ಅಧ್ಯಾಯ 4 ಸಮುದಾಯ | 9ನೇ ತರಗತಿ ಸಮಾಜ ಶಾಸ್ತ್ರ | 9ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

ಅಧ್ಯಾಯ 4 ಸಮುದಾಯ

I ಖಾಲಿ ಬಿಟ್ಟಿರುವ ಜಾಗಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಅಲೆಮಾರಿತನವು ಒಂದು ಜೀವನ ವಿಧಾನ ಎಂದು  ______ ಹೇಳುತ್ತದೆ.

ಉತ್ತರ: ಎನ್ಸೈಕ್ಲೋಪಿಡಿಯ ಬ್ರಿಟಾನಿಕಾ

2. ಭಾರತೀಯ ಸಮಾಜದ ಆಧಾರ ಸ್ತಂಭ ____ ಸಮುದಾಯ

ಉತ್ತರ: ಗ್ರಾಮ

3. ಈಶಾನ್ಯ ವಲಯದ ಆದಿವಾಸಿಗಳು  ____

ಉತ್ತರ: ಮಂಗೋಲಿಯನ್ ಬುಡಕಟ್ಟಿನವರು

II ಈ ಕೆಳಗಿನ ಪ್ರಶ್ನೆಗಳಿಗೆ ಚರ್ಚಿಸಿ ಉತ್ತರ ಬರೆಯಿರಿ.

1. ಬುಡಕಟ್ಟು ಎಂದರೇನು?

ಉತ್ತರ: ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಅಥವಾ ಅದನ್ನು ತನ್ನದೆಂದು ಹೇಳಿಕೊಳ್ಳುವ ರಾಜಕೀಯ, ಸಾಮಾಜಿಕ, ಮತ್ತು ಸಾಂಸ್ಕೃತಿಕ ರಚನೆಗೆ ಹೊಂದಿಕೊಂಡಿರುವ ಸ್ವಯಂ ಆಡಳಿತವುಳ್ಳ ಗುಂಪೇ ಬುಡಕಟ್ಟು.

2. ಗ್ರಾಮ ಎಂದರೇನು?

ಉತ್ತರ: ಕಡಿಮೆ ಜನಸಾಂದ್ರತೆಯುಳ್ಳ, ಸರಳ ಹಾಗೂ ಮಿತವ್ಯಯವಾದ ಜೀವನ ಸಾಗಿಸುವ, ಪ್ರಾಥಮಿಕ ಸಂಬಂಧಗಳನ್ನೊಳಗೊಂಡ ಕುಟುಂಬಗಳ ಒಕ್ಕೂಟವೇ ಗ್ರಾಮ.

3. ನಗರ ಪರಿಕಲ್ಪನೆಯನ್ನು ತಿಳಿಸಿ.

ಉತ್ತರ: ಯಾವ ಸಮುದಾಯ 5000 ಜನಸಂಖ್ಯೆಗಿಂತ ಹೆಚ್ಚಿಗೆ ಜನರನ್ನು ಹೊಂದಿದ್ದು, ಪ್ರತಿ ಚದರ ಕಿಲೋಮೀಟರಿಗೆ 1000 ಜನಸಾಂದ್ರತೆ ಹೊಂದಿದ್ದು,

ಅಲ್ಲಿ ನೆಲೆಸಿರುವ ಜನರಲ್ಲಿ ಶೇಕಡ 75ಕ್ಕಿಂತ ಹೆಚ್ಚು ಜನರು ಬದುಕಿಗೆ ಕೃಷಿಯೇತರ ಚುವಟಿಕೆಗಳಲ್ಲಿ ತೊಡಗಿದ್ದಾರೊ ಅದಕ್ಕೆ ನಗರ ಎಂದು ಕರೆಯುತ್ತಾರೆ.

ಜನಸಂಖ್ಯಾಶಾಸ್ತ್ರದ ದೃಷ್ಟಿಯಲ್ಲಿ ಯಾವ ಪ್ರದೇಶ ಅತಿ ಹೆಚ್ಚು ಜನಸಂಖ್ಯೆ ಮತ್ತು ಜನಸಾಂದ್ರತೆ ಹೊಂದಿರುತ್ತದೆಯೊ ಅದನ್ನು ನಗರ ಎಂದು ಕರೆಯಬಹುದು.

4. ಬುಡಕಟ್ಟು ಸಮುದಾಯಗಳ ಲಕ್ಷಣಗಳನ್ನು ವಿವರಿಸಿ.

ಉತ್ತರ: ಬುಡಕಟ್ಟು ಸಮುದಾಯಗಳ ಲಕ್ಷಣಗಳು:

1. ಸರಳ ಮತ್ತು ಸ್ವಯಂ ಪರಿಪೂರ್ಣತೆ.

2. ಪ್ರಕೃತಿಯ ಪೂಜೆ

3. ಸಮೂಹದ ಬಗ್ಗೆ ಅವರ ನಿಷ್ಟೆ ಮತ್ತು ಸಮಗ್ರತೆಗೆ ಮಹತ್ವ

4. ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಸಮಾನತೆ.

5. ಒಳಬಾಂಧವ್ಯ ವಿವಾಹ.

6. ವಿಭಿನ್ನ ಮಾತೃಭಾಷೆ.

7. ಪ್ರಾಕೃತಿಕ ಪರಿಸರದಲ್ಲಿಯೇ ವಾಸ

8. ಬೇಟೆ, ಸ್ವಲ್ಪ ಪ್ರಮಾಣದ ಕೃಷಿ, ಅರಣ್ಯ ಉಪ-ಉತ್ಪನ್ನಗಳ ವ್ಯವಸ್ಥೆ.

5. ಭೌಗೋಳಿಕ ನೆಲೆಯಲ್ಲಿ ಭಾರತದ ಬುಡಕಟ್ಟುಗಳನ್ನು ಹೇಗೆ ವಿಭಾಗಿಸಲಾಗಿದೆ ವಿವರಿಸಿ.

ಉತ್ತರ: ಭಾರತದಲ್ಲಿಯ ಬುಡಕಟ್ಟುಗಳು ಭೌಗೋಳಿಕವಾಗಿ ಮೂರು ವಲಯಗಳಲ್ಲಿ ಕಂಡುಬರುತ್ತದೆ.

1. ಉತ್ತರ ಮತ್ತು ಉತ್ತರ-ಪೂರ್ವ ವಲಯ

2. ಕೇಂದ್ರೀಯ ಅಥವಾ ಮಧ್ಯ ವಲಯ

3. ದಕ್ಷಿಣ ವಲಯ

1. ಉತ್ತರ ಮತ್ತು ಉತ್ತರ-ಪೂರ್ವ ವಲಯ:

ಹಿಮಾಲಯದ ಉಪ ಗಿರಿಕಂದರ ಶ್ರೇಣಿಯಲ್ಲಿ ನಾಗಾ ಬುಡಕಟ್ಟಿನ ಕೊನ್ಯಾಕ್, ರೆಂಗ್ಯಾ, ಸೆಂಗ್ಯಾ, ಅಹೋ, ಅಂಗಾಮಾ, ಲ್ಹೋಟಾ,  ಫೋಮೆ, ಚಾಂಗ, ಕಾಬುಲ, ಕುಕಿ ಬುಡಕಟ್ಟಿನ ಲುಶಾಮಿ, ಲಾಖೇರ, ಚಿನ್ಸ್, ಖುಷಿ, ಗಾರೊ, ಕಚಾರಿ, ಲೆಪ್ಚಾ, ಬೂಟಿಯ, ರಾಭಾ ಥಾರು, ಖಾಸಾ, ಚೇನಿ ಇತ್ಯಾದಿ ಸಮುದಾಯಗಳು ವಾಸಿಸುತ್ತಿವೆ.

2. ಕೇಂದ್ರಿಯ ಅಥವಾ ಮಧ್ಯ ವಲಯ:

ಈ ವಲಯದಡಿ ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ, ದಕ್ಷಿಣದ ಉತ್ತರ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ರಾಜಸ್ತಾನ ರಾಜ್ಯಗಳಲ್ಲಿರುವ ಸಂತಾಲ, ಮುಂಡಾ, ಉರಾಂವ, ಭೂಮಿಜ, ಕೋಯ, ಲೋಧಾ, ಸಾಪುರ, ಜವುಂಗ, ಖೊಂಡ, ಕೊರ್ಕು, ಗೊಂಡ, ಭಿಲ್, ಬಿರಹಾರ್, ಕೋಲ್, ಮಾಲೇರ, ಅಸುರ, ಬೈಗಾ, ಪ್ರಧಾನ, ಬಿರಝಿಮ, ಅಗೇರಿಯ, ಹಿಲ್ ಮಾರಿಯ, ಬಿಸೊನ್ ಹಾರ್ನಮಾರಿಮ ಇತ್ಯಾದಿ ಬುಡಕಟ್ಟುಗಳು ಪ್ರಮುಖವಾಗಿವೆ.

3. ದಕ್ಷಿಣ ವಲಯ :

ಈ ವಲಯದ ಕೇರಳ, ತಮಿಳುನಾಡು, ಆಂಧ್ರಪದೇಶ, ಕರ್ನಾಟಕ ರಾಜ್ಯಗಳಲ್ಲಿ ಚೆಂಚು, ತೋಡ, ಬಡಗ, ಕೋಟ, ಪಣಿಯನ್, ಇರುಳ, ಕುಮನ್, ಕುರುಂಬ, ಗೊಂಡ, ರಾಜಗೊಂಡ, ಸೋಲಿಗ, ಕಾಡುಕುರುಬ, ಜೇನುಕುರುಬ, ಕೊರಗ, ಹಸಲ, ಕೋಟ, ಪಳ್ಳಿಯನ್, ಯರವ, ಧನಗರ ಗೌಳಿ, ಕಾಡು ಗೊಲ್ಲ, ಹಾಲಕ್ಕಿ ಒಕ್ಕಲಿ ಇತ್ಯಾದಿ ಬಡುಕಟ್ಟುಗಳು ಪ್ರಮುಖವಾಗಿವೆ.

6. ಗ್ರಾಮ ಸಮುದಾಯಗಳ ಪ್ರಕಾರಗಳನ್ನು ವಿವರಿಸಿ.

ಉತ್ತರ: ಗ್ರಾಮ ಸಮುದಾಯಗಳ ಪ್ರಕಾರಗಳು:

1. ಕೇಂದ್ರೀಕೃತ ಗ್ರಾಮ

2. ಪ್ರತ್ಯೇಕಿತ ಹೊಲ ಮನೆಗಳ ಗ್ರಾಮ

3. ಚದುರಿದ ಗುಂಪು ಗ್ರಾಮ

4. ಸಾಲುಮನೆಗಳ ಗ್ರಾಮ

5. ಚಕ್ರಾಕಾರದ ಗ್ರಾಮಗಳು

6. ಚೌಕಾಕಾರದ ಅಥವಾ ಆಯತಾಕಾರದ ಗ್ರಾಮ

7. ಕೂಡುದಾರಿ ಹಾಗೂ ಮಾರುಕಟ್ಟೆ ಗ್ರಾಮ

ಇನ್ನು ಕೆಲವು ಗ್ರಾಮಗಳು ಇಂತಹ ವರ್ಗೀಕರಣದಲ್ಲಿ ಸೇರ್ಪಡೆಯಾಗದೇ ಹೋಗಬಹುದು.

ಏಕೆಂದರೆ ಅಭಿವೃದ್ಧಿ, ತಂತ್ರಜ್ಞಾನ ಆಧಾರಿತ ಕೃಷಿ ಹಾಗೂ ಹೊಸ ಹೊಸ ಉದ್ಯೋಗಗಳಿಂದ ಉಂಟಾಗುವ ಬದಲಾವಣೆಗಳು ಗ್ರಾಮಗಳ ರಚನೆಯನ್ನು ವೇಗವಾಗಿ ಬದಲಾಯಿಸುತ್ತವೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon