ಅಧ್ಯಾಯ 3 ಸಾಮಾಜಿಕ ಬದಲಾವಣೆ | 9ನೇ ತರಗತಿ ಸಮಾಜ ಶಾಸ್ತ್ರ | 9ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

ಅಧ್ಯಾಯ 3. ಸಾಮಾಜಿಕ ಬದಲಾವಣೆ

I ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಬದಲಾವಣೆ ______ ನಿಯಮ

ಉತ್ತರ: ಪ್ರಕೃತಿಯ

2. ಸಹಕಾರ ಜೀವನಕ್ಕೆ ಶಾಲೆ ಒಂದು _____ ಎನ್ನುತ್ತಾರೆ.

ಉತ್ತರ: ಮಾಧ್ಯಮ

3. ವಿಕಾಸವಾದವನ್ನು ಮಂಡಿಸಿದವರು ______

ಉತ್ತರ: ಡಾರ್ವಿನ್

II ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಸಾಮಾಜಿಕ ಬದಲಾವಣೆ ಎಂದರೇನು?

ಉತ್ತರ: ಸಾಮಾಜಿಕ ಬದಲಾವಣೆಯೆಂಬುದು ಜನರ ಜೀವನ ವಿಧಾನಗಳಲ್ಲಿ ಉಂಟಾದ ಪರಿವರ್ತನೆ.

ಮೆಕೈವರ್ ಎನ್ನುವ ಸಮಾಜಶಾಸ್ತ್ರಜ್ಞರ ಪ್ರಕಾರಸಾಮಾಜಿಕ ಸಂಬಂಧಗಳಲ್ಲಾಗುವ ಬದಲಾವಣೆಯೇ ಸಾಮಾಜಿಕ ಬದಲಾವಣೆ.”

2. ಸಹಕಾರ ಎಂದರೇನು?

ಉತ್ತರ: ಸಹಕಾರವು ಮಾನವ ತನಗೆ ಅಗತ್ಯಗಳನ್ನು ಪಡೆದುಕೊಳ್ಳಲು ಬಳಸುವ ಒಂದು ಮಾರ್ಗ.

ಸಮಾಜದಲ್ಲಿ ಬಹುತೇಕ ಸಾಮಾಜಿಕ ಸಂಬಂಧಗಳು ಕೂಡು ಕೊಳ್ಳುವಿಕೆಯ ಮೂಲಕ ನಡೆಯುತ್ತಿರುತ್ತವೆ.

ಇದನ್ನು ಸಹಕಾರ ಎನ್ನಲಾಗುತ್ತದೆ.

3. ಸಹಜೀವನ ಮೂಲ ಅಂಶಗಳು ಯಾವುವು?

ಉತ್ತರ: ಸಹಜೀವನ, ಮಾನವ ಸಮಾಜದ ಉಳಿವಿಗೆ ಮತ್ತು ಬೆಳವಣಿಗೆಗೆ ಅತ್ಯಂತ ಮುಖ್ಯವಾದ ಒಂದು ಅಂಶ.

ಸಹಜೀವನ ನಮ್ಮ ಸಂವಿಧಾನದ ಆಶಯವಾದ ಸರ್ವಧರ್ಮ, ಸಮಾಜವಾದಿ, ಪ್ರಜಾಸತ್ತಾತ್ಮಕ ಆಶಯಗಳನ್ನು ಹೊಂದಿದೆ.

ಇದರ ಅರ್ಥ ಎಲ್ಲರೂ ಸಮಾನ ಅವಕಾಶದಿಂದ, ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯಗಳಿಂದ ಒಟ್ಟಿಗೆ ಬದುಕುವುದು.

ಇವುಗಳು ಸಹಜೀವನದ ಮೂಲ ಅಂಶಗಳಾಗಿವೆ.

4. ಸಾಮಾಜಿಕ ಬದಲಾವಣೆಯ ಲಕ್ಷಣಗಳನ್ನು ತಿಳಿಸಿ?

ಉತ್ತರ: ಸಾಮಾಜಿಕ ಬದಲಾವಣೆಯ ಲಕ್ಷಣಗಳು:

q ಸಾಮಾಜಿಕ ಬದಲಾವಣೆಯು ನಿರಂತರವಾದದ್ದು.

q ಸಾಮಾಜಿಕ ಬದಲಾವಣೆಯು ಸಾರ್ವತ್ರಿಕವಾದದ್ದು.

q ಸಾಮಾಜಿಕ ಬದಲಾವಣೆಯು ರೂಪ ಮತ್ತು ಗತಿ ಒಂದೇ ರೀತಿಯಲ್ಲಿರುವುದಿಲ್ಲ.

q ಸಾಮಾಜಿಕ ಪ್ರಕ್ರಿಯೆಗಳ ಸರಪಳಿಗಳು ಸಾಮಾಜಿಕ ಬದಲಾಣವೆಗಳನ್ನು ಸೃಷ್ಟಿ ಮಾಡುತ್ತವೆ.

 

5. ಸಾಮಾಜಿಕ ಬದಲಾವಣೆ ಅಗತ್ಯವೆ?

ಉತ್ತರ: ಸಾಮಜಿಕ ಬದಲಾವಣೆ ಅಗತ್ಯವಾಗಿದೆ.

ಬದಲಾವಣೆ ಪ್ರಕೃತಿಯ ನಿಯಮ.

ಮಾನವ ಸಮಾಜದ ವಿಕಾಸವಾಗಿರುವುದೇ ಕಾಲಾನಂತರದಲ್ಲಿ ಉಂಟಾದ ಜೈವಿಕ ಬದಲಾವಣೆಗಳಿಂದ.

ಸಾಮಾಜಿಕ ಬದಲಾವಣೆ ಎನ್ನುವುದು ಮಾನವ ನಡವಳಿಕೆಗಳಲ್ಲಿ, ಸಾಂಸ್ಕೃತಿಕ ಮೌಲ್ಯಗಳಲ್ಲಿ, ಸಾಮಾಜಿಕ ನೀತಿ-ನಿಯಮಗಳಲ್ಲಿ ಉಂಟಾಗಿರುವ ಮಹತ್ವದ ಮಾರ್ಪಾಡುಗಳನ್ನು ಅವಲಂಬಿಸುತ್ತದೆ.

ಹಾಗೆಯೇ ಸಾಮಾಜಿಕ ಪ್ರಕ್ರಿಯಗಳ ರೂಪಾವಳಿಗಳನ್ನು ಮತ್ತು ಸಾಮಾಜಿಕ ಸಾಂಸ್ಕೃತಿಕ ವಿಕಾಸವನ್ನು ಸೂಚಿಸುತ್ತದೆ.

ಸಾಮಾಜಿಕ ಬದಲಾವಣೆಯು ಸಾಮಾಜಿಕ-ಆರ್ಥಿಕ ರಚನೆಯಲ್ಲಿನ ಬದಲಾವಣೆಗಳನ್ನು ವಿವರಿಸುತ್ತದೆ.

ಬದಲಾವಣೆಯು ವೇಗವನ್ನು ಶೈಕ್ಷಣಿಕ, ಆರ್ಥಿಕ, ವೈಜ್ಞಾನಿಕ ಅಥವಾ ತಾಂತ್ರಿಕ ಆವಿಷ್ಕಾರಗಳು ಹೆಚ್ಚಿಸುತ್ತವೆ.

ಅಂದರೆ ಮಾನವನ ಚಲನೆ ಸ್ಥಿತಿಗೆ ಸಾಮಾಜಿಕ ಬದಲಾವಣೆಯೇ ಪ್ರಮುಖ ಕಾರಣ ಎಂದು ಹೇಳಬಹುದು.

6. ಸ್ಪರ್ಧೆ ದಿನೇ ದಿನೇ ಹೆಚ್ಚಾಗಲು ಕಾರಣಗಳೇನು?

ಉತ್ತರ:

§  ಇತ್ತೀಚಿನ ಕೆಲವು ಸ್ಪರ್ಧೆಗೆಳು ಅಮಾನವೀಯವಾಗುತ್ತಿರುವುದನ್ನು ನಾವು ಕಾಣುತ್ತೇವೆ.

§  ಇವು ಸಮಾಜದಲ್ಲಿ ಅನೇಕ ಸಂಘರ್ಷಗಳನ್ನು ಉಂಟು ಮಾಡುತ್ತಿವೆ.

§  ನಿಯಮರಹಿತ ಮತ್ತು ನಿಯಮಸಹಿತ ಸ್ಪರ್ಧೆಗಳು ಸಮಾಜದಲ್ಲಿ ಅನೇಕ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತಿರುತ್ತವೆ.

§  ಆದರೆ ಇತ್ತೀಚೆಗೆ ಜಾಗತಿಕ ಆರ್ಥಿಕತೆಯು ಸ್ಪರ್ಧೆ ಎನ್ನುವುದನ್ನು ಸಮಾಜದ ಆರೋಗ್ಯಕ್ಕಿಂತಲೂ ಆದಾಯ ಸಂಪಾದನೆಯ ನೆಲೆಯಲ್ಲಿ ಬೆಳೆಸುತ್ತಿದೆ.

§  ಬೆಳವಣಿಗೆಯು ಜೀವ ಜಗತ್ತಿನ ಮನೋಧರ್ಮವನ್ನೇ ಬದಲಾಯಿಸುತ್ತದೆ.

§  ಹೀಗೆ ಸ್ಪರ್ಧೆ ದಿನೇ ದಿನೇ ಹೆಚ್ಚಾಗುತ್ತಿದೆ.


9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon