ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ | 9ನೇ ತರಗತಿ ಸಮಾಜ ವಿಜ್ಞಾನ | 9ನೇ ತರಗತಿ ಇತಿಹಾಸ ಪ್ರಶ್ನೋತ್ತರಗಳು |

ಇತಿಹಾಸ ಅಧ್ಯಾಯ-9

ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ

I. ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ.

1. ಇಂಗ್ಲೆಂಡ್ ಅಟ್ಲಾಂಟಿಕ್ ತೀರದಲ್ಲಿ ಸ್ಥಾಪಿಸಿದ ಹದಿಮೂರು ವಸಾಹತುಗಳನ್ನು ______ ಎಂದು ಕರೆಯಲಾಗಿತ್ತು.

ಉತ್ತರ : ಹೊಸ ಇಂಗ್ಲೀಷ್ ವಸಾಹತುಗಳು

2. 1774 ರಲ್ಲಿ ಹದಿಮೂರು ವಸಾಹತುಗಳ ಪ್ರತಿನಿಧಿಗಳು ಸಭೆ ಸೇರಿದ್ದು ______ ದಲ್ಲಿ

ಉತ್ತರ : ಫಿಲಿಡೆಲ್ಫಿಯಾ

3. ಅಮೆರಿಕ ಸ್ವಾತಂತ್ರ ಘೋಷಣೆ ಆದದ್ದು ______ ರಂದು

ಉತ್ತರ : 1776 ಜುಲೈ 4

4. ಸ್ಪಿರಿಟ್ ಆಫ್ ಲಾಸ್ ಕರ್ತೃ ______

ಉತ್ತರ : ಮಾಂಟೆಸ್ಕೂ

5. ತರುಣ ಇಟಲಿಎಂಬ ಪಕ್ಷವನ್ನು ಇಟಲಿಯಲ್ಲಿ ಕಟ್ಟಿದವನು ______

ಉತ್ತರ : ಮ್ಯಾಜಿನಿ

6. ರಕ್ತ ಮತ್ತು ಕಬ್ಬಿಣತತ್ವವನ್ನು ಪ್ರತಿಪಾದಿಸಿವನು ______

ಉತ್ತರ : ಬಿಸ್ಮಾರ್ಕ್


II. ಕೆಳಕಂಡ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಅಮೆರಿಕದ ಸ್ವಾತಂತ್ರ ಸಂಗ್ರಾಮಕ್ಕೆ ಕಾರಣಗಳನ್ನು ಹೆಸರಿಸಿ.

ಉತ್ತರ : ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳು:

       ವಸಾಹತುಗಳ ಬಗ್ಗೆ ಇಂಗ್ಲೇಂಡಿನ ಧೋರಣೆ ಮತ್ತು ವಸಾಹತುಗಳಲ್ಲಿ ಬೆಳೆಯಲು ಆರಂಭಗೊಂಡ ಸ್ವಾತಂತ್ರ್ಯ ಪ್ರೇಮ,

       ಸಪ್ತವಾರ್ಷಿಕ ಯುದ್ಧದ ಪರಿಣಾಮಗಳು,

       ನೌಕಾ ಕಾಯಿದೆಗಳು,

      ಥಾಮಸ್ ಪೈನ್, ಜಾನ್ ಆಡಮ್ಸ್, ಸ್ಯಾಮುಯಲ್ ಆಡಮ್ಸ್, ಜಾನ್ ಎಡ್ವರ್ಡ್ ಕೋಕ್ ಮತ್ತು ಬೆಂಜಮಿನ್ ಫ್ರಾಂಕ್ ಲಿನ್ ಮುಂತಾದ ಬರಹಗಾರರ ಪ್ರಭಾವ,

      ಕ್ವಿಬೆಕ್ ಕಾಯಿದೆ,

      ಟೌನ್ ಶೆಂಡ್ ತೆರಿಗೆಗೆಳು

       ಬಾಸ್ಟನ್ ಚಹಾಕೂಟ ಮುಂತಾದ ಕಾರಣಗಳಿಂದಾಗಿ ಅಮೇರಿಕದಲ್ಲಿ ಕ್ರಾಂತಿ ಉಂಟಾಯಿತು.


2. ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ತಿಳಿಸಿ.

ಉತ್ತರ : ಅಮೆರಿಕ ಸ್ವತಂತ್ರ ಸಂಗ್ರಾಮದ ಮಹತ್ವ:

       ಇದು ಫ್ರಾನ್ಸ್ ಮಹಾಕ್ರಾಂತಿಗೆ ಪ್ರಚೋದನೆ ನೀಡಿತು.

       ವಸಾಹತುಗಾರರ ಪಕ್ಷ ವಹಿಸಿ ಹೋರಾಡಿದ ಅನೇಕ ಫ್ರೇಂಚರು ಫ್ರಾನ್ಸಿನ ಮಹಾಕ್ರಾಂತಿಯ ನಾಯಕರಾದರು.

       ಅಮೆರಿಕದಲ್ಲಿನ ಅನೇಕ ಸ್ಪೈನ್ ಮತ್ತು ಪೋರ್ಚುಗಲ್ ವಸಾಹತುಗಳು ತಮ್ಮ ತಾಯ್ನಾಡಿನ ವಿರುದ್ಧ ದಂಗೆ ಎದ್ದು ಸ್ವತಂತ್ರ್ಯರಾಗಲು ಉತ್ತೇಜನ ಪಡೆದವು.

       ಅಮೆರಿಕಾ ಸಂಯುಕ್ತ ಸಂಸ್ಥಾನ ಎಂಬ ಹೊಸ ರಾಷ್ಟ್ರದ ಉದಯವಾಯಿತು.

3. ಫ್ರಾನ್ಸಿನ ಕ್ರಾಂತಿಗೆ ಆರ್ಥಿಕ ಅಂಶಗಳು ಹೇಗೆ ಕಾರಣವಾದವು.

ಉತ್ತರ : * ಫ್ರಾನ್ಸ್ ಕೃಷಿ ಪ್ರಧಾನವಾದ ದೇಶವಾಗಿತ್ತು.

       ಕೃಷಿ ಪದ್ಧತಿಯಲ್ಲಿ ಅಭಿವೃದ್ಧಿಗಳು ಆಗಿದ್ದರೂ ಸಹ, ಕೃಷಿ ಬಹಳ ಹಿಂದುಳಿದಿತ್ತು.

       ಭೂಮಿಯ ಉತ್ಪತ್ತಿ ಬಹಳ ಕಡಿಮೆ ಇತ್ತು.

       ರೈತರೇ ಹೆಚ್ಚಿನ ತೊಂದರೆಗೊಳಗಾಗಿದ್ದವರು.

       ಬರಗಾಲಗಳು ಸಾಮಾನ್ಯವಾಗಿದ್ದವು.

       ಇದರಿಂದ ಆಹಾರಕ್ಕಾಗಿ ದಂಗೆಗಳಾಗುತ್ತಿದ್ದವು.

      ಕೈಗಾರಿಕೆಗಳು ವೃತ್ತಿಸಂಘಗಳ ಅಧೀನದಲ್ಲಿದ್ದವು.

       ಆಂತರಿಕ ಅಡ್ಡಿಗಳಿಂದಲೂ ಮತ್ತು ಅಧಿಕಾರಿಗಳ ಅತಿಯಾದ ಮಧ್ಯ ಪ್ರವೇಶದಿಂದಲೂ ಅವುಗಳ ಬೆಳವಣಿಗೆ ಕುಂಠಿತಗೊಂಡಿತ್ತು.

       ಇದರ ಫಲವಾಗಿ ಉತ್ಪಾದನೆ ಕೆಳಮಟ್ಟದಲ್ಲಿತ್ತು.

       ಇವುಗಳೆಲ್ಲವು ಫ್ರಾನ್ಸಿನ ಕ್ರಾಂತಿಗೆ ಆರ್ಥಿಕ ಕಾರಣಗಳಾಗಿವೆ.

4. ಇಟಲಿಯ ಏಕೀಕರಣದಲ್ಲಿ ಗ್ಯಾರಿಬಾಲ್ಡಿಯ ಪಾತ್ರವೇನು?

ಉತ್ತರ : * ಗ್ಯಾರಿಬಾಲ್ಡಿ ಒಬ್ಬ ಯೋಧ, ಯೋರಾಟಗಾರ.

       ಇವನುತರುಣ ಇಟಲಿಪಕ್ಷವನ್ನು ಸೇರಿ ಅನೇಕ ಸಾರಿ ಅದರ ಕ್ರಾಂತಿಯ ನಾಯಕತ್ವವನ್ನು ವಹಿಸಿದ್ದನು.

       ಅನಂತರಕೆಂಪಂಗಿ ದಳಎಂಬ ಸೈನ್ಯವನ್ನು ವ್ಯವಸ್ಥೆಗೊಳಿಸಿ ಸಾರ್ಡೀನಿಯ ಜೊತೆಗೂಡಿ ಆಸ್ಟ್ರೀಯಾದೊಡನೆ ಹೋರಾಡಿದ.

       1860ರಲ್ಲಿ ಎರಡು ಸಿಸಿಲಿಗಳ ರಾಜ್ಯದ ಮೇಲೆ ತನ್ನಕೆಂಪಂಗಿ ದಳದೊಡನೆ ದಾಳಿ ಮಾಡಿ ಅದನ್ನು ಆಕ್ರಮಿಸಿ ಇಟಲ ದೇಶದ ಏಕೀಕರಣವನ್ನು ತ್ವರಿತಗೊಳಿಸಿದನು.

5. ಜರ್ಮನಿಯ ಏಕೀಕರಣ ಶಿಲ್ಪಿ ಯಾರು? ಅವನ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

ಉತ್ತರ : * ಜರ್ಮನಿಯ ಏಕೀಕರಣದ ಪ್ರಧಾನ ಶಿಲ್ಪಿ ಆಟ್ಟೋವಾನ್ ಬಿಸ್ಮಾರ್ಕ್.

       ಇವನು ಪ್ರಷ್ಯಾ ರಾಜ್ಯದ ದೊರೆ ಒಂದನೇ ವಿಲಿಯಂನ ಮುಖ್ಯಮಂತ್ರಿಯಾಗಿದ್ದನು.

       ಅವನು ಸರ್ಕಾರಿ ನೌಕರನಾಗಿ, ಜರ್ಮನಿಯ ಶಾಸನ ಸಭೆಡಯಟ್ ಸದಸ್ಯನಾಗಿ, ವಿದೇಶಗಳಲ್ಲಿ ರಾಯಭಾರಿಯಾಗಿ ವೃತ್ತಿಯನ್ನು ಆರಂಭಿಸಿ ಪ್ರಾಮುಖ್ಯತೆಗೆ ಬಂದಿದ್ದನು.

      ಇವನು ಆಸ್ಟ್ರೀಯ ನಾಯಕತ್ವದಲ್ಲಿನ ಜರ್ಮನ್ ರಾಜ್ಯಗಳ ಸಂಘದ ಕಾರ್ಯವೈಖರಿಗಳ ಬಗ್ಗೆ ಸೂಕ್ಷ್ಮ ಪರಿಚಯ ಹೊಂದಿದ್ದು, ಅದರ ದೌರ್ಬಲ್ಯಗಳೇನು ಎಂಬುದನ್ನು ತಿಳಿದಿದ್ದ.

       ಆಸ್ಟ್ರೀಯಾ ಫ್ರಾನ್ಸ್ ಮತ್ತು ರಷ್ಯಾಗಳಲ್ಲಿ ರಾಯಭಾರಿಯಾಗಿ ಕೆಲಸ ಮಾಡಿ, ಅವುಗಳ ಬಲಾಬಲಗಳನ್ನು ತಿಳಿದಿದ್ದ.

        ಜರ್ಮನ್ ಏಕೀಕರಣವನ್ನು ಸಾಧಿಸಲು ಪ್ರಷ್ಯಾ ಒಂದೇ ಸಮರ್ಥಶಾಲಿ ಎಂಬುದನ್ನು ಮನಗಂಡಿದ್ದ ಹಾಗೂ ಪ್ರಷ್ಯಾವನ್ನು ಜರ್ಮನಿಯಲ್ಲಿ ಅಗ್ರರಾಜ್ಯವನ್ನಾಗಿ ಮಾಡಬೇಕೆಂದು ಅಪೇಕ್ಷಿಸಿದ.

      ಉದ್ದೇಶದ ಸಾಧನೆಗಾಗಿ ಅವನ ಗುರಿಗಳು ಎರಡು ಬಗೆಯಾಗಿದ್ದವು.

       ಒಂದು ಆಸ್ಟ್ರೀಯಾವನ್ನು ಜರ್ಮನ್ ರಾಜ್ಯಗಳ ಸಂಘದಿಂದ ಹೊರಗಟ್ಟುವುದು.

       ಮತ್ತೊಂದು ಜರ್ಮನಿಯಲ್ಲಿ ಲೀನವಾಗಿ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದಕ್ಕಿಂತ ಜರ್ಮನಿಯನ್ನೇ ಪ್ರಾಷ್ಯಾಮಯವಾಗಿ ಮಾಡುವುದು.

       ಅಂದರೆ ಪ್ರಷ್ಯಾದ ಸಂಸ್ಕೃತಿ, ಸಂಪ್ರದಾಯ, ಆಡಳಿತ ಯಂತ್ರ ಮತ್ತು ಸೈನಿಕ ಬಲವನ್ನು ಜರ್ಮನಿ ದೇಶಕ್ಕೆಲ್ಲ ವಿಸ್ತರಿಸುವುದು.

      ಬಿಸ್ಮಾರ್ಕ್ ಜರ್ಮನಿಯ ಸಮಸ್ಯೆಯನ್ನು ಬಗೆಹರಿಸಲುರಕ್ತ ಮತ್ತು ಕಬ್ಬಿಣತತ್ವದಿಂದ ಮಾತ್ರ ಸಾಧ್ಯವೆಂದು ಮನಗಂಡಿದ್ದನು.

       ರಕ್ತ ಮತ್ತು ಕಬ್ಬಿಣ ತತ್ವ ಎಂದರೆ ಯುದ್ಧ ನೀತಿ.

       ಇದರಿಂದ ಅವನು ಒಂದು ಬಲವಾದ ಸೈನ್ಯವನ್ನು ಕಟ್ಟಿದನು.

       ಬಿಸ್ಮಾರ್ಕ್ ನು ತನ್ನೇಲ್ಲ ನೀತಿಗಳ ಮೂಲಕ ಜರ್ಮನಿಯನ್ನು ಏಕೀಕರಣಗೊಳಿಸಿದನು.


 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon