ಕರ್ನಾಟಕದ ವಾಯುಗುಣ, ಮಣ್ಣುಗಳು, ಸ್ವಾಭಾವಿಕ ಸಸ್ಯವರ್ಗ ಹಾಗೂ ಪ್ರಾಣಿ ಸಂಪತ್ತು | ಭೂಗೋಳ ವಿಜ್ಞಾನ ಅಧ್ಯಾಯ 3 | | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಭೂಗೋಳ ವಿಜ್ಞಾನ ಅಧ್ಯಾಯ

ಕರ್ನಾಟಕದ ವಾಯುಗುಣ, ಮಣ್ಣುಗಳು, ಸ್ವಾಭಾವಿಕ ಸಸ್ಯವರ್ಗ ಹಾಗೂ ಪ್ರಾಣಿ ಸಂಪತ್ತು

ಅಭ್ಯಾಸಗಳು

I ಬಿಟ್ಟವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1) ಬೇಸಿಗೆ ಕಾಲವು __ __ ತಿಂಗಳುಗಳಲ್ಲಿ ಇರುತ್ತದೆ.

ಉತ್ತರ : ಮಾರ್ಚ್ ನಿಂದ ಮೇ

2) ಅತಿ ಹೆಚ್ಚು ಮಳೆ ಬೀಳುವ ಋತುಮಾನ __ ಆಗಿದೆ.

ಉತ್ತರ : ಮಳೆಗಾಲ

3) ಉತ್ತರ ಕರ್ನಾಟಕದಲ್ಲಿ __ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ.

ಉತ್ತರ : ಕಪ್ಪು ಮಣ್ಣು

4) ಸದಾ ಹಸಿರಿನಿಂದ ಕೂಡಿರುವ ಅರಣ್ಯಗಳು __ ಪ್ರದೇಶದಲ್ಲಿದೆ.

ಉತ್ತರ : ನಿತ್ಯಹರಿದ್ವರ್ಣ (250 ಸೆಂ.ಮೀ. ಗಿಂತ ಹೆಚ್ಚು ಮಳೆ ಬೀಳುವ)

5) ಅತಿ ಹೆಚ್ಚು ಅರಣ್ಯ ಪ್ರದೇಶವು _ ಜಿಲ್ಲೆಯಲ್ಲಿದೆ.

ಉತ್ತರ : ಉತ್ತರ ಕನ್ನಡ

II. ಗುಂಪುಗಳಲ್ಲಿ ಚರ್ಚಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1) ಕರ್ನಾಟಕದ ನಾಲ್ಕು ಋತುಮಾನಗಳು ಯಾವುವು ?

ಉತ್ತರ : ಕರ್ನಾಟಕದ ವಾಯುಗುಣವನ್ನು 4 ಋತುಗಳಲ್ಲಿ ವಿಂಗಡಿಸಲಾಗಿದೆ.

1. ಬೇಸಿಗೆಕಾಲ (ಮಾರ್ಚ್-ಮೇ)

2. ಮಳೆಗಾಲ (ಜೂನ್ ಸೆಪ್ಟೆಂಬರ್)

3. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್-ನವೆಂಬರ್)

4. ಚಳಿಗಾಲ (ಡಿಸೆಂಬರ್ ಫೆಬ್ರುವರಿ)

2) ಕರ್ನಾಟಕದ ಮಳೆಗಾಲವನ್ನು ಕುರಿತು ಬರೆಯಿರಿ.

ಉತ್ತರ : ಮಳೆಗಾಲವನ್ನು "ನೈರುತ್ಯ ಮಾನ್ಸೂನ್ ಮಾರುತಗಳ ಕಾಲ" ಎಂತಲೂ ಕರೆಯುತ್ತಾರೆ. 

ಅರಬ್ಬೀ ಸಮುದ್ರದ ಮೇಲಿಂದ ಬೀಸುವ ತೇವಾಂಶಭರಿತ ಮಾರುತಗಳನ್ನು ಮದೆನಾಡು ಬೆಟ್ಟಗಳು ತಡೆದು ಅಧಿಕ ಮಳೆ ಸುರಿಸುತ್ತವೆ.

ಪೂರ್ವದ ಕಡೆಗೆ ಹೋದಂತೆಲ್ಲ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ.

ಪೂರ್ವದ ಮೈದಾನವು ಮಳೆನೀರಿನ ಪ್ರದೇಶವಾಗಿ ಪರಿಣಮಿಸುತ್ತದೆ.

ಆಗುಂಬೆ ರಾಜ್ಯದ ಅಧಿಕ ಮಳೆ ಬೀಳುವ ಸ್ಥಳವಾಗಿದೆ. ಇದನ್ನು ದಕ್ಷಿಣದ ಚಿರಾಪುಂಜಿ ಎನ್ನುವರು.

ಅವಧಿಯಲ್ಲಿ ರಾಜ್ಯಾದ್ಯಂತ ಉಷ್ಣಾಂಶ ಹೆಚ್ಚು ಜೊತೆಗೆ ತೇವಾಂಶವು ಹೆಚ್ಚಾಗಿರುತ್ತದೆ.

ಮೋಡ ಕವಿದ ಪರಿಸ್ಥಿತಿ ಕಂಡುಬರುವುದು.

ಋತುಮಾನದಲ್ಲಿ ಕರ್ನಾಟಕಕ್ಕೆ ಶೇಕಡ 80ರಷ್ಟು ಮಳೆಯಾಗುತ್ತದೆ.

ರಾಜ್ಯದ ಮುಂಗಾರು ಬೆಳೆಗಳ ಬೇಸಾಯಕ್ಕೆ ಕಾಲ ನೆರವಾಗುವುದು.

3) ಕರ್ನಾಟಕದಲ್ಲಿನ ಮಣ್ಣಿನ ವಿಧಗಳನ್ನು ತಿಳಿಸಿ.

ಉತ್ತರ : ಕರ್ನಾಟಕದ ಮಣ್ಣುಗಳನ್ನು ಪ್ರಮುಖವಾಗಿ 4 ವಿಧಗಳಾಗಿ ವಿಂಗಡಿಸಲಾಗಿದೆ.

1. ಕೆಂಪು ಮಣ್ಣು

2. ಕಪ್ಪು ಮಣ್ಣು

3. ಜಂಬಿಟ್ಟಿಗೆ ಮಣ್ಣು ಮತ್ತು

4. ಕರಾವಳಿಯ ಮೆಕ್ಕಲು ಮಣ್ಣು.

4) ಕರ್ನಾಟಕದ ವಿವಿಧ ಸ್ವಾಭಾವಿಕ ಸಸ್ಯವರ್ಗಗಳನ್ನು ತಿಳಿಸಿ.

ಉತ್ತರ : ಮಳೆಯ ಪ್ರಮಾಣ ಭೂಸ್ವರೂಪ ಹಾಗೂ ಮಣ್ಣಿನ ಲಕ್ಷಣಗಳನ್ನು ಆಧರಿಸಿ ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗವನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ.

1. ನಿತ್ಯಹರಿದ್ವರ್ಣದ ಕಾಡುಗಳು.

2. ಎಲೆ ಉದುರಿಸುವ ಸಸ್ಯವರ್ಗ

3. ಮಿಶ್ರ ಬಗೆಯ ಕಾಡು ಮತ್ತು

4. ಕುರುಚಲು ಮತ್ತು ಹುಲ್ಲುಗಾವಲು.

5) ಕರ್ನಾಟಕವನ್ನು ಶ್ರೀಗಂಧದ ನಾಡು ಎಂದು ಏಕೆ ಕರೆಯುತ್ತಾರೆ ?

ಉತ್ತರ : ಕರ್ನಾಟಕದ ಕಾಡುಗಳಲ್ಲಿ ವಿಶೇಷವಾಗಿ ಶ್ರೀಗಂಧದ ಮರಗಳು ಬೆಳೆಯುತ್ತವೆ.

ಇದರಿಂದಾಗಿ ಸುಗಂಧ ದ್ರವ್ಯ, ಕುಸುರಿ ಕೆಲಸದ ಕುಶಲ ವಸ್ತುಗಳು, ಸಾಬೂನು, ಔಷಧಿಗಳನ್ನು ತಯಾರಿಸಲಾಗುವುದು.

ಇವು ವಿಶ್ವವಿಖ್ಯಾತ ವಾಗಿದ್ದು, ದೇಶಿಯ ಅಪಾರವಾದ ಬೇಡಿಕೆ ಪೂರೈಸುವುದೇ ಅಲ್ಲದೆ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ.

ಆದ್ದರಿಂದ ಕರ್ನಾಟಕವು "ಶ್ರೀಗಂಧದ ನಾಡು" ಎಂದೇ ಪ್ರಸಿದ್ಧಿ ಪಡೆದಿದೆ.

6) ನಮ್ಮ ಅರಣ್ಯಗಳಲ್ಲಿರುವ ಪ್ರಮುಖ ವನ್ಯ ಪ್ರಾಣಿಗಳನ್ನು ಹೆಸರಿಸಿ.

ಉತ್ತರ : ನಮ್ಮ ಅರಣ್ಯಗಳಲ್ಲಿರುವ ಪ್ರಮುಖ ವನ್ಯಪ್ರಾಣಿಗಳು :

ಆನೆ

ಹುಲಿ

ಚಿರತೆ

ಕಾಡು ಹಂದಿ

ಕಾಡೆಮ್ಮೆ

ಕಡವೆ

ಜಿಂಕೆ

ಕರಡಿ

ಮುಳ್ಳು ಹಂದಿ ಮೊದಲಾದ ಪ್ರಾಣಿಗಳು

ಹಾವು ಮತ್ತು ವರ್ಣಮಯ ಪಕ್ಷಿಗಳು ಸಹ ಕಂಡು ಬರುತ್ತವೆ.

III. ಹೊಂದಿಸಿ ಬರೆಯಿರಿ.

A

1) ಆದಿಚುಂಚನಗಿರಿ

2) ಮಂದಗದ್ದೆ

3) ನಾಗರಹೊಳೆ

4) ಶ್ರೀಗಂಧದ ಮರ

B

A) ಪಕ್ಷಿಧಾಮ

B) ರಾಷ್ಟ್ರೀಯ ಉದ್ಯಾನವನ

C) ಎಲೆ ಉದುರಿಸುವ ಕಾಡು

D) ನವಿಲುಧಾಮ

E) ಕೆಂಪು ಮಣ್ಣು

ಉತ್ತರ :

1) ಆದಿಚುಂಚನಗಿರಿ - D) ನವಿಲುಧಾಮ

2) ಮಂದಗದ್ದೆ - A) ಪಕ್ಷಿಧಾಮ

3) ನಾಗರಹೊಳೆ - B) ರಾಷ್ಟ್ರೀಯ ಉದ್ಯಾನವನ

4) ಶ್ರೀಗಂಧದ ಮರ - C) ಎಲೆ ಉದುರಿಸುವ ಕಾಡು

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon