ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳು | 9ನೇ ತರಗತಿ ಸಮಾಜ ವಿಜ್ಞಾನ | 9ನೇ ತರಗತಿ ಇತಿಹಾಸ ಪ್ರಶ್ನೋತ್ತರಗಳು |

9th Social Science History Chapter 1

1. ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳು

I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಏಸುಕ್ರಿಸ್ತರು ಹುಟ್ಟಿದ ಸ್ಥಳ _______

ಉತ್ತರ: ಜೆರೂಸಲಂ ಬಳಿಯ ಬೆತ್ಲಹ್ಯಾಂ

2. ಏಸುಕ್ರಿಸ್ತರನ್ನು ಶಿಲುಬೆಗೇರಿಸಿದ ಬೆಟ್ಟ _____

ಉತ್ತರ: ಗೋಲ್ಗೋಥ

3. ಮೊಹಮ್ಮದ್ಪೈಗಂಬರರು ಹುಟ್ಟಿದ ಸ್ಥಳ ____

ಉತ್ತರ: ಮೆಕ್ಕಾ

4. ಇಸ್ಲಾಂ ಧರ್ಮದ ಗ್ರಂಥ ______

ಉತ್ತರ: ಕುರಾನ್

5.‌ ಮೊಹಮ್ಮದ್ಪೈಗಂಬರರ ಉತ್ತರಾಧಿಕಾರಿಗಳನ್ನು ____ ಎನ್ನುವರು.

ಉತ್ತರ: ಖಲೀಫರು

II ಕೆಳಗಿನ ಪ್ರಶ್ನೆಗಳಿಗೆ ಗುಂಪಿನಲ್ಲಿ ಮಿತ್ರರೊಂದಿಗೆ ಚರ್ಚಿಸಿ ಉತ್ತರ ಬರೆಯಿರಿ.

1. ಏಸುಕ್ರಿಸ್ತರ ಜೀವನವನ್ನು ಕುರಿತು ಬರೆಯಿರಿ.

ಉತ್ತರ: ಜೀಸಸ್ರು ಸಾ.. 1ನೇಯ ಶತಮಾನದಲ್ಲಿ ಜೆರೂಸಲಂ ಬಳಿಯ ಬೆತ್ಲಹ್ಯಾಮ ಎಂಬ ಹಳ್ಳಿಯ ಬಡಕುಟುಂಬವೊಂದರಲ್ಲಿ ಮೇರಿ ಮತ್ತು ಜೋಸೇಫ್ ಮಗನಾಗಿ ಜನಿಸಿದರು.

* ಅವರಿಗೆ ಬಾಲ್ಯದಲ್ಲಿ ವ್ಯವಸ್ಥಿತವಾದ ವಿದ್ಯಾಭ್ಯಾಸ ಸಿಗಲಿಲ್ಲ.

* ತನ್ನ ಅಸಾಧಾರಣ ಗ್ರಹಣಶಕ್ತಿ ಮತ್ತು ಬುದ್ಧಿವಂತಿಕೆಯಿಂದ ಅಪಾರವಾದ ಧಾರ್ಮಿಕ ಜ್ಞಾನವನ್ನು ಹೊಂದಿದರು.

* ಯಹೂದಿಗಳ ಧರ್ಮಗ್ರಂಥಗಳನ್ನು, ತತ್ವಗಳನ್ನು ಸರಳವಾಗಿ ವಿವರಿಸಿ ಅಚ್ಚರಿಗೊಳಿಸಿದರು.

* ಜೀಸಸ್ರು ತನ್ನ 30ನೇ ವಯಸ್ಸಿನಲ್ಲಿ ಜಾನ್ಬ್ಯಾಪಿಸ್ಟ್ಎಂಬುವವರ ಪ್ರಭಾವಕ್ಕೆ ಒಳಗಾಗಿ ಅವರಿಂದ ದೀಕ್ಷಾ ಸ್ನಾನ ಪಡೆದರು.

* ದೀಕ್ಷೆಯನ್ನು ನೀಡಿದ ಜಾನ್ಜೀಸಸರನ್ನು ಮಸೀಹ ಅಥವಾ ಮಹಾರಕ್ಷಕನೆಂದು ಕರೆದರು.

* ದೀಕ್ಷೆಯ ಸ್ವೀಕಾರದ ನಂತರ ಕಷ್ಟದಲ್ಲಿದ್ದ ಜನರಿಗೆ ದಿವ್ಯ ಜ್ಞಾನವನ್ನು ಬೋಧಿಸಿ ಅವರಿಗೆ ಮಾನಸಿಕ ನೆಮ್ಮದಿಯನ್ನು ತಂದುಕೊಡುತ್ತಿದ್ದರು.

* ದಿನೇ ದಿನೇ ಜೀಸಸ್ ಸೇವಾ ಮನೋಭಾವನೆಗಳು ಮತ್ತು ಅನುಕಂಪಗಳು ಎಲ್ಲಾ ವರ್ಗಗಳನ್ನು ಆಕರ್ಷಿಸಿ ಜನಪ್ರಿಯವಾದವು.

* ಕ್ರಮೇಣ ಅವರು ಜನರ ದೃಷ್ಟಿಯಲ್ಲಿ ರಕ್ಷಕನಾಗಿ ದೈವತ್ವ ಸ್ಥಾನ ಹೊಂದಲಾರಂಭಿಸಿದರು.

* ಇದನ್ನು ಯಹೂದಿಯರಲ್ಲಿದ್ದ ಸಂಪ್ರದಾಯ ವರ್ಗ ವಿರೋಧಿಸಿತು.

* ಇವರು ಜೀಸಸ್ ಬಗ್ಗೆ ರೋಮನ್ಸಾಮ್ರಾಜ್ಯದ ರಾಜ್ಯಪಾಲನಾದ ಪಾಂಟಿಯಸ್ಪಿಲಾತನಿಗೆ ದೂರನ್ನು ನೀಡಿ ರಾಜದ್ರೋಹದ ಆರೋಪ ಮಾಡಿದರು.

* ವಿಚಾರಣೆಯ ನಂತರ ಜೀಸಸ್ರನ್ನು ಗೋಲ್ಗೋಥ ಎಂಬ ಬೆಟ್ಟದಲ್ಲಿ ಒಂದು ಶುಕ್ರವಾರದ ದಿನ ಶಿಲುಬೆಗೆ ಏರಿಸಿದರು.

2. ಜೀಸಸ್ಕ್ರಿಸ್ತರ ಬೋಧನೆಗಳನ್ನು ಕುರಿತು ಪಟ್ಟಿ ಮಾಡಿ.

ಉತ್ತರ: ಇವರ ಬೋಧನೆಗಳು ಹೀಗಿವೆ:-

1) ದೇವರು ಒಬ್ಬನೇ, ದಯಾಮಯನಾದ ದೇವರು ಸರ್ವ ಜೀವರಾಶಿಗಳ ತಂದೆ.

2) ಪ್ರತಿಯೊಬ್ಬರಲ್ಲಿ ಸಹೋದರತ್ವ ಭಾವನೆಯಿರಬೇಕು.

3) ನಾವು ಕಷ್ಟದಲ್ಲಿರುವವರನ್ನು ಪ್ರೀತಿಸಿದರೆ ದೇವರನ್ನು ಪ್ರೀತಿಸಿದಂತೆ

4) ಪರರಿಂದ ಯಾವುದನ್ನು ಬಯಸದೇ ನಾವು ಅವರ ಸೇವೆಯನ್ನು ಮಾಡಬೇಕು.

5) ಮಾನವನ ಸೇವೆಯು ದೇವರ ಸೇವೆಗೆ ಸಮಾನವಾದುದು.

6) ಮಾನವನು ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ, ಅದಕ್ಕೆ ದೇವರಿಂದ ಕ್ಷಮಾಪಣೆ ಇದೆ.

7) ನಿನ್ನ ಶತ್ರುವನ್ನು ನೀನು ಪ್ರೀತಿಸು; ನಿನಗೆ ಕೆಟ್ಟದ್ದನ್ನು ಬಯಸುವವರಿಗೆ ನೀನು ಒಳ್ಳೆಯದನ್ನು ಬಯಸು.

3. ಕ್ರೈಸ್ತ ಧರ್ಮವು ಹೇಗೆ ಪ್ರಸಾರವಾಯಿತು?

ಉತ್ತರ: ಜೀಸಸ್ರು ಬದುಕಿದ್ದಾಗ ತನ್ನ ತತ್ವಗಳನ್ನು ಪ್ರಪಂಚದ ಎಲ್ಲಾ ಭಾಗಗಳಿಗೂ ತಲುಪಿಸಿ, ಮೂಲಕ ಕಷ್ಟದಲ್ಲಿರುವವರನ್ನು ರಕ್ಷಿಸಬೇಕೆಂಬ ಜವಾಬ್ದಾರಿಯನ್ನು ಮತ್ತು ದೀಕ್ಷೆಯನ್ನು ತನ್ನ 12 ಜನ ಶಿಷ್ಯರಿಗೆ ವಹಿಸಿದರು.

* ಅವರನ್ನು ಅಪೋಸಲ್ಸ್ಎಂದು ಕರೆಯಲಾಗಿದೆ.

* ಇವರಲ್ಲಿ ಸಂತ ಪೀಟರನು ಅತೀ ಪ್ರಮುಖನಾಗಿದ್ದು ರೋಮಿಗೆ ತೆರಳಿ ಚರ್ಚ್ಸ್ಥಾಪಿಸಿ ಪ್ರಪಂಚದಾದ್ಯಂತ ಧರ್ಮ ಪ್ರಚಾರಕರನ್ನು ಕಳುಹಿಸಿ ಕ್ರೈಸ್ತ ಧರ್ಮದ ಸುವಾರ್ತೆಗಳ ಪ್ರಚಾರ ಆರಂಭಿಸಿದನು.

* ಪ್ರಾರಂಭದಲ್ಲಿ ರೋಮನ್ಚಕ್ರವರ್ತಿಗಳು ಕ್ರೈಸ್ತ ಧರ್ಮದ ಪ್ರಚಾರಕ್ಕೆ ಅಡ್ಡಿಪಡಿಸಲಿಲ್ಲ.

*ಇದರಿಂದ ರೋಮನ್ಸಾಮ್ರಾಜ್ಯದಾದ್ಯಂತ ತ್ವರಿತವಾಗಿ ಧರ್ಮ ಹರಡಿತು.

*ಆದರೆ 1ನೆಯ ಶತಮಾನದ ನಂತರ ಕ್ರಮೇಣ ರೋಮನ್ಚಕ್ರವರ್ತಿಗಳು ಪ್ರಚಾರಕರಿಗೆ ಹಿಂಸೆ ನೀಡಲಾರಂಭಿಸಿ ಧರ್ಮಪ್ರಚಾರಕ್ಕೆ ಅಡ್ಡಿಪಡಿಸಿದರು.

*4ನೆಯ ಶತಮಾನದಲ್ಲಿ ಅಧಿಕಾರಕ್ಕೆ ಬಂದ ಕಾನ್ಸ್ಟೆಂಟೈನ್ಸಾ.. 313ರಲ್ಲಿ ಕ್ರೈಸ್ತ ಧರ್ಮವನ್ನು ರಾಜ್ಯಧರ್ಮವಾಗಿ ಸ್ವೀಕರಿಸಿದನು.

*ಅಂದಿನಿಂದ ಧರ್ಮ ರಾಜ್ಯಾಧಿಕಾರದ ಬೆಂಬಲವನ್ನು ಪಡೆದು ರೋಮ್‌, ಗ್ರೀಕ್‌, ಮ್ಯಾಸಿಡೋನಿಯ, ಏಷ್ಯಾಮೈನರ್ಗಳಲ್ಲಿ ಹರಡಲಾರಂಭಿಸಿತು.

*ರೋಮನ್ಚರ್ಚ್ಹಾಗೂ ಮತಪ್ರಚಾರಕರು ನಡೆಸಿದ ಮತಾಂತರದಿಂದ ಹೆಚ್ಚಿನ ಪ್ರಚಾರ ಪಡೆಯಿತು.

4. ಮೊಹಮ್ಮದ್ಪೈಗಂಬರರ ಜೀವನವನ್ನು ತಿಳಿಸಿರಿ.

ಉತ್ತರ: ಮಹಮ್ಮದ್ಪೈಗಂಬರ್ರವರು ಸಾ.. 570ರಲ್ಲಿ ಮೆಕ್ಕಾದಲ್ಲಿ ಜನಿಸಿದರು.

*ಇವರ ತಂದೆ ಅಬ್ದುಲ್ಲಾ ಹಾಗೂ ತಾಯಿ ಅಮೀನಾ.

*ಬಾಲ್ಯದಲ್ಲಿ ತನ್ನ ತಂದೆತಾಯಿಯನ್ನು ಕಳೆದುಕೊಂಡು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದರು.

*ಆರಂಭದಲ್ಲಿ ಕುರಿ ಕಾಯುತ್ತಿದ್ದು ನಂತರ ಚಿಕ್ಕಪ್ಪನ ಜೊತೆಯಲ್ಲಿ ವ್ಯಾಪಾರಕ್ಕೆ ಮೆಕ್ಕಾ ಹಾಗೂ ಸಿರಿಯಾ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು.

*ಆಗ ಮೆಕ್ಕಾದ ಶ್ರೀಮಂತ ವಿಧವೆ ಖಧೀಜರ ಪರಿಚಯವಾಗಿ ಅವರ ಬಳಿ ಸೇವಾ ನೌಕರಿಗೆ ಸೇರಿದರು.

*ಮುಂದೆ ಆಕೆಯೊಂದಿಗೆ ವಿವಾಹವಾಯಿತು.

*ಅವರಿಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದರು.

*ಅರಬ್ಬರ ಸಾಮಾಜಿಕ ಹಾಗೂ ಧಾರ್ಮಿಕ ನ್ಯೂನ್ಯತೆಗಳನ್ನು ಸರಿಪಡಿಸಲು ಆಲೋಚಿಸಲಾರಂಭಿಸಿ, ಮೆಕ್ಕಾದ ಬಳಿಯ ಹೀರಾ ಎನ್ನುವ ಬೆಟ್ಟದ ತಪ್ಪಲಿಗೆ ಹೋಗಿ ಧ್ಯಾನಾಸಕ್ತರಾಗುತ್ತಿದ್ದರು.

*ಜ್ಞಾನೋದಯವನ್ನು ಪಡೆದ ಪೈಗಂಬರರನ್ನು ಜನರು ದೇವದೂತನೆಂದು ಕರೆದರು.

*ಇವರ ತತ್ವಗಳು ಬಹುಬೇಗ ಜನರ ಆಕರ್ಷಣೆ ಪಡೆದು ಬಹಳಷ್ಟು ಜನರು ಇವರ ಅನುಯಾಯಿಗಳಾದರು.

5. “ಹಿಜರಾಎಂದರೇನು?

ಉತ್ತರ: ಪೈಗಂಬರು ತಮ್ಮ ತತ್ವಗಳನ್ನು ಮೆಕ್ಕಾದಲ್ಲಿ ಪ್ರಚಾರ ಮಾಡಲಾರಂಭಿಸಿದರು.

*ಬಹುದೇವತಾರಾಧನೆಯನ್ನು ವಿರೋಧಿಸಿದ ಪೈಗಂಬರ್ರನ್ನು ಮೆಕ್ಕಾದ ಜನರು ವಿರೋಧಿಸಿ ಅವರ ಕೊಲೆಗೆ ಸಂಚು ಹೂಡಿದರು.

*ಇದನ್ನು ತಿಳಿದ ಪೈಗಂಬರರು ಸಾ.. 622ರಲ್ಲಿ ಮೆಕ್ಕಾದಿಂದ ಮದೀನಾಗೆ ಪ್ರಯಾಣ ಬೆಳೆಸಿದರು.

* ಘಟನೆಯನ್ನು ಹಿಜಿರಾ (ಪಲಾಯನ) ಎಂದು ಕರೆದರು ಇದನ್ನು ಮುಸ್ಲಿಮರು ʻಹಿಜಿರಾಶಕʼ ಎಂದು ಪರಿಗಣಿಸಿದ್ದಾರೆ.

*ಮುಸ್ಲಿಮರ ಲೂನಾರ್ಕ್ಯಾಲಿಂಡರ್ಇದರ ಆಧಾರದ ಮೇಲೆ ರಚನೆಯಾಗಿದೆ.

6. ಇಸ್ಲಾಂ ಧರ್ಮದ ಬೋಧನೆಗಳಾವುವು?

ಉತ್ತರ: ಇಸ್ಲಾಂ ಧರ್ಮದ ಬೋಧನೆಗಳು ಹೀಗಿವೆ:-

1) ದೇವರು ಒಬ್ಬನೇ. ಆತನೇ ಅಲ್ಲಾ. ಅಲ್ಲಾನನ್ನು ಒಲಿಸಿಕೊಳ್ಳಲು ಸರಳ ಪ್ರಾರ್ಥನೆಯೊಂದು ಸಾಕು.

2) ಪ್ರಾಮಾಣಿಕತೆ ಮತ್ತು ನೀತಿಯುತ ಜೀವನ ನಡೆಸಬೇಕು, ದುಶ್ಚಟಗಳಿಂದ ದೂರವಿರಬೇಕು.

3) ದೀನ ದುರ್ಬಲರ ಬಗ್ಗೆ ಕರುಣೆ ಹಾಗು ಸ್ತ್ರೀಯರ ಬಗ್ಗೆ ಗೌರವವರಿಬೇಕು.

ಇವುಗಳು ಇಸ್ಲಾಂ ಧರ್ಮದ ಬೋಧನೆಗಳಾಗಿವೆ.

 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon