ಕುಟುಂಬ | 9ನೇ ತರಗತಿ ಸಮಾಜ ಶಾಸ್ತ್ರ | 9ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

ಅಧ್ಯಾಯ 1. ಕುಟುಂಬ

I ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಕುಟುಂಬ ಎಂಬ ಪದವು ಲ್ಯಾಟಿನ್ ಭಾಷೆಯ _____ ಪದದಿಂದ ಉಗಮವಾಗಿದೆ.

ಉತ್ತರ: ಫ್ಯಾಮುಲಸ್ (Famulus)

2. ಸಮಾಜದ ಜೀವಕೋಶ _____ ಆಗಿದೆ.

ಉತ್ತರ: ಕುಟುಂಬ

3. ತಂದೆಯೇ ಕುಟುಂಬದ ಒಡೆಯನಾದರೆ ಆ ಕುಟುಂಬವನ್ನು ____ ಎನ್ನುತ್ತಾರೆ.

ಉತ್ತರ: ಪಿತೃಪ್ರಧಾನ

4. ಕೇರಳದ ಮಲಬಾರನ ನಾಯನಾರಗಳಲ್ಲಿ  ____ ಕುಟುಂಬ ಕಂಡುಬರುತ್ತದೆ.

ಉತ್ತರ: ಮಾತೃಪ್ರಧಾನ


II ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಕುಟುಂಬವು ಸಮಾಜದ ಘಟಕ ಹೇಗೆ?

ಉತ್ತರ: ಮಾನವ ಸಮಾಜ ಮೂಲಭೂತ ಬಯಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದಾಗಿ ಹಲವು ಸಾಮಾಜಿಕ ಸಂಸ್ಥೆಗಳನ್ನು ರೂಪಿಸಿಕೊಂಡಿದೆ.

* ಇಂತಹ ಸಂಸ್ಥೆಗಳಲ್ಲಿ ಕುಟುಂಬ ಅತ್ಯಂತ ಪ್ರಮುಖವಾದದ್ದು.

* ಕುಟುಂಬವು ಅತ್ಯಂತ ಸಣ್ಣ ಸಾಮಾಜಿಕ ಸಂಸ್ಥೆಯಾದರೂ ಅದು ಸಮಾಜದ ಮೂಲ ಸಂಸ್ಥೆ.

* ಸಮಾಜದ ಎಲ್ಲಾ ಚಟುವಟಿಕೆಗಳೂ ನಡೆಯುವುದು ಕುಟುಂಬದ ಆಧಾರದಲ್ಲಿ.

* ಕುಟುಂಬದ ಸದಸ್ಯರೆ, ಸಾಮಾಜಿಕ ಸಂಸ್ಥೆಗಳ ಸದಸ್ಯರೂ ಆಗಿರುತ್ತಾರೆ.

* ಯಾವುದೇ ಸಮಾಜಿಕ ಸಂಸ್ಥೆಗಳ ಚಟುವಟಿಕೆಗಳು ಪ್ರಾರಂಭವಾಗುವುದೇ ಕುಟುಂಬದಿಂದ.

* ಸಮಾಜದ ರಾಜಕೀಯ, ಆರ್ಥಿಕ, ಶೈಕ್ಷಣಿಕ, ಇನ್ನೂ ಮೊದಲಾದ ಚಟುವಟಿಕೆಗಳು ಮೊಳಕೆಯಾಗುವುದು ಕುಟುಂಬದಿಂದ.

* ಹೀಗಾಗಿ ಕುಟುಂಬವು ಸಮಾಜದ ಘಟಕವಾಗಿದೆ.

2. ಕುಟುಂಬದ ಪ್ರಕಾರಗಳನ್ನು ತಿಳಿಸಿ.

ಉತ್ತರ: ತಲೇಮಾರುಗಳ ಆಧಾರದಲ್ಲಿ ವರ್ಗಿಕರಣ:

1.      ಎರಡು ತಲೆಮಾರುಗಳ ಕುಟುಂಬ

2.      ಮೂರು ತಲೆಮಾರುಗಳ ಕುಟುಂಬ

3.      ನಾಲ್ಕು ತಲೆಮಾರಿನ ವಿಸ್ತøತ ಕುಟುಂಬ

ವಾಸಿಸುವ ಆಧಾರದಲ್ಲಿ ವರ್ಗಿಕರಣ:

1.      ಕೇಂದ್ರ ಕುಟುಂಬ

2.      ಅವಿಭಕ್ತ ಕುಟುಂಬ

ವಿವಾಹ ಪದ್ದತಿಯ ಆಧಾರದಲ್ಲಿ ವರ್ಗಿಕರಣ:

1.      ಏಕಪತ್ನಿತ್ವ ಕುಟುಂಬ

2.      ಬಹು ಪತ್ನಿತ್ವ ಕುಟುಂಬ

3.      ಬಹುಪತಿತ್ವ ಕುಟುಂಬ

ಅಧಿಕಾರದ ಕೇಂದ್ರಿಕರಣದ ಆಧಾರದಲ್ಲಿ ವರ್ಗಿಕರಣ:

1.      ಮಾತೃಪ್ರಧಾನ ಕುಟುಂಬಗಳು

2.      ಪಿತೃಪ್ರಧಾನ ಕುಟುಂಬಗಳು

ವಂಶದ ಆಧಾರದಲ್ಲಿ ವರ್ಗಿಕರಣ:

1.      ಮಾತೃವಂಶೀಯ ಕುಟುಂಬಗಳು

2.      ಪಿತೃವಂಶೀಯ ಕುಟುಂಬಗಳು

3. ಅವಿಭಕ್ತ ಕುಟುಂಬ ಎಂದರೇನು?

ಉತ್ತರ: ಅವಿಭಕ್ತ ಕುಟುಂಬದಲ್ಲಿ ಅಜ್ಜ-ಅಜ್ಜಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು

* ಕೆಲವು ಸಂದರ್ಭಗಳಲ್ಲಿ ಇನ್ನೂ ವಿಸ್ತøತವಾಗಿ ಎರಡು ತಲೆಮಾರುಗಳಿಗಿಂತಲೂ ಹೆಚ್ಚಿನ ಜನರು ಇರುತ್ತಾರೆ.

* ಇಡೀ ಕುಟುಂಬ ಒಂದೇ ಬಗೆಯ ಧಾರ್ಮಿಕ ಆಚರಣೆಗಳನ್ನು ಹೊಂದಿರುತ್ತವೆ.

* ಅವಿಭಕ್ತ ಕುಟುಂಬವು ಸಾಮಾನ್ಯವಾಗಿ ರಕ್ತಸಂಬಂಧಿಗಳಿಂದ ಕೂಡಿರುವ ಗುಂಪಾಗಿರುತ್ತದೆ.

4. ಕೇಂದ್ರ ಕುಟುಂಬ ಎಂದರೇನು?

ಉತ್ತರ: ತಂದೆ, ತಾಯಿ ಮತ್ತು ಅವರ ಅವಿವಾಹಿತ ಮಕ್ಕಳು ಮಾತ್ರ ಸದಸ್ಯರಾಗಿರುವ ಕುಟುಂಬನವನು `ಕೇಂದ್ರ ಕುಟುಂಬ ಎಂದು ಕರೆಯುತ್ತಾರೆ.

5. ಕುಟುಂಬದ ಲಕ್ಷಣಗಳು ಯಾವುವು?

ಉತ್ತರ: ಕುಟುಂಬದ ಲಕ್ಷಣಗಳು:-

1.      ಕುಟುಂಬ ಸರ್ವವ್ಯಾಪಕವಾದದ್ದು.

2.      ಸಮಾಜದ ಎಲ್ಲಾ ಚಟುವಟಿಕೆಗಳ ಮೂಲಘಟಕ

3.      ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆ

4.      ಪಾಲನೆ ಮತ್ತು ಪೋಷಣೆ

5.      ಸಾಮಾಜಿಕ ವರ್ತನೆಗಳನ್ನು ಹೇಳಿ ಕೊಡುತ್ತದೆ.

6.      ತಲೆಮಾರುಗಳ ಪರಂಪರೆಯನ್ನು ತಿಳಿಸುತ್ತದೆ.

6. ವ್ಯಕ್ತಿಯ ಸಾಮಜಿಕ ಬೆಳವಣಿಗೆಯ ಹಂತಗಳಲ್ಲಿ ಕುಟುಂಬದ ಪಾತ್ರವನ್ನು ತಿಳಿಸಿ.

ಉತ್ತರ: ವ್ಯಕ್ತಿಯ ಸಾಮಾಜಿಕ ಬೆಳವಣಿಗೆಯ ಹಂತಗಳಲ್ಲಿ ಬಾಲ್ಯ-ಯೌವ್ವನ ಮುಖ್ಯ.

* ಮಗುವು ಕುಟುಂಬದೊಳಗೆ ಮಾತನಾಡುವ ಮಾತೃಭಾಷೆಯನ್ನು ಮೊದಲು ತಿಳಿಯುತ್ತದೆ.

* ಅದರ ಸಹಾಯದಿಂದ ಸಾಮಾಜಿಕ ವಿಚಾರಗಳನ್ನು ತಿಳಿದುಕೊಡುತ್ತದೆ.

* ಕುಟುಂಬದ ಸುತ್ತಮುತ್ತಲಿನ ಸಾಮಾಜಿಕ ಪರಿಸರದಲ್ಲಿ ಬೆಳೆಯುವ ಮಕ್ಕಳು ಅದಕ್ಕನುಗುಣವಾದ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುತ್ತಾರೆ.

* ಸಮ ವಯಸ್ಸಿನ ಮಕ್ಕಳೊಂದಿಗೆ, ಹಿರಿಯರೊಂದಿಗೆ, ಗುಂಪುಗಳೊಂದಿಗೆ ವಿವಿಧ ಸಂದರ್ಭಗಳಲ್ಲಿ ಹೇಗೆ ಬೆರೆಯಬೇಕು ಎಂಬುದನ್ನು ಕುಟುಂಬ ಹೇಳಿಕೊಡುತ್ತಿರುತ್ತದೆ.

* ಸಾಮಾಜಿಕ ವರ್ತನೆಗಳು- ಬೇಡಿಕೆಗಳು-ನಿಯಂತ್ರಣಗಳು ಮಗುವಿನ ಮೇಲೆ ಪರೋಕ್ಷವಾದ ಪ್ರಭಾವವನ್ನು ಬೀರುತ್ತಿರುತ್ತವೆ.

* ಬಾಲ್ಯ-ಯೌವ್ವನ, ಮಧ್ಯವಯಸ್ಸು ಮತ್ತು ಮುಪ್ಪಿನಲ್ಲಿ ಸ್ನೇಹ, ಸ್ವಾತಂತ್ರ್ಯ, ಭಧ್ರತೆ ಹಾಗೂ ಇತರೆ ವರ್ತನೆಗಳನ್ನು ಕುಟುಂಬ ಹೇಳಿಕೊಡುತ್ತದೆ.

7. ಅವಿಭಕ್ತ ಕುಟುಂಬದ ಲಕ್ಷಣಗಳನ್ನು ವಿವರಿಸಿ.

ಉತ್ತರ: ಅವಿಭಕ್ತ ಕುಟುಂಬದ ಲಕ್ಷಣಗಳು:

1.      ಗಾತ್ರದಲ್ಲಿ ದೊಡ್ಡದು.

2.      ಸಹಕಾರ ಸಹಭಾಗಿತ್ವ

3.      ಒಂದೇ ವಾಸಸ್ಥಾನ ಮತ್ತು ಅಡುಗೆ ಮನೆ

4.      ಎಲ್ಲಾ ಸದಸ್ಯರು ಒಂದೇ ಧರ್ಮ ಆಚರಣೆ

5.      ಸ್ವಯಂಪೂರ್ಣ ಘಟಕ

6.      ಅಧಿಕಾರ ಸಂರಚನೆ

8. ಆಧುನಿಕ ಕೇಂದ್ರ ಕುಟುಂಬಗಳು ದಿನೇ ದಿನೇ ಹೆಚ್ಚಾಗಲು ಕಾರಣಗಳೇನು?

ಉತ್ತರ: ಕೇಂದ್ರ ಕುಟುಂಬಗಳು ಆಧುನಿಕ ಸಮಾಜದಲ್ಲಿ ಹೆಚ್ಚಳವಾಗಿವೆ.

* ವೈಯಕ್ತಿಕತೆ, ವೈಯಕ್ತಿಕ ಸಂತೋಷ, ಸುಖ, ಆಸ್ತಿಯ ಹಕ್ಕು ಬದಲಾದ ಸಾಮಾಜಿಕ ಮೌಲ್ಯಗಳು, ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಆದ ಪ್ರಗತಿ, ನಗರೀಕರಣ, ಪ್ರಜಾಸತಾತ್ಮಕ ಹಾಗೂ ಸಮಾನತೆಯ ತತ್ವಗಳು ಇವೆ ಮುಂತಾದ ಅನೇಕ ಅಂಶಗಳು ಕೇಂದ್ರ ಕುಟುಂಬದ ಹೆಚ್ಚಳಕ್ಕೆ ಕಾರಣವಾಗಿವೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon