ಕರ್ನಾಟಕದ ಪ್ರಾಕೃತಿಕ ವಿಭಾಗಗಳು | 9ನೇ ತರಗತಿ ಭೂಗೋಳ ವಿಜ್ಞಾನ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು |

ಭೂಗೋಳ ವಿಜ್ಞಾನ ಅಧ್ಯಾಯ-2 ಕರ್ನಾಟಕದ ಪ್ರಾಕೃತಿಕ ವಿಭಾಗಗಳು

ಅಭ್ಯಾಸದ ಪ್ರಶ್ನೆಗಳು

I. ಬಿಟ್ಟಿರುವ ಸ್ಥಳಗಳನ್ನು ಸೂಕ್ತವಾದ ಪದಗಳಿಂದ ಭರ್ತಿ ಮಾಡಿರಿ.

1) ಮಲ್ಪೆ ಸಮೀಪದಲ್ಲಿ ___ ದ್ವೀಪವಿದೆ.

ಉತ್ತರ : ಸೆಂಟ್ ಮೇರಿಸ್ ( ಕೋಕೋನಟ್)

2) ಸಹ್ಯಾದ್ರಿ ಎಂದು __ ಗಳನ್ನು ಕರೆಯುತ್ತಾರೆ.

ಉತ್ತರ : ಪಶ್ಚಿಮ ಘಟ್ಟಗಳು (ಮಲೆನಾಡು)

3) ಆಗುಂಬೆ ಘಾಟಿಯು __ ಮತ್ತು __ ಸ್ಥಳಗಳನ್ನು ಸಂಪರ್ಕಿಸುತ್ತದೆ.

ಉತ್ತರ : ಶಿವಮೊಗ್ಗ ಮತ್ತು ಉಡುಪಿ

4) ಕರ್ನಾಟಕದ ಕಾಶ್ಮೀರ ಎಂದು ___ ಜಿಲ್ಲೆಯನ್ನು ಕರೆಯುತ್ತಾರೆ.

ಉತ್ತರ : ಕೊಡಗು

II. ಗುಂಪುಗಳಲ್ಲಿ ಚರ್ಚಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1) ಕರ್ನಾಟಕದ ಪ್ರಮುಖ ಪ್ರಾಕೃತಿಕ ವಿಭಾಗಗಳನ್ನು ತಿಳಿಸಿರಿ.

ಉತ್ತರ : ಭೂರಚನೆ ಮತ್ತು ಮೇಲ್ಮೈ ಲಕ್ಷಣಗಳನ್ನು ಆಧರಿಸಿ ಕರ್ನಾಟಕವನ್ನು ಮೂರು ಪ್ರಮುಖ ಪ್ರಾಕೃತಿಕ ವಿಭಾಗಗಳಾಗಿ ವಿಂಗಡಿಸಲಾಗಿದೆ.

1. ಕರಾವಳಿ ಮೈದಾನ

2. ಮಲೆನಾಡು

3. ಮೈದಾನ ಪ್ರದೇಶ

2) ಮಲೆನಾಡು ಪ್ರದೇಶದ ಲಕ್ಷಣಗಳನ್ನು ಕುರಿತು ಬರೆಯಿರಿ.

ಉತ್ತರ : ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳನ್ನು ಮಲೆನಾಡು ಎನ್ನುವರು.

ಇದನ್ನು ಸಹ್ಯಾದ್ರಿ ಬೆಟ್ಟಗಳು ಎಂದಳು ಕರೆಯುವರು.

ಮಲೆನಾಡು ಕರಾವಳಿಗೆ ಸಮಾನಾಂತರವಾಗಿ ಹಬ್ಬಿವೆ.

ಇದರ ಉದ್ದ 650 ಕಿಲೋಮೀಟರ್

ಅಗಲ 50 - 76 KM

ಸರಾಸರಿ ಎತ್ತರವು ಸಮುದ್ರ ಮಟ್ಟಕ್ಕೆ 900 ರಿಂದ 1500 ಮೀಟರ್ ಗಳು

ಇದು ಅರಬ್ಬಿ ಸಮುದ್ರದಿಂದ ಬೀಸುವ ಮಳೆ ಮಾರುತಗಳನ್ನು ತಡೆದು 200 ಸೆಂಟಿಮೀಟರ್ ಗಿಂತ ಹೆಚ್ಚು ಮಳೆ ಪಡೆಯುತ್ತದೆ.

ಇಲ್ಲಿನ ಅತಿ ಎತ್ತರವಾದ ಶಿಖರ ಗಳೆಂದರೆ ಮುಳ್ಳಯ್ಯನಗಿರಿ, ಕುದುರೆಮುಖ, ಕಲ್ಲತಗಿರಿ, ರುದ್ರಗಿರಿ ಹಾಗೂ ದೇವಿರಮ್ಮನ ಬೆಟ್ಟ.

ಮುಳ್ಳಯ್ಯನಗಿರಿ ರಾಜ್ಯದಲ್ಲಿ ಎತ್ತರವಾದ ಶಿಖರ ವಾಗಿದೆ. (1913 Mtr)

3) ಕರ್ನಾಟಕದ ಕರಾವಳಿ ಮೈದಾನಗಳ ಬಗ್ಗೆ ಬರೆಯಿರಿ.

ಉತ್ತರ : ಕರ್ನಾಟಕದ ಕರಾವಳಿ ಮೈದಾನವು ಅರಬ್ಬೀ ಮತ್ತು ಮಲೆನಾಡುಗಳ ಮಧ್ಯೆ ವಿಸ್ತರಿಸಿದೆ.

ಇದು ದಕ್ಷಿಣದಲ್ಲಿ ಮಂಗಳೂರಿನಿಂದ ಉತ್ತರದಲ್ಲಿ ಕಾರವಾರದವರೆಗೆ 320 ಕಿಲೋಮಿಟರ್ ಉದ್ದವಿದೆ.

12 ರಿಂದ 64 ಕಿಲೋಮೀಟರ್ ಅಗಲವಾಗಿದೆ.

ದಕ್ಷಿಣದಲ್ಲಿ ಅಗಲವಾಗಿತ್ತು ಉತ್ತರದ ಕಡೆಗೆ ಕಿರಿದಾಗುತ್ತಾ ಕಡಿದಾದ ಇಳಿಜಾರಿನಿಂದ ಕೂಡಿದೆ.

ಇದರ ಎತ್ತರ ಸಮುದ್ರಮಟ್ಟದಿಂದ 200 ಮೀಟರ್ ಗಳನ್ನು ಮೀರುತ್ತದೆ.

ಇದನ್ನು ಕೆನರಾ ಅಥವಾ ಕರ್ನಾಟಕ ಕರಾವಳಿ ಎಂದೆ ಕರೆಯುವರು.

ಇಲ್ಲಿರುವ ಪ್ರಮುಖ ಬಂದರುಗಳು ನವಮಂಗಳೂರು ಇದು ಕರ್ನಾಟಕದ ಅತಿ ದೊಡ್ಡ ಬಂದರು.

ಭಟ್ಕಳ, ಮಲ್ಬೇ, ಕಾರವಾರ, ಕುಮಟಾ, ಬೇಲಿಕೇರಿ ಮತ್ತು ಹೊನ್ನಾವರಗಳು.

4) ದಕ್ಷಿಣ ಮೈದಾನದ ಪ್ರಮುಖ ಬೆಟ್ಟಗಳನ್ನು ಹೆಸರಿಸಿ.

ಉತ್ತರ : ದಕ್ಷಿಣ ಮೈದಾನದ ಪ್ರಮುಖ ಬೆಟ್ಟಗಳು ಎಂದರೆ :

ಚಿತ್ರದುರ್ಗದ ಬೆಟ್ಟಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾರಾಯಣದುರ್ಗ, ಸಾವನದುರ್ಗ, ಶಿವಗಂಗೆ

ತುಮಕೂರು ಜಿಲ್ಲೆಯ ಮಧುಗಿರಿ ಬೆಟ್ಟ- ಇದು ಏಷ್ಯಾ ಖಂಡದಲ್ಲಿ ಅತಿ ದೊಡ್ಡ ಏಕಶಿಲಾ ಬೆಟ್ಟ ವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ, ಚೆನ್ನಕೇಶವ ಬೆಟ್ಟ, ಕವಲೆದುರ್ಗ ಹಾಗೂ ಸ್ಕಂದಗಿರಿ.

ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಬೆಟ್ಟ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ.

ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟ. ಪ್ರಮುಖವಾದ ಬೆಟ್ಟಗಳು.

5) ಪಶ್ಚಿಮ ಘಟ್ಟಗಳಲ್ಲಿರುವ ಪ್ರಮುಖ ಪರ್ವತ ಘಾಟಿ ಗಳಾವುವು.

ಉತ್ತರ :

1. ಚಾರ್ಮುಡಿ ಘಾಟ್ - ಮಂಗಳೂರು ಮತ್ತು ಚಿಕ್ಕಮಗಳೂರುಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.

2. ಶಿರಾಡಿ ಘಾಟಿ - ಹಾಸನ ಸಕಲೇಶಪುರ ಮಂಗಳೂರು ಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.

3. ಆಗುಂಬೆ ಘಾಟಿ - ಶಿವಮೊಗ್ಗ ಮತ್ತು ಉಡುಪಿ ನಡುವೆ ಸಂಪರ್ಕ ಕಲ್ಪಿಸುತ್ತದೆ.

4. ಹುಲಿಕಲ್ ಘಾಟಿ - ಶಿವಮೊಗ್ಗ ಮತ್ತು ಕುಂದಾಪುರ ನಡುವೆ ಸಂಪರ್ಕ ಕಲ್ಪಿಸುತ್ತದೆ.

III. ಹೊಂದಿಸಿ ಬರೆಯಿರಿ.

A

1) ಜೋಗ ಜಲಪಾತ

2) ಓಂ ಬೀಚ್

3) ನಂದಿಗಿರಿಧಾಮ

4) ಏಕಶಿಲಾ ಬೆಟ್ಟ

5) ಬಿಸಿಲಿನ ನಾಡು

B

A) ಮಂಗಳೂರು

B) ಉತ್ತರದ ಮೈದಾನ

C) ಶರಾವತಿ ನದಿ

D) ಗೋಕರ್ಣ

E) ಚಿಕ್ಕಬಳ್ಳಾಪುರ

F) ಮಧುಗಿರಿ ಬೆಟ್ಟ

ಉತ್ತರ :

1) ಜೋಗ ಜಲಪಾತ - C) ಶರಾವತಿ ನದಿ

2) ಓಂ ಬೀಚ್ - D) ಗೋಕರ್ಣ

3) ನಂದಿಗಿರಿಧಾಮ - E) ಚಿಕ್ಕಬಳ್ಳಾಪುರ

4) ಏಕಶಿಲಾ ಬೆಟ್ಟ - F) ಮಧುಗಿರಿ ಬೆಟ್ಟ

5) ಬಿಸಿಲಿನ ನಾಡು - B) ಉತ್ತರದ ಮೈದಾನ

9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon