ಆಧುನಿಕ ಯುರೋಪ | 9ನೇ ತರಗತಿ ಸಮಾಜ ವಿಜ್ಞಾನ | 9ನೇ ತರಗತಿ ಇತಿಹಾಸ ಪ್ರಶ್ನೋತ್ತರಗಳು |

ಅಧ್ಯಾಯ 8. ಆಧುನಿಕ ಯುರೋಪ

I. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ.

1. ರಿನೈಜಾನ್ಸ್ ಎಂದರೆ ______

ಉತ್ತರ : ಪುನರಜನ್ಮ , ಪುನರುಜ್ಜೀವನ, ನವೋದಯ

2. ಪುನರುಜ್ಜೀವನ ಜನಕ ಎಂದು _____ ನನ್ನು ಕರೆಯಲಾಗಿದೆ.

ಉತ್ತರ : ಪೆಟ್ಟ್ರಾರ್ಕ

3. ಮಾರ್ಟಿನ್ ಲೂಥರ್ ಅನುಯಾಯಿಗಳು  ______

ಉತ್ತರ : ಪ್ರಾಟೆಸ್ಟೆಂಟ್

4. ಪ್ರತಿ ಸುಧಾರಣಾ ಚಳುವಳಿಯ ನಾಯಕ _____

ಉತ್ತರ : ಇಗ್ನೇಷಿಯಸ್ ಲಯೋಲ

5. ಸ್ಪಿನ್ನಿಂಗ್ ಜೆನ್ನಿ ಯಂತ್ರವನ್ನು ಕಂಡು ಹಿಡಿದವನು ______

ಉತ್ತರ : ಜೇಮ್ಸ್ ಹಾರ್ ಗ್ರೀವ್ಸ್


II. ಕೆಳಗಿನ ಪ್ರಶ್ನೆಗಳಿಗೆ ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ.

1. ಮತ ಸುಧಾರಣೆಯ ಪರಿಣಾಮಗಳಾವುವು?

ಉತ್ತರ : ಮತಸುಧಾರಣೆಯ ಪರಿಣಾಮಗಳು:

1. ಮತಸುಧಾರಣೆಯ ಪರಿಣಾಮವಾಗಿ ಕ್ರೈಸ್ತ ಮತದ ಅಖಂಡತೆಗೆ ಪೆಟ್ಟು ಬಿದ್ದಿತು. ಕ್ರೈಸ್ತ ಮತವು ಮುಖ್ಯವಾಗಿ ಮೂರು ಶಾಖೆಗಳಾಗಿ ಒಡೆಯಿತು. ಅವು ಕ್ಯಾಥೋಲಿಕ್ ಚರ್ಚ್, ಅರ್ಥೋಡಾಕ್ಸ್ ಚರ್ಚ್ ಮತ್ತು ಪ್ರಾಟೆಸ್ಟಂಟ್ ಚರ್ಚ್.

2. ಯುರೋಪಿನ ಅನೇಕ ದೇಶಗಳ ರಾಜರುಗಳು ಪೋಪನ ಹಿಡಿತದಿಂದ ಸ್ವತಂತ್ರರಾದರು.

3. ಮತಸುಧಾರಣೆಯು ರಾಷ್ಟ್ರೀಯ ಪ್ರಭುತ್ವಗಳ ಉದಯಕ್ಕೆ ಕಾರಣವಾಯಿತು.

4. ಮುಟ್ಟುಗೋಲು ಹಾಕಿಕೊಂಡು ಚರ್ಚಿನ ಸಂಪತ್ತನ್ನು ಆರ್ಥಿಕ ಅಭಿವೃದ್ಧಿಗಾಗಿ ವಿನಿಯೋಗಿಸಲಾಯಿತು.

5. ರಾಷ್ಟ್ರೀಯ ಭಾವನೆಗಳು ಇನ್ನಷ್ಟು ಬಲವಾದವು ಹಾಗೂ ಯುರೋಪಿನ ರಾಜರುಗಳು ಧಾರ್ಮಿಕ ಸಹಿಷ್ಣುತೆಯನ್ನು ಅಳವಡಿಸಿಕೊಂಡರು.

6. ಚಳುವಳಿಯಿಂದಾಗಿ ಸಾಹಿತ್ಯ ಕ್ಷೇತ್ರ ಬೆಳೆಯಿತು. ಪ್ರಾದೇಶಿಕ ಭಾಷೆಗಳು ಐರೋಪ್ಯರ ಮನಸ್ಸಿನ ಮೇಲೆ ಪ್ರಭಾವ ಬೀರಿದವು.

7. ಕ್ಯಾಥೋಲಿಕ್ ಚರ್ಚ್ ನಲ್ಲೇ ಸುಧಾರಣೆಯಾಗಿ, ಅದೇ ಮುಂದೆಪ್ರತಿಸುಧಾರಣೆಚಳುವಳಿಯಾಯಿತು.


2. ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳನ್ನು ಬರೆಯಿರಿ.

ಉತ್ತರ : ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳು:

1. ಸಾ.. 1453ರಲ್ಲಿ ಟರ್ಕರು ಕಾನ್ಸ್ ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಾಗ, ಪೂರ್ವ ಮತ್ತು ಪಶ್ಚಿಮ ವ್ಯಾಪಾರದ ಬಾಗಿಲು ಮುಚ್ಚಿಕೊಂಡಂತಾಯ್ತು. ಇದರಿಂದಾಗಿ, ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ಸಾಂಬಾರ ಪದಾರ್ಥಗಳಿಂದ ಹೆಚ್ಚಿನ ಲಾಭವು ಟರ್ಕರ ಪಾಲಾಯಿತು.

ಪರಿಣಾಮವಾಗಿ ಯುರೋಪಿಯನ್ನರು ಭಾರತಕ್ಕೆ ಹೊಸ ಸಮುದ್ರ ಮಾರ್ಗವನ್ನು ಕಂಡುಹಿಡಿಯಲೇಬೇಕಾದ ಪರಿಸ್ಥಿತಿ ಒದಗಿತು.

2. ಸ್ಪೈನ್ ಮತ್ತು ಪೂರ್ಚ್ಗಲ್ ದೇಶಗಳು ಸಾಗರ ವ್ಯಾಪಾರಿಗಳಾದ ಅರಬ್ಬರ ವಿರುದ್ಧ ಸ್ಪರ್ದಿಸಲು ಇಚ್ಚೆ ಹೊಂದಿದ್ದವು. ಇದರಿಂದ ಸಾಹಸಿ ನಾವಿಕರಿಗೆ ಸ್ಥಳೀಯ ಜನರು , ಶ್ರೀಮಂತರು ಪ್ರೋತ್ಸಾಹಿಸಿದರು.

3. ಹೊಸದೇಶಗಳನ್ನು ಕಂಡುಹಿಡಿದರೆ ಕ್ರೈಸ್ತಮತವನ್ನು ಹರಡಬಹುದೆಂದು ಆಶಯವೂ ಇತ್ತು.

4. ಪೂರ್ವ ದೇಶಗಳ ಕಡೆ ಸಮುದ್ರ ಪ್ರಯಾಣದ ಸಾಹಸಕ್ಕೆ ಕೈಹಾಕಿದ್ದು ಯೂರೋಪಿಯನ್ನರಲ್ಲಿ ಕುತೂಹಲ ಕೆರಳಿಸಿತು. ಸಾಂಭಾರು ಪದಾರ್ಥಗಳು, ರೇಷ್ಮೆ, ಹತ್ತಿ, ಮಸ್ಲಿನ್ ಬಟ್ಟೆ ಮುಂತಾದ ವಸ್ತುಗಳನ್ನು ತಂದು ಲಾಭ ಪಡೆಯಲು ಮುಂದಾದರು.

5. ಪುನರುಜ್ಜೀವನ ಕಾಲದ ವೈಜ್ಞಾನಿಕ ಪ್ರಯೋಗಗಳಿಂದ ಭೂಮಿ ಗುಂಡಾಗಿದೆ ಎಂದು ಸಾಭೀತಾಯಿತು. ನಾವಿಕರ ದಿಕ್ಸೂಚಿ ಮತ್ತು ಅಸ್ಟ್ರೋಲೋಬ್ ಉಪಕರಣಗಳು ನಾವಿಕರಿಗೆ ಸಮುದ್ರದಲ್ಲಿ ಸಂಚರಿಸಲು ಸಹಾಯಕವಾದುವು. ನಕ್ಷೆಗಳು ಮತ್ತು ಭೂಪಟಗಳು ನಾವಿಕರಿಗೆ ಸಿಗುವಂತಾಯಿತು.

6. ಪ್ರಖ್ಯಾತ ಪ್ರವಾಸಿಯಾದ ಮಾರ್ಕೊ ಪೋಲೊ ಪೂರ್ವ ದೇಶಗಳಾದ ಚೀನಾ ಮತ್ತು ಭಾರತಕ್ಕೆ ಭೇಟಿ ನೀಡಿ ಅಲ್ಲಿನ ಸಂಪತ್ತಿನ ವಿವರಣೆಯನ್ನು ತನ್ನ ಕೃತಿಯಾದಟ್ರಾವಲ್ಸ್ ಆಪ್ ಮಾರ್ಕೊ ಪೋಲೊನಲ್ಲಿ ವಿವರಿಸಿದನು. ವಿವರಣೆಯು ಸಂಪತ್ತಿನ ವ್ಯಾಮೋಹವಿದ್ದ ಯುರೋಪಿಯನ್ನರನ್ನು ದೇಶಗಳಿಗೆ ಬರಲು ಪ್ರೋತ್ಸಾಹಿಸಿತು.


3. ಲಿಯೋನಾರ್ಡವಿಂಚಿಯ ಮುಖ್ಯ ವರ್ಣ ಚಿತ್ರಗಳಾವುವು?

ಉತ್ತರ : ಲಿಯೋನಾರ್ಡ್--ವಿಂಚಿಯ ವರ್ಣ ಚಿತ್ರಗಳು.

ಲಾಸ್ಟ್ ಸಪ್ಪರ್ ಮತ್ತು

ಮೋನಾಲಿಸಾ


4. ಪುನರುಜ್ಜೀವನ ಕಾಲದಲ್ಲಿ ಸಾಹಿತ್ಯ ಬೆಳವಣಿಗೆಯನ್ನು ಉದಾಹರಣೆ ಸಹಿತ ವಿವರಿಸಿ.

ಉತ್ತರ : ಪುನರುಜ್ಜೀವನ ಕಾಲದ ಸಾಹಿತ್ಯ:

ಇಟಲಿ ಅನೇಕ ಸಾಹಿತ್ಯ ದಿಗ್ಗಜರ ತವರೂರಾಗಿತ್ತು.

ಫ್ರಾನ್ಸ್, ಇಂಗ್ಲೇಂಡ್, ಜರ್ಮನಿ ಮತ್ತು ಸ್ಪೈನ್ ದೇಶಗಳೂ ಕೂಡ ಸಾಕಷ್ಟು ಸಾಹಿತ್ಯ ಪ್ರತಿಭೆಗಳನ್ನು ಸೃಷ್ಟಿಸಿದವು.

ಕಾಲದ ಸಾಹಿತ್ಯದ ತಿರುಳು ಧರ್ಮವಾಗಿರದೆ ಪ್ರಾಪಂಚಿಕ ವಿಷಯವಾಗಿತ್ತು.

ಮಾನವನ ದೇಹ, ಅಂಗಸೌಷ್ಟವ ಮುಂತಾದ ವಿಷಯಗಳ ಬಗ್ಗೆ ಬರೆದರು.

ಲ್ಯಾಟಿನ್ ಬದಲು ಯುರೋಪಿನ ಪ್ರಾದೇಶಿಕ ಭಾಷೆಗಳು ಬಳಕೆಗೆ ಬಂದವು.

ಪೆಟ್ಟ್ರಾರ್ಕನನ್ನು ಪುನರುಜ್ಜೀವನದ ಜನಕ ಎಂದು ಕರೆಯಲಾಗಿದೆ.

ಇವರು ಸುಮಾರು 200 ಲ್ಯಾಟಿನ್ ಮತ್ತು ಗ್ರೀಕ್ ಹಸ್ತಪ್ರತಿಗಳನ್ನು ಸಂಗ್ರಹಿಸಿದನು.

ಆಫ್ರಿಕಾಇವನ ಪ್ರಿಸಿದ್ಧ ಕಾವ್ಯ.

ಬೋಕಾಷಿಯೋ ಇಟಾಲಿಯನ್ ಭಾಷೆಯಲ್ಲಿ ರಚಿಸಿದ ನೂರು ಕಥೆಗಳ ಸಂಗ್ರಹಡೆಕಾಮೆರಾನ”.

ಡಾಂಟೆ ರಚಿಸಿದ ಪ್ರಸಿದ್ಧ ಕೃತಿಡಿವೈನ್ ಕಾಮಿಡಿ

ಇಂಗ್ಲೇಂಡಿನ ಛಾಸರ್ ಬರೆದಕ್ಯಾಂಟರ್ ಬರಿ ಟೇಲ್ಸ್”.

ಇವುಗಳು ಪುನರುಜ್ಜೀವನ ಕಾಲದ ಸಾಹಿತ್ಯಗಳಾಗಿವೆ.


5. ಕೈಗಾರಿಕಾ ಕ್ರಾಂತಿಯ ಪರಿಣಾಮಗಳನ್ನು ತಿಳಿಸಿ.

ಉತ್ತರ : ಕೈಗಾರಿಕಾ ಕ್ರಾಂತಿಯ ಪರಿಣಾಮಗಳು:

1. ಕೈಗಾರಿಕಾ ಕ್ರಾಂತಿಯಿಂದ ಇಂಗ್ಲೇಂಡಿನ ಆರ್ಥಿಕತೆ ಸದೃಡವಾಗಿ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿತು.

2. ಬೃಹತ್ ಕೈಗಾರಿಕೆಗಳು ಹೆಚ್ಚಾದಂತೆ ಕಾರ್ಮಿಕರ ಶೋಷಣೆಗಳು ಹೆಚ್ಚಾಗಿ ಸಮಾಜವಾದವು ಉದಯಿಸಿತು.

3. ಆಧುನಿಕತೆಯು ವೇಗವಾಗಿ ವಿಸ್ತಿರಿಸಿ ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನ ಮಟ್ಟವು ಅಭಿವೃದ್ಧಿಯಾಯಿತು.

4. ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಸಾರಿಗೆ ಸಂಪರ್ಕದ ಕ್ಷೇತ್ರದಲ್ಲಾದ ಸಂಶೋಧನೆಗಳಿಂದ ಇಡೀ ವಿಶ್ವವೇ ಒಂದು ಹಳ್ಳಿಯಂತೆ ಕಾಣಿಸಿತು.

5. ಕೈಗಾರಿಕಾ ಕ್ರಾಂತಿಯಿಂದ ಹೆಚ್ಚಿನ ಅಭಿವೃದ್ಧಿಯಾದರೂ ಜನಸಂಖ್ಯೆಯ ಹೆಚ್ಚಳದಿಂದ ಬಡತನ, ನಿರುದ್ಯೋಗ ಮತ್ತು ಆಹಾರ ಸಮಸ್ಯೆಗಳು ಗೋಚರಿಸಿದವು.

6. ಕೈಗಾರಿಕಾ ಕ್ರಾಂತಿಯಿಂದ ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿ ವರ್ಗ ಸಂಘರ್ಷವು ಉದಯಿಸಿತು.


 9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon