮಾಜದ ಜೀವಿಗಳಲ್ಲಿ ಪರಸ್ಪರ ಅವಲಂಬನೆ ಉಂಟಾಗಿ ಅವರೆಲ್ಲರೂ ತಮ್ಮ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು ಜೀವಿಸುವ ಕ್ರಮಬದ್ಧ ಪ್ರಕ್ರಿಯೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon