ಕರ್ನಾಟಕದ ಜಲ ಸಂಪನ್ಮೂಲಗಳು | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

9ನೇ ತರಗತಿ ಭೂಗೋಳ ವಿಜ್ಞಾನ

ಅಧ್ಯಾಯ-4 ಕರ್ನಾಟಕದ ಜಲ ಸಂಪನ್ಮೂಲಗಳು

I. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಕಾವೇರಿ ನದಿಯು ಕೊಡಗು ಜಿಲ್ಲೆಯ __ ಎಂಬಲ್ಲಿ ಉಗಮ ಹೊಂದುತ್ತದೆ.

ಉತ್ತರ : ತಲಕಾವೇರಿ

2. ಪ್ರಸಿದ್ಧ ಜೋಗ ಜಲಪಾತ __ ನದಿಯಿಂದ ಸೃಷ್ಟಿಯಾಗಿದೆ.

ಉತ್ತರ : ಶರಾವತಿ

3. ಕೃಷ್ಣರಾಜಸಾಗರ ಅಣೆಕಟ್ಟು _ ಜಿಲ್ಲೆಯಲ್ಲಿದೆ.

ಉತ್ತರ : ಮಂಡ್ಯ (ಮೈಸೂರು)

4. ಕರ್ನಾಟಕದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ __

ಉತ್ತರ : ಶಿವನಸಮುದ್ರ

5. ಆಲಮಟ್ಟಿ ಅಣೆಕಟ್ಟೆಯನ್ನು _ ನದಿಗೆ ನಿರ್ಮಿಸಲಾಗಿದೆ.

ಉತ್ತರ : ಕೃಷ್ಣಾ

II. ಗುಂಪುಗಳಲ್ಲಿ ಚರ್ಚಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಕರ್ನಾಟಕದ ಪ್ರಮುಖ ನದಿಗಳನ್ನು ಹೆಸರಿಸಿ.

ಉತ್ತರ : 1) ಪೂರ್ವಾಭಿಮುಖವಾಗಿ ಹರಿಯುವ ನದಿಗಳು :

ಕೃಷ್ಣ

ಕಾವೇರಿ

ಪೆನ್ನಾರ್ ಮತ್ತು

ಪಾಲಾರ್

2) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು :

ಶರಾವತಿ

ಕಾಳಿ

ಗಂಗಾವಳಿ

ನೇತ್ರಾವತಿ

ವಾರಾಹಿ

ಅಘನಾಶಿನಿ

2. ಕೃಷ್ಣಾ ನದಿಯನ್ನು ಕುರಿತು ಟಿಪ್ಪಣಿ ಬರೆಯಿರಿ.

ಉತ್ತರ : ಕೃಷ್ಣ ನದಿ ದಕ್ಷಿಣ ಭಾರತದ ಎರಡನೇ ಮುಖ್ಯ ನದಿ.

ಇದು ಮಹಾಬಲೇಶ್ವರ ಎಂಬಲ್ಲಿ ಉಗಮ ಹೊಂದಿ 1392 ಕಿಲೋಮೀಟರ್ ದೂರ ಪೂರ್ವದೆಡೆಗೆ ಹರಿದು ಬಂಗಾಳಕೊಲ್ಲಿ ಸೇರುತ್ತದೆ.

ಆದರೆ ಇದು ಕರ್ನಾಟಕದಲ್ಲಿ 480 ಕಿಲೋಮೀಟರ್ ದೂರ ಹರಿಯುವುದು.

ಭೀಮ, ತುಂಗಭದ್ರಾ, ಘಟಪ್ರಭಾ ಮತ್ತು ಮಲಪ್ರಭಾ ಇದರ ಉಪನದಿಗಳಾಗಿವೆ.

ಕೃಷ್ಣ ನದಿ ಉತ್ತರ ಕರ್ನಾಟಕದ ನೀರಾವರಿ ಮತ್ತು ಜಲವಿದ್ಯುತ್ ತಯಾರಿಕೆಗೆ ಅನುಕೂಲವಾಗಿದೆ.

3. ಕಾವೇರಿ ನದಿಯ ಉಪನದಿಗಳು ಯಾವುವು ?

ಉತ್ತರ : ಕಾವೇರಿ ನದಿಯ ಉಪನದಿಗಳು ರೀತಿಯಾಗಿವೆ.

ಹೇಮಾವತಿ

ಹಾರಂಗಿ

ಲೋಕಪಾವನಿ

ಅರ್ಕಾವತಿ

ಶಿಂಷಾ

ಲಕ್ಷ್ಮಣ ತೀರ್ಥ

ಕಪಿಲೆ ಮತ್ತು

ಸುವರ್ಣಾವತಿ

4. ಕರ್ನಾಟಕ ನೀರಾವರಿಯ ವಿಧಗಳನ್ನು ತಿಳಿಸಿ.

ಉತ್ತರ : ಕರ್ನಾಟಕದಲ್ಲಿ ಪುರಾತನಕಾಲದಿಂದಲೂ ವಿವಿಧ ನೀರಾವರಿ ಮೂಲಗಳಿಂದ ವ್ಯವಸಾಯ ಮಾಡುವುದು ರೂಢಿಯಲ್ಲಿದೆ.

ಪ್ರಮುಖ ನೀರಾವರಿ ಮೂಲಗಳೆಂದರೆ

ಬಾವಿ ನೀರಾವರಿ

ಕಾಲುವೆ ನೀರಾವರಿ

ಕೆರೆ ನೀರಾವರಿ

5. ನಮ್ಮ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ ಗಳನ್ನು ಹೆಸರಿಸಿ.

ಉತ್ತರ : ಕರ್ನಾಟಕ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನ ಕೇಂದ್ರಗಳು.

ಶಿವನಸಮುದ್ರ, ಶಿಂಷಾ (ಕಾವೇರಿ ನದಿ)

ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ (ಶರಾವತಿ ನದಿ)

ಸೂಪ, ನಾಗಝರಿ, ಕದ್ರ ಮತ್ತು ಕೊಡಸಳ್ಳಿ (ಕಾಳಿ ನದಿ)

ವರಾಹಿ ಮತ್ತು ಮಾರಿಕಣಿವೆ, ಭದ್ರ ತುಂಗಭದ್ರ ಮತ್ತು ಆಲಮಟ್ಟಿ ( ಕೃಷ್ಣಾ ನದಿ )

6. ನದಿಗಳು ರಾಜ್ಯಗಳ ನಡುವೆ ಹೇಗೆ ಸಾಮರಸ್ಯ ಬೆಳೆಸುತ್ತವೆ ?

ಉತ್ತರ : ಭಾರತದಲ್ಲಿ ನದಿಗಳು ಹಲವಾರು ರಾಜ್ಯಗಳಲ್ಲಿ ಹರಿಯುತ್ತವೆ.

ರಾಜ್ಯಗಳಲ್ಲಿ ಜಲವಿವಾದಗಳು ಇದ್ದಾಗ ನದಿಯ ನೀರನ್ನು ಕೃಷಿ ಕ್ಷೇತ್ರಕ್ಕೆ, ಕೈಗಾರಿಕಾ ಕ್ಷೇತ್ರಕ್ಕೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

ಕಾರಣಕ್ಕಾಗಿ ನದಿ ಜಲ ಸಾಮರಸ್ಯಗಳು ಬೆಳೆಸುತ್ತವೆ.

III. ಹೊಂದಿಸಿ ಬರೆಯಿರಿ.

A

1) ಲಿಂಗನಮಕ್ಕಿ ಅಣೆಕಟ್ಟು

2) ಗಗನಚುಕ್ಕಿ, ಭರಚುಕ್ಕಿ ಜಲಪಾತ

3) ವಾಣಿವಿಲಾಸ ಸಾಗರ

4) ನಾಗಝರಿ

5) ಪೆನ್ನಾರ್

B

A) ಜಲವಿದ್ಯುತ್ ಯೋಜನೆ

B) ನದಿ

C) ಕಾಳಿ ನದಿ

D) ಕಾವೇರಿ ನದಿ

E) ಶರಾವತಿ ನದಿ 

F) ಮಾರಿಕಣಿವೆ

ಉತ್ತರ :

1) ಲಿಂಗನಮಕ್ಕಿ ಅಣೆಕಟ್ಟು - E) ಶರಾವತಿ ನದಿ

2) ಗಗನಚುಕ್ಕಿಭರಚುಕ್ಕಿ ಜಲಪಾತ - D) ಕಾವೇರಿ ನದಿ

3) ವಾಣಿವಿಲಾಸ ಸಾಗರ - F) ಮಾರಿಕಣಿವೆ

4) ನಾಗಝರಿ - A) ಜಲವಿದ್ಯುತ್ ಯೋಜನೆ

5) ಪೆನ್ನಾರ್ - B) ನದಿ

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon