ಕರ್ನಾಟಕದ ಭೂ ಸಂಪತ್ತು | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಅಧ್ಯಾಯ 5. ಕರ್ನಾಟಕದ ಭೂ ಸಂಪತ್ತು

I ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.

1. ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ______ ಎನ್ನುವರು.

ಉತ್ತರ: ಭೂ ಬಳಕೆ

2. ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ________ ಜಿಲ್ಲೆಯು ಹೊಂದಿದೆ.

ಉತ್ತರ: ಕಲಬುರಗಿ

3. ‘ಸೊರ್ಗಾಮ್ ವಲ್ಗರೆಎಂಬುದು ______ ಬೆಳೆಯ ವೈಜ್ಞಾನಿಕ ಹೆಸರು.

ಉತ್ತರ: ಜೋಳ

4. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ _______

ಉತ್ತರ: ಬೆಳಗಾವಿ

5. ತಂಬಾಕಿನಲ್ಲಿ _______ ಎಂಬ ಮಾದಕವಸ್ತುವಿರುತ್ತದೆ.

ಉತ್ತರ : ನಿಕೋಟಿನ್

II ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ಕರ್ನಾಟಕದ ಭೂ ಬಳಕೆಯ ಮಾದರಿಗಳನ್ನು ತಿಳಿಸಿ.

ಉತ್ತರ: ಕರ್ನಾಟಕದ ಭೂ ಬಳಕೆಯ ಮಾದರಿಗಳು :

1.     ನಿವ್ವಳ ಸಾಗುವಳಿ ಭೂಮಿ

2.     ಅರಣ್ಯ ಪ್ರದೇಶ

3.     ಸಾಗುವಳಿಗೆ ಲಭ್ಯವಿಲ್ಲದ ಭೂಮಿ

4.     ಸಾಗುವಳಿ ಮಾಡದ ಇತರೆ ಭೂಮಿ

5.     ಬೀಳು ಭೂಮಿ 

2. ಕರ್ನಾಟಕದಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ಕುರಿತು ಬರೆಯಿರಿ.

ಉತ್ತರ: ಕರ್ನಾಟಕದಲ್ಲಿ ವ್ಯವಸಾಯದ ಪ್ರಾಮುಖ್ಯತೆ

ಕರ್ನಾಟಕದ ಪುರಾತನ ಮೂಲವೃತ್ತಿಗಳಲ್ಲಿ ವ್ಯವಸಾಯವೂ ಒಂದು.

ಇದು ಮುಖ್ಯ ಜೀವನಾಧಾರಿತ ವೃತ್ತಿ.

ನಮ್ಮ ಆರ್ಥಿಕತೆಯ ಬೆನ್ನೆಲುಬು.

ಆರ್ಥಿಕಾಭಿವೃದ್ಧಿಯು ವ್ಯವಸಾಯವನ್ನಾಧರಿಸಿದೆ.

ಜೀವನ ನಡೆಸಲು ಉದ್ಯೋಗವನ್ನು ನೀಡಿದೆ.

ಜನರಿಗೆ ಆಹಾರ, ಕೈಗಾರಿಕಗೆಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತೆ.

ರಾಜ್ಯದ ಆದಾಯದ ಮೂಲವಾಗಿದೆ.

ವಿದೇಶಿ ವಿನಿಮಯ ಗಳಿಸಿಕೊಡುತ್ತದೆ.

ಕಾಫಿ, ರೇಷ್ಮೆ, ಸಾಂಬಾರ ಪದಾರ್ಥಗಳು, ತಂಬಾಕು, ಹತ್ತಿ ಮುಂತಾದವು ರಫ್ತಾಗುವ ಕೃಷಿ ಉತ್ಪನ್ನಗಳು,

ತೃತೀಯ ವೃತ್ತಿಗಳಾದ ಸಾರಿಗೆ, ಬ್ಯಾಂಕಿಂಗ್ ವ್ಯವಸ್ಥೆ, ವಿಮೆ ಇತ್ಯಾದಿಗಳ ಪ್ರಗತಿಗೂ ಇದು ಪೂರಕವಾಗುತ್ತದೆ.

3. ನೀರಾವರಿ ಬೇಸಾಯ ಎಂದರೇನು ? ನೀರಾವರಿ ಬೆಳೆಗಳನ್ನು ಹೆಸರಿಸಿ.

ಉತ್ತರ: ಕಾಲುವೆ, ಕೆರೆ, ಬಾವಿ ಮೂಲಗಳಿಂದ ನೀರನ್ನು ಬಳಕೆ ಮಾಡಿ ಸಾಗುವಳಿ ಮಾಡುವ ಕೃಷಿ ಪದ್ಧತಿಗೆನೀರಾವರಿ ಬೇಸಾಯಎನ್ನುವರು.

ಭತ್ತ,

ಕಬ್ಬು, ನೀರಾವರಿ ಬೇಸಾಯದ ಪ್ರಮುಖ ಬೆಳೆಗಳು.

4. ಮಿಶ್ರ ಬೇಸಾಯದ ಮುಖ್ಯ ಲಕ್ಷಣಗಳನ್ನು ತಿಳಿಸಿ.

ಉತ್ತರ: ಬೆಳೆ ಬೆಳೆಯುವುದರ ಜೊತೆಯಲ್ಲೇ ಪಶು ಸಂಗೋಪನೆ, ರೇಷ್ಮೆ ಕೃಷಿ, ಕುರಿಸಾಕಣೆ, ಕೋಳಿಸಾಕಣೆ, ಜೇನುಸಾಕಣೆ, ಮೀನುಗಾರಿಕೆ ಮುಂತಾದ ಉಪ ಕಸುಬುಗಳನ್ನು ನಿರ್ವಹಿಸುವುದನ್ನು ಮಿಶ್ರ ಬೇಸಾಯ ಎನ್ನುತ್ತಾರೆ.

5. ರಾಗಿಯ ಉಪಯೋಗಗಳನ್ನು ತಿಳಿಸಿ.

ಉತ್ತರ: ರಾಗಿ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರ ಧಾನ್ಯವಾಗಿದೆ.

ಇದರ ವೈಜ್ಞಾನಿಕ ಹೆಸರುಯೆಲಿಯುಸಿನ್ ಕೋರಾಕಾನ’.

ರಾಗಿಯಿಂದ ಮುದ್ದೆ, ಗಂಜಿ, ರೊಟ್ಟಿ, ಹುರಿಹಿಟ್ಟು, ಮಾಲ್ಟ್, ದೋಸೆ ಮುಂತಾದ ಆಹಾರ ಪದಾರ್ಥಗಳನ್ನು ತಯಾರಿಸಿ ಬಳಸಲಾಗುತ್ತದೆ.

ಕರ್ನಾಟಕದಲ್ಲಿ ಭತ್ತ ಮತ್ತು ಜೋಳಗಳ ನಂತರ ರಾಗಿಯು ಮೂರನೆಯ ಮುಖ್ಯ ಆಹಾರ ಧಾನ್ಯವಾಗಿದೆ.

ಸುಲಭ ಬೆಲೆಗೆ ದೊರೆಯುವುದು.

ರಾಗಿಹುಲ್ಲು ದನಕರುಗಳ ಮೇವಿಗಾಗಿ ಬಳಸಲಾಗುತ್ತದೆ.

ಹೆಚ್ಚು ಕಾಲ ಸಂಗ್ರಹಿಸಬಹುದಾದ ಧಾನ್ಯ ಇದಾಗಿದೆ.

III. ಹೊಂದಿಸಿ ಬರೆಯಿರಿ.

            C                                  D

1)    ಕಾಫಿ                ) ಮಿಶ್ರಬೇಸಾಯ

2)    ಹತ್ತಿ                  ಬಿ) ಪಾನೀಯ ಬೆಳೆ

3)    ಕಬ್ಬು                ಸಿ) ತಂಬಾಕು

4)    ನಿಪ್ಪಾಣಿ             ಡಿ) ನಾರುಬೆಳೆ

5)    ಕುರಿಸಾಕಾಣಿಕೆ    ) ನೆಡುತೋಟಗಳ ಬೆಳೆ

                           ಎಫ್) ವಾಣಿಜ್ಯ ಬೆಳೆ

III. ಸರಿಯಾದ ಉತ್ತರ :

            C                                  D

1)    ಕಾಫಿ                   ಬಿ) ಪಾನೀಯ ಬೆಳೆ

2)    ಹತ್ತಿ                     ಡಿ) ನಾರುಬೆಳೆ

3)    ಕಬ್ಬು                ಎಫ್) ವಾಣಿಜ್ಯ ಬೆಳೆ

4)    ನಿಪ್ಪಾಣಿ               ಸಿ) ತಂಬಾಕು

5)    ಕುರಿಸಾಕಾಣಿಕೆ      ) ಮಿಶ್ರಬೇಸಾಯ


9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon