ನಮ್ಮ ರಾಜ್ಯ ಕರ್ನಾಟಕ | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ 1. ನಮ್ಮ ರಾಜ್ಯ ಕರ್ನಾಟಕ

I ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿಮಾಡಿರಿ :

1. ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷ _____ ದಿನಾಂಕದಂದು ಆಚರಿಸಲಾಗುತ್ತದೆ.

ಉತ್ತರ: ನವೆಂಬರ್ 1

2. ಕರ್ನಾಟಕ ಎಂದು ಮರುನಾಮಕರಣ ಮಾಡಿದ ವರ್ಷ _____

ಉತ್ತರ: 1973

3. ಕರ್ನಾಟಕದ ಪೂರ್ವಭಾಗದಲ್ಲಿ ____ ಮತ್ತು ____ ರಾಜ್ಯಗಳಿವೆ.

ಉತ್ತರ: ಆಂಧ್ರಪ್ರದೇಶ ಮತ್ತು ತೆಲಂಗಾಣ

4. ಕರ್ನಾಟಕದ _____ ಜಿಲ್ಲೆಯು ವಿಸ್ತೀರ್ಣದಲ್ಲಿ ದೊಡ್ಡದಾಗಿದೆ.

ಉತ್ತರ: ಬೆಳಗಾವಿ

5. ಕರ್ನಾಟಕವು ಭಾರತದ ____ ಭಾಗದಲ್ಲಿದೆ.

ಉತ್ತರ: ದಕ್ಷಿಣ

II ಗುಂಪುಗಳಲ್ಲಿ ಚರ್ಚಿಸಿ ಮತ್ತು ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ.

1. ಕರ್ನಾಟಕದ ಅಕ್ಷಾಂಶ ಮತ್ತು ರೇಖಾಂಶಗಳ ವಿಸ್ತರಣೆಯನ್ನು ಬರೆಯಿರಿ.

ಉತ್ತರ: 11-31 ಡಿಗ್ರಿ ಮತ್ತು 18-45 ಡಿಗ್ರಿ ಉತ್ತರ ಅಕ್ಷಾಂಶಗಳು

74-12 ಡಿಗ್ರಿ ಮತ್ತು 78-40 ಡಿಗ್ರಿ ಪೂರ್ವ ರೇಖಾಂಶಗಳು

ಇವುಗಳ ನಡುವೆ ಕರ್ನಾಟಕ ವಿಸ್ತರಿಸಿದೆ.

2. ನಮ್ಮ ನೆರೆಯ ರಾಜ್ಯಗಳನ್ನು ಹೆಸರಿಸಿ

ಉತ್ತರ: ಉತ್ತರಕ್ಕೆ ಮಹಾರಾಷ್ಟ್ರ

ಪೂರ್ವಕ್ಕೆ ತೆಲಂಗಾಣ ಮತ್ತು ಆಂಧ್ರಪ್ರದೇಶ

ದಕ್ಷಿಣ ಮತ್ತು ಆಗ್ನೇಯಕ್ಕೆ ತಮಿಳುನಾಡು

ನೈಋತ್ಯಕ್ಕೆ ಕೇರಳ

ವಾಯುವ್ಯಕ್ಕೆ ಗೋವಾ ರಾಜ್ಯಗಳು

ನಮ್ಮ ನೆರೆಯ ರಾಜ್ಯಗಳಾಗಿವೆ.

3. ಕರ್ನಾಟಕದ ನಾಲ್ಕು ಆಡಳಿತ ವಿಭಾಗಗಳಾವುವು?

ಉತ್ತರ: ಆಡಳಿತ ನಿರ್ವಹಣೆಯ ದೃಷ್ಟಿಯಿಂದ ಕರ್ನಾಟಕವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.

1.        ಬೆಂಗಳೂರು

2.        ಮೈಸೂರು

3.        ಬೆಳಗಾವಿ

4.        ಕಲಬುರಗಿ

4. ಭಾರದಲ್ಲಿ ಕರ್ನಾಟಕದ ಭೌಗೋಳಿಕ ಸ್ಥಾನವನ್ನು ತಿಳಿಸಿ.

ಉತ್ತರ: ಕರ್ನಾಟಕದ ಭೌಗೋಳಿಕ ಸ್ಥಾನ

          ಭಾರತದ 28 ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ.

          ಭಾರತದ ದಕ್ಷಿಣ ಭಾಗದಲ್ಲಿ ಕರ್ನಾಟಕವಿದೆ.

          ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ.

          11-31 ಡಿಗ್ರಿ ಮತ್ತು 18-45 ಡಿಗ್ರಿ ಉತ್ತರ ಅಕ್ಷಾಂಶಗಳು

          74-12 ಡಿಗ್ರಿ ಮತ್ತು 78-40 ಡಿಗ್ರಿ ಪೂರ್ವ ರೇಖಾಂಶಗಳು ಇವುಗಳ ನಡುವೆ ಕರ್ನಾಟಕ ವಿಸ್ತರಿಸಿದೆ.

          ಬೀದರ್ ಔರಾದ ಉತ್ತರದ ತುದಿ

          ಚಾಮರಾಜನಗರ ಜಿಲ್ಲೆ ದಕ್ಷಿಣದ ತುದಿಯಾಗಿದೆ

          ಕರ್ನಾಟಕದ (-) ಉದ್ದ -750 ಕಿ.ಮೀ.

          ಅಗಲ (ಪಶ್ಚಿಮ-ಪೂರ್ವ)-400 ಕಿ.ಮೀ.

          ಕೋಲಾರ ಜಿಲ್ಲೆಯ-ಮುಳಬಾಗಿಲು ತಾಲ್ಲೂಕು- ಪೂರ್ವದ ತುದಿ

          ಕರ್ನಾಟಕ ರಾಜ್ಯ ಭೂ ಮತ್ತು ಜಲ ಮೇರೆಗಳೆರಡನ್ನೂ ಸಹ ಒಳಗೊಂಡಿರುವುದು.

          ಪಶ್ಚಿಮಕ್ಕೆ ಅರಬ್ಬೀ ಸಮುದ್ರವಿದೆ

          ಉತ್ತರಕ್ಕೆ ಮಹಾರಾಷ್ಟ್ರ

          ಪೂರ್ವಕ್ಕೆ ಆಂಧ್ರಪ್ರದೇಶ & ತೆಲಂಗಾಣ

          ದಕ್ಷಿಣ & ಆಗ್ನೇಯಕ್ಕೆ ತಮಿಳುನಾಡು

          ನೈಋತ್ಯಕ್ಕೆ ಕೇರಳ

          ವಾಯುವ್ಯಕ್ಕೆ ಗೋವಾ ರಾಜ್ಯಗಳು ಮೇರೆಗಳಾಗಿವೆ.

          ಕರ್ನಾಟಕವು ಆಕಾರದಲ್ಲಿಗೋಡಂಬಿಯನ್ನು ಹೋಲುತ್ತದೆ.

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon